text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಕಲಬುರ್ಗಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ವಿಚ್ಛೇದನ ನೀಡಲು ಅರ್ಜಿ ಹಾಕಿದರೂ ನ್ಯಾಯಾಲಯ ವಿಚ್ಛೇದನ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ವಿಷ ಸೇವಿಸಿದ ಘಟನೆ ಕಲಬುರಗಿಯ ಪತ್ರಿಕಾ ಭವನದಲ್ಲಿ ನಡೆದಿದೆ. ವಿಷ ಸೇವಿಸಿದ ವ್ಯಕ್ತಿಯನ್ನು ಶರಣಬಸಪ್ಪ ತಂದೆ ಲಾಡಪ್ಪ ಮಾನೆ ಎಂದು ಹೆಸರಿಸಲಾಗಿದೆ. ಶರಣಬಸಪ್ಪ, ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ನಿವಾಸಿಯಾಗಿದ್ದು, ಈತ ಹಾಗೂ ಈತನ ಪತ್ನಿ ಮಧ್ಯೆ ಜಗಳ ನಡೆದಿತ್ತು. ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದರೂ ಡೈವರ್ಸ್ ಕೊಟ್ಟಿರಲಿಲ್ಲ. ಅಲ್ಲದೆ ಡೈವರ್ಸ್ ನೀಡುವಂತೆ ಹಲವು ವರ್ಷಗಳಿಂದ ಕೋರ್ಟ್ ಅಲೆದು ಈತ ಬೇಸತ್ತಿದ್ದ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೆ ಪತ್ರಕರ್ತರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
OSCAR-2019
ಪೆಟ್ರೋಲ್-ಡೀಸೆಲ್ ಬೆಲೆ ಗಗನ ಮುಟ್ಟಿರುವ ಹಿನ್ನಲೆಯಲ್ಲಿ ವಾಹನ ಸವಾರರು ಈಗಾಗಲೇ ಹೈರಾಣಾಗಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿರುವ ಪರಿಣಾಮ ಬೆಲೆ ಮತ್ತಷ್ಟು ಏರಿದೆ. ರಾಜ್ಯ ಸರ್ಕಾರದ ಈ ತೀರ್ಮಾನಕ್ಕೆ ಸಾರ್ವಜನಿಕರು, ವಿರೋಧ ಪಕ್ಷದ ನಾಯಕರು ಮಾತ್ರವಲ್ಲದೆ ಮೈತ್ರಿಕೂಟ ಸರ್ಕಾರದ ಶಾಸಕರುಗಳೂ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ನಡೆಯುವ ಬಜೆಟ್ ಮೇಲಿನ ಚರ್ಚೆ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸೆಸ್ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಈ ಹಿಂದಿನಂತೆ 7 ಕೆ.ಜಿ. ಅಕ್ಕಿ ನೀಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಿಸುವ ಪ್ರಮಾಣವನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಇಳಿಕೆ ಮಾಡಲಾಗಿದ್ದು, ಇದಕ್ಕೂ ಹಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ...
OSCAR-2019
ಬಿದ್ರಿವೇರ್ ಅದರ ಹೆಸರನ್ನು ಬೀದರಿನಿಂದ ಪಡೆಯುತ್ತದೆ. ಐದುನೂರು ವರ್ಷಗಳ ಹಳೆಯದಾದ ಈ ಕಲೆಯು ಪರ್ಷಿಯನ್ ಮೂಲದ್ದಾಗಿದೆ. ಆದರೆ ಇದು ಸಂಪೂರ್ಣವಾಗಿ ಭಾರತೀಯ ಆವಿಷ್ಕಾರವಾಗಿದೆ. ಈ ಕೆತ್ತನೆ ಮತ್ತು ಕೆತ್ತನೆಯ ಕಲೆಯು ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತಿದೆ. ಇದು ಬೀದರಿನ ವಿಶೇಷತೆಯಾಗಿದೆ. ‘ನಾಥ್ ವುಡ್ ಇಂಡಸ್ಟ್ರೀಸ್’, ಶ್ರೀ ಬಂಡೆಪ್ಪ ಅವರ ಮಾಲೀಕತ್ವದಲ್ಲಿದೆ. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. ‘ನಾಥ್ ವುಡ್ ಇಂಡಸ್ಟ್ರೀಸ್’ ಬಿದರ್ ತಾಲೂಕಿನ ಬಕ್ಚೋಡಿ ಗ್ರಾಮದಲ್ಲಿದೆ. ಇಲ್ಲಿ ನಿರ್ದಿಷ್ಟವಾಗಿ ಶ್ರೀಗಂಧದ ಮರವನ್ನು ಕೆತ್ತನೆ ಮಾಡಲಾಗುತ್ತದೆ. ಕೆತ್ತನೆಗಳು ಸಂಕೀರ್ಣವಾಗಿವೆ. ದೇವತೆಗಳ ವಿಗ್ರಹಗಳನ್ನು ಮತ್ತು ವಿಶೇಷವಾಗಿ ಭಗವಾನ್ ಬುದ್ಧನ ವಿಗ್ರಹಗಳನ್ನು ಮಾಡಲಾಗುತ್ತದೆ. ಇವುಗಳಲ್ಲಿ ಹೆಚ್ಚಿನವುಗಳು ಕರ್ನಾಟಕದ ಕಾವೇರಿ ಎಂಪೋರಿಯಮ್ ಮತ್ತು ಆಂದ್ರ ಪ್ರದೇಶದ ಲೇಪಾಕ್ಷಿ ಮೂಲಕ ಮಾರುಕಟ್ಟೆಗೆ ಬರುತ್ತವೆ. ಲಾರ್ಡ್ ಬುದ್ಧನ ವಿಗ್ರಹಗಳು ಥೈವಾನ್, ಜಪಾನ್ ಮತ್ತು ಇತರ ಬುದ್ಧಿಸ್ಟ್ ದೇಶಗಳಿಗೆ ರಫ್ತಾಗುತ್ತವೆ. ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಗಳ ಸ್ಯಾಂಡಲ್ಕೋಟಿಸ್ಗಳಿಂದ ಈ ಉದ್ಯಮಕ್ಕೆ ಅಗತ್ಯವಾದ ಶ್ರೀಗಂಧದ ಮರವನ್ನು ಖರೀದಿಸಲಾಗುತ್ತದೆ.
OSCAR-2019
ಬೆಂಗಳೂರು: ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸಲು ಇನ್ನೂ ಎರಡು ದಿನ ಸಮಯ ಬೇಕು ಎಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿಗೆ ಹೈಕೋರ್ಟ್ ಮತ್ತೆ ಗರಂ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವಿಗೆ ಸಂಬಂಧಿಸಿದ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ಮುಂದುವರಿಸಿತು. ತಜ್ಞರು, ವಿವಿಧ ಇಲಾಖೆಗಳು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿಯಾದವರ ಜೊತೆ ಚರ್ಚಿಸಿ ನಿಯಮ ರೂಪಿಸಲಾಗುವುದು ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾಹೇಶ್ವರಿ ಗುಡುಗಿದರು. ಒಂದು ಕೌನ್ಸಿಲ್ ಸಭೆ ನಡೆಸುವುದಕ್ಕೂ ನಾವೇ ಆದೇಶ ಮಾಡಬೇಕಾ? ನಿಮ್ಮ ಕೆಲಸ ಮಾಡೋದಕ್ಕೂ ನಾವೇ ಹೇಳಬೇಕಾ? ಅಧಿಕಾರಿಗಳು ಸಂಬಳ ತಗೋಳೋದಿಲ್ವಾ? ಅಧಿಕಾರಿಗಳ ಇಂತಹ ವರ್ತನೆ ಸಹಿಸೋದಿಲ್ಲ. ಫಲಕಗಳನ್ನು ತೆರವುಗೊಳಿಸಲು ನೀಡಿರುವ ಈ ತಿಂಗಳ ಅಂತ್ಯದ ಕಡೆಯ ಅವಕಾಶದಲ್ಲಿ ಕಿಂಚಿತ್ತೂ ವಿನಾಯಿತಿ ನೀಡುವುದಿಲ್ಲ ಬಿಬಿಎಂಪಿ ಅಧಿಕಾರಿಗಳ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 13ರಿಂದ ವಿಚಾರಣೆ ಆರಂಭವಾಗಿದ್ದು, ಇದೇ 18ಕ್ಕೆ ಮುಂದೂಡಲಾಗಿದೆ" ಎಂದು ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೂ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು, "ಇವೆಲ್ಲಾ ದಿನನಿತ್ಯದ ವಿಚಾರಣೆ ಆಧಾರದಲ್ಲಿ ನಡೆಯಬೇಕು ಎಂದು ಹೇಳಿರಲಿಲ್ಲವೇ" ಎಂದು ಕಿಡಿ‌ಕಾರಿದರು. ಇದಕ್ಕೆ ಚಂದ್ರಮೌಳಿ, "ಇನ್ನೂ ಕೋರ್ಟ್ ಆದೇಶದ ಪ್ರತಿ ಸಿಕ್ಕಿಲ್ಲ" ಎಂದಾಗ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಶೀಘ್ರ ವಿಚಾರಣೆ ನಡೆಸಿ. ಇದೇ 14ರೊಳಗೆ ಎಲ್ಲಾ ಪ್ರಕರಣಗಳಲ್ಲಿ ಆರೋಪಪಟ್ಟಿ ಸಲ್ಲಿಸಿ ಎಂದು ತಾಕೀತು ಮಾಡಿದರು. 223 ಕೇಸುಗಳಲ್ಲಿ 200ಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲಾಗಿದೆ. 23 ಪ್ರಕರಣಗಳಲ್ಲಿ ಆರೋಪಿಗಳ ಫೋನ್ ನಂಬರ್ ಬಿಟ್ಟರೆ ಬೇರೆ ಮಾಹಿತಿ ಸಿಕ್ಕಿಲ್ಲ. ಆ ನಂಬರ್ಗಳೂ ಸ್ವಿಚ್ಡ್ ಆಫ್ ಆಗಿವೆ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಇಂದು ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗುವುದು. ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಲಾಗಿದೆ‌ ಎಂದು ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು ನ್ಯಾಯ ಪೀಠಕ್ಕೆ ತಿಳಿಸಿದರು. "ತೆರವುಗೊಳಿಸಿರುವ ಫ್ಲೆಕ್ಸ್ ಹಾಗೂ ಬ್ಯಾನರ್ಗಳ ವಿಲೇವಾರಿಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟವಾಗಿ ನಿಖರವಾಗಿ ತಿಳಿಸಿ. ಉತ್ತಮ ಪ್ರಮಾಣಪತ್ರ ಸಲ್ಲಿಸಿ" ಎಂದು ಆದೇಶಿಸಲಾಗಿದೆ.
OSCAR-2019
ಬೆಂಗಳೂರು, ಮಾರ್ಚ್ 14: ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ದೇವಸಂದ್ರ ವಾರ್ಡಿನಲ್ಲಿ ನಡೆದಿದೆ ಎನ್ನಲಾದ ನಕಲಿ ಮತಚೀಟಿ ಹಾವಳಿಯನ್ನು ಮಟ್ಟ ಹಾಕಿ, ಆರೋಪಿಗಳನ್ನು ಬಂಧಿಸುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಅಲ್ಲಿನ ಸ್ಥಳೀಯ ಕಾರ್ಪೋರೇಟರ್ ಒಡೆತನದ ಸತ್ಯಸಾಯಿ ಆಸ್ಪತ್ರೆಯ ವಿಳಾಸ ನೀಡಿ 39 ಜನರು ನಕಲಿ ಮತದಾನ ಚೀಟಿ ಪಡೆದಿರುವುದು ಬೆಳಕಿಗೆ ಬಂದಿದೆ. ಕೆ.ಆರ್ ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ್‌ ರವರು ಇಂತಹ ಸಾವಿರಾರು ನಕಲಿ ವಿಳಾಸಗಳನ್ನು ನೀಡಿ ಮತಪಟ್ಟಿಗೆ ಮತದಾರರನ್ನು ಸೇರಿಸಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಏಕಾಏಕಿ 1.25 ಲಕ್ಷ ಮತದಾರರು ಈ ಸಾಲಿನಲ್ಲಿ ಸೇರಿಕೊಂಡಿರುವುದು ಇದಕ್ಕೆ ಪೂರಕವಾಗಿದೆ. ಸಾಲದ್ದಕ್ಕೆ ಭೈರತಿ ಬಸವರಾಜ್ ಬಂಟ, ದೇವಸಂದ್ರ ವಾರ್ಡಿನ ಪಾಲಿಕೆ ಸದಸ್ಯ ಶ್ರೀಕಾಂತ್ ಈಗಾಗಲೇ ಇಂತಹ ಅಕ್ರಮ ನಡೆಸಿ ಸಿಕ್ಕಿಬಿದ್ದಿದ್ದಾರೆ. ಶಾಸಕರು ಹಾಗೂ ಅವರ ಬೆಂಬಲಿಗರ ಈ ಕುಕೃತ್ಯಗಳಿಂದಾಗಿ ಕ್ಷೇತ್ರಾದ್ಯಂತ ನಕಲಿ ಮತದಾರರು ಸೃಷ್ಟಿಯಾಗಿ, ಕಳ್ಳ ಮತದಾನವಾಗುವ ಸಾಧ್ಯತೆಗಳು ಜಾಸ್ತಿ ಇವೆ. ಬೆಂಗಳೂರಿನಾದ್ಯಂತ ಸಮಸ್ಯೆ ಇದೆ: ಇದು ಕೇವಲ ಕೆ.ಆರ್ ಪುರಂಗೆ ಮಾತ್ರ ಸೀಮಿತವಾಗದೇ ಬೆಂಗಳೂರಿನಾದ್ಯಂತ ಈ ರೀತಿ ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಈ ಕೂಡಲೇ ಚುನಾವಣಾ ಅಯೋಗವು ಎಲ್ಲಾ 198 ವಾರ್ಡುಗಳಲ್ಲೂ ಮತದಾರರ ಪಟ್ಟಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಿ, ಮತ್ತೊಮ್ಮೆ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ. ಸರ್ಕಾರವು ಮಹಾನಗರಪಾಲಿಕೆ ಸದಸ್ಯ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಶಾಸಕ ಬಸವರಾಜ್ ಮತ್ತು ಅವರ ಪಟಾಲಂಗಳ ವಿರುದ್ಧ ಸೂಕ್ತ ತನಿಖೆಯನ್ನು ನಡೆಸಬೇಕು ಮತ್ತು ಈಗಿನ ಮತದಾರರ ಪಟ್ಟಿಯಲ್ಲಿ ಅವ್ಯವಹಾರಗಳನ್ನು ನಡೆಸಿರುವ ಕಾರಣ ಸಂಪೂರ್ಣ ತನಿಖೆ ನಡೆಸಿ, ಮತ್ತೊಮ್ಮೆ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತದೆ. ಒಂದು ಪಕ್ಷ ಇವಿಎಂ ತಿರುಚುವ ಯತ್ನದಲ್ಲಿದ್ದರೆ, ಇನ್ನೊಂದು ಪಕ್ಷ ನಕಲಿ ಮತದಾರರನ್ನು ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೆಲಸ. ಆಮ್ ಆದ್ಮಿ ಪಕ್ಷ ಬೆಂಗಳೂರಿನ ಎಲ್ಲಾ 198 ವಾರ್ಡುಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ನಕಲಿ ಮತದಾರನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದೆ ಮತ್ತು ಸಾರ್ವಜನಿಕರು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಬಹುದಾಗಿದ್ದು ಆಮ್ ಆದ್ಮಿ ಪಕ್ಷ ಶೀಘ್ರವೇ ಈ ಸಂಬಂಧ ಹೆಲ್ಪ್‌ಲೈನ್ ಕೂಡ ತೆರೆಯಲಿದೆ. aap arrest voting kr puram karnataka assembly elections 2018 mahadevapura ಎಎಪಿ ಆಮ್ ಆದ್ಮಿ ಪಕ್ಷ ಮತದಾನ ಕರ್ನಾಟಕ ವಿಧಾನಸಭೆ ಚುನಾವಣೆ 2018 ಮಹದೇವಪುರ
OSCAR-2019
ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಈ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಈ ಚುನಾವಣೆ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದರು.
OSCAR-2019
ಈಗಿನ ಹುಡುಗ್ರು ಬಿಡ್ರೀ ತುಂಬಾ ಫಾಸ್ಟು. ಮಾತೆತ್ತಿದ್ರೆ ಮೊಬೈಲು, ಕೈಯೆತ್ತಿದ್ರೆ ಕಿಂಡ್ಲ್. ಆ ಹುಡುಗನ ಹತ್ರಾ ಒಳ್ಳೆ ಹಾಡಿದ್ಯಾ, ಯಾವ್ದೋ ಇಂಟರೆಸ್ಟಿಂಗ್ ಪಿಕ್ಚರ್ರಿದ್ಯಾ? ಲೋ ಮಗಾ ನನ್ಗೂ ಕಳ್ಸೋ, ಟೆಥರಿಂಗ್ ಮಾಡ್ತೀನಿ ಅಂತಾರೆ. ಈ ಮೊಬೈಲ್ ಇಂಟರ್ನೆಟ್, ವೈಫೈ, ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಇವೆಲ್ಲಾ ಬರೋಕೆ ಮುಂಚೆ (ಓ…ಅಂದ್ರೆ ನಿನ್ ಕಾಲ್ದಲ್ಲಿ ಅಂತಾ ಹುಬ್ಬೇರಿಸ್ತಾ ಇದ್ದೀರಾ, ಇರ್ಲಿ ಬಿಡಿ ತೊಂದ್ರೆ ಇಲ್ಲ 🙂 ), ನಮಗೆ ಈ ರೀತಿ ಒಂದು ಮೊಬೈಲಿಂದ ಇನ್ನೊಂದು ಮೊಬೈಲಿಗೆ ಏನಾದ್ರೂ ಕಳಿಸಬೇಕಾದ್ರೆ ಇದ್ದದ್ದು ಒಂದೋ ಸೂಪರ್ ಸ್ಲೋ ಇನ್ಫ್ರಾರೆಡ್ ಕನೆಕ್ಷನ್ ಅಥ್ವಾ ಅಂದಿನ ಕಾಲಕ್ಕೆ ಸೂಪರ್ ಅಲ್ಟ್ರಾ ಹೈ-ಫೈಯಾಗಿದ್ದ ಬ್ಲೂಟೂಥ್. ಈಗ್ಲೂ ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರೆದ ಮೇಲೂ ಬ್ಲೂಟೂಥ್ ಜನಪ್ರಿಯತೆಯೇನೂ ಕಡಿಯಾಗಿಲ್ಲ. ಇವತ್ತಿಗೂ ನಿಮ್ ಫೋನನ್ನು ಕಾರಿನಲ್ಲಿ ಉಪಯೋಗಿಸಬೇಕು ಅಂದ್ರೆ ಬ್ಲೂಟೂಥ್ ಬೇಕು. ಹೆಚ್ಚಿನ ವೈರ್ಲೆಸ್ ಸ್ಪೀಕರುಗಳು, ಧ್ವನಿಪ್ರಸರಣಕ್ಕೆ ಬ್ಲೂಟೂಥ್ ತಂತ್ರಜ್ಞಾನವನ್ನೇ ಉಪಯೋಗಿಸುತ್ತವೆ. ಬ್ಲೂಟೂಥಿನ ಸುಲಭ ಜೋಡಣೆ ಮತ್ತು ಸಂವಹನ ತಂತ್ರಜ್ಞಾನವೇ ಅದರ ಈ ಜನಪ್ರಿಯತೆಗೆ ಮೂಲ ಕಾರಣ. ಇವತ್ತಿನ ಸಣ್ಣ ಲೇಖನದಲ್ಲಿ ಈ ಬ್ಲೂಟೂಥ್ ಚಾಲ್ತಿಗೆ ಬಂದದ್ದು ಹೇಗೆ? ಅದ್ಯಾಕೆ ಬ್ಕೂಟೂಥಿಗೆ ನೀಲಿಬಣ್ಣದ ಹಲ್ಲು? ಅದಕ್ಕೆ ಬ್ಲೂಟೂಥ್ ಅಂತಾ ಯಾಕೆ ಕರೆಯುತ್ತಾರೆ? ಅದರ ಚಿಹ್ನೆಯ ಹಿಂದಿನ ಅರ್ಥ? ಇದನ್ನು ತಿಳಿಸುವ ಸಣ್ಣ ಪ್ರಯತ್ನ. ನೋಡೀ….ಈ ಎಂಜಿನಿಯರ್ರುಗಳ ಕಥೇನೇ ಇಷ್ಟು. ಮೊಬೈಲ್ ಕಂಡುಹಿಡಿದು ಅಲ್ಲಿಗೇ ಮುಗಿಸಲಿಲ್ಲ. ಮೊಬೈಲುಗಳೇನೋ ಜನರನ್ನು ಜೋಡಿಸುತ್ತವೆ, ಆದರೆ ಮೊಬೈಲುಗಳನ್ನ ಒಂದಕ್ಕೊಂದು ಹೇಗೆ ಸಂಪರ್ಕಿಸುವುದು ಹೇಗೆ ಅನ್ನೋ ತಲೆಬಿಸಿಯನ್ನ ತಲೆಗೆ ಹಚ್ಕೊಂಡ್ರು. ಬರೇ ಮೊಬಲುಗಳೇ ಯಾಕೆ! ಫೋನು, ಟೀವಿ, ರೇಡಿಯೋ ಮುಂತಾದ ಎಲ್ಲಾ ವಿದ್ಯುನ್ಮಾನ ಯಂತ್ರಗಳೂ ಒಂದಕ್ಕೊಂದು ಮಾತನಾಡುವಂತಾದರೆ!? ಎಂಬ ಕನಸುಗಳನ್ನೂ ಕಟ್ಟಿಕೊಂಡರು. ಆಗ ಶುರುವಾಗಿದ್ದೇ ಪರ್ಸನಲ್ ಏರಿಯಾ ನೆಟ್ವರ್ಕ್ (PAN) ಅನ್ನೋ ಪರಿಕಲ್ಪನೆ. ಇದರನ್ವಯ ಎಂಜಿನಿಯರ್ರುಗಳು ಸುಮಾರು ಐದು ಮೀಟರ್ ಸುತ್ತಳತೆಯಲ್ಲಿ ಮೊಬೈಲುಗಳು ಒಂದದ ಜೊತೆಗೊಂದು ಸಂವಹಿಸಬಲ್ಲುದರ ಬಗ್ಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ತೊಡಗಿದರು. 90ರ ದಶಕದಲ್ಲಿ ಈ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದ್ದು ಹುಟ್ಟು ಹಾಕಿದ್ದು, ಎರಿಕ್ಸನ್ ಅನ್ನೋ ಸ್ವೀಡಿಶ್ ಕಂಪನಿ. ನಂತರ ಎರಿಕ್ಸನ್, ಐಬಿಎಮ್, ನೋಕಿಯಾ, ತೋಷೀಬಾ ಮತ್ತು ಇಂಟೆಲ್ ಕಂಪನಿಗಳು ಒಟ್ಟು ಸೇರಿ 1996ರಲ್ಲಿ ಮೊಬೈಲ್ ತಂತ್ರಜ್ಞಾನ ವಿಶೇಷಾಸಕ್ತಿ (Special Interest Group) ಗುಂಪೊಂದನ್ನು ಪ್ರಾರಂಭಿಸಿದವು. ಈ ಗುಂಪು ಬ್ಲೂಟೂಥ್ ತಂತ್ರಜ್ಞಾನವನ್ನು ಹುಟ್ಟುಹಾಕುವುದರಲ್ಲಿ, ಅದನ್ನು ಏಕರೂಪವಾಗಿಸುವಲ್ಲಿ ಮತ್ತು ಅದನ್ನು ನಾವಿಂದು ಉಪಯೋಗಿಸುತ್ತಿರುವ ಮಟ್ಟಕ್ಕೆ ತಲುಪುವುದರಲ್ಲಿ ಮಹತ್ತರವಾದ ಕೆಲಸಗಳನ್ನು ಮಾಡಿತು. ಈ ತಂಡದಲ್ಲಿದ್ದ ಬೇರೆ ಬೇರೆ ಕಂಪನಿಗಳ ಮಧ್ಯೆ ಸಂಧಾನಕಾರನ ಪಾತ್ರ ವಹಿಸಿದ್ದ, ಇಂಟೆಲ್ ಉದ್ಯೋಗಿ ಜಿಮ್ ಕರ್ಡಾಷ್, ಈ ಪ್ರಾಜೆಕ್ಟ್ ಪ್ರಾರಂಭವಾದ ಸಮಯದಲ್ಲಿ ‘ವೈಕಿಂಗ್ಸ್’ ಎಂಬ ಸ್ಕ್ಯಾಂಡಿನೇವಿಯನ್ ಯೋಧರ ಬಗ್ಗೆ ಪುಸ್ತಕವೊಂದನ್ನು ಓದುತ್ತಿದ್ದ. ಅದರಲ್ಲಿ ಉಲ್ಲೇಖಿಸಿದ್ದ ಹೆರಾಲ್ಡ್ ಗ್ರಾಮ್ಸನ್ (ಚಿತ್ರ – ೧) ಎಂಬ ರಾಜನ ಬಗ್ಗೆ ಉತ್ಸುಕನಾಗಿ, ಅವನ ಬಗ್ಗೆ ಹೆಚ್ಚಿನ ವಿಷಯ ಓದಿದಾಗ ಜಿಮ್’ಗೆ ತಿಳಿದದ್ದೇನೆಂದರೆ, ಈ ಹೆರಾಲ್ಡ್ ಗ್ರಾಮ್ಸನ್ 958ರಿಂದ 970ರವರೆಗೆ ‘ವೈಕಿಂಗ್’ಗಳ ರಾಜನಾಗಿದ್ದ ಮತ್ತು ಆತ ಸ್ಕ್ಯಾಂಡಿನೇವಿಯನ್ ದೇಶಗಳನ್ನು (ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್) ಅಹಿಂಸಾತತ್ವದಿಂದ ಒಗ್ಗೂಡಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡಿದ. ವೈಕಿಂಗರು ಸದಾ ಯುದ್ಧ ಮತ್ತು ರಕ್ತಪಾತದಲ್ಲೇ ನಿರತರಾಗಿದ್ದರಿಂದ, ಅಹಿಂಸೆಯ ಮಾತನಾಡಿದ ಹೆರಾಲ್ಡ್ ಸಹಜವಾಗಿಯೇ ವಿಶೇಷವಾಗಿ ಪರಿಗಣಿಸಲ್ಪಟ್ಟ ಹಾಗೂ ಚರಿತ್ರಾಕಾರರು ಅವನ ಬಗ್ಗೆ ಹೆಚ್ಚಾಗಿಯೇ ಬರೆದರು. ಈ ಹೆರಾಲ್ಡನಿಗೆ ಬ್ಲೂಬೆರ್ರಿ ಹಣ್ಣೆಂದರೆ ಬಹಳ ಇಷ್ಟವಿತ್ತಂತೆ. ಎಷ್ಟು ಇಷ್ಟವೆಂದರೆ, ದಿನವಿಡೀ ಬ್ಲೂಬೆರ್ರಿ ಹಣ್ಣನ್ನೇ ತಿಂದು ಅವನ ಹಲ್ಲುಗಳು ನೀಲಿಬಣ್ಣಕ್ಕೆ ತಿರುಗಿದ್ದವಂತೆ! ಇದರಿಂದಾಗಿ, ಒಂದು ದಂತಕಥೆಯ ಪ್ರಕಾರ (pun intended 🙂 ), ಅವನ ಪೂರ್ತಿಹೆಸರಾದ ಹೆರಾಲ್ಡ್ ಗ್ರಾಮ್ಸನ್ ಬ್ಲಾಟಂಡ್ (King Harald Gramson Blatand) ಎನ್ನುವುದು ಹೆರಾಲ್ಡ್ ಗ್ರಾಮ್ಸನ್ ಬ್ಲೂಟೂಥ್ ಎಂದೇ ಅನ್ವರ್ಥವಾಗಿತ್ತಂತೆ. ಈ ಕಥೆ ಕೇಳಿದ ಜಿಮ್ ಕರ್ಡಾಷ್, ಈ ಮೊಬೈಲುಗಳನ್ನು ತಂತಿರಹಿತವಾಗಿ ‘ಒಗ್ಗೂಡಿಸುವ’ ಪ್ರಾಜೆಕ್ಟಿಗೂ ಬ್ಲೂಟೂಥ್ ಎಂಬ ಹೆಸರೇ ಸೂಕ್ತವಾದದ್ದೆಂದು ನಿರ್ಧರಿಸಿದ. ಈ ಕಾರಣದಿಂದ, ಮೊಬೈಲುಗಳನ್ನು (ಅಹಿಂಸಾರೀತಿಯಲ್ಲಿ) ಜೋಡಿಸುವ ಈ ತಂತ್ರಜ್ಞಾನಕ್ಕೆ ಬ್ಲೂಟೂಥ್ ಎಂಬ ಹೆಸರೇ ಅಂಟಿಕೊಂಡಿತು. ಇನ್ನು ಬ್ಲೂಟೂಥ್ ತಂತ್ರಜ್ಞಾನದ ಚಿಹ್ನೆಗೆ ಬಂದರೆ, ಚಿತ್ರ-೨ರಲ್ಲಿ ತೋರಿಸಿದಂತೆ, ಹೆರಾಲ್ಡ್ ಬ್ಲಾಟಂಡ್ ಅಥವಾ (ಹೆರಾಲ್ಡ್ ಬ್ಲೂಟೂಥ್) ಎಂಬ ಪದಗಳ ಮೊದಲಕ್ಷರಗಳ ಲ್ಯಾಟಿನ್ ಅವತರಣಿಕೆಗಳಾದ (H(Haglazl) and B(Berkanan) ಮಿಶ್ರಣವಷ್ಟೇ. ನನಗೆ ಈ ಬ್ಲೂಟೂಥ್ ಕಥೆ ಮೊದಲೇ ಗೊತ್ತಿತ್ತು. ಆದರೆ ಇವತ್ತಷ್ಟೇ ಅದರ ಚೆಹ್ನೆಯ ಬಗೆಗೂ ತಿಳಿದು ಬಂದಿದ್ದು. ಅದಕ್ಕೇ ಬರೆಯೋಣವೆನ್ನಿಸಿತು. ಇಷ್ಟವಾದಲ್ಲಿ, ಬೇರೆಯವರಿಗೂ ತಿಳಿಸಿ.
OSCAR-2019
ಅತಿಯಾದ ಒತ್ತಡ ,ಮಾರ್ಗದರ್ಶಿಯಿಲ್ಲದ ಶಿಸ್ತು ,ತನ್ನ ಬಂಧು ಬಳಗ ಮತ್ತು ಸಮಾಜವನ್ನೇ ದೂರವಿಡುವ ಅಥವಾ ತನ್ನ ಹೆತ್ತವರನ್ನೇ ದೂರ ಮಾಡುವ ಖಾಸಗಿ ಶಿಕ್ಷಣ ಕೇಂದ್ರ. ನಮ್ಮ ದೇಶದ ಹೆಮ್ಮೆ ಅಂದರೆ ಹಿಂದೂ ಮುಸ್ಲಿಂ ಕ್ರಿಸ್ತ ಮತ್ತು ಇನ್ನಿತರ ಭಾಂಧವರ ಹಬ್ಬ ಹರಿದಿನಗಳ ಆಚರಣೆಯಿಂದ ವಂಚಿತರಾಗುವ ಇಲ್ಲಿಯ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡಗಳಲ್ಲದೆ ಇನ್ನೇನು? ಭವಿಷ್ಯದಲ್ಲಿ ಉತ್ತಮ ಹುದ್ದೆಗೇರಲು ನಮ್ಮ ಹೆಮ್ಮೆಯ ಮಂಗಳೂರು ವಿಶ್ವಾವಿದ್ಯಾಲಯದ ಸೇರಿ ಕ್ಯಾಂಪಸ್ ಅನ್ನು ಒಮ್ಮೆ ಸುತ್ತಿದರೆ ಅದೆಷ್ಟು ಸುಂದರ ವಾತಾವರಣವಿದೆ ಮತ್ತು ಭವಿಷ್ಯವಿದೆ.
OSCAR-2019
ಡಿಜಿಟಲ್ ಪಾವತಿ ಯೋಜನೆಗೆ ಯುವಕರು ರಾಯಭಾರಿ ಇದ್ದಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾನುವಾರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಕ್ಯಾಶ್ ಲೆಸ್ ವ್ಯಹಾರ ಹಾಗೂ ರಾಯಚೂರು: ಜಿಲ್ಲೆಯಲ್ಲಿ ಮುಂದುವರೆದ ಅನ್ನದಾತರ ಸರಣಿ ಆತ್ಮಹತ್ಯೆ .ಸಾಲಬಾಧೆ ಹಿನ್ನೆಲೆ ತನ್ನ ಜಮೀನಿನಲ್ಲಿದ್ದ ವಿದ್ಯುತ್ ತಂತಿ ಬಾಯಿಯಿಂ ಕಚ್ಚಿ ಆತ್ಮಹತ್ಯೆ ಮಾಡಿಕೊಂಡ ರೈತ. ಸಿಂಧನೂರು ತಾಲುಕಿನ ಚಿತ್ರಾಲಿ ರಾಜ್ಕೋಟ್ : -ಗುಜರಾತಿನ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು ಸಜ್ಜಾಗಿದ್ದ ಇಬ್ಬರು ಐಸಿಸ್ ಉಗ್ರರು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಬಲೆಗೆ ಬಿದ್ದಿದ್ದಾರೆ. ಟ್ವೀಟರ್ ಮತ್ತಿತರ ತುಮಕುರು : – ಚಿರತೆ ದಾಳಿಯಿಂದ ಇಬ್ಬರೂ ಗಾಯಗೊಂಡಿರುವ ಘಟನೆ ತುಮಕುರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಬರದೆಲೆಪಾಳ್ಯ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಚನ್ನಬಸಪ್ಪ ಕಲಬುರ್ಗಿ ; -ಜಮೀನಿನ ಪಕ್ಕದಲ್ಲಿದ್ದ ಕೆರೆಯಲ್ಲಿ ಈಜಾಡಲು ಹೋಗಿದ್ದ ನಾಲ್ವರು ಜಲಾಸಮಾದಿಯಾದ ದುರ್ಘಟನೆ ಕಲಬುರ್ಗಿ ತಾಲೂಕಿನ ಕುಮಸಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಮೀರ್ ಅಲಿಖಾನ್ 29. ಅಮಾತು ಚಂಡೀಗರ್: ಕಳಿಂಗ ಲ್ಯಾನ್ಸರ್ ತಂಡ ೨೦೧೭ರ ಹಾಕಿ ಲೀಗ್‌ನ ನೂತನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಸಂಘಟಿತ ಆಟದ ಪ್ರದರ್ಶನ ನೀಡಿದ ಲ್ಯಾನ್ಸರ್ ೪-೧ ಗೋಲುಗಳಿಂದ ದಬಾಂಗ್ ಮುಂಬೈ ರಣಜಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಸೋತು ನಿರಾಸೆಯನ್ನು ಅನುಭವಿಸಿರುವ ಕರ್ನಾಟಕ ತಂಡ ವಿಜಯ್ ಹಜಾರೆ ಟೂರ್ನಿಯಲ್ಲಿ ಸರ್ವಿಸಸ್ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ೪ ತೆಹ್ರಾನ್: ಭಾರತದ ಗ್ರ್ಯಾಂಡ್ ಮಾಸ್ಟರ್ಸ್ ದ್ರೋಣವಲ್ಲಿ ಹರಿಕಾ, ವಿಶ್ವ ಮಹಿಳಾ ಚೆಸ್ ಚಾಂಪಿಯನ್ ಶಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಭಾನುವಾರ ವಿಜಯಪುರ : ಗುಮ್ಮಟನಗರಿಯಲ್ಲಿ ಇದೆ ಮೊದಲ ಬಾರಿಗೆ ಹಮ್ಮಿಕೊಳ್ಳಲಾದ ರಾಷ್ಟ್ರ ಮಟ್ಟದ ಹಾಫ್ ಮ್ಯಾರಾಥಾನ್ ಗೆ ಸ್ಟಾರ್ ನಟ ಯಶ್ ಚಾಲನೆ ನೀಡಿದ್ದಾರೆ. ನಗರದ ಗೋಳಗುಮ್ಮಟ ಆವರಣದಲ್ಲಿ Just for fun – ಹೇಗಿದ್ರು ಹೇಗಾದ್ರು ಗೊತ್ತಾ ನಮ್ಮ ಈ ನಾಯಕರು…..Pm ಮೋದಿ, ಮಾಜಿ PM ಸಿಂಗ್, ಸೇರಿದಂತೆ ಹಲವು ನಾಯಕರು ಮೊದಲು ಹೇಗಿದ್ದರು, ಇಗ
OSCAR-2019
ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್‌ ಅಭಿನಯದ ಮೊದಲ ಚಿತ್ರ "ಪಡ್ಡೆಹುಲಿ' ಚಿತ್ರದ ಮುಹೂರ್ತ ಈಗಾಗಲೇ ಮುಗಿದಿದೆ. ಚಿತ್ರದ ಚಿತ್ರೀಕರಣ ಏಪ್ರಿಲ್‌ 16ರಂದು ಶುರುವಾಗಲಿದ್ದು, ಈ ಮಧ್ಯೆ ಶ್ರೇಯಸ್‌ನ ಹುಟ್ಟುಹಬ್ಬದ ಸಲುವಾಗಿ ಚಿತ್ರದ ಪ್ರೋಮೋ ಸಾಂಗ್‌ ಬಿಡುಗಡೆ ಮಾಡಲಾಯಿತು. ಇತ್ತೀಚೆಗೆ ಕಲಾವಿದರ ಸಂಘದ ಹೊಸ ಕಟ್ಟಡದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಪ್ರೋಮೋ ಸಾಂಗ್‌ ಬಿಡುಗಡೆ ಮಾಡುವುದರ ಜೊತೆಗೆ ಶ್ರೇಯಸ್‌ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಹಾಡು ಬಿಡುಗಡೆ ಮಾಡುವುದಕ್ಕೆ ರಕ್ಷಿತ್‌ ಶೆಟ್ಟಿ ಬಂದಿದ್ದರು. ವಿಷಲ್‌ ಊದುವ ಮೂಲಕ ಹಾಡು ಬಿಡುಗಡೆ ಮಾಡಿದರು. ಜೊತೆಗೆ ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌, ಇಂದ್ರಜಿತ್‌ ಲಂಕೇಶ್‌, ಎ.ಪಿ. ಅರ್ಜುನ್‌, ಎನ್‌.ಎಂ. ಸುರೇಶ್‌, ಎಂ.ಜಿ. ರಾಮಮೂರ್ತಿ, ಸೂರಪ್ಪ ಬಾಬು ಸೇರಿದಂತೆ ಹಲವರು ಇದ್ದರು. ಶ್ರೇಯಸ್‌ ಹುಟ್ಟುಹಬ್ಬದ ಸಲುವಾಗಿ, ಬೆಳ್ಳಿ ಖಡ್ಗ ನೀಡಿ ಸನ್ಮಾಸಲಾಯಿತು. ಈ ಚಿತ್ರವನ್ನು ರಮೇಶ್‌ ರೆಡ್ಡಿ ನಿರ್ಮಿಸಿದರೆ, ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.
OSCAR-2019
ಇಪೋ : ಪ್ರತಿಷ್ಠಿತ ಅಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಸಫಲವಾಗಿದೆ. ಟೂರ್ನಿಯ ಮೂರು ಹಾಗೂ ನಾಲ್ಕನೇ ಸ್ಥಾನಗಳಿಗಾಗಿ ಶನಿವಾರ ನಡೆದ ಹಣಾಹಣಿಯಲ್ಲಿ
OSCAR-2019
ಮೈಸೂರು: ಮೈಸೂರಿನಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಗೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆಗಮಿಸುತ್ತಿದ್ದಂತೆ, ಈಶ್ವರಪ್ಪ ಬಣದ ಬಿಜೆಪಿ ಕಾರ್ಯಕರ್ತರು ಪಟಾಕಿ
OSCAR-2019
ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ನಟಿ ಹಾಗೂ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಭಾವನಾ ತಿಳಿಸಿದ್ದಾರೆ. ಚಿತ್ರದುರ್ಗದ ಬುರುಜನಹಟ್ಟಿಯ ಹುಡುಗಿ ನಾನಾಗಿದ್ದು, ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ಇಚ್ಛೆ ಹೊಂದಿದ್ದೇನೆ. ಪಕ್ಷದ ಹಿರಿಯರು ಬೆನ್ನು ತಟ್ಟಿ ಕಳಿಸಿದ್ದಾರೆ. ನಾನೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಪಕ್ಷದ ಹಿರಿಯರು, ಕಾರ್ಯಕರ್ತರು, ಮುಖಂಡರು, ಸಚಿವರೊಂದಿಗೆ ಚರ್ಚೆ ನಡೆಸಿ ಮಾರ್ಗದರ್ಶನ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಹಿಂದಿನಿಂದಲೂ ಚಿತ್ರದುರ್ಗದೊಂದಿಗೆ ಒಡನಾಟವಿದೆ. ಅವಕಾಶ ಸಿಕ್ಕರೆ ಸ್ಪರ್ಧೆ ಮಾಡುತ್ತೇನೆ. ರಾಜಕೀಯ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ. ಸಿಎಂ ಯೋಗಿಗೆ ಭಾರೀ ಮುಖಭಂಗ : ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಎಸ್ಪಿ | Kannada Dunia | Kannada News | Karnataka News | India News ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಸಿಎಂ ಯೋಗಿಗೆ ಭಾರೀ ಹಿನ್ನೆಡೆಯಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನೋವಿನ ಕಹಿಯುಂಡಿದೆ. ಫುಲ್ಪುರ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿ ಯಶಸ್ಸು ಕಂಡಿದೆ. ಫುಲ್ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನರೇಂದ್ರ ಸಿಂಗ್ ಪಟೇಲ್ ಬಿಜೆಪಿ ಕೌಶೇಂದ್ರ ಸಿಂಗ್ ರನ್ನು ಸೋಲಿಸಿದ್ದಾರೆ. ನರೇಂದ್ರ ಸಿಂಗ್, ಕೌಶೇಂದ್ರ ಸಿಂಗ್ ರನ್ನು 59,613 ಮತಗಳಿಂದ ಸೋಲಿಸಿದ್ದಾರೆ. ಇತ್ತ ಗೋರಖ್ಪುರ ಕ್ಷೇತ್ರದಲ್ಲೂ ಸಮಾಜವಾದಿ ಪಕ್ಷ ನಿರ್ಣಾಯಕ ಮತ ಗಳಿಸುವಲ್ಲಿ ಯಶಸ್ವಿಯಾಗಿದೆ. 22 ಸಾವಿರ ಮತಗಳಿಂದ ಎಸ್ಪಿ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಕ್ಷೇತ್ರದ ಮೇಲೆ ಎಲ್ಲರ ಕಣ್ಣಿತ್ತು. ಗೋರಖ್ಪುರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎನ್ನಲಾಗ್ತಿತ್ತು. ಬಿಎಸ್ಪಿ, ಎಸ್ಪಿ ಬೆಂಬಲದೊಂದಿಗೆ ನಿಶಾದ್ ಪಕ್ಷದ ಎಂಜಿನಿಯರ್ ಪ್ರವೀಣ್ ನಿಶಾದ್ ಸ್ಪರ್ಧೆಗಿಳಿದಿದ್ದರು. ಮೂರು ದಶಕದ ನಂತ್ರ ಗೋರಕ್ಷನಾಥ್ ಪೀಠದಿಂದ ಯಾರೂ ಇಲ್ಲಿ ಕಣಕ್ಕಿಳಿದಿರಲಿಲ್ಲ. ಬಿಜೆಪಿ ಉಪೇಂದ್ರ ದತ್ ಶುಕ್ಲಾರನ್ನು ಕಣಕ್ಕಿಳಿಸಿತ್ತು. ಸರೀತಾ ಕರೀಂ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು.
OSCAR-2019
ಟೆಕ್ಕಿ ಪ್ರಾಣಕ್ಕೇ ಕುತ್ತು ತಂತು ಜಿಮ್ ವರ್ಕೌಟ್ | Kannada Dunia | Kannada News | Karnataka News | India News ಅತಿಯಾದ್ರೆ ವ್ಯಾಯಾಮ ಕೂಡ ಒಳ್ಳೆಯದಲ್ಲ. ದೈಹಿಕ ಕಸರತ್ತು, ಜಿಮ್ ಇವೆಲ್ಲವನ್ನು ಮಿತವಾಗಿ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ. ಆದ್ರೆ ಮಿತಿ ಮೀರಿದ್ರೆ ನಿಮ್ಮ ಪ್ರಾಣಕ್ಕೇ ಅದು ಸಂಚಕಾರ ತರಬಲ್ಲದು. 22 ವರ್ಷದ ಟೆಕ್ಕಿಯೊಬ್ಬ ಅತಿಯಾದ ಎಕ್ಸರ್ಸೈಸ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ. ಡೆಲ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ ವರುಣ್ ಕುಮಾರ್, ಸ್ವಲ್ಪ ಮೊದಲೇ ಕಚೇರಿಗೆ ಬಂದಿದ್ದ. ಶಿಫ್ಟ್ ಶುರುವಾಗೋದ್ರೊಳಗೆ ಸ್ವಲ್ಪ ಎಕ್ಸರ್ಸೈಸ್ ಮಾಡೋಣ ಅಂದ್ಕೊಂಡು ಆಫೀಸ್ ಜಿಮ್ ಗೆ ಹೋಗಿದ್ದಾನೆ. ವರ್ಕೌಟ್ ಮಾಡ್ತಿದ್ದಾಗ ದಿಢೀರನೆ ವರುಣ್ ಗೆ ಎದೆನೋವು ಶುರುವಾಗಿತ್ತು. ಕೆಲವೇ ಕ್ಷಣಗಳಲ್ಲಿ ವರುಣ್ ಪ್ರಜ್ಞೆತಪ್ಪಿ ಬಿದ್ದಿದ್ದ. ಕೂಡಲೇ ಕಚೇರಿ ಕ್ಲಿನಿಕ್ ಗೆ ದಾಖಲಿಸಲಾಯ್ತು. ವರುಣ್ ಹೃದಯ ಬಡಿತ ತೀವ್ರವಾಗಿದೆ ಅಂತಾ ವೈದ್ಯರು ತಿಳಿಸಿದ್ರು. ಮತ್ತೆ ವರುಣ್ ಗೆ ಪ್ರಜ್ಞೆ ಮರಳಲೇ ಇಲ್ಲ, ಆತ ಮೃತಪಟ್ಟಿದ್ದಾನೆ. ವೈಜಾಗ್ ಮೂಲದ ವರುಣ್ ರಾತ್ರಿ ಸರಿಯಾಗಿ ಊಟ ಮಾಡಿರಲಿಲ್ಲ, ಬೆಳಗ್ಗೆ ಹಸಿದ ಹೊಟ್ಟೆಯಲ್ಲೇ ಜಿಮ್ ಮಾಡಲು ಬಂದಿದ್ದಾನೆ. ಈ ಹಿಂದೆ ಅವನಿಗೆ ಹೃದಯದ ತೊಂದರೆ ಇತ್ತು. ದೇಹದಲ್ಲಿ ಸ್ಟ್ಯಾಮಿನಾ ಕೂಡ ಇರಲಿಲ್ಲ. ದಿಢೀರಂತ ಅತಿಯಾದ ವ್ಯಾಯಾಮ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ.
OSCAR-2019
ಬೆಂಗಳೂರು, ಜೂ.21-ಗ್ರಾಮೀಣಾಭಿವೃದ್ಧಿ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಟದ ಅಗತ್ಯವಿದೆ. ತಮಗೆ 80 ವರ್ಷವಾಗಿದ್ದರೂ ಹೋರಾಡುವ ಶಕ್ತಿ ಕುಂದಿಲ್ಲ. ಇದಕ್ಕೆ ಕಾರಣ ತಾವು ರೂಢಿಸಿಕೊಂಡು ಬಂದಿರುವ ಯೋಗಾಭ್ಯಾಸ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಇಂದಿಲ್ಲಿ ತಿಳಿಸಿದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮೂರನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಪ್ರದರ್ಶನದ ನಂತರ ಮಾತನಾಡಿದ ಅವರು, ಬಲಿಷ್ಠ ಭಾರತಕ್ಕೆ ಯೋಗ ಅತ್ಯಗತ್ಯ. ಯೋಗ ಮಾಡುವವರಿಗೆ ಮನಸ್ಸು ಶುದ್ಧವಾಗಿರುತ್ತದೆ. ಉತ್ತಮ ಆಚಾರ-ವಿಚಾರಗಳಿಂದ ಚಾರಿತ್ರ್ಯವು ಶುದ್ಧವಾಗಿರುತ್ತದೆ. ಇದಕ್ಕೆ ಯೋಗವೂ ಪೂರಕ ಎಂದು ಅಭಿಪ್ರಾಯಪಟ್ಟರು. ನಮ್ಮ ಉದ್ದೇಶ ಒಂದೇ. ಉತ್ತಮ ಸಮಾಜ ನಿರ್ಮಾಣ ಮಾಡುವುದು. ಅದಕ್ಕಾಗಿ ಯುವಶಕ್ತಿಯನ್ನು ಸದೃಢಗೊಳಿಸಬೇಕಿದೆ. ಯುವಶಕ್ತಿ ಸದೃಢಗೊಳ್ಳಲು ಯೋಗದಂತಹ ಆಚರಣೆಗಳು ರೂಢಿಯಲ್ಲಿರಬೇಕು. ನನಗೆ 80 ವರ್ಷವಾಗಿದ್ದರೂ 27 ವರ್ಷದ ಯುವಕನಂತೆ ಕೆಲಸ ಮಾಡುತ್ತೇನೆ. ಎಲ್ಲ ಕೆಲಸದಲ್ಲೂ ಹುಮ್ಮಸ್ಸಿದೆ. ಆದರೆ, ಇಂದಿನ ಅದೆಷ್ಟೊ ಯುವಕರು 80 ವರ್ಷದ ಮುದುಕರಂತೆ ಆಡುತ್ತಾರೆ. ಇನ್ನೇನು ಮಾಡೋದಿದೆ ಎಂಬಂತೆ ವರ್ತಿಸುತ್ತಾರೆ. ಕೆಲವು ಸಿನಿಕತನದಿಂದ ವರ್ತಿಸುವವರು ವಯಸ್ಸಾದ ಈತನೇನು ಮಾಡುತ್ತಾರೆ ಎಂದು ನನ್ನ ಬಗ್ಗೆ ವ್ಯಂಗ್ಯವಾಡುತ್ತಾರೆ. ಆದರೆ, ನನ್ನಲ್ಲಿ ಹೋರಾಡುವ ಹುಮ್ಮಸ್ಸು ಹೆಚ್ಚಿದೆ ಎಂದು ಹೇಳಿದರು. ಹಣ, ಆಸ್ತಿ ಯಾವುದೂ ನನ್ನಲ್ಲಿಲ್ಲ. ದೇವಸ್ಥಾನದಲ್ಲಿ ಮಲಗುತ್ತೇನೆ. ತಿನ್ನಲು ತಟ್ಟೆ, ಮಲಗಲು ಚಾಪೆ ಇದೆ. ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬೆಳಗ್ಗೆ 4 ಗಂಟೆಗೆ ಎದ್ದು ವಾಯುವಿಹಾರಕ್ಕೆ ಹೊರಡುತ್ತೇನೆ. ನಂತರ ಪ್ರಾಣಾಯಾಮ, ಯೋಗ ಮಾಡಿ ಮನಸ್ಸನ್ನು ನಿಷ್ಕಲ್ಮಶವಾಗಿಟ್ಟುಕೊಂಡಿದ್ದೇನೆ. ಯಾವುದೇ ರಾಜಕೀಯ ಪಕ್ಷಗಳು ಯೋಗವನ್ನು ಕಲಿಸಲು ಮುಂದಾಗಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು. ಬೆಂಗಳೂರು, ನ.14- ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿಗೆ 1ನೆ ಸೆಷನ್ಸ್ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಶುಕ್ರವಾರ ಸಿಸಿಬಿ ನೀಡಿದ್ದ ನೋಟೀಸ್‍ಗೆ ಸಂಬಂಧಿಸಿದಂತೆ ಬೆಂಗಳೂರು,ನ.9- ಗೋಲ್ಡ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಸಿಸಿಬಿ ಪೊಲೀಸರ ಬಂಧನದ ಬಲೆಯಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ರೆಡ್ಡಿ ಪರ ವಕೀಲರು ಬೆಂಗಳೂರು,ನ.9-ಡೀಲ್ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯಿಂದ ಬಿಜೆಪಿ ಮತ್ತೆ ಅಂತರ ಕಾಯ್ದುಕೊಂಡಿದೆ. ತೆರೆಮರೆಯಲ್ಲಿದ್ದುಕೊಂಡೇ ಕಾನೂನು ಹೋರಾಟ ಮಾಡುವ ಸಂದಿಗ್ಧ ಪರಿಸ್ಥಿತಿಯನ್ನು ರೆಡ್ಡಿ ಎದುರಿಸುವಂತಾಗಿದೆ. ಕಾಂಗ್ರೆಸ್‍ನಲ್ಲಿ ದಾವಣಗೆರೆ ಏ.1- ಜನಾರ್ದನರೆಡ್ಡಿ ಜತೆ ನಾನು ಮಾತುಕತೆ ನಡೆಸಿಲ್ಲ. ಅಂತಹ ಯಾವುದೇ ಪ್ರಯತ್ನಗಳು ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
OSCAR-2019
ಜಾಲಹಳ್ಳಿ: ಜಾಲಹಳ್ಳಿ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಗುರುರಾಜರಾವ್‌ ದೇಸಾಯಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಅ.28ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ-ಕಾಂಗ್ರೆಸ್‌... ರಾಯಚೂರು: ಆರೋಗ್ಯ ಇಲಾಖೆ ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಆರೋಗ್ಯ ಕ್ಷೇತ್ರದ ಬಜೆಟ್‌ ಶೇ.1ರಷ್ಟು ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಒಡ್ಡಿ...
OSCAR-2019
ಇಂದು (ಮಾರ್ಚ್ 09)ಬೆಳ್ಳಂ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆ ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಿ ಶಾಕ್ ನೀಡಿದ್ದಾರೆ. ಕೋಲಾರ, ಬೆಳಗಾವಿ ಮಂಗಳೂರು, ಕೊಪ್ಪಳ, ತುಮಕೂರು,ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾಲ್ವರು ಅಧಿಕಾರಿಗಳ ಮನೆ ಹಾಗೂ ಅವರಿಗೆ ಸಂಬಂಧಿಸಿದ ಇತರ ಕಡೆಗಳಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ. ಕೋಲಾರದ ಮುಳಬಾಗಲು ವ್ಯಾಪ್ತಿಯ ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆ ಎಇಇ ಅಪ್ಪಿರೆಡ್ಡಿ ಎಂಬುವರ ಮೇಲೆ ದಾಳಿ ನಡೆದಿದೆ. ಬೆಳಗಾವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜೇಶ್ವರಿ ಜೈನಾಪುರ ಹಾಗೂ ಉಡುಪಿ ಅಬಕಾರಿ ಉಪ ಅಧಿಕ್ಷಕ ವಿನೋದ್ ಕುಮಾರ್,ಕೊಪ್ಪಳದ ಜಿಲ್ಲಾ ಪಂಚಾಯಿತಿ ಕಚೇರಿ ಎಇಇ ವಿಜಯ್ ಕುಮಾರ್,ಕಡೂರು ತಾಲ್ಲೂಕು ಕೃಷಿ ಇಲಾಖೆ ನಿರ್ದೇಶಕ ಶಿವಕುಮಾರ್,ಚಿಕ್ಕಮಗಳೂರಿನ ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವೀರೂಪಾಕ್ಷ ಕೆ.ಸಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಪ್ಪಿರೆಡ್ಡಿ ಅವರ ಶ್ರೀನಿವಾಸಪುರದ ಜಾಕೀರ್ ಹುಸೇನ್ ಬಡಾವಣೆಯ ಮನೆ ಮತ್ತು ಕಚೇರಿ ಹಾಗೂ ಹೂದಲಿ ಗ್ರಾಮದಲ್ಲಿನ ಕೋಳಿ ಫಾರಂ ಸೇರಿದಂತೆ ಒಟ್ಟು 5 ಕಡೆ ದಾಳಿ ನಡೆಸಲಾಗಿದ್ದು, ವಿವಿಧ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎಸಿಬಿ ಡಿವೈಎಸ್‌ಪಿ ಮೋಹನ್ ಮತ್ತು ಇನ್ಸ್‌ಪೆಕ್ಟರ್ ರಂಗಸ್ವಾಮಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸಾರ್ವಜನಿಕರೊಬ್ಬರ ದೂರಿನನ್ವಯ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಇನ್ನು, ಬೆಳಗಾವಿಯ ಕುವೆಂಪು ನಗರದಲ್ಲಿರುವ ರಾಜೇಶ್ವರಿ ಅವರ ನಿವಾಸದ ಮೇಲೆ ಎಸಿಬಿ ಡಿವೈಎಸ್‌ಪಿ ಜೆ.ರಘು ನೇತೃತ್ವದಲ್ಲಿ ಬೆಳಿಗ್ಗೆ 6 ರ ಸುಮಾರಿಗೆ ದಾಳಿ ನಡೆದಿದೆ. ಧಾರವಾಡದಲ್ಲಿನ ರಾಜೇಶ್ವರಿ ಅವರ ಪತಿ ಮನೆ, ವಿಜಯಪುರದಲ್ಲಿನ ಅವರ ಮತ್ತೊಂದು ಮನೆ ಸೇರಿದಂತೆ ರಾಜೇಶ್ವರಿ ಅವರ ಸಂಬಂಧಿಕರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ. ರಾಜೇಶ್ವರಿ ಅವರು ಈ ಹಿಂದೆ ಬೆಳಗಾವಿ ಜಿಲ್ಲೆಯ ಎಸಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಉಡುಪಿ ಅಬಕಾರಿ ಉಪ ಅಧಿಕ್ಷಕ ವಿನೋದ್ ಕುಮಾರ್ ಅವರ ಮಂಗಳೂರಿನ ಕುಂಟಿಕಾನದಲ್ಲಿರುವ ಮನೆ ಮೇಲೆ ಹಾಗೂ ಅವರ ಸಂಬಂಧಿಕರ ಮನೆ ಮೇಲೆ ಎಸಿಬಿ ಎಸ್ ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲಾ ಪಂಜಾಯಿತಿಯ ಎಇಇ ವಿಜಯ್‌ಕುಮಾರ್ ಅವರ ಗಂಗಾವತಿ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಕಡೂರು ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರ ತುಮಕೂರಿನ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿಯವರಾಗಿರುವ ಶಿವಕುಮಾರ್ ಅವರ ಮೇಲೆ ಎಸಿಬಿ ಡಿವೈಎಸ್‌ಪಿ ಮೋಹನ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಚಿಕ್ಕಮಗಳೂರು ಆರ್.ಟಿ.ಓ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿರೂಪಾಕ್ಷ ಅವರ ಮೇಲೆ ಎಸಿಬಿದ ದಾಳಿ ನಡೆಸಿದೆ, ನಗರದ ಜಯನಗರದಲ್ಲಿ ಇರುವ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು ಹಲವು ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಹಾಸನ ಎಸಿಬಿ ಡಿವೈಎಸ್ಪಿ ಚಂದ್ರಪ್ಪ, ಮಂಡ್ಯ ಎಸಿಬಿ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದೆ. ಕೆ.ಜಿ.ಐ.ಡಿ ಅಧೀಕ್ಷಕರಾಗಿರುವ ರುದ್ರ ಪ್ರಸಾದ್ ಅವರ ಇವರ ಮಲ್ಲತಹಳ್ಳಿ, ಬೆಂಗಳೂರುನಲ್ಲಿರುವ ವಾಸದ ಮನೆ ಹಾಗೂ ಬನಶಂಕರಿ, ತುಮಕೂರಿನಲ್ಲಿರುವ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಮೇಲೆ ಎಸಿಬಿ ತಂಡ ದಾಳಿ ನಡೆಸಿದೆ. ಮಾಗಡಿ ತಾಲ್ಲೂಕಿನ ಬಣವಾಡಿಯ ವೈದೈಕೀಯ ಅಧಿಕಾರಿ ಡಾ. ರಘುನಾಥ ಅವರ ಕುದೂರು ವಾಸದ ಮನೆ, ಖಾಸಗಿ ಕ್ಲಿನಿಕ್ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರೈಮರಿ ಮೇಡಿಕಲ್ ಸೆಂಟರ್ ಯ ಮೇಲೂ ಎಸಿಬಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ.
OSCAR-2019
ಸಿಟಿ ಲ್ಯಾಂಡ್ ನದಿ ವಾಸ್ತವವಾಗಿ ನೀವು ಹೆಚ್ಚು ತಯಾರಿ ಅಗತ್ಯವಿಲ್ಲದ ಆಟವಾಗಿದ್ದು, ಆದಾಗ್ಯೂ, ಸಿಟಿ ಕಂಟ್ರಿ ನದಿಯ ಒಂದು ಟೆಂಪ್ಲೆಟ್ ನಿಸ್ಸಂಶಯವಾಗಿ ಉಪಯುಕ್ತವಾಗಿದೆ ಆದ್ದರಿಂದ ನೀವು ಆಡುವಾಗ ನಿರ್ದಿಷ್ಟ ಮೂಲಭೂತ ಮಾದರಿಯನ್ನು ಹೊಂದಿದ್ದೀರಿ ಮತ್ತು ಎಲ್ಲರೂ ಆಡುವಲ್ಲಿ ಗಮನ ನೀಡಬಹುದು. ನೀವು ಇಲ್ಲಿ ಸಮಯವನ್ನು ಉಳಿಸಲು ಬಯಸಿದರೆ, ನೀವು ಸ್ಟಾಟ್ಟ್ ಲ್ಯಾಂಡ್ ಫ್ಲ್ಯೂಸ್ಗಾಗಿ ಉಚಿತ ಉಚಿತ ಟೆಂಪ್ಲೆಟ್ಗಳನ್ನು ಡೌನ್ಲೋಡ್ ಮಾಡಿ ಮತ್ತು ಮುದ್ರಿಸಬಹುದು. ಲಿಂಕ್ ಮೇಲೆ ಕ್ಲಿಕ್ ಮಾಡುವುದರಿಂದ ಪಿಡಿಎಫ್ ರೂಪದಲ್ಲಿ ಅನುಗುಣವಾದ ಟೆಂಪ್ಲೇಟ್ ಅನ್ನು ಉಚಿತ ಮುದ್ರಣಕ್ಕಾಗಿ ಅಥವಾ ಗ್ರಾಫಿಕ್ ಆಗಿ ತೆರೆಯುತ್ತದೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿನಿಮ್ಮ ಸ್ವಂತ ಆಟದ ಟೆಂಪ್ಲೇಟ್ ಅನ್ನು ನೀವು ಹೊಂದಲು ಬಯಸಿದರೆ ಅಥವಾ ಬಣ್ಣ ಪುಟಕ್ಕಾಗಿ ನೀವು ಥೀಮ್ ಅನ್ನು ಹೊಂದಿಲ್ಲದಿದ್ದರೆ.
OSCAR-2019
ಬಾಲಿವುಡ್ ಸಾಂಗ್ ಗೆ ವಿದೇಶಿಯರ ಬಿಂದಾಸ್ ಡಾನ್ಸ್ | Kannada Dunia | Kannada News | Karnataka News | India News ಬೇರೆ ಊರಿಗೆ ಹೋದಾಗ ನಮ್ಮ ಜನ ಸಿಕ್ಕಾಗ ಆಗುವ ಸಂತಸಕ್ಕೆ ಪಾರವೇ ಇರುವುದಿಲ್ಲ. ನ್ಯೂಯಾರ್ಕ್ ನಲ್ಲಿರುವ ಭಾರತೀಯರಿಗೂ ಇಂತಹ ವಿಶಿಷ್ಟ ಅನುಭವ ಆಗಿದೆ. ಎಸ್…. ಕ್ಯೂ ಪಾರ್ಕ್ ಖ್ಯಾತಿಯ ಅಮೆರಿಕನ್, ಕೊರಿಯನ್ ಡ್ಯಾನ್ಸರ್ ನ್ಯೂಯಾರ್ಕ್ ಬೀದಿಗಳಲ್ಲಿ ಬಾಲಿವುಡ್ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ಕ್ಯೂ ಪಾರ್ಕ್ ಜನರ ಮಧ್ಯೆ ಡ್ಯಾನ್ಸ್ ಮಾಡ್ತಾ ಇದ್ರೆ, ಎಲ್ಲರೂ ಚಕಿತರಾಗಿದ್ದಾರೆ. ಈ ಬಾರಿ ಇವರು ಬಾಲಿವುಡ್ ನ ಸೂಪರ್ ಸಾಂಗ್ ಗಳಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. ಈ ವಿಡಿಯೋ ಕಳೆದ ಆರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಮೂರೂವರೆ ನಿಮಿಷದ ವಿಡಿಯೋ ಭಾರತೀಯರ ಮನ ಗೆಲ್ಲುತ್ತಿದೆ. ಈ ಡ್ಯಾನ್ಸ್ ನಲ್ಲಿ ಕ್ಯೂ ಪಾರ್ಕ್ ತಂಡ, ಬಾಲಿವುಡ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದೆ. ಪ್ರೇಮ ರತನ್ ಧನ್ ಪಾಯೋ, ಧೂಮ್, ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ. ವಿಡಿಯೋ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಸದ್ಯ ಯೂಟ್ಯೂಬ್ ನಲ್ಲಿ ಆರು ಲಕ್ಷ ಜನ ಈ ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ 30 ಲಕ್ಷ ಜನ ಈ ವಿಡಿಯೋ ನೋಡಿದ್ದು, 51 ಸಾವಿರ ಮಂದಿ ಶೇರ್ ಮಾಡಿದ್ದಾರೆ.
OSCAR-2019
ಅಮ್ಮಂದಿರ ದಿನಕ್ಕೆ ಧ್ರುವ ಸರ್ಜಾ ಕೃತಜ್ಞತೆ ಸಲ್ಲಿಸಿದ್ದಾರೆ. ಅಮ್ಮನ ಶಕ್ತಿಯನ್ನ ತನ್ನದೇ ಶೈಲಿಯಲ್ಲಿ ‌ಬಣ್ಣಿಸಿದ್ದಾರೆ ಧ್ರುವ ಸರ್ಜಾ. ಅಮ್ಮಂದಿರ ದಿನಕ್ಕೆ ’ಅಮ್ಮ ಐ ಲವ್ ಯು’ ಚಿತ್ರ ತಂಡದ ವಿಶೇಷ ವೀಡಿಯೋ ಬಿಡುಗಡೆ ಮಾಡಿದೆ. ಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಬಳುವಳಿ | Muslim community gets handful in Karnataka Budget 2018 - Kannada Oneindia
OSCAR-2019
ಬೆಂಗಳೂರು, ಫೆಬ್ರವರಿ 16 : ನಾವು ಯಾವುದೇ ಜಾತಿಯನ್ನು ಓಲೈಸುವುದಿಲ್ಲ, ನಮ್ಮದು ಜಾತ್ಯತೀತ ಸರಕಾರ ಎಂದು ಹೋದಲ್ಲೆಲ್ಲ ಘಂಟಾಘೋಷವಾಗಿ ಸಾರುವ ಸಿದ್ದರಾಮಯ್ಯನವರು, ಪ್ರಸ್ತುತ ಸರಕಾರದ ಕಟ್ಟಕಡೆಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಪರ ತಮಗಿರುವ ಒಲವನ್ನು ಮತ್ತೆ ತೋರಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆಯಾಗುವುದೊಂದೇ ಬಾಕಿಯಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಿರುವಾಗ, ಸಿದ್ದರಾಮಯ್ಯನವರು ಸಹಜವಾಗಿ ಬಜೆಟ್ಟಿನಲ್ಲಿ ಚುನಾವಣಾ ದಾಳ ಉರುಳಿಸಿದ್ದಾರೆ. ಮುಸ್ಲಿಂ ಸಮುದಾಯ ಮಾತ್ರವಲ್ಲ, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು, ಕ್ರೈಸ್ತ ಮತ್ತು ಸಿಖ್ ಸಮುದಾಯದವರಿಗೂ ಭರ್ಜರಿ ಬಳುವಳಿಗಳನ್ನು ನೀಡಿರುವುದನ್ನು ನೋಡಿದರೆ, ಸಿದ್ದರಾಮಯ್ಯನವರು ತಮ್ಮ ಚುನಾವಣಾ ಗೇಮ್ ಪ್ಲಾನ್ ಅನ್ನು ಚೆನ್ನಾಗಿ ಮಂಡಿಸಿದ್ದಾರೆ. ಹಾಗೆ ನೋಡಿದರೆ, ಹಿಂದೂಗಳಿಗೆ ವಿಶೇಷವಾಗಿ ಏನನ್ನೂ ಸಿದ್ದರಾಮಯ್ಯ ನೀಡಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಅಡಿಯಲ್ಲಿ ಬಾಧಿತ 4,110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಸನ ಎಂದು 20 ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ. ಇದೊಂದು ಬಿಟ್ಟರೆ ಹಿಂದೂ ಎಂಬ ಪದವೇ ಇಡೀ ಬಜೆಟ್ಟಿನಲ್ಲಿ ಎಲ್ಲೂ ಸಿಗುವುದಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಭಾರೀ ಅನುದಾನವನ್ನು ಘೋಷಿಸಲಾಗಿದೆ. ವಿವಿಧ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲು 30 ಕೋಟಿ ರುಪಾಯಿಗಳ ಮೊತ್ತದ ಹೊಸ ಯೋಜನೆ. ಕ್ರೈಸ್ತ ಸಮುದಾಯದ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 200 ಕೋಟಿ ರೂ. ಅನುದಾನ. ಜೈನ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ. ದಾರುಲ್-ಉಲೂಮ್ ಸಬೀಲುರ್ ರೆಹಮಾನ್ ರಿಷಾದ್, ಅರೇಬಿಕ್ ಕಾಲೇಜು ಬೆಂಗಳೂರು ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸೆಂಟ್ರಲ್ ಕಾಲೇಜು ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆ. ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ/ ವಸತಿ ಶಾಖೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಅತ್ಯುತ್ತಮ ಫಲಿತಾಂಶ ಗಳಿಸಿದ ಅಲ್ಪಸಂಖ್ಯಾತ ಸಮುದಾಯದ ವಸತಿ ಶಾಲೆ/ ಕಾಲೇಜುಗಳಿಗೆ ಪ್ರತಿಭಾ ಪುರಸ್ಕಾರ. ಮುಸ್ಲಿಂ ಶಿಕ್ಷಣ ಸಂಸ್ಥೆ ಮದರಸಾಗಳ ಆಧುನೀಕರಣ, ಔಪಚಾರಿಕ ಶಿಕ್ಷಣ ಒದಗಿಸಲು ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಂತ ಹಂತವಾಗಿ 15 ಕೋಟಿ ರೂ.ಗಳ ಸಹಾಯಧನ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ 15 ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳೆಯರಿಗೆ ಕಾರ್ಯಾರಂಭ (Start up) ಸಾಲ ಸೌಲಭ್ಯ ಯೋಜನೆ. ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ರಜತ ಮಹೋತ್ಸವ ಅಂಗವಾಗಿ ಮುಂದಿನ 5 ವರ್ಷಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು 2018-19ರಲ್ಲಿ ಕಾರ್ಪಸ್ ಫಂಡ್‌ಗೆ 20 ಕೋಟಿ ರೂ. ಅನುದಾನ. ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 800 ಕೋಟಿ ರುಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀಸಲಿಟ್ಟಿದ್ದಾರೆ. karnataka budget 2018 muslim minorities siddaramaiah ಕರ್ನಾಟಕ ಬಜೆಟ್ 2018 ಮುಸ್ಲಿಂ ಅಲ್ಪಸಂಖ್ಯಾತರು ಸಿದ್ದರಾಮಯ್ಯ
OSCAR-2019
ಬೆಂಗಳೂರು, ಅ.6- ಬೆಳ್ಳಂದೂರು ಗೇಟ್ ಸಮೀಪ ಮೂವರು ಅಮಾಯಕ ಕೂಲಿಗಳ ದಾರುಣ ಸಾವಿಗೆ ಕಾರಣವಾಸದ ನೆಲಸಮಗೊಂಡ ಐದು ಅಂತಸ್ತಿನ ವಸತಿಗೃಹ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳೇ ಗುಣಮಟ್ಟದ ಪ್ರಮಾಣಪತ್ರ ನೀಡಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಆಂಧ್ರ ಮೂಲದ ವ್ಯಕ್ತಿಯೊಬ್ಬರು ವಸತಿಗೃಹ ನಿರ್ಮಿಸಲು ಬಿಬಿಎಂಪಿಯಿಂದ ಮೂರು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿದ್ದಾರೆ. ಆದರೂ ಕಾನೂನು ಉಲ್ಲಂಘಿಸಿ ಐದು ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿಕುಳಿತಿದ್ದು ಇದೀಗ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಿಯಲ್‍ಎಸ್ಟೇಟ್ ಉದ್ಯಮ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಅನ್ಯರಾಜ್ಯಗಳ ಬಿಲ್ಡರ್‍ಗಳು ನಗರದಲ್ಲಿ ಕಳಪೆ ಕಾಮಗಾರಿ ನಡೆಸಿ ಸದೃಢವಲ್ಲದ ವಸತಿಗೃಹಗಳನ್ನು ನಿರ್ಮಿಸಿ ಕಡಿಮೆ ಬೆಲೆಗೆ ಅಮಾಯಕರಿಗೆ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಮಾಜ ವಿದ್ರೋಹಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡುತ್ತಿರುವುದು ಬೆಳ್ಳಂದೂರು ಕಟ್ಟಡ ಕುಸಿತ ಘಟನೆ ನಂತರ ಬಹಿರಂಗಗೊಂಡಿದೆ. ಕೇವಲ ಮೂರು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು ಕಾನೂನು ಬಾಹಿರವಾಗಿ ಐದು ಮಹಡಿಗಳ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಕಳಪೆ ವಸ್ತುಗಳನ್ನು ಉಪಯೋಗಿಸುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಗುಣಮಟ್ಟದ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಬಿಬಿಎಂಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು, ನಗರದ ಹೊರವಲಯಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ನೂರಾರು ವಸತಿ ಸಮುಚ್ಚಯಗಳ ಸದೃಢತೆ ಬಗ್ಗೆ ಹಲವಾರು ಅನುಮಾನಗಳನ್ನು ಮೂಡಿಸುತ್ತಿದೆ. ಬೆಳ್ಳಂದೂರು ಸಮೀಪದ ಕಟ್ಟಡಕ್ಕೆ ಗುಣಮಟ್ಟದ ಪ್ರಮಾಣಪತ್ರ ನೀಡಿರುವ ಪ್ರಕರಣವನ್ನು ಬಿಬಿಎಂಪಿ ಆಯುಕ್ತರು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಆಯುಕ್ತ ಮನೋಜ್‍ಕುಮಾರ್ ಕಟ್ಟಡಕ್ಕೆ ಗುಣಮಟ್ಟದ ಪ್ರಮಾಣಪತ್ರ ನೀಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗುಡುಗಿದ್ದಾರೆ. ಬೆಳ್ಳಂದೂರು ದುರಂತ ಪ್ರಕರಣದ ನಂತರ ಹೊಸ ಅಪಾರ್ಟ್‍ಮೆಂಟ್‍ಗಳಲ್ಲಿ ನೆಲೆಸಿರುವ ನಾಗರಿಕರಲ್ಲಿ ಕಟ್ಟಡ ಭದ್ರತೆ ಬಗ್ಗೆ ಆತಂಕ ಮನೆ ಮಾಡಿದೆ. ಬಿಬಿಎಂಪಿ ನೀಡಿರುವ ಗುಣಮಟ್ಟದ ಪ್ರಮಾಣಪತ್ರದ ಆಧಾರದ ಮೇಲೆ ನಾವು ಪ್ಲಾಟ್ ಕೊಂಡುಕೊಂಡಿದ್ದೇವೆ. ಆದರೆ, ಬಿಬಿಎಂಪಿ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರವೇ ಹುಸಿಯಾಗಿರುವುದರಿಂದ ನಾವು ವಾಸಿಸುತ್ತಿರುವ ಪ್ಲಾಟ್‍ಗಳ ಗುಣಮಟ್ಟದ ಬಗ್ಗೆಯೂ ಅನುಮಾನ ಮೂಡಿಸುತ್ತಿದೆ. ಬಿಬಿಎಂಪಿಯಾಗಲಿ, ಸರ್ಕಾರವಾಗಲಿ ಹೊಸದಾಗಿ ನಿರ್ಮಿಸುತ್ತಿರುವ ವಸತಿಸಮುಚ್ಚಯಗಳ ಗುಣಮಟ್ಟವನ್ನು ಮರುಪರಿಶೀಲನೆ ಮಾಡುವ ಅಗತ್ಯವಿದೆ ಎನ್ನುತ್ತಾರೆ ಅಪಾರ್ಟ್‍ಮೆಂಟ್‍ನ ನಿವಾಸಿಯಾಗಿರುವ ಸುಬ್ರಹ್ಮಣ್ಯ ಅವರು. ಆಂಧ್ರ ಮೂಲದ 6 ಮಂದಿ ಪಾಲುದಾರರನ್ನೊಳಗೊಂಡ ಆರ್‍ಕೆ ಅಸೋಸಿಯೇಟ್ಸ್ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಪೆÇಲೀಸರಿಗೆ ದೂರು ನೀಡಿದ್ದಾರೆ. ಕುಸಿದು ಬಿದ್ದಿರುವ ಕಟ್ಟಡದ ಅವಶೇಷ ತೆರವು ಕಾರ್ಯಾಚರಣೆ ಇಂದೂ ಕೂಡ ಮುಂದುವರೆದಿದ್ದು, ಸಂಪೂರ್ಣ ಅವಶೇಷ ತೆರವುಗೊಳಿಸಲು ಇನ್ನೂ ಎರಡು ದಿನಗಳ ಕಾರ್ಯಾಚರಣೆ ನಡೆಯಲಿದೆ. 120ಕ್ಕೂ ಹೆಚ್ಚು ಸಿಬ್ಬಂದಿಗಳು ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಜೆಸಿಬಿ ಯಂತ್ರಗಳನ್ನು ಬಳಸಿ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ. ತೆರವು ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಕುಸಿದ ಕಟ್ಟಡದ ಅವಶೇಷದಡಿ ಸಿಲುಕಿದ್ದ 6 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದುವರೆಗೂ ಮೂರು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಬೆಂಗಳೂರು, ಸೆ.9-ರಾಜ್ಯದ ವಿವಿಧೆಡೆ ಪೊಲೀಸ್ ರೆಸಿಡೆನ್ಸಿ ಶಾಲೆ ತೆರೆಯಲು ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ಕೋರಮಂಗಲ ಕೆಎಸ್‍ಆರ್‍ಪಿಸಿ ಮೈದಾನದಲ್ಲಿ ಪೊಲೀಸ್
OSCAR-2019
ಹಾಲಿವುಡ್ ಸಿನಿಮಾಗಳು ಕೆಲವೊಮ್ಮೆ ನಿಜವಾದ ಬದುಕಿನಲ್ಲೂ ಕೆಲವೊಂದು ಪ್ರಯೋಗಗಳನ್ನ ಮಾಡಲು ಪ್ರಚೋದಿಸುತ್ತವೆ. ಹಾಗೇ 22 ವರ್ಷದ ವಿಶಾಲ್ ಅಗರ್ವಾಲ್ ಎಂಬ ಯುವಕ ಇದೀಗ ಹಾಲಿವುಡ್ ಮೂವಿಯ ದೃಶ್ಯವೊಂದನ್ನ ನೋಡಿ ಅದರಂತೆ ತಾನೂ ಮಾಡಲು ಹೊರಟಿದ್ದಾನೆ. ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಬೇಕಾಗುವ ಅಗತ್ಯ ಔಷಧಗಳನ್ನ ಪೂರೈಸುವ ವ್ಯವಸ್ಥೆಯನ್ನ ಸಿನಿಮಾದಲ್ಲಿ ನೋಡಿದ ವಿಶಾಲ್ ಇದೀಗ ರಿಯಲ್ ಲೈಫ್ ನಲ್ಲೂ ಅಳವಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾನೆ. ಅಲ್ಲದೆ 2015ರ ಜನವರಿಯಲ್ಲಿ ವಿಶಾಲ್ ಮೆಡಿಎಸ್ಒಎಸ್ ಅನ್ನೋ ಆನ್ ಲೈನ್ ಎಮರ್ಜೆನ್ಸಿ ಮೆಡಿಸಿನ್ಸ್ ಸಪ್ಲೈ ಸರ್ವೀಸನ್ನ ಶುರುಮಾಡಿದ್ದಾನೆ. ಮೆಡಿಎಸ್ಒಎಸ್ ನಲ್ಲಿ ಇರುವ ಟೂಲ್ಸ್ ನಲ್ಲಿ ರೋಗಿಗಳು ತಮಗಿರುವ ಖಾಯಿಲೆ ಹಾಗೂ ಔಷಧಗಳ ಶೆಡ್ಯೂಲನ್ನ ನಿಭಾಯಿಸಬಹುದು. ಅಲ್ಲದೆ ಈ ವೆಬ್ ಸೈಟ್ ಮೂಲಕ ರೋಗಿಗಳು ಸಮೀಪದಲ್ಲಿರುವ ಆಪ್ತರೊಂದಿಗೆ ಸಂಭಾಷಣೆ ನಡೆಸಬಹುದು.. ಅಲ್ಲದೆ ತಮಗೆ ಪೂರಕವಾಗುವ ಒಂದು ವ್ಯವಸ್ಥೆಯನ್ನೂ ಸೃಷ್ಠಿಸಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. “ನಮಗೆ ದೇಶಾದ್ಯಂತ ಪ್ರೈವೇಟ್ ನೆಟ್ ವರ್ಕ್ ಗಳನ್ನ ಸೃಷ್ಠಿಸುವ ಲೆಕ್ಕಾಚಾರವಿದೆ. ಇದರಿಂದ ಅವರು ತುರ್ತು ಪರಿಸ್ಥಿತಿಯಲ್ಲಿ ತಮಗೆ ಬೇಕಾದವರಿಗೆ ಸಲಹೆ ಹಾಗೂ ನೆರವನ್ನ ಪಡೆಯ ಬಹುದಾಗಿದೆ ” ಅಂತ ವಿಶಾಲ್ ಅಗರ್ವಾಲ್ ತಮ್ಮ ಭವಿಷ್ಯ ಯೋಜನೆಯನ್ನ ತೆರೆದಿಡುತ್ತಾರೆ. ಮೆಕಾನಿಕಲ್ ಎಂಜಿನಿಯರ್ ಆಗಿರುವ ವಿಶಾಲ್ ತಮ್ಮ ಶಿಕ್ಷಣವನ್ನ ಮುಗಿಸಿದ ತಕ್ಷಣ ಮೆಡಿಎಸ್ಒಎಸ್ ನ್ನ ಶುರುಮಾಡಿದ್ರು. ಆರಂಭದಲ್ಲಿ ತಮ್ಮ ಗೆಳೆಯರು ಹಾಗೂ ಮನೆಯವರ ನೆರವಿನಿಂದ $100,000 ಮೊತ್ತವನ್ನ ಮೆಡಿಎಸ್ಒಎಸ್ ಗೆ ವಿನಿಯೋಗಿಸಿದ್ರು. ಆದ್ರೆ ಇದನ್ನ ನಿಭಾಯಿಸುವುದಕ್ಕೆ ಒಬ್ಬ ಸಮರ್ಪಕ ವಿಶ್ಲೇಷಕರು ಹಾಗೂ ಮಾರ್ಗದರ್ಶಕರ ಅನಿವಾರ್ಯತೆ ಕಾಡಿತು. ಹೀಗಾಗಿ ಮಾರುಕಟ್ಟೆಯ ಪರಿಸ್ಥಿತಿಗಳನ್ನ ವಿಶಾಲ್ ಮೊದಲು ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ರು. ಇದೀಗ ದೆಹಲಿ ಮೂಲದ ಮೆಡಿಎಸ್ಒಎಸ್ 8 ಜನರ ತಂಡದಿಂದ ಕೂಡಿದ್ದು ಭುವನೇಶ್ವರ, ಕೊಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಕಾರ್ಯ ನಿಭಾಯಿಸುತ್ತಿದೆ. ಮೆಡಿಎಸ್ಒಎಸ್ ನಲ್ಲಿ ಫಸ್ಟ್ ಏಡ್, ಎಸ್ಒಎಸ್, ಹೆಲ್ತ್ ರೆಕಾರ್ಡ್ ಮ್ಯಾನೇಜ್ ಮೆಂಟ್, ಅನಾರೋಗ್ಯದ ಲಕ್ಷಣ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ, ಇ ಮೆಡಿಕಲ್ ಐಡಿ, ಹೆಲ್ತ್ ಕನೆಕ್ಟ್ ( ಸೋಶಿಯಲ್ ನೆಟ್ ವರ್ಕ್ ಡೊಮೈನ್ ) ಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಅಲ್ಲದೆ ಡಾಕ್ಟರ್ ಸರ್ವೀಸ್ ಗಳ ಬಗ್ಗೆ ಮಾಹಿತಿ, ಆಸ್ಪತ್ರೆ, ಟೆಸ್ಟ್ ಲ್ಯಾಬ್ಸ್ ಹಾಗೂ ಫಾರ್ಮಸಿಗಳ ಬಗ್ಗೆ ಸೂಕ್ತ ಮಾಹಿತಿಗಳನ್ನ ಮೆಡಿಎಸ್ಒಎಸ್ ಒದಗಿಸುತ್ತದೆ. ಇನ್ನು ತುರ್ತು ಸಂದರ್ಭಗಳಲ್ಲಿ ರೋಗಿಗಳು ತಮ್ಮ ಲೋಕೆಶನ್ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆಯೂ ಸೂಕ್ತವಾಗಿ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಸಮೀಪದಲ್ಲಿರುವ ಆಸ್ಪತ್ರೆಗಳು, ಸ್ಪೆಷಲಿಸ್ಟ್ ಡಾಕ್ಟರ್ಸ್, ಹೆಲ್ಪ್ ಲೈನ್ ಗಳ ಬಗ್ಗೆಯೂ ಮೆಡಿಎಸ್ಒಎಸ್ ಸ್ಕ್ರೀನ್ ನಲ್ಲಿ ಪಡೆಯಬಹುದಾಗಿದೆ. ಇನ್ನು ಹೆಲ್ತ್ ಟ್ರ್ಯಾಕಿಂಗ್ ಸಿಸ್ಟಮ್ ಬಳಕೆದಾರರು ತಮ್ಮ ವೈಯುಕ್ತಿಕ ಮಾಹಿತಿಗಳನ್ನ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುವಂತೆ ರೂಪಿತವಾಗಿದೆ. ಮೆಡಿಎಸ್ಒಎಸ್ ಗ್ರಾಹಕರ ವೈಯುಕ್ತಿಕ ಡಾಟಾ ನಿರ್ವಹಿಸಲು ಅನುಕೂಲಕರವಾದ ವ್ಯವಸ್ಥೆಗಳನ್ನ ಕಲ್ಪಿಸಿದೆ. ಆರೋಗ್ಯ ವೃದ್ಧಿಗೆ ಸುಲಭವಾದ ಮಾರ್ಗೋಪಾಯಗಳು ಹಾಗೂ ನುರಿತ ವೈದ್ಯರ ಸಲಹೆಗಳು ಇಲ್ಲಿರುತ್ತವೆ. ಮೆಡಿಎಸ್ಒಎಸ್ ನಲ್ಲಿ ವಿವಿಧ ಕಾರ್ಪೋರೆಟ್ಸ್ ರೆಕಾರ್ಡ್ ಗಳನ್ನೂ ಒದಗಿಸುವುದರಲ್ಲೂ ಯಶಸ್ಸು ಕಂಡಿದೆ. ಇಲ್ಲಿರುವ ಟೂಲ್ಸ್ ಗಳು ಬದಲಾವಣೆಗಳನ್ನ ತರಲು ಹಾಗೂ ನೆಟ್ ವರ್ಕ್ ರೆಕಾರ್ಡ್ ಗಳನ್ನ ತಿದ್ದಲು ಸಹಕರಿಸುವಂತಿವೆ. ಇದನ್ನೆಲ್ಲಾ ಇಲ್ಲಿರುವ ನೌಕಕರೇ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮೆಡಿಎಸ್ಒಎಸ್ ಝೆಂಡ್ ಫ್ರೇಮ್ ವರ್ಕ್, ಪಿಹೆಚ್ ಪಿ, ಎಂವೈಎಸ್ಕ್ಯೂಎಲ್, ಆಂಡ್ರಾಯ್ಡ್ ನೇಟೀವ್ ಗಳ ಸಾಫ್ಟ್ ವೇರ್ ಗಳನ್ನ ಹೊಂದಿದೆ. ಅಲ್ಲದೆ ಈ ವಿನೂತನ ಸ್ಟಾರ್ಟ್ ಅಪ್ ಒರಾಕಲ್ ಹಾಗೂ ಜಾವಾಗಳನ್ನೂ ಪ್ರಯತ್ನಿಸುವ ಲೆಕ್ಕಾಚಾರದಲ್ಲಿದೆ. “ ಕಾರ್ಪೋರೆಟ್ ವಲಯ ಹಾಗೂ ಆದಾಯ ನಮ್ಮ ಪ್ರಮುಖ ಗುರಿ. ಅಲ್ಲದೆ ದೊಡ್ಡ ಫಾರ್ಮಾ ಕಂಪನಿಗಳೊಂದಿಗೆ ಡಾಟಾ ಹಂಚಿಕೊಂಡು ವಿಮೆಗಳನ್ನ ಒದಗಿಸುವ ಯೋಜನೆಗಳೂ ಇವೆ. ಬ್ಯುಸಿನೆಸ್ ನ ಅಭಿವೃದ್ಧಿಗೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಜ್ಞಾನವನ್ನ ಬಳಸಿಕೊಳ್ಳಲಿದ್ದೇವೆ ”ವಿಶಾಲ್ ಅಗರ್ವಾಲ್, ಮೆಡಿಎಸ್ಒಎಸ್ ಸಿಇಒ ಇದಿಷ್ಟಲ್ಲದೆ ಕಾರ್ಪೊರೇಟ್ ಮಾಡೆಲ್ ಹಾಗೂ ಹತ್ತಿರದ ಚಿಕ್ಕ ಉದ್ಯಮಗಳನ್ನ ಸೆಳೆಯುವ ಲೆಕ್ಕಾಚಾರಗಳೂ ಮೆಡಿಎಸ್ಒಎಸ್ ಗಿದೆ. ಡಾಕ್ಟರ್ ಸರ್ವೀಸ್ ಗಳನ್ನ ಇನ್ನಷ್ಟು ಅಭಿವೃದ್ಧಿ ಪಡಿಸುವತ್ತಲೂ ವಿಶಾಲ್ ಗಮನ ಕೊಟ್ಟಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ನೌಕರರ ಸಂಖ್ಯೆಗಳನ್ನ ಹೆಚ್ಚಿಸಿಕೊಳ್ಳಲು ಮೆಡಿಎಸ್ಒಎಸ್ ಯೋಜನೆ ರೂಪಿಸುತ್ತಿದೆ. ಮೆಡಿಎಸ್ಒಎಸ್ ಶುರುವಾದ ಎರಡೇ ತಿಂಗಳಿನಲ್ಲಿ 200 ಮಂದಿ ಆಪ್ ಗಳನ್ನ ಬಳಸಿದ್ರೆ, 300 ಮಂದಿ ಪೊರ್ಟಲ್ ಮೂಲಕ ಇದ್ರ ಲಾಭ ಪಡೆದಿದ್ದಾರೆ. ಐಒಎಸ್ ನಲ್ಲೂ ಸರ್ವೀಸ್ ನೀಡುವ ಲೆಕ್ಕಾಚಾರದಲ್ಲಿರುವ ಮೆಡಿಎಸ್ಒಎಸ್ ಈ ಮೂಲಕ ದೊಡ್ಡ ಆದಾಯದ ಗುರಿಯನ್ನೂ ಹೊಂದಿದೆ. ದೇವಸ್ಥಾನಗಳ ನಗರ ಎಂದು ಉಡುಪಿ ರಾಜ್ಯದಲ್ಲಿ ಹೆಸರುವಾಸಿ. ಇದು ಬಂಡವಾಳ ಹೂಡಿಕೆದಾರರಿಗೆ ಸ್ವರ್ಗ ಅಂದರೆ ತಪ್ಪಾಗಲಾರದು. ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಣಿಪಾಲ ಸಮೂಹ ಸಂಸ್ಥೆಗಳು ಉಡುಪಿ ಜಿಲ್ಲೆಯ ಹೆಗ್ಗಳಿಕೆ. ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಣಿಪಾಲ ಹಲವು ಪ್ರಥಮ ಸಾಧನೆಗಳ ತವರೂರು. ದೇಶ ವಿದೇಶದಲ್ಲೂ ಉಡುಪಿ ರುಚಿಕರ ಅಡುಗೆಗೂ ಹೆಸರುವಾಸಿ. "ಉಡುಪಿ ಹೊಟೇಲ್" ಉಡುಪಿ ಜಿಲ್ಲೆಯ ಕೊಡುಗೆ. ಅತಿಥಿ ಸತ್ಕಾರದಲ್ಲಿ ಉಡುಪಿಯನ್ನು ಮೀರಿಸುವ ಜಿಲ್ಲೆ ಬೇರೊಂದಿಲ್ಲ. ಬ್ಯಾಂಕಿಂಗ್ ಕ್ಷೇತ್ರದ ತವರು ಜಿಲ್ಲೆ ಎಂಬ ಅನ್ವರ್ಥ ನಾಮವೂ ಉಡುಪಿ ಜಿಲ್ಲೆಗೆ ಇದೆ. ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಮೂರು ಕಂದಾಯ ತಾಲೂಕುಗಳನ್ನು ಉಡುಪಿ ಜಿಲ್ಲೆ ಹೊಂದಿದೆ. ಸಾಕ್ಷರತಾ ಪ್ರಮಾಣದಲ್ಲೂ ಉಡುಪಿ ಅದ್ವಿತೀಯ ಸಾಧನೆ ಮೆರೆದಿದೆ. ಅಡಿಕೆ, ಭತ್ತ ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಅತ್ಯಧಿಕ ಬ್ಯಾಂಕ್ ಶಾಖೆಗಳನ್ನು ಹೊಂದಿದ ಹೆಗ್ಗಳಿಕೆ ಕೂಡಾ ಉಡುಪಿ ಜಿಲ್ಲೆಯದ್ದಾಗಿದೆ. ಶಂಕರಪುರ ಮಲ್ಲಿಗೆ ಉಡುಪಿಯ ಹೆಸರನ್ನು ವಿಶ್ವಕ್ಕೇ ಪರಿಚಯಿಸಿದೆ. ದೇಶ ವಿದೇಶಗಳಿಗೆ ಶಂಕರಪುರ ಮಲ್ಲಿಗೆ ರಫ್ತಾಗುತ್ತದೆ. ಇದು ಉಡುಪಿಯ ಖ್ಯಾತಿಯನ್ನು ಮತ್ತಷ್ಟು ಪಸರಿಸಿದೆ. ಉಡುಪಿ ದೇವಾಲಯಗಳ ನಗರ ಎಂದೇ ಚಿರಪರಿಚಿತ. ಪ್ರತಿ 2 ವರ್ಷಕ್ಕೊಮ್ಮೆ ನಡೆಯವ ಪರ್ಯಾಯ ಜಗದ್ವಿಖ್ಯಾತ. ಶಕ್ತಿ ದೇವತೆ ತಾಯಿ ಮೂಕಾಂಬಿಕೆ ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಹೀಗೆ ಪ್ರತಿಯೊಂದು ಮಣ್ಣಿನ ಕಣವು ಧಾರ್ಮಿಕತೆಯೊಂದಿಗೆ ಬೆಸೆದುಹೋಗಿದೆ. ಉಡುಪಿಯಲ್ಲಿ ಪರಿಸರ ಸ್ನೇಹಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಇದು ಉತ್ತಮ ಆದಾಯದ ಮೂಲವಾಗಿದ್ದು ಇದರ ಜೊತೆ ಜೊತೆಗೆ ಇನ್ನಿತರ ಸೇವಾವಲಯಗಳ ಬೆಳವಣಿಗೆಗೆ ಅವಕಾಶ ಉಜ್ವಲವಾಗಿದೆ. ಮಣಿಪಾಲ ಈಗಾಗಲೇ ಮುದ್ರಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವ ಖ್ಯಾತಿ ಪಡೆದಿದೆ. ಮೂಲ ಸೌಲಭ್ಯ ಒದಗಿಸುವ ಕ್ಷೇತ್ರದಲ್ಲಿಯೂ ಉಡುಪಿ ಮುಂಚೂಣಿಯಲ್ಲಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳು ಹೆಚ್ಚು. ಸುಂದರ ಬೀಚ್‍ಗಳು ಉಡುಪಿ ಜಿಲ್ಲೆಯ ಹೆಗ್ಗಳಿಕೆ. ಸೈಂಟ್ ಮೆರೀಸ್ ದ್ವೀಪ ಉಡುಪಿಯ ಅನನ್ಯ ಸಂಪತ್ತು. ಮಲ್ಪೆ ಬಂದರು ಮೀನುಗಾರರ ನೆಚ್ಚಿನ ತಾಣ. ಬೋಟ್ ನಿರ್ಮಾಣ ಕ್ಷೇತ್ರದಲ್ಲೂ ಉಡುಪಿ ಹೆಸರುವಾಸಿ. ರಾಜ್ಯದ ಕರಾವಳಿ ಜಿಲ್ಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದಾಗಿ ಗುಣಮಟ್ಟದ ಮಾನವ ಸಂಪನ್ಮೂಲ ರಾಜ್ಯಕ್ಕೆ ಲಭಿಸುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಇದೇ ವಾತಾವರಣ ನಿರ್ಮಾಣ ಆಗಿದೆ. ಮಾಹಿತಿ ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಸೀಮಿತ ಅವಧಿಯಲ್ಲಿ ಪರಿಣಿತಿ ಪಡೆದಿರುವ ಯುವ ಸಮೂಹವೇ ಉಡುಪಿ ಜಿಲ್ಲೆಯಲ್ಲಿದೆ. ರಾಜ್ಯದ ಹೂಡಿಕೆದಾರರ ಅಚ್ಚುಮೆಚ್ಚಿನ ತಾಣವಾಗಿ ಉಡುಪಿ ಜಿಲ್ಲೆ ಹೊರಹೊಮ್ಮಲಿದೆ. ಬೀಚ್ ಪ್ರವಾಸೋದ್ಯಮ ಮೂಲ ಸೌಕರ್ಯ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಿದ್ದು ಕಾಲಬದ್ಧವಾದ ಹೂಡಿಕೆ ವಾತಾವರಣದ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಅವಕಾಶ ದಟ್ಟವಾಗಿದೆ. ಹೀಗಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯಲಿದೆ. ವಿದೇಶಿ ವಿನಿಮಯ ಕೂಡಾ ಬೊಕ್ಕಸಕ್ಕೆ ಹರಿದು ಬರಲಿದೆ.
OSCAR-2019
ದೇಶದ ಈಶಾನ್ಯ ಭಾಗದ ಪ್ರವಾಸ ತಾಣಗಳಲ್ಲಿ ಮಣಿಪುರ ರಾಜ್ಯ ನಾನಾ ಕಾರಣಗಳಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಎದುರುಗೊಳ್ಳುತ್ತದೆ. ಒಂದು ಪ್ರವಾಸಿ ತಾಣಗಳಿಂದ ಮುದ ನೀಡಿದರೆ ಮತ್ತೊಂದೆಡೆ ತನ್ನೂರಿನ ಹಬ್ಬಗಳಿಂದ ಸದಾ ಕಾಲ ಯಾರಿಗೂ ಗೊತ್ತಿಲ್ಲದೇ ಸುದ್ದಿಯಾಗುತ್ತದೆ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು, ಅಲ್ಲಿನ ಜನರ ಆತಿಥ್ಯ ನೋಡಿದರೆ ಆ ಜಗದ ಪ್ರೀತಿ ಹುಟ್ಟುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದ ಲಕ್ಷ ಗಟ್ಟಲೆ ಹಣ ಸುರಿದು ಸ್ವಿಜರ್‌ಲ್ಯಾಂಡ್‌ಗೆ ಕಣ್ಣ ಹಾಕುವ ಪ್ರವಾಸಿಗರು ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯಲಾಗುವ ಮಣಿಪುರಕ್ಕಂತೂ ಗ್ಯಾರಂಟಿಯಾಗಿ ಬಂದು ಬಿಡಬಹುದು. ಇದರ ಜತೆಗೆ ಮತ್ತೂ ಪ್ರವಾಸಿಕ್ಕಾಗಿ ಸಮಯ, ಹಣದ ಉಳಿತಾಯವಾದರಂತೂ ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇರುವುದರಿಂದ ಅಲ್ಲೂ ಪ್ರವಾಸ ಕೈಗೊಳ್ಳುವ ಅವಕಾಶ ಸಿಗುತ್ತದೆ. ನಗರದಿಂದ ೧೦ಕಿಮೀ ದೂರದಲ್ಲಿದೆ. ಮಣಿಪುರದ ರಾಜಧಾನಿ ನಗರ. ಇದು ಏಳು ಪರ್ವತಶ್ರೇಣಿಗಳಿಂದ ಸುತ್ತುವರಿದಿದೆ. ಸಾಂಸ್ಕೃತಿಕ ಹಾಗೂ ಕಮರ್ಷಿಯಲ ಚಟುವಟಿಕೆಗಳ ಕೇಂದ್ರ ಬಿಂದು. ಪ್ರಕೃತಿಯ ಸೊಬಗು ಮತ್ತು ವನ್ಯಜೀವಿಗಳಿಗೆ ಹೆಸರುವಾಸಿ. ಪುರಾತನ ಇತಿಹಾಸವಿರುವ ಅನೇಕ ದೇವಾಲಯಗಳು, ಸ್ಮಾರಕಗಳನ್ನು ನೋಡಬಹುದು. ಇಲ್ಲಿ ಮಹಿಳೆಯರದ್ದೇ ವ್ಯವಹಾರ. ಮಹಿಳೆಯರೇ ನಡೆಸುವ ದೇಶದ ದೊಡ್ಡ ಮಾರ್ಕೆಟ ಇದು. ಇಲ್ಲಿ ನೀವು ಮಣಿಪುರದ ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಶಾಲ, ಬಾಸ್ಕೆಟ, ಬ್ಯಾಗ್, ಉಡುಗೆ, ಗೃಹಪಯೋಗಿ ವಸ್ತುಗಳು ಅಲ್ಲದೇ ಬೆತ್ತ ಹಾಗೂ ಬಿದಿರಿನಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಪ್ರವಾಸಿಗರು ಖರೀದಿಸುತ್ತಾರೆ. ಮಣಿಪುರದ ಮಾಜಿ ದೊರೆಗಳ ಅರಮನೆಯ ಪಕ್ಕದಲ್ಲಿ ಈ ದೇವಾಲಯವಿದೆ. ಇದು ವೈಷ್ಣವರ ಪ್ರಮುಖ ಆರಾಧ್ಯ ದೇವಸ್ಥಾನ. ಸಾಮಾನ್ಯ ರಚನೆಯಿಂದ ಕೂಡಿದ್ದು, ಎರಡು ಗುಮ್ಮಟಗಳಿವೆ. ಅದರಲ್ಲೂ ಮುಖ್ಯವಾಗಿ ಈ ದೇವಸ್ಥಾನಕ್ಕೆ ದೇಶ- ವಿದೇಶದ ಪ್ರವಾಸಿಗರು ಬಂದು ಹೋಗುತ್ತಾರೆ. ಮಣಿಪುರದ ಪ್ರವಾಸ ತಾಣಗಳಲ್ಲಿ ಈ ದೇವಳ ಮೊದಲ ಸ್ಥಾನದಲ್ಲಿ ನಿಂತಿದೆ. ಈ ಪ್ರವಾಸಿ ತಾಣವನ್ನು ಪ್ರವಾಸಿಗರು ನೋಡಲೇಬೇಕು. ಇಂಫಾಲ್‌ನಿಂದ ೪೮ ಕಿಮೀ ದೂರದದಲ್ಲಿ ಸೇಂದ್ರ ದ್ವೀಪವಿದೆ. ಇದು ಲೋಕ್ತಕ್ ಸರೋವರದ ಮಧ್ಯಭಾಗದಲ್ಲಿ ಎತ್ತರದ ಪರ್ವತದಂತೆ ಕಾಣುತ್ತದೆ. ಅಪರೂಪದ ಸ್ಥಳೀಯ ಪ್ರಾಂತ್ಯದ ಜಿಂಕೆ ಎಂದು ಕರೆಯಲ್ಪಡುವ ಶಾಂಗೈ ಎಂಬ ವನ್ಯಮೃಗ ಕಾಣಿಸಿಕೊಳ್ಳುತ್ತದೆ. ಇಂಫಾಲ್‌ನಿಂದ ೫೩ ಕಿಮೀ ದೂರದಲ್ಲಿದೆ. ಇದು ನೀರಿನ ಮೇಲೆ ತೇಲುತ್ತಿದೆ. ಇದು ಈ ಪಾರ್ಕ್ ವಿಶಿಷ್ಟತೆಗಳಲ್ಲಿ ಒಂದಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ. ಇಂಡೋ-ಮಯನ್ಮಾರ್ ಗಡಿರೇಖೆಯನ್ನೇ ಮೋರೆಹ್ ಪಟ್ಟಣ ಎನ್ನುತ್ತಾರೆ. ಇಂಫಾಲ್‌ನಿಂದ ೧೧೦ಕಿಮೀ ದೂರದಲ್ಲಿದೆ. ಈಶಾನ್ಯ ಭಾಗದ ಪ್ರಮುಖ ವಾಣಿಜ್ಯ ನಗರಿ ಕೇಂದ್ರ. ಇಲ್ಲಿ ಕಡಿಮೆ ಬೆಲೆಗೆ ಥಾಯ, ಚೈನೀಸ್ ಹಾಗೂ ಬರ್ಮಾದ ಗ್ಯಾಜೆಟ್, ಉಡುಗೆ, ಕಾರ್ಪೆಟ ಹಾಗೂ ಗೃಹ ಅಲಂಕಾರ ವಸ್ತುಗಳನ್ನು ಖರೀದಿಸಲು ಸೂಕ್ತವಾದ ಪ್ರವಾಸಿ ತಾಣ. ಇದು ಮಣಿಪುರದ ಸಾಂಸ್ಕೃತಿಕ ನಗರಿ ಎಂದೇ ಬಿಂಬಿತ. ೧೮೯೧ರಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ಮಣಿಪುರಿ ರಾಜಮನತೆನಗಳಿಂದಾಗಿ ಈ ನಗರಿಯನ್ನು ಐತಿಹಾಸಿಕ ದೃಷ್ಟಿಯಿಂದ ಪ್ರವಾಸಿಗರು ನೋಡಬಹುದು. ಇದರ ಜತೆಯಲ್ಲಿ ಯುದ್ದದಲ್ಲಿ ಮಡಿದವರ ಸಮಾಧಿ ಕೂಡ ಕಾಣಬಹುದು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಮಡಿದ ಬ್ರಿಟಿಷ್ ಹಾಗೂ ಭಾರತೀಯ ಸೈನಿಕರ ಸಮಾಧಿ ಇಲ್ಲಿ ನಿರ್ಮಾಣ ಮಾಡಲಾಗಿದೆ. ಮಣಿಪುರ ಹಾಗೂ ನಾಗಾಲ್ಯಾಂಡ್ ಬಾರ್ಡರ್‌ನಲ್ಲಿರುವ ಸೇನಾಪಟ್ಟಿ ಜಿಲ್ಲೆಯಲ್ಲಿರುವ ಡಜೂಕ್ ಕಣಿವೆ ಹುಲ್ಲುಗಾವಲುಗಳಿಂದ ಆವೃತ್ತವಾಗಿದೆ. ಮುಖ್ಯವಾಗಿ ಲಿಲ್ಲಿ ಹೂಗಳಿಗೆ ಇದು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಸಾಹಸ ಕ್ರೀಡಾ ಪ್ರೇಮಿಗಳಿಗಂತೂ ಇದು ಮೆಚ್ಚಿನ ತಾಣ. ಮಣಿಪುರ ಮೌಂಟರೇನಿಂಗ್ ಆಂಡ್ ಟ್ರಕ್ಕಿಂಗ್ ಅಸೋಸಿಯೇಶನ್ ವಿಶೇಷ ರೀತಿಯ ಟ್ರಕ್ಕಿಂಗ್‌ಗಳನ್ನು ಆಯೋಜಿಸುತ್ತದೆ. ಇದರ ಜತೆಗೆ ನವೆಂಬರ್ ತಿಂಗಳಲ್ಲಿ ವಿಶೇಷ ಮಣಿಪುರ ಶಾಂಘೈ ಫೆಸ್ಟಿವಲ್‌ವನ್ನು ಕೂಡ ಆಯೋಜನೆ ಮಾಡುತ್ತದೆ. ಈ ಫೆಸ್ಟಿವಲ್ ಸಮಯದಲ್ಲಂತೂ ಸಾವಿರಾರು ಪ್ರವಾಸಿಗರು ಬಂದು ಸೇರುತ್ತಾರೆ. ಇಂಫಾಲ್‌ನಿಂದ ೪೫ಕಿಮೀ ದೂರದಲ್ಲಿ ಈ ಮ್ಯೂಸಿಂಯ ನೆಲೆನಿಂತಿದೆ. ಇಂಡಿಯನ್ ನ್ಯಾಷನಲ್ ಆರ್ಮಿಯ ಭಾವುಟ ಸೇರಿದಂತೆ ನೇತಾಜಿ ಸುಭಾಷ್‌ಚಂದ್ರ ಭೋಸ್‌ಗೆ ಸಂಬಂಧ ಪಟ್ಟ ಸಾಕಷ್ಟು ಸಾಮಗ್ರಿಗಳು ಇಲ್ಲಿವೆ. ಮಣಿಪುರದಲ್ಲಿ ವರ್ಷಪೂರ್ತಿ ಹತ್ತಾರು ಹಬ್ಬಗಳು ಇಲ್ಲಿಯ ಜನರನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಜತೆಗೆ ಸಾಮಾಜಿಕವಾಗಿ ಗಟ್ಟಿಮಾಡಿದೆ. ಇಲ್ಲಿನ ಜನರ ಭಾವನಾತ್ಮಕ, ಧಾರ್ಮಿಕ ಬದುಕಿಗೆ ಈ ಹಬ್ಬಗಳು ಪ್ರೇರಣೆಯನ್ನು ನೀಡುತ್ತದೆ. ಇದು ತಮ್ಮ ಸೋಲಿನಿಂದ ಎದ್ದು ಬರಲು ಧೈರ್ಯ ತುಂಬುತ್ತದೆ ಎನ್ನುವ ನಂಬಿಕೆ ಮಣಿಪುರಿಗರದ್ದು. ಮಣಿಪುರದಲ್ಲಿರುವ ಹಿಂದೂಗಳು ಆಚರಣೆ ಮಾಡುವ ಹಬ್ಬ ಯೋಶಾಂಗ್ ಇದನ್ನು ಬೇರೆ ರಾಜ್ಯಗಳಲ್ಲಿ ಹೋಳಿಯಾಗಿ ಆಚರಣೆ ಮಾಡುತ್ತಾರೆ. ಫೆಬ್ರವರಿ/ ಮಾರ್ಚ್ ತಿಂಗಳ ಹುಣ್ಣಿಮೆಯ ದಿನದಿಂದ ಆರಂಭವಾಗಿ ಐದು ದಿನಗಳ ಕಾಲ ಹಬ್ಬದ ಆಚರಣೆ ನಡೆಯುತ್ತದೆ. ಇದು ಮಣಿಪುರದ ಆರಂಭದ ಹಬ್ಬ. ಇದರಲ್ಲಿ ಮಣಿಪುರಿ ಹುಡುಗಿಯರು ಹಾಗೂ ಹುಡುಗರು ಕೋಲು ತೆಗೆದುಕೊಂಡು ಕುಣಿಯುತ್ತಾ, ಹಾಡುಗಳನ್ನು ಹಾಡುತ್ತಾ ಮನರಂಜನೆ ನೀಡುತ್ತಾರೆ. ಮಣಿಪುರದಲ್ಲಿ ನಾನಾ ಬುಡಕಟ್ಟು ಜನಾಂಗದವರು ಭಿನ್ನ ಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಡೀ ವರ್ಷ ಕಷ್ಟಪಟ್ಟು ದುಡಿದು ಸಂಗ್ರಹ ಮಾಡಿದ ದವಸ ಧಾನ್ಯಗಳಿಂದ ಕೆಲವನ್ನು ಬಳಸಿಕೊಂಡು ಊಟ ಮಾಡುವ ಪರಂಪರೆ ಇದೆ. ಹೆಚ್ಚಾಗಿ ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಡಿಸೆಂಬರ್/ಜನವರಿ ತಿಂಗಳಲಿ ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ಇದು ಐದು ದಿನಗಳ ಕಾಲ ನಡೆಯುತ್ತದೆ. ಕುಣಿತ, ಆಟ, ಉಡುಗೆ-ತೊಡುಗೆ ಬದಲಾವಣೆ ಮೊದಲಾದವುಗಳನ್ನು ಇಲ್ಲಿ ಕಾಣಬಹುದು. ಏಪ್ರಿಲ್ ತಿಂಗಳಲ್ಲಿ ಮಣಿಪುರಿ ರಾಜ್ಯ ಹೊಸ ವರ್ಷವನ್ನು ಆಚರಣೆ ಮಾಡುತ್ತದೆ. ಇದನ್ನು ಚೆರ್ರಿಬೋ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ವಿಶೇಷ ರೀತಿಯ ಅಡುಗೆ, ಪರ್ವತರೋಹಣ ಮೊದಲಾದವುಗಳನ್ನು ಈ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ. ಇವುಗಳ ಜತೆಗೆ ಕಾಂಗ್ ಮಣಿಪುರಿಗಳ ರಥಯಾತ್ರೆ,ಹೇಕ್ರೂಒಂಟಿಗೋಬಾ, ನಿಂಗೋಳ್ ಚಾಕ್ ಕೋಬಾ, ಲೂಯೀ ನಾಗೀ ನೀ, ಚೂಫಾಸ್ ಹಬ್ಬ ಹೀಗೆ ಹತ್ತಾರು ಹಬ್ಬಗಳಿಂದ ಮಣಿಪುರಿ ರಾಜ್ಯದ ಮಂದಿ ಖುಷಿಯಿಂದ ಬದುಕು ಕಟ್ಟುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಕೂಡ ಈ ಹಬ್ಬಗಳ ಮೂಲಕ ಅವರಿಗೆ ಹತ್ತಿರವಾಗುತ್ತಾರೆ. ಮಣಿಪುರಕ್ಕೆ ಎ ಪ್ರಮುಖ ನಗರಗಳಿಂದ ವಿಮಾನಯಾನ ಸೌಲಭ್ಯವಿದೆ. ಮಣಿಪುರದಲ್ಲಿ ರೈಲು ನಿಲ್ದಾಣವಿಲ್ಲ. ಆದರೆ ಹತ್ತಿರದ ರೈಲು ನಿಲ್ದಾಣ ೨೧೫ಕಿಮೀ. ದೂರದಲ್ಲಿರುವ ಡಿಮಾಪುರದಲ್ಲಿದೆ. ಸ್ಥಳೀಯವಾಗಿ ಸುತ್ತಾಡಲು ಇಂಫಾಲ್‌ನಲ್ಲಿರುವ ಹೋಟೆಲ್‌ಗಳು ಟ್ಯಾಕ್ಸಿ, ಖಾಸಗಿ ವಾಹನಗಳ ವ್ಯವಸ್ಥೆ ಮಾಡುತ್ತದೆ. ಇಂಫಾಲ್‌ದಲ್ಲಿ ಉಳಿದುಕೊಳ್ಳುವುದಕ್ಕೇನೂ ಸಮಸ್ಯೆಯಿಲ್ಲ. ಬಜೆಟ್‌ಗೆ ಅನುಗುಣವಾಗಿ ಊಟ-ವಸತಿ ವ್ಯವಸ್ಥೆ ಲಭ್ಯ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ ನವೆಂಬರ್‌ನಿಂದ ಏಪ್ರಿಲ ತಿಂಗಳು ಬಹಳ ಸೂಕ್ತ.
OSCAR-2019
ಬೆಂಗಳೂರು, ಏಪ್ರಿಲ್ 16: ಬೆಂಗಳೂರು-ಚೆನ್ನೈ ರೈಲ್ವೆ ಕಾರಿಡಾರ್ ವೇಗವನ್ನು 150 ಕಿ.ಮೀ ಹೆಚ್ಚಿಸಲು ಭಾರತ ಚೀನಾ ನೆರವು ಕೇಳಿದೆ. ಎರಡು ದಶಕಗಳ ನಿಯೋಗಗಳ ನಡುವಿನ ಆರ್ಥಿಕ ಕಾರ್ಯತಂತ್ರದ ಕುರಿತಾದ ಮಾತುಕತೆ ವೇಳೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮಾಹಿತಿ ನೀಡಿದ್ದು, ಇದೇ ವೇಳೆ ಆಗ್ರಾ ಮತ್ತು ಝಾನ್ಸಿ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿಗೂ ಎರಡು ದೇಶಗಳ ನಿಯೋಗವು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಬೆಂಗಳೂರು-ಚೆನ್ನೈ ರೈಲ್ವೆ ಕಾರಿಡಾರ್ ವೇಗವನ್ನು ಗಂಟೆಗೆ 150 ಕಿ.ಮೀ ಹೆಚ್ಚಳಕ್ಕೆ ಚೀನಾದ ನೆರವು ಹೇಳಲಾಗಿದೆ. ಈ ವ್ಊಹಾತ್ಮಕ ಆರ್ಥಿಕ ಮಾತುಕತೆ ರಾಜೀವ್ ಕುಮಾರ್ ಹಾಗೂ ಚೀನಾ ರಾಷ್ಟ್ರೀಯ ಅಭಿವೃದ್ಧಿ ಹಾಗೂ ಸುಧಾರಣಾ ಆಯೋಗದ ಅಧ್ಯಕ್ಷ ಹಿ ಲಿಫಿಂಗ್ ಅವರ ನೇತೃತ್ವದಲ್ಲಿ ನಿಯೋಗದ ನಡುವೆ ನಡೆಯಿತು. ಈ ಬಗ್ಗೆ ಪುನರ್ ಪರಿಶೀಲಿಸಿ ಪ್ರತಿಕ್ರಿಯಿಸುವುದಾಗಿ ಚೀನಾ ಹೇಳಿದೆ. ಚೀನಾ ಜಗತ್ತಿನಲ್ಲಿಯೇ ಅತಿ ವೇಗದ ರೈಲ್ವೆ ಜಾಲವನ್ನು ಹೊಂದಿದ್ದು, ದೇಶದೊಳಗಡೆಯೇ 22 ಸಾವಿರ ಕಿ.ಮೀ ವರೆಗೆ ವಿವಿಧ ನಗರಗಳೊಂದಿಗೆ ಸಂಪರ್ಕ ಕಲ್ಪಿಸಿದೆ.
OSCAR-2019
ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 5ನೇ ದಿನವಾದ ಸೋಮವಾರ ಭಾರತ ತನ್ನ ಎರಡನೇ
OSCAR-2019
Prepar3D v2 ಮತ್ತು v3: ಪ್ರಾಕೃತಿಕ ದೃಶ್ಯಾವಳಿಗಳಿಂದ ಮತ್ತು ಕಡಲತೀರಗಳು ನೀರನ್ನು ತುಂಬಾ ಕತ್ತಲು, ನಾನು ಸ್ಫಟಿಕ ಸ್ಪಷ್ಟ ನೀರು ಕಾಣುವುದಿಲ್ಲ ಈ ಸಮಸ್ಯೆಯನ್ನು ಕ್ರಿಯೆಯ ಸಕ್ರಿಯಗೊಳಿಸುವ ಉಂಟಾಗುತ್ತದೆ ಹಾರ್ಡ್ವೇರ್ ತಬಲಾಕೃತಿ Prepar3D v2 ಅಥವಾ v3 ಗ್ರಾಫಿಕ್ ಸಂರಚನೆಯಲ್ಲಿ.
OSCAR-2019
ಬೆಂಗಳೂರು, ಏಪ್ರಿಲ್ 11: ಅವಿರತ ನಾಟಕ ಮಂಡಳಿಯು 'ಶ್ರೀಕೃಷ್ಣ ಸಂಧಾನ' ಹಾಸ್ಯ ನಾಟಕವನ್ನು ಏ.14ರಂದು ಹಮ್ಮಿಕೊಂಡಿದೆ. ನಾಟಕವು ಬಸವೇಶ್ವರನಗರದಲ್ಲಿರುವ ಕೆಇಎ ಪ್ರಭಾತ್ ಕಲಾಮಂದಿರದಲ್ಲಿ ನಡೆಯಲಿದೆ. ಸಾಕ್ಷರತೆ ಮಹತ್ವದ ಸಾರುವ ಕನ್ನಡ ನಗೆ ನಾಟಕ 'ಶ್ರೀಕೃಷ್ಣ ಸಂಧಾನ' ಈಗ ಮತ್ತೊಮ್ಮೆ ನಗರದ ರಂಗ ಮಂದಿರಕ್ಕೆ ಕಾಲಿಡುತ್ತಿದೆ. ಈಗಾಗಲೇ ಜನಪ್ರಿಯಗೊಂಡಿರುವ ಈ ನಾಟಕವನ್ನು ಅವಿರತ ಸಂಸ್ಥೆಯವರು ಪ್ರಸ್ತುತ ಪಡಿಸುತ್ತಿದ್ದಾರೆ. ನಾಟಕವನ್ನು ಪಿ. ದೀಪಕ್‌ ನಿರ್ದೇಶಿಸಿದ್ದು, ವಿ.ಎಸ್. ಅಶ್ವತ್ ಅವರು ರಚಿಸಿದ್ದು, ವಿ. ರಾಮರಾವ್ ಪುಟಾಣಿ ಅವರು ಮೂಲ ನಿರ್ದೇಶನ ಮಾಡಿದ್ದಾರೆ. ಈ ನಾಟಕವನ್ನು ಯಾರಿಗೂ ಅವಹೇಳನ ಮಾಡಲು ರಚಿಸಿರುವುದಲ್ಲ, ಕೇವಲ ಹಾಸ್ಯಕ್ಕಾಗಿಯೇ ರೂಪುಗೊಂಡ ಈ ಸರ್ವಕಾಲಿಕ ನಾಟಕದುದ್ದಕ್ಕೂ ಪ್ರೇಕ್ಷಕರಿಗೆ ನಗೆಯ ರಸದೌತಣ. ಹಳ್ಳಿಯ ಕಲಾವಿದರ ಮುಗ್ದತೆಯ ಜೊತೆಗೆ, ಅವರ ನಡುವಿನ ವೈಯುಕ್ತಿಕ ದ್ವೇಷವೂ ಸೇರಿಕೊಂಡಾಗ ಎಂತಹ ಗಂಭೀರ ಸನ್ನಿವೇಶಗಳೂ ಕೂಡ ಹೇಗೆ ಹಾಸ್ಯದ ರೂಪ ಪಡೆಯತ್ತವೆ. ಈ ಕುರಿತು ಪ್ರತಿಬಿಂಬಿಸುವ ಈ ನಾಟಕದ ಗೆಜ್ಜೆಪೂಜೆ ಅಥವಾ ರಂಗತಾಲೀಮು ಅಥವಾ ಫೈನಲ್ ರಿಹರ್ಸಲ್ ಹೇಗಿರಬಹುದು ಎಂಬುದೇ ಇದರ ಮೂಲ ಸತ್ವ. ಅವಿರತ ತಂಡದ ಕಾರ್ಯಕರ್ತರೇ ಇಲ್ಲಿ ಬಣ್ಣ ಹಚ್ಚಿ ಅಭಿನಯಿಸುತ್ತಿರುವುದು ಈ ನಾಟಕದ ಮತ್ತೊಂದು ವಿಶೇಷ. ಏಪ್ರಿಲ್ 14 ರಂದು ಬೆಳಗ್ಗೆ 11.30 ಹಾಗೂ ಸಂಜೆ 5.30ಕ್ಕೆ ಹೀಗೆ ಒಟ್ಟು ಎರಡು ಪ್ರದರ್ಶನಗಳಿರಲಿವೆ. ನೀವೂ ಬನ್ನಿ ಈ ವಿಭಿನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ.
OSCAR-2019
ಬೆಂಗಳೂರು : ಮುಂಬರುವ ಚುನಾವಣೆಯಲ್ಲಿ ಅತಿಹೆಚ್ಚಿನ ಸ್ಥಾನ ಪಡೆಯಬೇಕು ಅಂತ ಹೊರಟಿರೋ ಬಿಜೆಪಿಗೆ ಬ್ರೇಕ್ ಹಾಕೋದಕ್ಕೆ ಸಿಎಂ ಸಿದ್ಧರಾಮಯ್ಯ ಮುಂದಾಗಿದ್ದಾರೆ. ಅದಕ್ಕಾಗಿ ಬೆಂಗಳೂರಿನ ಶಾಸಕರು ಮತ್ತು ಹಿಂದೆ ನವದೆಹಲಿ : 2011 ರಲ್ಲಿ ತೆರೆಕಂಡ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಮಿ. ಪರ್ಫೆಕ್ಟ್ ಸಿನೆಮಾ ಇದೀಗ ಸಂಕಷ್ಟದಲ್ಲಿ ಸಿಲುಕಿದೆ. ಪ್ರಭಾಸ್, ಕಾಜಲ್ ಅಗರ್ ವಾಲ್ ಮತ್ತು
OSCAR-2019
ಪರಭಾಷ ನಿರ್ದೇಶಕರು, ಕಲಾವಿದರು, ಗಾಯಕರು ಸ್ಯಾಂಡಲ್ ವುಡ್ ಅಂಗಳದಲ್ಲಿ ಹೆಚ್ಚು ಬೇಡಿಕೆಯಲ್ಲಿದ್ದಾರೆ. ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಈಗ ಕನ್ನಡದಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಸದ್ಯ
OSCAR-2019
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬೆಳೆ ವಿಮೆ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇದೆ. ಬರ ಪರಿಸ್ಥಿತಿಯಲ್ಲಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಇನ್ನೂ ಸುಧಾರಿಸಬೇಕು. ಜಮೀನಿನಿಂದ ಮಾರುಕಟ್ಟೆಗೆ ಕೃಷಿ ಉತ್ಪನ್ನ ಸಾಗಣಿಕೆಗೆ ಸರ್ಕಾರ ವಾಹನದ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
OSCAR-2019
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ನವದೆಹಲಿಯಲ್ಲಿ ಬುಧವಾರ ಕರೆದಿರುವ ಸಭೆಗೆ ಆಗಮಿಸುವ ರಾಜ್ಯದ ಸಂಸದರಿಗೆ ಒಂದು ಲಕ್ಷ ರೂ. ಬೆಲೆ ಬಾಳುವ "ಐ ಫೋನ್‌' ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ರೈತರ ಸಾಲ ಮನ್ನಾ ಸೇರಿ ರಾಜ್ಯ ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗ ಸಂಸದರಿಗೆ ಐ ಫೋನ್‌ "ಗಿಫ್ಟ್' ನೀಡುವ ಔಚಿತ್ಯವಾದರೂ ಏನು ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ. ಐ ಫೋನ್‌ ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ, ಐ ಫೋನ್‌ ಬಗ್ಗೆ ಮಾಹಿತಿ ಇಲ್ಲ. ನಮ್ಮ ಕಚೇರಿಯಿಂದ ಕೊಡಲು ನಾನಂತೂ ಸೂಚನೆ ಕೊಟ್ಟಿಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಅಧಿಕೃತವಾಗಿ ಕೊಡಲಾಗಿ  ಈ ಮಧ್ಯೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿ, "ಐ ಫೋನ್‌ ನಾನೇ ಕೊಟ್ಟಿದ್ದೇನೆ. ವೈಯಕ್ತಿಕವಾಗಿ ಹೃದಯ ಶ್ರೀಮಂತಿಕೆಯಿಂದ ಸಂಸದರಿಗೆ, ರಾಜ್ಯ ಸಭೆ ಸದಸ್ಯರಿಗೆ ಕೊಟ್ಟಿದ್ದೇನೆ. ಇದು ತಪ್ಪೇ? ಕಳೆದ ವರ್ಷವೂ ಕೊಟ್ಟಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಸಂಸದರಿಗೆ ತ್ವರಿತವಾಗಿ ಮಾಹಿತಿ ತಲುಪಲಿ ಎಂದು ತಲಾ 50 ಸಾವಿರ ರೂ. ವೆಚ್ಚದಲ್ಲಿ ಐ ಫೋನ್‌ ಮತ್ತು ಬ್ಯಾಗ್‌ ಉಡುಗೊರೆಯಾಗಿ ನೀಡಿದ್ದೇನೆ. ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ. ಕೆಲವರು ಐ ಫೋನ್‌ ಹಿಂತಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ. ಗಿಫ್ಟ್ ಬೇಡವೆಂದ ಬಿಜೆಪಿ ಸಭೆಗೆ ಒಂದು ದಿನ ಮುನ್ನವೇ ಸಂಸದರು ಹಾಗೂ ರಾಜ್ಯಸಭೆ ಸದಸ್ಯರಿಗೆ ಚರ್ಚಿಸುವ ವಿಷಯಗಳ ಪಟ್ಟಿ ಹಾಗೂ ರಾಜ್ಯದ ಅಭಿವೃದ್ಧಿ ಯೋಜನೆಗಳ ಮಾಹಿತಿಯುಳ್ಳ ಕಿಟ್‌ ನೀಡಲಾಗಿದೆ. ಅದರಲ್ಲಿ ಆ್ಯಪಲ್‌ ಐಫೋನ್‌ ಸಹ ಹಾಕಿ ಕೊಡಲಾಗಿದೆ. ಕೇಂದ್ರ ಸಚಿವ ಅನಂತಕುಮಾರ್‌ ಐ ಫೋನ್‌ ಪಡೆ ಯುವುದಿಲ್ಲ ಎಂದು ಹೇಳಿದ್ದಾರೆ. ಹಲವು ಬಿಜೆಪಿ ಸಂಸದರು ಇದೇ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರಂತೂ ನೇರವಾಗಿಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಪತ್ರ ಬರೆದು ಐಫೋನ್‌ ಔಚಿತ್ಯವೇನು
OSCAR-2019
ರಾಮನಗರ: ನನ್ನ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ಗೊತ್ತಿಲ್ಲ. ನನ್ನ ಮಗನ ಜತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ. ಇದು ಕ್ಷಮಿಸುವಂತಹ... ಬೆಂಗಳೂರು: ಈಗ ಸಿಕ್ಕಿರುವ ಗೆಲುವು ಲೋಕಸಭಾ ಚುನಾವಣೆಯ ದಿಕ್ಸೂಚಿ ಅಲ್ಲ. ಅಲ್ಲೂ ಈ ಜಯ ಮುಂದುವರಿದುಕೊಂಡು ಹೋಗುತ್ತದೆ ಎಂದು ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಹೇಳಿದರು. ಸದಾಶಿವ ನಗರದ ನಿವಾಸದಲ್ಲಿ ಮಾತನಾಡಿ, ಜನರಿಗೆ ಈ... ಬಳ್ಳಾರಿ: ಇದು ಯಾವ ಜನ್ಮದ ಋಣಾನುಬಂಧವೋ ಗೊತ್ತಿಲ್ಲ. ನಮ್ಮ ಕಾರ್ಯಕರ್ತರು, ಪ್ರಗತಿಪರ ಸಂಘಟನೆ ನಾಯಕರು, ಜೆಡಿಎಸ್ ಪಕ್ಷದ ನಾಯಕರು ನನ್ನ ಗೆಲುವಿಗೆ ದುಡಿದಿದ್ದಾರೆ. ಈ ಭಾಗದ ಜನತೆಯ ಸಮಸ್ಯೆಗಳಿಗೆ ಮಗನಾಗಿ, ಸಹೋದರನಾಗಿ, ಸೇವಕನಾಗಿ ಕೊನೆಯುಸಿರುವವರೆಗೆ...
OSCAR-2019
ತನ್ನ 6ನೇ ವಯಸ್ಸಿಗೆ ಈ ಬಾಲಕ ಕೋಟಿಗಳ ಸಂಪಾದನೆ ಮಾಡಿದ್ದು ಹೇಗೆ..?ಈ ಪೋರನ ಸಂಪಾದನೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ..! ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು. ಮದುವೆ ನಿಶ್ಚಯವಾದ ಬಳಿಕ, ವಧು- ವರರು ಮಂಟಪಕ್ಕೆ ಬರಲಾರದೆ , ಊಟದ ವಿಚಾರವಾಗಿ, ಅಥವಾ ಮಂಟಪದಲ್ಲಿಯೇ ಮುರಿದ ಮದುವೆಗಳು, ಹೀಗೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ ಭಾನುವಾರ, 8/4/2018, ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು : 9663542672 ಸೂರ್ಯೋದಯ : 06:14 ಸೂರ್ಯಾಸ್ತ : 18:43 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್ ಪಕ್ಷ : ಕೃಷ್ಣ ಪಕ್ಷ ತಿಥಿ : ಸಪ್ತಮಿ ನಕ್ಷತ್ರ : ಪೂರ್ವಷಾಡ… ವಿದೇಶಗಳಲ್ಲಿ ಉದ್ಯೋಗ ಮಾಡುತ್ತಾ.. ಕೋಟ್ಯಂತರ ಆಸ್ತಿ ಸಂಪಾದಿಸಿದ್ದೇವೆ… ಎಂದು ಬಹಳಷ್ಟು ಮಂದಿ ಎನ್‌ಆರ್‌ಐಗಳು ನಮ್ಮ ದೇಶದ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯರ ತಂದೆತಾಯಿ ಸಹ ಆ ಯುವಕ ಎಂತಹವನು ಎಂದು ಆಲೋಚಿಸದೆ, ಹಿಂದೆ ಮುಂದೆ ನೋಡದೆ ಲಕ್ಷಾಂತರ ವರದಕ್ಷಿಣೆ ಸುರಿದು ತಮ್ಮ ಹೆಣ್ಣುಮಕ್ಕಳ ಮದುವೆ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಚೆನ್ನಾಗಿದೆ. ಆದರೆ ಆ ಎನ್‌ಆರ್‌ಐ ಅಳಿಯ, ತಮ್ಮ ಮಗಳನ್ನು ಗರ್ಭಿಣಿ ಮಾಡಿ, ಅಥವಾ ಇನ್ಯಾವುದೋ ಕಾರಣಗಳಿಂದ ಆಕೆಯನ್ನು ಬಿಟ್ಟುಬಿಟ್ಟು ವಿದೇಶಗಳಿಗೆ ಹೋಗುತ್ತಿದ್ದಾನೆ. ಅಂತಹ ಸಮಯದಲ್ಲಾಗುತ್ತದೆ ಅವಸ್ಥೆ. ಇಂದಿನ ಬಹಳಷ್ಟು ಹೆಣ್ಣುಮಕ್ಕಳು ಇಂತಹ ತೊಂದರೆ ಅನುಭವಿಸುತ್ತಿದ್ದಾರೆ.
OSCAR-2019
ಮೈಸೂರು, ಏಪ್ರಿಲ್ 17 : ಸಿದ್ದರಾಮಯ್ಯ ಅವರು ಮಂಗಳವಾರ ವರುಣಾದಲ್ಲಿ ಚುನಾವಣೆ ಪ್ರಚಾರ ನಡೆಸುವ ವೇಳೆ ತಮ್ಮ ಹಿರಿಯ ಮಗ, ದಿವಂಗತ ರಾಕೇಶ್ ನನ್ನು ನೆನೆದು ಭಾವುಕರಾದ ಘಟನೆ ನಡೆಯಿತು. ಮೈಸೂರು ವಿಧಾನಸಭಾ ಕ್ಷೇತ್ರವಾದ ವರುಣಾದಲ್ಲಿ ತಮ್ಮ ಎರಡನೇ ಮಗ ಡಾ.ಯತೀಂದ್ರ ಪರ ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಕೇಶ್ ನನ್ನು ನೆನೆದು ಸಿದ್ದರಾಮಯ್ಯ ಕಣ್ಣೀರಿಟ್ಟರು. ನನ್ನ ಮಗ ಈಗ ಇದ್ದಿದ್ದರೆ ನಾನು ಪ್ರಚಾರಕ್ಕೆ ಬರುವ ಅಗತ್ಯ ಇರುತ್ತಿರಲಿಲ್ಲ. ಆದರೆ ಮನುಷ್ಯನೆಂದ ಮೇಲೆ ಎಲ್ಲರೂ ಸಾಯಲೇ ಬೇಕು ಎಂದು ಭಾವುಕರಾದರು. ನಾನು ಈ ಕ್ಷೇತ್ರದ ಮಣ್ಣಿನ ಮಗ. ನನ್ನ ಮಗ ಯತೀಂದ್ರ. ಕಷ್ಟ- ಸುಖಕ್ಕೆ ಆಗುವವರು ನಾವೇ ಹೊರತು ಹೊರಗಿನಿಂದ ಬಂದವರಲ್ಲ. ಸಂವಿಧಾನ ಬದಲಿಸಲು ಹೊರಟವರು ಬಿಜೆಪಿಯವರು. ಅದು ಢೋಂಗಿ ಪಕ್ಷ. ನುಡಿದಂತೆ ನಡೆಯುವವರು ನಾವು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನಾವು ಬಿಜೆಪಿಯವರಂತೆ ಬಾಯಿ ಮಾತಿನಲ್ಲಿ ಹೇಳುವವರಲ್ಲ. ಮಾಡಿ ತೋರಿಸುವವರು ಎಂದರು. ನಾನು ವರುಣಾದಲ್ಲಿ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ಲುತ್ತಾನೆ. ಎಲ್ಲಿಂದಲೋ, ಯಾರೋ ಬಂದು ಇಲ್ಲಿ ನಿಲ್ಲುತ್ತಾರೆ. ಇಲ್ಲಿನ ಬಗ್ಗೆ ಅವರಿಗೆ ಏನು ಗೊತ್ತು ಎಂದ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಹರಿಹಾಯ್ದರು. ಕ್ಷೇತ್ರದ ಕೊಣನೂರು, ಹನುಮನಪುರ, ಕಾರ್ಯ, ತಗಡೂರು ಗ್ರಾಮದಲ್ಲಿ ಸಿದ್ದರಾಮಯ್ಯ ರೋಡ್ ಶೋ ಮೂಲಕ ಪ್ರಚಾರ ನಡೆಸಿ, ಮತ ಯಾಚಿಸಿದರು. ಪ್ರಚಾರದ ವೇಳೆ ಹನುಮನಪುರ ಗ್ರಾಮದ ಮುಖಂಡ ಬಸವರಾಜಪ್ಪ ಅವರ ಮನೆಗೆ ತೆರಳಿದ ಅವರು, ಆರೋಗ್ಯ ವಿಚಾರಿಸಿದರು. karnataka assembly elections 2018 mysuru siddaramaiah congress district news ಕರ್ನಾಟಕ ವಿಧಾನಸಭೆ ಚುನಾವಣೆ 2018 ಮೈಸೂರು ಸಿದ್ದರಾಮಯ್ಯ ಕಾಂಗ್ರೆಸ್ ಜಿಲ್ಲಾಸುದ್ದಿ
OSCAR-2019
ಬಳ್ಳಾರಿ, ಏಪ್ರಿಲ್ 14: ಕೈ ತಪ್ಪಬಹುದಾಗಿದ್ದ ಟಿಕೆಟ್ ಅನ್ನು ಬಿಗಿಯಾಗಿ ಹಿಡಿದುಕೊಳ್ಳುವಲ್ಲಿ ಬಳ್ಳಾರಿ ನಗರ ಶಾಸಕ ಅನಿಲ್ ಎಚ್. ಲಾಡ್ ಅವರು ಯಶಸ್ವಿ ಆಗಿದ್ದು, 'ನನಗೇ ಕಾಂಗ್ರೆಸ್ ಟಿಕೆಟ್. ಏಪ್ರಿಲ್ 19 ಅಥವಾ 20ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ನೀವೆಲ್ಲರೂ ಬನ್ನಿ. ನನ್ನನ್ನು - ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ' ಎಂದು ಆಪ್ತರಿಗೆ ಮಾಹಿತಿ ನೀಡುತ್ತಿದ್ದಾರೆ. ಒನ್ಇಂಡಿಯಾ ಕನ್ನಡ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಾಕಷ್ಟು ಎಡರು ತೊಡರುಗಳನ್ನು ದಾಟಿಕೊಂಡು ಬಂದಿದ್ದೇನೆ. ಶ್ರಮಪಟ್ಟು ಟಿಕೆಟ್ ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದೇನೆ. ಕೊನೆಯದಾಗಿ ಪಟ್ಟಿ ಚುನಾವಣಾ ಸಮಿತಿಯನ್ನು ಸೇರಿದ್ದು, ನನ್ನ ಹೆಸರು ಇದೆ. ಖಂಡಿತವಾಗಿಯೂ ನಾನೇ ಬಳ್ಳಾರಿ ನಗರದಿಂದ ಸ್ಪರ್ಧಿಸುತ್ತೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಅನಿಲ್ ಎಚ್. ಲಾಡ್ ಅವರಿಗೆ ಟಿಕೆಟ್ ನೀಡದಂತೆ ಬಳ್ಳಾರಿ ನಗರ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಅನೇಕ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ. ಸ್ವಯಂ ಸಿದ್ದರಾಮಯ್ಯ ಅವರ ವ್ಯಕ್ತಿಗತ ವಿರೋಧ ಎದುರಿಸುತ್ತ, ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದ ಪಡೆದಿರುವ ಅನಿಲ್, ಈ ಬಾರಿ ಟಿಕೇಟ್ ಪಡೆಯುವುದು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಪಕ್ಷದಲ್ಲೇ ವಿರೋಧ ಉಂಟಾಗಿತ್ತು. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷ ನಡೆಸಿದ್ದ ಎರಡು ಹಂತದ ಸಮೀಕ್ಷೆಯಲ್ಲಿ ಅನಿಲ್ ಲಾಡ್ ಮತ್ತೊಮ್ಮೆ ಸ್ಪರ್ಧಿಸಿದಲ್ಲಿ ಸೋಲುತ್ತಾರೆ. ಬೇರೆಯವರನ್ನು ಆರಿಸಿಕೊಳ್ಳುವುದು ಸೂಕ್ತ ಎನ್ನುವ ಲಿಖಿತ ಅಭಿಪ್ರಾಯ ಮೂಡಿತ್ತು. ಆದರೆ ಬಹು ನಿರೀಕ್ಷಿತ ಅಭ್ಯರ್ಥಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸದ ಕಾರಣ, ಹಾಲಿ ಶಾಸಕರಿಗೇ ಟಿಕೇಟ್ ನೀಡುವ ನೀತಿ ಅಡಿಯಲ್ಲಿ ಅನಿಲ್ ಎಚ್. ಲಾಡ್ ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ, ಮೊದಲ ಪಟ್ಟಿಯಲ್ಲಿ ಅನಿಲ್ ಲಾಡ್ ಹೆಸರಿದ್ದಲ್ಲಿ ಸೂಕ್ತ. ಮೊದಲ ಪಟ್ಟಿಯಲ್ಲಿ ಹೆಸರಿಲ್ಲ ಎಂದಾದಲ್ಲಿ ಎರಡನೇ, ಮೂರನೇ ಪಟ್ಟಿಯಲ್ಲೂ ಅವರ ಹೆಸರಿರಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಮಧ್ಯೆ ಬಳ್ಳಾರಿ, ಹಗರಿಬೊಮ್ಮನಹಳ್ಳಿ ಟಿಕೆಟ್ ವಿಚಾರವಾಗಿ ಸಂರ್ಘರ್ಷ ನಡೆದಿದೆ. ಈಗ ಈ ಇಬ್ಬರಲ್ಲಿ ಗೆಲ್ಲುವವರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. anil lad congress ballari karnataka assembly elections 2018 district news ಅನಿಲ್ ಲಾಡ್ ಕಾಂಗ್ರೆಸ್ ಬಳ್ಳಾರಿ ಕರ್ನಾಟಕ ವಿಧಾನಸಭೆ ಚುನಾವಣೆ 2018 ಜಿಲ್ಲಾಸುದ್ದಿ
OSCAR-2019
ಉಡುಪಿ: ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಮೆರಿಕದ ನ್ಯೂಜೆರ್ಸಿಯ ಎಡಿಸನ್‌ನ (ಪುತ್ತಿಗೆ ಮಠದ ಶಾಖಾ ಮಠ) ಶ್ರೀಕೃಷ್ಣ ವೃಂದಾವನದಲ್ಲಿ... ಉಡುಪಿ: ರೋಟರಿ ಜಿಲ್ಲೆ 3182 ವಲಯ 4ರ ನೇತೃತ್ವದಲ್ಲಿ ರೋಟರಿ ಪ್ರತಿಷ್ಠಾನ ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು... ಉಡುಪಿ: ಪೀಠಾಧಿಪತಿಗಳು, ಯುವ ವಿದ್ವಾಂಸರು ಸೇರಿ ತಣ್ತೀಜ್ಞಾನದ ಧರ್ಮಪ್ರಸರಣ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.
OSCAR-2019
ಹುಬ್ಬಳ್ಳಿ: ‘ಎರಡು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ‘ಡಿ’ ದರ್ಜೆ ನೌಕರರ ನೇಮಕಾತಿ ಪ್ರಕ್ರಿಯೆಯನ್ನು ಫೆಬ್ರುವರಿ ಮೂರನೇ ವಾರದಲ್ಲಿ ಪುನರಾರಂಭಿಸಲಾಗುತ್ತದೆ’ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ‘ರೈಲ್ವೆ ಇಲಾಖೆಯಲ್ಲಿ ಬಿಹಾರ ಮೂಲದವರನ್ನೇ ತುಂಬಲಾಗುತ್ತಿದ್ದು, ಸ್ಥಳೀಯ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಗಲಾಟೆ ನಡೆದಿದ್ದರಿಂದ 2008ರಲ್ಲಿ ಪ್ರಾರಂಭವಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಆರಂಭದಲ್ಲೇ ಸ್ಥಗಿತಗೊಳಿಸಲಾಗಿತ್ತು. ಆಗ 4701 ಹುದ್ದೆಗಳ ಭರ್ತಿಗೆ ಉದ್ಯೋಗ ಪ್ರಕಟಣೆ (1/2007) ಹೊರಡಿಸಲಾಗಿತ್ತು. ನೈಋತ್ಯ ರೈಲ್ವೆಯಲ್ಲಿ ‘ಡಿ’ ದರ್ಜೆಯ ಬಹಳ ಹುದ್ದೆಗಳು ಖಾಲಿ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದರಿಂದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳುವುದು ಅವಶ್ಯವಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವ 4701 ಹುದ್ದೆಗಳಲ್ಲದೆ, ಹೊಸದಾಗಿ 3007 ಹುದ್ದೆಗಳನ್ನು ತುಂಬಿಕೊಳ್ಳಲು ನಿರ್ಧರಿಸಲಾಗಿದ್ದು, ಉದ್ಯೋಗ ಪ್ರಕಟಣೆ (2/2010) ಹೊರಡಿಸಲಾಗಿದೆ. ಈ ಎರಡೂ ಪ್ರಕಟಣೆಗಳು ಮತ್ತು ಖಾಲಿ ಹುದ್ದೆಗಳು ಬೇರೆ, ಬೇರೆಯಾಗಿರುತ್ತವೆ’ ಎಂದು ಹೇಳಿದ್ದಾರೆ. ‘2007ರ ಭರ್ತಿಗೆ ಕನಿಷ್ಠ ವಿದ್ಯಾರ್ಹತೆ ಎಂಟನೇ ತರಗತಿ ತೇರ್ಗಡೆ ಆಗಿರಬೇಕಿತ್ತು. ಆರನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ 2010ರ ಭರ್ತಿಗೆ ಎಸ್‌ಎಸ್‌ಎಲ್‌ಸಿ ಇಲ್ಲವೆ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮಾತ್ರ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ’ ಎಂದು ವಿವರಿಸಿದ್ದಾರೆ. ‘ದೇಶದ ಎಲ್ಲ 16 ರೈಲ್ವೆ ವಲಯಗಳಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಒಂದೇ ಅವಧಿಯಲ್ಲಿ ಮತ್ತು ಲಿಖಿತ ಪರೀಕ್ಷೆಯನ್ನು ಏಕಕಾಲಕ್ಕೆ ನಡೆಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳಿಗೆ ಆಯ್ಕೆಗೊಳ್ಳುವ ಅವಕಾಶ ಹೆಚ್ಚಾಗುತ್ತದೆ. ಹೊರ ರಾಜ್ಯಗಳ ಅಭ್ಯರ್ಥಿಗಳು ತಮ್ಮ ರಾಜ್ಯದಲ್ಲಿಯೇ ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆ ಎದುರಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.
OSCAR-2019
ಬೆಂಗಳೂರು, ಅ.25- ಮಾತನಾಡುವ ನೆಪದಲ್ಲಿ ಕ್ಯಾಟರಿಂಗ್ ನಡೆಸುವ ವ್ಯಕ್ತಿಯ ಮನೆಗೆ ಬಂದು ಅವರ ಕೈ-ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆ ಸೇರಿದಂತೆ 9 ಮಂದಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿ 30ಗ್ರಾಂ ತೂಕದ ಆಭರಣ ವಶಪಡಿಸಿಕೊಂಡಿದ್ದಾರೆ.ಜ್ಯೋತಿ, ಶಿವಾನಂದ, ದಿಲೀಪ್, ಶರತ್‍ಕುಮಾರ್, ಗುರುಪ್ರಸಾದ್, ವಿಕಾಶ್, ವಿನೋದ್‍ಕುಮಾರ್, ರಥನ್ ಮತ್ತು ರವಿರಾಜ್ ಬಂಧಿತ ಆರೋಪಿಗಳು.ಈ ಆರೋಪಿಗಳು 29 ವರ್ಷದ ಮಹಿಳೆಯೊಂದಿಗೆ ಸೇರಿ ಹನಿಟ್ರ್ಯಾಪ್‍ಮೂಲಕ ಹಣ ಸುಲಿಗೆ ಮಾಡುತ್ತಿದ್ದದ್ದು ವಿಚಾರಣೆಯಿಂದ ತಿಳಿದು ಬಂದಿದ್ದು, ಜೆ.ಪಿ.ನಗರ, ಕಾಮಾಕ್ಷಿಪಾಳ್ಯ ಹಾಗೂ ವರ್ತೂರಿನಲ್ಲಿ ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಗಿರಿನಗರ ಠಾಣೆ ವ್ಯಾಪ್ತಿಯ ದತ್ತಾತ್ರೇಯನಗರದಲ್ಲಿ ವಾಸವಿರುವ ಗುರುರಾಜ್ ಎಂಬುವರು ಕ್ಯಾಟರಿಂಗ್ ನಡೆಸುತ್ತಾರೆ. ಇವರಿಗೆ ಮಹಿಳೆಯೊಬ್ಬರು ದೂರವಾಣಿ ಕರೆ ಮಾಡಿ ಊಟಕ್ಕೆ ಆರ್ಡರ್ ಕೊಡಬೇಕು, ಎಷ್ಟು ಹಣವಾಗುತ್ತದೆ ಎಂಬ ಬಗ್ಗೆ ಮಾತನಾಡಬೇಕೆಂದು ಹೇಳಿ ರಾತ್ರಿ ಬರುವುದಾಗಿ ತಿಳಿಸಿದ್ದಾಳೆ.ಅದರಂತೆ ಕಳೆದ ಶುಕ್ರವಾರ ರಾತ್ರಿ 8.30ರಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಗುರುರಾಜ್ ಅವರ ಮನೆಗೆ ಬಂದ ಮಹಿಳೆ, ನಾನೇ ನಿಮಗೆ ದೂರವಾಣಿ ಕರೆ ಮಾಡಿದ್ದು ಎಂದು ಪರಿಚಯಿಸಿಕೊಂಡು ಒಳಗೆ ಹೋಗಿ ಅವರ ಕೈ-ಕಾಲು ಕಟ್ಟಿಹಾಕಿದ್ದಾರೆ. ಇವರ ಹಿಂದೆಯೇ ಐದಾರು ಮಂದಿ ಮನೆಯೊಳಕ್ಕೆ ನುಗ್ಗಿ ಬೀರುವಿನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಡಕಾಯಿತಿ ಮಾಡಿಕೊಂಡು ಪರಾರಿಯಾಗಿದ್ದರು.ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿತ್ತು. ಬ್ಯಾಟರಾಯನಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಸೇರಿದಂತೆ 9 ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು,ಫೆ.21-ಚೊಚ್ಚಲ ಹೆರಿಗೆಯಲ್ಲೇ ಮಹಿಳೆಯೊಬ್ಬಳು ಮೂರು ಶಿಶುಗಳಿಗೆ ಜನ್ಮದ ನೀಡಿದ ಅಪರೂಪದ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ನಡೆದಿದೆ. ರಾಜನಬೀ(23) ಎಂಬ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡು ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ತೂಕ 1.3 ಕೆಜಿ, ಒಂದು ಹೆಣ್ಣು ಮಗು 1 ಕೆಜಿ ಮತ್ತೊಂದು ಮಗು 900 ಗ್ರಾಂ ತೂಕವಿದೆ. ಸಾಮಾನ್ಯ ಹೆರಿಗೆಯಾಗಿರುವುದು ಕೂಡ ವಿಶೇಷವಾಗಿದೆ. ಆರೋಗ್ಯ ದೃಷ್ಟಿಯಿಂದ ತಾಯಿ ಮಕ್ಕಳನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಶಿಶುಗಳ ತೂಕ ಕಡಿಮೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಸೂತಿ ತಜ್ಞ ಡಾ.ನಾಗರಾಜ್ ಕಾಟಾ ಮತ್ತು ಡಾ.ಗಣೇಶ್ ತಿಳಿಸಿದ್ದಾರೆ. ಬೆಂಗಳೂರು,ಫೆ.27-ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಡೈರಿಯಲ್ಲಿ ಬಹಿರಂಗಗೊಂಡಿರುವ ಸತ್ಯಾಂಶಗಳಿಂದ ಕಾಂಗ್ರೆಸ್‍ನ ನಿಜ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೂರಿದ್ದಾರೆ. ತುಮಕೂರಿಗೆ ತೆರಳುವ ಮುನ್ನ ಟಿ.ಬೇಗೂರು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಛ , ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರ ಅಸಲಿ ಮುಖ ಜನರಿಗೆ ಗೊತ್ತಾಗಿದೆ ಎಂದು ಹರಿಹಾಯ್ದರು. ಡೈರಿಯಲ್ಲಿ ಕಾಂಗ್ರೆಸ್ ಸರ್ಕಾರದ ನೂರಾರು ಕೋಟಿ ಭ್ರಷ್ಟಾಚಾರ ಬಯಲಾಗಿದೆ. ಇದರ ಸತ್ಯಾಂಶ ಹೊರ ಬರಬೇಕಾದರೆ ಸಿಬಿಐ ತನಿಖೆಯಿಂದ ಮಾತ್ರ ಸಾಧ್ಯ. ತಕ್ಷಣವೇ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಲಿ ಎಂದು ಒತ್ತಾಯಿಸಿದರು. ತಾವು ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಜನತೆ ಮುಂದೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಚಿವರಿಂದ ನೂರಾರು ಕೋಟಿ ಹಣ ಸಂಗ್ರಹಿಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‍ಗೆ ನೀಡಿರುವುದು ಡೈರಿಯಲ್ಲಿ ಪ್ರಸ್ತಾಪವಾಗಿದೆ. ಹಾಗಿದ್ದರೂ ಏನೂ ಆಗಿಯೇ ಇಲ್ಲ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಡೈರಿಯಲ್ಲಿ ಕಾಂಗ್ರೆಸ್‍ನ ಭ್ರಷ್ಟಾಚಾರ ಬಟಬಯಲಾಗಿದೆ. ಇದರ ಬಗ್ಗೆ ಮಾತನಾಡದ ಕಾಂಗ್ರೆಸ್ ನಾಯಕರು ಡೈರಿ ಎಲ್ಲಿಂದ ಬಂತು, ಹೇಗೆ ಸಿಕ್ಕಿತು. ಯಾರು ಕೊಟ್ಟಿದ್ದಾರೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಮೊದಲು ಭ್ರಷ್ಟಾಚಾರ ನಡೆದಿದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು. ಸ್ಟೀಲ್ ಬ್ರಿಡ್ಜ್ ಕಾಮಗಾರಿಯಲ್ಲಿ 65 ಕೋಟಿ ಮುಖ್ಯಮಂತ್ರಿಗೆ ಸಂದಾಯವಾಗಿದೆ ಎಂಬುದಕ್ಕೆ ಡೈರಿಯೇ ಸಾಕ್ಷಿ. ನಾನು ಇದನ್ನು ಬಹಿರಂಗಪಡಿಸಿದ್ದಕ್ಕೆ ಅನೇಕರು ಬಾಯಿಗೆ ಬಂದಂತೆ ಮಾತನಾಡಿದರು. ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದ ವಿರುದ್ದ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿರುವ ಡೈರಿ ಕಾಂಗ್ರೆಸ್‍ನ ಸುಳ್ಳಿನ ಕಂತೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಇಂತಹ ನೀಚ ಕೃತ್ಯ ಎಸಗಲಾಗಿದೆ. ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಗುಡುಗಿದರು. ರಾಜ್ಯಾದ್ಯಂತ ಕಾಂಗ್ರೆಸ್‍ನ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಾಗುವುದು. ಸುಮಾರು ಒಂದು ಸಾವಿರ ಕೋಟಿ ಹಣವನ್ನು ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಹೈಕಮಾಂಡ್‍ಗೆ ತಲುಪಿಸಿದ್ದಾರೆ. ಬಿಬಿಎಂಪಿಯಲ್ಲೂ ಕೂಡ ಮೂರುವರೆ ಸಾವಿರ ಕೋಟಿ ಭ್ರಷ್ಟಾಚಾರ ನಡೆಸಲಾಗಿದೆ. ಜನತೆಯ ತೆರಿಗೆ ಹಣವನ್ನೇ ಅನೇಕರು ನುಂಗಿ ಹಾಕಿದ್ದಾರೆ. ಇದರ ದಾಖಲೆಗಳು ನನ್ನ ಬಳಿ ಇವೆ. ಮೂರ್ನಾಲ್ಕು ದಿನದಲ್ಲೇ ಪತ್ರಿಕಾಗೋಷ್ಠಿ ಕರೆದು ಬಹಿರಂಗಪಡಿಸುವುದಾಗಿ ಹೇಳಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿರುವ ಹಗರಣಗಳು ಒಂದೊಂದಾಗೆ ಹೊರಬರುತ್ತಿವೆ. ಇದರ ವಿರುದ್ಧ ಜನತೆಯ ಬಳಿ ತೆರಳುವೆ. ಕಾಂಗ್ರೆಸ್‍ನ ನಿಜಬಣ್ಣ ಬಯಲು ಮಾಡುವವರೆಗೂ ತಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
OSCAR-2019
ಕೋಲಾರ,ಸೆ.15- ವರ್ತಕರ ಮೇಲೆ ಲಘು ಲಾಠಿ ಪ್ರಹಾರ, ಕೋಲಾರ ಜಿಲ್ಲೆ ಕೆಜಿಎಫ್ ನಲ್ಲಿ ಘಟನೆ, ಕೆಜಿಎಫ್ ನಗರಸಭೆಗೆ ಸೇರಿದ, ಎಂ.ಜಿ ಮಾರುಕಟ್ಟೆ ಮಳಿಗೆಗಳ ಹರಾಜು ಪ್ರಕ್ರಿಯೆ ವಿರೋಧಿಸಿ ಹುಬ್ಬಳ್ಳಿ,ಸೆ,11- ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ಘಟನೆ. ಹಲವರಿಗೆ ಜೇನು ಕಡಿತ. ಶಾಸಕ ಎನ್.ಎಚ್.ಕೋನರೆಡ್ಡಿ ಆಯೋಜನೆ ಮಾಡಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದವರ ಮೇಲೆ ಜೇನು ದಾಳಿ. ಶಾಸಕ ಕೋನರೆಡ್ಡಿ ಮಡಿಕೇರಿ, ಆ.29- ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಬಂದಿದ್ದ ಇಬ್ಬರು ಯುವತಿಯರನ್ನು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಸ್ಥಳೀಯರು ಈ ಘಟನೆಯಿಂದ ಆತಂಕಗೊಂಡಿದ್ದಾರೆ. ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ
OSCAR-2019
ಅನೇಕ ವರ್ಷಗಳ ನಂತರ ಮತ್ತೊಂದು ಮೂಕಿ ಸಿನಿಮಾ ನಾಳೆಯಿಂದ ಬಿಡುಗಡೆ ಆಗುತ್ತಿದೆ. ಅದೇ ‘ಪರಿಧಿ’ ? ಮ್ಯಾಡ್ ಕ್ರಿಯೇಷನ್ ಅಡಿಯಲ್ಲಿ ಚಿತ್ರದ ಕಥಾ ನಾಯಕ ಐಷಾರಾಮಿ ಜೀವನದ ಆಸೆಗೆ ಬಲಿಯಾಗಿ ಗೊತ್ತಿಲ್ಲದ ಹಾಗೆ ಅಪರಾದ ಜಗತ್ತಿಗೆ ಕಾಲಿಡುತ್ತಾನೆ. ಚಿತ್ರ ವಿಚಿತ್ರ ಘಟನೆಗಳು ಅವನ ಸುತ್ತ ಜರುಗಲಿದೆ. ಸಿಲುಕಿರುವ ವರ್ತುಲದಿಂದ ಹೇಗೆ ಪಾರಾಗುತ್ತಾನೆ ಎಂಬುದನ್ನೂ ಮಾತಿಲ್ಲದೆ ನಿರ್ದೇಶಕ ಎಸ್ ಬಿ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಹೇಳಿದ್ದಾರೆ. ನಂದಕುಮಾರ್ ಈ ಚಿತ್ರದ ನಿರ್ಮಾಪಕರು. ಜೀವ ಆಂಟೋನಿ ಛಾಯಾಗ್ರಹಣ, ನಿತಿಶ್ ಕುಮಾರ್ ಸಂಕಲನ, ಹಿನ್ನಲೆ ಸಂಗೀತ ಸೂರಜ್ ಮಹಾದೇವ್ ಒದಗಿಸಿದ್ದಾರೆ. ‘ಪರಿಧಿ’ ಚಿತ್ರದಲ್ಲಿ ರಾಜ್ ಕಿರಣ್, ದಿವ್ಯ, ನಿಶ, ಅಮರನಾಥ್, ಚಂದ್ರಶೇಖರ್, ಭದ್ರಾವತಿ ಶ್ರೀನಿವಾಸ್ ಹಾಗೂ ಮಂಜುಳ ಅಭಿನಯ ನೀಡಿದ್ದಾರೆ.
OSCAR-2019
ನಿತ್ಯ ನೀತಿ : ಮನುಷ್ಯ ದೇಹವೇ ದುರ್ಲಭ. ಅದೂ ಸಹ ಕ್ಷಣಿಕವಾದದ್ದು. ಹೀಗಿರುವಾಗ ಈ ದೇಹದಲ್ಲಿ ಭಗವದ್ಭಕ್ತರ ದರ್ಶನವಾಗುವುದು ಅತ್ಯಂತ ವಿರಳ. -ಭಾಗವತ ಬೆಂಗಳೂರು, ಮಾ.9-ಆಟವಾಡುತ್ತಾ ನೀರಿನ ಸಂಪ್‍ಗೆ ಬಿದ್ದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಗಂಧ ನಗರದ ಹೆಗ್ಗನಹಳ್ಳಿಯ ದೇವೇಂದ್ರ-ಅಂಜಲಿ ಎಂಬುವರ ಪುತ್ರಿ ಹರಿಪ್ರಿಯಾ (6) ಮೃತಪಟ್ಟ ಬಾಲಕಿ. ಇವರ ಮನೆಯಲ್ಲಿದ್ದ ಸಂಪ್‍ನಿಂದ ನೀರು ತೆಗೆದುಕೊಳ್ಳಲು ಪಕ್ಕದ ಮನೆಯವರು ಮುಚ್ಚಳ ತೆಗೆದು ಒಂದು ಬಿಂದಿಗೆ ನೀರು ತೆಗೆದುಕೊಂಡು ಮುಚ್ಚಳ ಹಾಕದೆ ಹಾಗೆಯೇ ಬಿಟ್ಟು ಹೋಗಿದ್ದಾಗ, ಈ ಮಗು ಆಟವಾಡುತ್ತಾ ಸಂಪ್‍ನಲ್ಲಿ ಬಿದ್ದಿದೆ. ಮನೆಯವರು ತಕ್ಷಣ ಗಮನಿಸಿ ಮಗುವನ್ನು ಸಂಪ್‍ನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಬಾಲಕಿ ಹರಿಪ್ರಿಯಾ ಎಲ್‍ಕೆಜಿ ವ್ಯಾಸಂಗ ಮಾಡುತ್ತಿದ್ದಳು. ಮಗುವಿನ ಸಾವಿನಿಂದ ಪೋಷಕರು ಹಾಗೂ ನೆರೆಹೊರೆಯವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ರಾಜಗೋಪಾಲ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
OSCAR-2019
ಶ್ರೀನಗರ (ಪಿಟಿಐ): ಲಡಾಖ್ ಪ್ರದೇಶದಲ್ಲಿ ಶೀತ ಗಾಳಿ ತೀವ್ರತೆ ಅಧಿಕವಾಗಿದ್ದು, ಕಾಶ್ಮೀರ ಕಣಿವೆ ಚಳಿಯಿಂದ ಥರಗುಟ್ಟುತ್ತಿದೆ. ಇಲ್ಲಿನ ಪಹಲ್ಗಾಂ ಮತ್ತು ಗುಲ್ಮಾರ್ಗ್ ಪ್ರವಾಸಿ ಕೇಂದ್ರಗಳಲ್ಲಿ ಮೈನಸ್ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕಾರ್ಗಿಲ್‌ನಲ್ಲಿ ಮಂಗಳವಾರ ರಾತ್ರಿ ಮೈನಸ್ 22 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಲಡಾಕ್ ಮತ್ತು ಲೇಹ್‌ಗಳಲ್ಲಿ ಮೈನಸ್ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣತೆ ಕಂಡುಬಂದಿದೆ. ಶ್ರೀನಗರ, ಕೊಕೆರ್ನಾಗ್ ಮತ್ತು ಕ್ಯೂಜಿಗುಂಡ್‌ಗಳಲ್ಲಿಯೂ ಚಳಿ ಉಲ್ಬಣಗೊಂಡಿದೆ. ರಾಜಸ್ತಾನದಲ್ಲಿ ತಗ್ಗಿದ ಚಳಿ: ಜೈಪುರ (ಪಿಟಿಐ): ರಾಜಸ್ತಾನದಲ್ಲಿ ಚಳಿಯ ತೀವ್ರತೆ ಕಡಿಮೆಯಾಗಿದ್ದು ಜನರಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ. ಬಿಕನೇರ್‌ನಲ್ಲಿ ಕನಿಷ್ಠ 4.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶ್ರೀ ಗಂಗಾನಗರ ಮತ್ತು ಚುರು ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 4.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಜೈಪುರದಲ್ಲಿ 5.6 ಡಿಗ್ರಿ ಕನಿಷ್ಠ ಉಷ್ಣತೆ ಇತ್ತು. ಮೋಡದ ವಾತಾವರಣ ರೂಪುಗೊಳ್ಳುತ್ತಿದ್ದು, ರಾತ್ರಿ ಉಷ್ಣತೆ ಮುಂದಿನ ಎರಡು ದಿನಗಳಲ್ಲಿ ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಹಿಮಪಾತ: ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಆಳಿತ ಜಿಲ್ಲೆ ತವಾಂಗ್ ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಭಾರಿ ಹಿಮಪಾತ ಜನಜೀವನಕ್ಕೆ ಅಡ್ಡಿಯಾಗಿದೆ. ಪಶ್ಚಿಮ ಕಮಾಂಗ್, ಪಶ್ಚಿಮ ಸಿಯಾಂಗ್ ಮತ್ತು ಸಿಬಾಂಗ್ ಕಣಿವೆ ಜಿಲ್ಲೆಗಳಲ್ಲಿ ಸಹ ಹಿಮಪಾತ ತೀವ್ರವಾಗಿದೆ. ತವಾಂಗ್ ಪಟ್ಟಣದಾದ್ಯಂತ ಮಂಗಳವಾರದಿಂದಲೂ ಸುಮಾರು ಏಳು ಅಡಿಗಳಷ್ಟು ಹಿಮ ಆವರಿಸಿದೆ. ಇದರಿಂದ ಸಾರಿಗೆ ಮತ್ತು ಸಂವಹನ ಸಂಪರ್ಕ, ನೀರು ಸರಬರಾಜು, ವಿದ್ಯುತ್ ಮತ್ತು ದೂರವಾಣಿ ಸಂಪರ್ಕಗಳಿಗೆ ಅಡಚಣೆಯಾಗಿದೆ. ಅನೇಕ ಪ್ರವಾಸಿಗರು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಎಂದು ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ನಿರ್ದೇಶಕ ಲೇಕಿ ಪುಂಟ್ಸೋ ತಿಳಿಸಿದ್ದಾರೆ.
OSCAR-2019
ಇದು ಹಬ್ಬದ ತಿಂಗಳು. ಮೊದಲು ಗೌರಿ-ಗಣೇಶ ಹಬ್ಬ. ನಂತ್ರ ನವರಾತ್ರಿ. ಹಬ್ಬದ ಸಂಭ್ರಮದಲ್ಲಿರುವ ಭಾರತೀಯರು ಶಾಪಿಂಗ್ ಮಾಡುವ ಮೂಡ್ ನಲ್ಲಿದ್ದಾರೆ. ಹೊಸ ಹಬ್ಬಕ್ಕೆ ಹೊಸ ಬಟ್ಟೆ, ವಸ್ತುಗಳ ಖರೀದಿ ಶುರು ಮಾಡಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಆನ್ಲೈನ್ ಶಾಪಿಂಗ್ ಸೈಟ್ ಗಳು ಸಿಕ್ಕಾಪಟ್ಟೆ ಆಫರ್ ನೊಂದಿಗೆ ಗ್ರಾಹಕರ ಮುಂದೆ ಬಂದಿವೆ. ಒಂದೊಂದು ಕಂಪನಿ ಒಂದೊಂದು ಆಫರ್ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡ್ತಿದೆ. ಪೈಪೋಟಿ ಮೇಲೆ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಹಬ್ಬದ ಸಂದರ್ಭದಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆಯಿದೆ. ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಸ್ನ್ಯಾಪ್ ಡೀಲ್ ಸೇರಿದಂತೆ ಹಲವು ಕಂಪನಿಗಳು ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದ್ದು. ಇದರ ಸಂಪೂರ್ಣ ಲಾಭ ಪಡೆಯಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ. ರಾಸಲೀಲೆ ಪ್ರಕರಣ: ನಟಿ ಕುಟುಂಬಕ್ಕೆ ಜೀವ ಬೆದರಿಕೆ | Kannada Dunia | Kannada News | Karnataka News | India News ಶಿವಮೊಗ್ಗ: ಬೆಂಗಳೂರು ಮದ್ದೇವಣಾಪುರ ಮಠದ ದಯಾನಂದ ಸ್ವಾಮೀಜಿ ಜೊತೆ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿಯ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ. ನಟಿಯ ಸಹೋದರ ಕೃಷ್ಣ ಆಚಾರ್ಯ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಂಗಳೂರಿನಿಂದ ತೀರ್ಥಹಳ್ಳಿಗೆ ನಟಿಯ ಸಹೋದರ ಕೃಷ್ಣ ಮತ್ತು ಅವರ ತಾಯಿ ಕಾರಿನಲ್ಲಿ ಬರುವಾಗ, ಶಿವರಾಜಪುರ ಬಳಿ ಒಮಿನಿಯಲ್ಲಿ ಬಂದಿದ್ದ 5 ಮಂದಿ ದುಷ್ಕರ್ಮಿಗಳು ಕಾರಿಗೆ ಅಡ್ಡ ಹಾಕಿದ್ದಾರೆ. ನಟಿ ಎಲ್ಲಿ ಎಂದು ಪ್ರಶ್ನಿಸಿದ್ದು, ಅವರು ಕಾರಿನಲ್ಲಿಲ್ಲದ ಕಾರಣ ಸಹೋದರನ ಮೇಲೆ ಹಲ್ಲೆ ಮಾಡಿ, ದಯಾನಂದ ಸ್ವಾಮಿ ಪ್ರಕರಣದಲ್ಲಿ ಯಾರ ವಿರುದ್ಧವೂ ದೂರು ಕೊಡದಂತೆ ಬೆದರಿಕೆ ಹಾಕಿದ್ದಾರೆ. ಕೃಷ್ಣ ಮತ್ತು ಅವರ ತಾಯಿ ಜೋರಾಗಿ ಕಿರುಚಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ತಮ್ಮನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ದೂರು ನೀಡುವುದಾಗಿ ನಟಿ ತಿಳಿಸಿದ್ದು, ಇದಾದ ಬಳಿಕ ಅವರ ಕುಟುಂಬದ ಮೇಲೆ ದುಷ್ಕರ್ಮಿಗಳು ಕಣ್ಣಿಟ್ಟಿದ್ದಾರೆ. ವಕೀಲರನ್ನು ಭೇಟಿ ಮಾಡಿ ಮಂಗಳೂರಿನಿಂದ ವಾಪಸ್ ಬರುವಾಗ ದುಷ್ಕರ್ಮಿಗಳು ಅಡ್ಡಹಾಕಿ ಬೆದರಿಸಿದ್ದಾರೆ. ಘಟನೆಯ ಕುರಿತು ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
OSCAR-2019
ಹೌದು. ಬಾರ್ ಒಂದರಲ್ಲಿ ಕುಡಿಯುತ್ತಾ ಕುಳಿತಿದ್ದ ಒಬ್ಬ ಪಾಶ್ಚಾತ್ಯ ಸಂಗೀತದ ಜಗತ್ತಿಗೆ ಒಬ್ಬ ಹಾಡುಗಾರನನ್ನು ಹುಡುಕಿಕೊಟ್ಟರು! ಆ ಕುತೂಹಲಕಾರೀ ಘಟನೆ ಹೀಗಿದೆ: ಕಳೆದ ಶತಮಾನದ ಆರಂಭ ಕಾಲದಲ್ಲಿ…
OSCAR-2019
ಬೆಳಗಾವಿ: ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ ಪ್ರಕರಣವೊಂದನ್ನು ಭೇದಿಸಿರುವ ನಿಪ್ಪಾಣಿ ಪೊಲೀಸರು ಇಬ್ಬರನ್ನು ಬಂಧಿಸಿ 27.70 ಲಕ್ಷ ರೂ.ನಗದು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಟ್ಟಣದ ಮಂಜುನಾಥ ಭಜಂತ್ರಿ (27)... ಬಸ್, ಲಾರಿ ನಡುವೆ ಮುಖಾಮುಖಿ ಡಿಕ್ಕಿ! - ಬಸ್‍ನಲ್ಲಿದ್ದ 15ಜನರಿಗೆ ಗಾಯ ಆಸ್ಪತ್ರೆಗೆ ದಾಖಲು - ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಬಳಿ ಘಟನೆ ವರದಿ: ಅಜಯ್ ಕೌಶಿಕ್ ಮೂಡಿಗೆರೆ: ಮೂಡಿಗೆರೆ ತಾಲೂಕಿನ್ ಹಾಂದಿ ಗ್ರಾಮದಲ್ಲಿ ಅ.17ರ ಬುಧವಾರ... ಅಜಾತ ಶತ್ರು ವಾಜಪೇಯಿಯವರಿಗೆ ವಿದ್ಯಾರ್ಥಿನಿಯರಿಂದ ಭಾವಪೂರ್ಣ ಶ್ರದ್ದಾಂಜಲಿ! ಮಾಜಿ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ಶ್ರೀಮತಿ ಎ.ಎ.ಪಾಟೀಲ‌ ಮಹಿಳಾ ವಿದ್ಯಾಲಯದ ದೇಶಪಾಂಡೆ ಲೀಡ್ ವಿಭಾಗದ ವಿದ್ಯಾರ್ಥಿನಿಯರಿಂದ ಬಸವ ಸರ್ಕಲಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ... ಅಂತೂ ಬಾಗಲಕೋಟೆ ಜಿಲ್ಲೆ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹಗ್ಗ ಜಗ್ಗಾಟ ಸದ್ಯಕ್ಕೆ ಮುಕ್ತಾಯವಾಗಿದೆ.ಸತತ ಐದು ತಾಸುಗಳ ಕಾಲ ನಡೆದ ಸಭೆ ಕಬ್ಬು ಬೆಳೆಗಾರರಿಗೆ ತೃಪ್ತಿದಾಯಕವಾಗಿ ಅಂತ್ಯ ಕಂಡಿದೆ.ಜಿಲ್ಲಾಧಿಕಾರಿಗಳ... ಜಿಲ್ಲೆಯಲ್ಲಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ. ನಗರದ ಜೋಡಿ ರಸ್ತೆಯಲ್ಲಿರುವ ಲೀಡ್ ಬ್ಯಾಂಕ್ ಮುಂಭಾಗದಲ್ಲಿ ಜಮಾಯಿಸಿದ ಕರ್ನಾಟಕ ಸೇನಾಪಡೆಯ ಕಾರ್ಯಕರ್ತರು, ಕನ್ನಡ ವಿರೋಧಿ ಸರ್ಕಾರ, ಜಿಲ್ಲಾಡಳಿತಕ್ಕೆ... ಮಂಗಳೂರು ನವೆಂಬರ್ 14:ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಜೊತೆಗಿದ್ದ ಯುವಕನೊಬ್ಬ ನಿಗೂಢವಾಗಿ ಕಣ್ಮರೆಯಾದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಯುವಕ ಕಣ್ಮರೆ ಯಾಗುವುದರ ಹಿಂದೆ ಮಾಜಿ ಪಿಎಸ್ಐ ಕೈವಾಡವಿರುವುದಾಗಿ ಯುವಕನ ಪೋಷಕರು ಆರೋಪಿಸಿದ್ದಾರೆ. ಕಳೆದ ವಿಧಾನಸಭಾ... ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ನಟಿ ಶ್ರುತಿ ಹರಿಹರನ್ ಅವರು ಹೈಕೋರ್ಟ್... ಬೆಳಗಾವಿ: ಅಧಿಕ ಬೆಲೆ ನಿಗದಿಪಡಿಸದೆ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ಅರೆಯಲು ಆರಂಭಿಸಿರುವುದನ್ನು ವಿರೋಧಿಸಿ ನಾಳೆ ಕಬ್ಬು ಬೆಳೆಗಾರರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರು ನಾಳೆ ಧರಣಿ ನಡೆಸಲು ಮುಂದಾಗಿದ್ದಾರೆ. ಕಳೆದ ಎರಡು ವಾರಗಳಿಂದ ಅಥಣಿ... ಬೆಂಗಳೂರು: ನಗರದ ಅಪಾರ್ಟ್'ಮೆಂಟ್'ವೊಂದರಲ್ಲಿ ಅಳವಡಿಸಿದ್ದ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಫ್ರೇಜರ್ ಟೌನ್'ನ ಎಂ.ಎಂ.ರಸ್ತೆಯ ಸಿಲ್ವರ್ ನೆಸ್ಟ್ ಅಪಾರ್ಟ್'ಮೆಂಟ್... ಬೆಂಗಳೂರು: "ಗಂಡ ಹೆಂಡತಿ" ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ತಣ್ಣಗಾಗಿದ್ದಾರೆ. ಸಂಜನಾ ತಮ್ಮ ಆರೋಪದ ಕುರಿತು ಸಾರ್ವಜನಿಕವಾಗಿ ಕ್ಷಮೆ... ಗೋಣಿಕೊಪ್ಪ(ಮಡಿಕೇರಿ): ಟಿಪ್ಪು ಜಯಂತಿ ವಿರೋಧಿಸುವ ನೆಪದಲ್ಲಿ ಧರ್ಮ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಪತ್ರಕರ್ತ, ಪ್ರಸಿದ್ದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಗೋಣಿಕೊಪ್ಪ ಪೋಲೀಸರು ಬಂಧಿಸಿದ್ದಾರೆ. ಸಂತೋಷ್ ತಮ್ಮಯ್ಯ ವಿಚಾರಣೆ ನಡೆಸಿದ ಪೋಲೀಸರು ಪೊನ್ನಂಪೇಟೆ ನ್ಯಾಯಾಲಯಕ್ಕೆ... ಬೆಂಗಳೂರು, ನವೆಂಬರ್ 13: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ, ಸದಾ ಹಸನ್ಮುಖಿಯಾಗಿ, ಸ್ನೇಹಜೀವಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೇ. ಶ್ವಾಸಕೋಶದ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿದ್ದ ಅವರು, ಚಿಕಿತ್ಸೆ... ಬೆಂಗಳೂರು, ನ.13-ವಾಹನಗಳ ದಾಖಲೆ, ಪರವಾನಗಿ ಪತ್ರ ವಾಹನದಲ್ಲಿ ಇಲ್ಲ ಎಂಬ ಕಾರಣಕ್ಕೆ ದಂಡ ಪಾವತಿಸುವ ಸವಾರರು ಮತ್ತು ವಾಹನ ಚಾಲಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ವಾಹನ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ತೋರಿಸಲು ಅವಕಾಶ...
OSCAR-2019
ಕೆಲವರ ತ್ವಚೆಯು ತುಂಬಾ ಒಣಗಿರುವಂತೆ ಇರುವುದು. ಏನೇ ಮಾಯಿಶ್ಚರೈಸರ್ ಬಳಸಿಕೊಂಡರೂ ಇದು ಕೆಲಸ ಮಾಡಲ್ಲ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಮಾಯಿಶ್ಚರೈಸರ್ ನ್ನು ಬಳಸಿಕೊಂಡು ಫಲಿತಾಂಶ ಸಿಗದೇ ಇರಬಹುದು. ಆದರೆ ಇಂತಹ ಮಾಯಿಶ್ಚರೈಸರ್ ಗಳಲ್ಲಿ ರಾಸಾಯನಿಕವು ಕಟ್ಟಿಟ್ಟ ಬುತ್ತಿ. ಇದು ತ್ವಚೆಗೆ ಮತ್ತಷ್ಟು ಹಾನಿಯುಂಟು ಮಾಡುವುದು. ಆದರೆ ಈ ಲೇಖನದಲ್ಲಿ ನಾವು ನಿಮಗೆ ನೈಸರ್ಗಿಕವಾಗಿ ಸಿಗುವಂತಹ ತೆಂಗಿನೆಣ್ಣೆಯ ಲೋಷನ್ ಮಾಡಿಕೊಂಡು ಬಳಸುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ನಮ್ಮ ಚರ್ಮಕ್ಕೆ ನಿಯಮಿತವಾಗಿ ಮಾಯಿಶ್ಚರೈಸರ್ ಮತ್ತು ತೇವಾಂಶವು ಬೇಕಾಗುವುದು. ಈ ವೇಳೆ ಬಾಡಿ ಲೋಷನ್ ನಮ್ಮ ನೆರವಿಗೆ ಬರುವುದು. ಚರ್ಮವನ್ನು ಕಠಿಣ ಹವಾಮಾನಕ್ಕೆ ಒಡ್ಡುವುದರಿಂದ ಚರ್ಮವು ತುಂಬಾ ನಿಸ್ತೇಜ ಹಾಗೂ ಒಣಗುವುದು. ಒಣ ಹಾಗೂ ತೊಗಲು ಏಳುವಂತ ಚರ್ಮಕ್ಕೆ ಶಮನ ನೀಡುವುದು ಮಾತ್ರವಲ್ಲದೆ, ಚರ್ಮವನ್ನು ಪುನಶ್ಚೇತನಗೊಳಿಸಿ, ಕಾಂತಿ ನೀಡುವುದು. ಬಾಡಿ ಲೋಷನ್ ಚರ್ಮವನ್ನು ತಾಜಾವಾಗಿಡುವುದು ಮತ್ತು ಇದು ಸುವಾಸನೆಯನ್ನು ಉಂಟು ಮಾಡುವುದು. 6. ಮೆತ್ತಗಿನ ಪೇಸ್ಟ್ ತಯಾರಾದ ಬಳಿಕ ನೀವು ಇದಕ್ಕೆ ಕೆಲವು ಹನಿ ಸಾರಭೂತ ತೈಲ ಹಾಕಿಕೊಳ್ಳಿ. ಇದರಿಂದ ಒಳ್ಳೆಯ ಸುವಾಸನೆ ಬರುವುದು. 7. ಈ ಲೋಷನ್ ನ್ನು ಗಾಜಿನ ಡಬ್ಬಕ್ಕೆ ಹಾಕಿ ಮುಚ್ಚಳ ಬಿಗಿಯಾಗಿ ಮುಚ್ಚಿ ಮತ್ತು ಇದನ್ನು ನೀವು ಶೌಚಾಲಯ ಅಥವಾ ನಿಮಗೆ ಬೇಕಾದಲ್ಲಿ ಇದನ್ನು ಇಡಬಹುದು. ತೆಂಗಿನೆಣ್ಣೆಯು ಶತಮಾನಗಳಿಂದಲೂ ಹಲವಾರು ರೀತಿಯ ತ್ವಚೆಯ ಸಮಸ್ಯೆಗೆ ಪರಿಹಾರವನ್ನು ನೀಡುತ್ತಲಿದೆ. ಇದರಿಂದಾಗಿ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಇದನ್ನು ಬಳಸಲಾಗುತ್ತದೆ. ತೆಂಗಿನೆಣ್ಣೆಯಲ್ಲಿ ವಿಟಮಿನ್ ಎ, ಇ ಮತ್ತು ಡಿ ಇದ್ದು, ಇತರ ಪ್ರಮುಖ ಅಮಿನೋ ಆಮ್ಲಗಳು ಚರ್ಮಕ್ಕೆ ಲಾಭವಾಗುವುದು. ತೆಂಗಿನೆಣ್ಣೆಯಲ್ಲಿ ಲಾರಿಕ್ ಮತ್ತು ಮೈರಿಸ್ಟಿಕ್ ಎನ್ನುವ ಎರಡು ಕೊಬ್ಬಿನಾಮ್ಲಗಳಿವೆ. ಇದು ತ್ವಚೆಯ ಆರೈಕೆಗೆ ತುಂಬಾ ಪರಿಣಾಮಕಾರಿ. ಒಣಚರ್ಮ, ತೊಗಲು ಎದ್ದು ಬರುವ ಚರ್ಮಕ್ಕೆ ಪರಿಹಾರ ನೀಡಿ, ಮೊಶ್ಚಿರೈಸ್ ನೀಡುವುದು. ದೈನಂದಿನ ಸೌಂದರ್ಯವರ್ಧಕದಲ್ಲಿ ವಿಟಮಿನ್ ಇ' ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ವಿಟಮಿನ್ ಇ' ಯನ್ನು ಕೂದಲಿನ ಆರೈಕೆ ಮತ್ತು ಸೌಂದರ್ಯವರ್ಧಕವಾಗಿ ಮಾಸ್ಕ್ ಮತ್ತು ಲೋಷನ್ ಗಳಲ್ಲಿ ಬಳಸಲಾಗುತ್ತದೆ. ವಿಟಮಿನ್ ಇ' ಯಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಚರ್ಮವನ್ನು ಪುನಶ್ಚೇತನಗೊಳಿಸುವುದು ಮತ್ತು ತೇವಾಂಶ ಕಾಪಾಡುವುದು. ಮೊಶ್ಚಿರೈಸ್ ಇರುವಂತೆ ನೋಡಿಕೊಂಡು ನಿಸ್ತೇಜ ಮತ್ತು ಹಾನಿಗೀಡಾದ ಚರ್ಮಕ್ಕೆ ನೆರವಾಗುವುದು. ವಿಟಮಿನ್ ಇ' ತೈಲವನ್ನು ಹಾಗೆ ಅಥವಾ ಕ್ಯಾಪ್ಸೂಲ್ ನಿಂದ ಪಡೆಯಬಹುದು.
OSCAR-2019
ಸ್ಯಾಂಡಲ್​ವುಡ್ ನಟ ದರ್ಶನ್ ತನ್ನ ಫ್ಯಾನ್ಸ್​ ಪೇಜ್ ಅಡ್ಮಿನ್​ಗಳನ್ನು ಮನೆಗೆ ಕರೆಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕಿತ್ತಾಟ ತಾರಕ್ಕೇರುತ್ತಿರುವುದು ದರ್ಶನ್ ಗಮನಿಸಿದ್ದು, ಈ ಬಗ್ಗೆ ಅಡ್ಮಿನ್​ಗಳೊಂದಿಗೆ ಚರ್ಚಿಸಿ ಕಿವಿಮಾತು ಹೇಳಿದ್ದಾರೆ. ನನ್ನ ಹೆಸರಿನ ಪೇಜ್​ಗಳಲ್ಲಿ ಯಾವುದೇ ನಟರನ್ನು ಹೀಯಾಳಿಸಿ ಪೋಸ್ಟ್​ಗಳನ್ನು ಹಾಕಬೇಡಿ ಎಂದು ದರ್ಶನ್ ಸೂಚಿಸಿದ್ದಾರೆ. ಎಲ್ಲರೂ ಒಟ್ಟಾಗಿ ಕೈ ಜೋಡಿಸಿದರೆ ಮಾತ್ರ ಕನ್ನಡ ಚಿತ್ರರಂಗ ಬೆಳವಣಿಗೆ ಆಗುತ್ತದೆ. ಯಾವುದೇ ಕಾರಣಕ್ಕೂ ನನ್ನ ಅಭಿಮಾನಿಗಳು ಇತರೆ ನಟ-ನಟಿಯರನ್ನು ಟ್ರೋಲ್ ಮಾಡುವುದಾಗಲಿ, ಅವರ ಹೆಸರು ಬಳಸಿ ಕಿತ್ತಾಡುವುದಾಗಲಿ ಮಾಡಬಾರದು ಎಂದು ಅಡ್ಮಿನ್​ಗಳಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ ಇತರೆ ನಟರ ಅಭಿಮಾನಿಗಳಿಗೆ ನೋವಾಗುವಂತಹ ಯಾವುದೇ ಪೋಸ್ಟ್​ಗಳನ್ನು ನನ್ನ ಅಭಿಮಾನಿಗಳ ಪುಟದಲ್ಲಿ ಶೇರ್ ಆಗದಂತೆ ನೋಡಿಕೊಳ್ಳಬೇಕೆಂದು ದರ್ಶನ್ ತಿಳಿಸಿದ್ದಾರೆ. ಸಾಮಾಜಿಕ ತಾಣದಲ್ಲಿ ಕಾಣಿಸಿಕೊಂಡ 'ಬಾಸ್' ವಿವಾದ ಹಲವು ಆಯಾಮಗಳನ್ನು ಪಡೆದುಕೊಂಡಿತ್ತು. ಇಲ್ಲಿ ನಟ ಶಿವರಾಜ್ ಕುಮಾರ್, ಯಶ್ ಹೆಸರುಗಳು ಕೇಳಿ ಬಂದು ಅಭಿಮಾನಿಗಳ ನಡುವೆ ವಿತಂಡ ವಾದಗಳು ಹುಟ್ಟಿಕೊಂಡಿದ್ದವು. ಅಷ್ಟೇ ಅಲ್ಲದೆ ನಟರ ಹೆಸರಿನಲ್ಲಿ ಅಭಿಮಾನಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ದರ್ಶನ್ ಅವರಿಗೆ ನೋವುಂಟು ಮಾಡಿತ್ತು. ಇಂತಹ ಹಲವು ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ ನಟ ದರ್ಶನ್ ಖುದ್ದು ಅಭಿಮಾನಿ ಪಡೆಗಳ ಮುಖ್ಯಸ್ಥರನ್ನು ಕರೆಸಿ ಮಾತನಾಡಿದ್ದಾರೆ. ಚಾಲೆಂಜಿಂಗ್​ ಸ್ಟಾರ್ ಅವರ ಈ ನಡೆಯು ಕನ್ನಡ ಚಿತ್ರರಂಗದ ಪಾಲಿಗೆ ಒಳ್ಳೆಯ ಬೆಳವಣಿಗೆ ಎನ್ನಬಹುದು. 'ಕುರುಕ್ಷೇತ್ರ' ಸಿನಿಮಾವನ್ನು ಪೂರ್ತಿಗೊಳಿಸಿರುವ ಚಾಲೆಂಜಿಂಗ್ ಸ್ಟಾರ್ ಸದ್ಯ 'ಯಜಮಾನ'ನ ಚಿತ್ರೀಕರಣದಲ್ಲಿದ್ದಾರೆ. ಇದರ ನಡುವೆ 'ಚೌಕ' ಚಿತ್ರದ ಬಳಿಕ ತರುಣ್ ಸುಧೀರ್ ಆ್ಯಕ್ಷನ್ ಕಟ್​ ಹೇಳಲಿರುವ 'ರಾಬರ್ಟ್'​ ಚಿತ್ರಕ್ಕೆ ದರ್ಶನ್ ನಾಯಕ ಎಂಬ ಮಾತುಗಳು ಕೇಳಿ ಬರುತ್ತಿದೆ. 'ಚೌಕ'ದಲ್ಲಿ 'ರಾಬರ್ಟ್'​ ಎಂಬ ವಿಶೇಷ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ಇದುವೇ ಚಾಲೆಂಜಿಂಗ್ ಸ್ಟಾರ್​ ಅವರ 53 ನೇ ಚಿತ್ರದ ಟೈಟಲ್ ಆಗಲಿದೆ ಎನ್ನಲಾಗುತ್ತಿದೆ.
OSCAR-2019
ಮುಖದ ಮೇಲೆ ಮೊಡವೆಗಳಿಂದ ಆಗಿರುವ ಕಲೆಗಳ ನಿವಾರಣೆ ಮತ್ತು ಅದು ಮಾಡುವಂತಹ ಕಿರಿಕಿರಿ ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಇದಕ್ಕಾಗಿ ಹಲವಾರು ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಒಂದು ಹಂತದಲ್ಲಿ ಮೊಡವೆಗಳ ಕಲೆಗಳನ್ನು ನಿವಾರಿಸಿದಂತೆ ಕಂಡುಬಂದರೂ ಇದರಲ್ಲಿರುವ ರಾಸಾಯನಿಕಗಳು ದೀರ್ಘಕಾಲದ ತನಕ ಚರ್ಮದ ಮೇಲೆ ಪರಿಣಾಮ ಬೀರುವುದು. ಇದಕ್ಕೆ ಯಾವುದಾದರೂ ಪರ್ಯಾಯವಿದೆಯಾ ಎಂದು ನೀವು ಕೇಳುವುದು ಸಹಜ. ಹೌದು, ಮನೆಯಲ್ಲೇ ತಯಾರಿಸಿರುವಂತಹ ಕೆಲವೊಂದು ಸೌಂದರ್ಯವರ್ಧಕಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ಮೊಡವೆ ಹಾಗೂ ಕಲೆಗಳ ನಿವಾರಣೆಗೆ ಮನೆಯಲ್ಲೇ ತಯಾರಿಸಿರುವ ಕೆಲವು ಮನೆಮದ್ದುಗಳು ಯಾವುದು ಎಂದು ಈ ಲೇಖನ ಓದುತ್ತಾ ತಿಳಿಯಿರಿ. ಮೊಡವೆಗಳಿಂದ ಉಂಟಾಗಿರುವ ಕಲೆಯನ್ನು ಯಾವೆಲ್ಲಾ ಸಾಮಗ್ರಿಗಳು ಮತ್ತು ಅವುಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. *ಒಂದು ಶುದ್ಧವಾಗಿರುವ ಪಿಂಗಾಣಿಯಲ್ಲಿ ಅರಿಶಿನ ಹುಡಿ ಹಾಕಿ. ಅತಿಯಾಗಿ ಅರಶಿನ ಹುಡಿ ಹಾಕಬೇಡಿ. ಇದರಿಂದ ಮುಖವು ಹಳದಿಯಾಗಿ ಕಾಣುವುದು. ಸೂಚನೆ: ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದು ಒಳ್ಳೆಯದಲ್ಲ. ಯಾಕೆಂದರೆ ಇದು ಕಿರಿಕಿರಿ ಉಂಟು ಮಾಡಬಹುದು. ಇದನ್ನು ಹಚ್ಚಿಕೊಂಡು ದೀರ್ಘಕಾಲ ಬಿಡಬೇಡಿ. ಇದನ್ನು ನೀವು ಪ್ರಯತ್ನಿಸಿದ ಬಳಿಕ ಮನಗೆ ಕಮೆಂಟ್ ಬಾಕ್ಸ್ ನಲ್ಲಿ ಇದರ ಬಗ್ಗೆ ತಿಳಿಸಿ. ಅರಿಶಿನವನ್ನು ಶತಮಾನಗಳಿಂದಲೂ ವಿವಿಧ ರೀತಿಯ ಸಮಸ್ಯೆಗಳಿಗೆ ಬಳಸಿಕೊಂಡು ಬರಲಾಗುತ್ತಾ ಇದೆ. ಅರಿಶಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ನಂಜುನಿರೋಧಕ, ಉರಿಯೂತ ಶಮನಕಾರಿ ಗುಣಗಳು ಇದ್ದು, ಮುಖದ ಮೇಲಿನ ಕಲೆಗಳು, ಮೊಡವೆಗಳು ಇತ್ಯಾದಿಗಳನ್ನು ನಿವಾರಣೆ ಮಾಡುವುದು ಮತ್ತು ನೈಸರ್ಗಿಕವಾಗಿ ತ್ವಚೆಯನ್ನು ಬಿಳಿಯಾಗಿಸುವುದು. ಅನಾದಿ ಕಾಲದಿಂದಲೂ ಭಾರತದಲ್ಲಿ ಸೌಂದರ್ಯದ ವೃದ್ಧಿಗಾಗಿ ಹೊಳೆಯುವ ತ್ವಚೆಗಾಗಿ ಅರಿಶಿನವನ್ನು ಬಳಸುತ್ತಿದ್ದಾರೆ. ಇನ್ನು ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ಚರ್ಮದ ಸೋಂಕಿನ ವಿರುದ್ಧ ಹೋರಾಡುವುದು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ಇರುವ ಕಾರಣದಿಂದ ಕಲೆಗಳನ್ನು ತೆಗೆದು ಚರ್ಮದ ಕಾಂತಿ ವೃದ್ಧಿಸುವುದು. ಇದು ಚರ್ಮದಲ್ಲಿ ಮೆಲನಿನ್ ಉತ್ಪತ್ತಿಯನ್ನು ಕಡಿಮೆ ಮಾಡುವುದು. ಅರಿಶಿನವನ್ನು ಬಳಸಿದರೆ ಅದರಿಂದ ಕಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು. ನಂಜುನಿರೋಧಕ, ಶಿಲೀಂಧ್ರ ವಿರೋಧಿ ಮತ್ತು ಸಂಕೋಚನ ಗುಣ ಹೊಂದಿರುವಂತಹ ದಾಲ್ಚಿನಿಯು ಚರ್ಮದಲ್ಲಿ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಇದರಲ್ಲಿ ಕಿತ್ತುಹಾಕುವ ಗುಣವು ಇದೆ. ಇದರಿಂದಾಗಿ ಚರ್ಮವು ಆಳವಾಗಿ ಪೋಷಣೆ ಪಡೆಯುವುದು ಮತ್ತು ಚರ್ಮದ ಮೇಲಿನ ಕಲೆಗಳನ್ನು ನಿವಾರಿಸುವುದು. ಅಷ್ಟೇ ಅಲ್ಲದೆ, ಇದರಲ್ಲಿರುವ ಮೆಗ್ನೀಷಿಯಂ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಹಾಗೂ ಚರ್ಮದ ಕೋಶಗಳನ್ನು ಪುನರ್ ಉತ್ಪಾದಿಸುವ ಗುಣವನ್ನು ಒಳಗೊಂಡಿದೆ. ಇದು ಎಲ್ಲಾ ಚರ್ಮದವರಿಗೂ ಆಗುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇದನ್ನು ಪರೀಕ್ಷಿಸಿದ ಬಳಿಕ ತ್ವಚೆಗೆ ಅನ್ವಯಿಸಿಕೊಳ್ಳುವುದು ಸೂಕ್ತ. ಸಿಟ್ರಿಕ್ ಹಣ್ಣಾಗಿರುವ ಲಿಂಬೆಯಲ್ಲಿ ವಿಟಮಿನ್ ಸಿ ಇದ್ದು, ಇದು ಚರ್ಮದ ಬಣ್ಣ ಸುಧಾರಿಸುವುದು ಮತ್ತು ಸತ್ತಚರ್ಮದ ಕೋಶಗಳನ್ನು ತೆಗೆದುಹಾಕುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಮೊಡವೆಗಳು ಒಣಗುವಂತೆ ಮಾಡುವುದು. ನೈಸರ್ಗಿಕದತ್ತವಾಗಿ ಸಿಗುವಂತಹ ಪ್ರತಿಯೊಂದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ಅದರಲ್ಲೂ ಜೇನುತುಪ್ಪದಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಜೇನುತುಪ್ಪ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಅದರಿಂದ ವೃದ್ಧಿಸಬಹುದು. ಇನ್ನು ಜೇನುತುಪ್ಪದಲ್ಲಿ ಶಮನಕಾರಿ ಗುಣಗಳು ಇವೆ ಮತ್ತು ಮೊಡವೆಗಳಿಂದಾಗಿರುವ ಕಲೆಗಳ ನಿವಾರಣೆ ಮಾಡುವುದು. ಮುಚ್ಚಿರುವ ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಚರ್ಮಕ್ಕೆ ತೇವಾಂಶ ನೀಡುವುದು. ಮೊಡವೆಯಿಂದ ನೋವಾಗುತ್ತಲಿದ್ದರೆ ಜೇನುತುಪ್ಪ ಇದನ್ನು ಶಮನ ಮಾಡುವುದು.
OSCAR-2019
ಜೇನುತುಪ್ಪವು ಶತಮಾನದ ಹಿಂದಿನ ಮದ್ದಾಗಿದ್ದು,ನಾವು ಎದುರಿಸುವ ಸೌಂದರ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸುವ ತಾಕತ್ತು ಇದಕ್ಕಿದೆ..ಚರ್ಮದ ಮೇಲೆ ಇದು ಬಹಳ ತ್ವರಿತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಎಲ್ಲಾ ಅಗತ್ಯ ನ್ಯೂಟ್ರಿಯಂಟ್ಸ್ ಗಳೂ ಇದೆ ಮತ್ತು ಇದು ನಮ್ಮ ಚರ್ಮಕ್ಕೆ ಹಲವು ರೀತಿಯಲ್ಲಿ ಲಾಭಗಳನ್ನು ಮಾಡುತ್ತೆ.. ಜೇನುತುಪ್ಪದಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಇವು ಚರ್ಮಕ್ಕೆ ವಯಸ್ಸಾಗುವುದನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಚರ್ಮದ ಜಿಗುಟುತನವನ್ನು ತೊಡೆದುಹಾಕಿ ಹೊಳೆಯುವ, ಕಾಂತಿಯುಂತವಾದ ತ್ವಚೆಯನ್ನು ನೀಡಲು ಇದು ನೆರವಾಗುತ್ತದೆ. ಇದನ್ನು ಹೊರತು ಪಡಿಸಿ, ಯಾರದ್ದು ಎಣ್ಣೆ ತ್ವಚೆಯಾಗಿರುತ್ತದೆಯೂ ಅವರಿಗೆ ಜೇನುತುಪ್ಪವು ಅತ್ಯಂತ ಉತ್ತಮವಾದ ಮದ್ದಾಗಿದೆ. ಆಯಿಲಿ ಸ್ಕಿನ್ ಯಾವಾಗ ಆಗುತ್ತದೆಯೆಂದರೆ ಚರ್ಮವು ಸ್ವಯಂಚಾಲಿತವಾಗಿ ಹೆಚ್ಚಿನ ಎಣ್ಣೆಯ ಅಂಶವನ್ನು ದೇಹದಿಂದ ಹೊರ ಹಾಕಲು ಆರಂಭಿಸಿದಾಗ ಈ ಸಮಸ್ಯೆ ಉದ್ಭವವಾಗುತ್ತೆ. ಈ ರೀತಿಯ ಎಣ್ಣೆಯ ಅಂಶವು ಹೊರಬರುವುದರಿಂದಾಗಿ ಆಕ್ನೆ ಮತ್ತು ಮೊಡವೆಯಂತಹ ಸಮಸ್ಯೆಗಳು ಉದ್ಭವವಾಗುತ್ತದೆ. ಅಡುಗೆ ಮನೆಯ ಇತರೆ ಪದಾರ್ಥಗಳೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಬಳಕೆ ಮಾಡುವುದರಿಂದಾಗಿ, ನೀವು ಶಾಶ್ವತವಾದ ಮತ್ತು ಬೇಗನೆ ದೊರಕುವ ಪರಿಹಾರವನ್ನು ಎಣ್ಣೆ ತ್ವಚೆಯಿಂದ ಮುಕ್ತಿ ಪಡೆಯಲು ಬಳಸಬಹುದು. ಹಾಗಾದ್ರೆ ಯಾವ ರೀತಿ ಎಣ್ಣೆ ತ್ವಚೆಯವರು ಜೇನುತುಪ್ಪದಿಂದ ಪರಿಹಾರ ಕಂಡುಕೊಳ್ಳಬಹುದು ಇಲ್ಲಿದೆ ನೋಡಿ.ಮುಂದೆ ಓದಿ. ಬಾಳೆ ಹಣ್ಣು ಮತ್ತು ಜೇನುತುಪ್ಪವು ಮಾಯ್ಚರೈಸ್ ಮಾಡಲು ಮತ್ತು ಚರ್ಮವನ್ನು ಹೈಡ್ರೇಟ್ ಮಾಡಲು ನೆರವಾಗುತ್ತದೆ. ಜೇನುತುಪ್ಪವು ಆಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಕೂಡಿರುವುದರಿಂದಾಗಿ, ಯಾವುದೇ ರೀತಿಯ ಬ್ಯಾಕ್ಟೀರಿಯಾಗಳು ಚರ್ಮದಲ್ಲಿ ಅಧಿಕವಾಗುವುದನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. 3. ಇದರ ಲೇಯರ್ ಅನ್ನು ಮುಖದ ಮೇಲೆ ಸಮನಾಗಿ ಅಪ್ಲೈ ಮಾಡಿ ಮತ್ತು ಮುಖದ ಮೇಲೆ ಹಾಗೆಯೇ ಬಿಡಿ. 4. 15-20 ನಿಮಿಷ ಬಿಟ್ಟು ಸಾಮಾನ್ಯ ನೀರಿನಲ್ಲಿ ಮುಖವನ್ನು ತೊಳೆಯರಿ. ಜೇನುತುಪ್ಪ ಮತ್ತು ಓಟ್ ಮೀಲ್ ನಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು, ಅದು ಚರ್ಮವನ್ನು ಬೆಳೆಸಲು ಮತ್ತು ಕಳಾಹಿನ ತ್ವಚೆಯನ್ನು ಗುಣಪಡಿಸಲು ನೆರವಾಗುತ್ತದೆ. ವಾರಕ್ಕೆ ಒಮ್ಮೆಯಾದರೂ ಈ ಫೇಸ್ ಪ್ಯಾಕ್ ಬಳಕೆ ಮಾಡಿದರೆ, ನಿಮ್ಮ ಚರ್ಮವು ಹೊಳೆಯುವುವಂತಾಗಲು ನೆರವಾಗುತ್ತದೆ. - ಸಮನಾಗಿ ಅದನ್ನು ನಿಮ್ಮ ಮುಖದ ಮೇಲೆ ಅಪ್ಲೈ ಮಾಡಿ ಮತ್ತು ನಿಧಾನವಾಗಿ ವೃತ್ತಾಕಾರದಲ್ಲಿ ನಿಮ್ಮ ಮುಖದ ಮೇಲೆ ಸ್ಕ್ರಬ್ ಮಾಡಿ. ಸುಮಾರು 5 ನಿಮಿಷ ಇದನ್ನು ಮುಂದುವರಿಸಿ. ಜೇನುತುಪ್ಪ ಮತ್ತು ಹಾಲನ್ನು ಉತ್ತಮವಾದ ಮಾಯಿಶ್ಚರೈಸರ್ ಎಂದು ಹೇಳಲಾಗುತ್ತದೆ ಮತ್ತು ಇದು ಚರ್ಮವನ್ನು ಹೈಡ್ರೇಟ್ ಮಾಡಲು ನೆರವಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಹೊರತುಪಡಿಸಿ ಚರ್ಮಕ್ಕೆ ಬ್ರೈಟ್ ನೆಸ್ ನೀಡಲು ಕೂಡ ಇದು ಸಹಾಯಕ. ಜೇನುತುಪ್ಪ ಮತ್ತು ಆಲಿವ್ ಎಣ್ಣೆಯಲ್ಲಿರುವ ಧಾತುಗಳು ಚರ್ಮದ ರಂಧ್ರಗಳನ್ನು ಶ್ರಿಂಕ್ ಮಾಡುತ್ತದೆ ಮತ್ತು ಚರ್ಮವು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. * ಯಾವಾಗ ಎಣ್ಣೆ ಬಿಸಿಯಾಗುತ್ತದೆಯೋ ಅದಕ್ಕೆ 1 ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿ ಮತ್ತು ಈಗ ತಾನೆ ಹಿಂಡಿದ ತಾಜಾ ನಿಂಬೆ ರಸವನ್ನು ಸೇರಿಸಿ. * 20 ನಿಮಿಷದ ನಂತರ, ಮುಖವನ್ನು ಹದವಾಗಿ ಬೆಚ್ಚಗಿರುವ ನೀರಿನಲ್ಲಿ ಮೊದಲು ತೊಳೆದು ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಒಂದು ವೇಳೆ ನಿಮಗೆ ಯಾವುದೇ ರೀತಿಯ ಸೋಂಕುಗಳಿದ್ದಲ್ಲಿ, ಗಾಯಗಳಿದ್ದಲ್ಲಿ, ಚರ್ಮದಲ್ಲಿ ಉರಿ ಇದ್ದಲ್ಲಿ, ಆಗ ನಿಮಗೆ ಈ ಫೇಸ್ ಪ್ಯಾಕ್ ಆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವ ತಾಕತ್ತು ಈ ಫೇಸ್ ಪ್ಯಾಕ್ ಗೆ ಇಧೆ., ನಿಂಬೆಯ ರಸ ಮತ್ತು ಜೇನುತುಪ್ಪದ ಮಿಶ್ರಣವು ಮೊಡವೆ ಮತ್ತು ಆಕ್ನೆ ಕಲೆಯನ್ನು ತೆಗೆದು ಉತ್ತಮ ಫಲಿತಾಂಶವನ್ನು ನಿಮ್ಮ ಚರ್ಮದ ಮೇಲೆ ನೀಡುತ್ತದೆ. * ಸಮ ಪ್ರಮಾಣದ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ಒಂದು ಕಾಟನ್ ತುಂಡನ್ನು ಬಳಸಿ ತೊಂದರೆಗೊಳಗಾದ ಪ್ರದೇಶಕ್ಕೆ ಅಪ್ಲೈ ಮಾಡಿ.
OSCAR-2019
ಮಂಡ್ಯ, ಏಪ್ರಿಲ್ 23 : ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು?. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಈ ಕುರಿತು ಸ್ಪಷ್ಟನೆ ಸಿಕ್ಕಿಲ್ಲ. ಮಾಜಿ ಸಚಿವ ಅಂಬರೀಶ್ ನಿರ್ಧಾರ ಏನು? ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಮೈಸೂರಿನಲ್ಲಿ ಭಾನುವಾರ ಅಂಬರೀಶ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗೆ ಸಿಗದೇ ಮೈಸೂರಿನಿಂದ ಅಂಬರೀಶ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. 'ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಆಪ್ತರ ಬಳಿ ಹೇಳಿದ್ದಾರೆ' ಎಂದು ತಿಳಿದುಬಂದಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಅಂಬರೀಶ್ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗಾದರೆ ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು?. ಅಮರಾವತಿ ಚಂದ್ರಶೇಖರ್ : ಅಂಬರೀಶ್ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿ?. 'ಅಂಬರೀಶ್ ಸ್ಪರ್ಧೆ ಮಾಡಲ್ಲ. ನಾನು ಸ್ಪರ್ಧೆ ಮಾಡುವೆ. ಸೋಮವಾರ ಮಂಡ್ಯ ಕ್ಷೇತ್ರದ ಬಿ ಫಾರಂ ನನ್ನ ಕೈ ಸೇರಲಿದೆ?' ಎಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ. 'ಅಂಬರೀಶ್ ಶಾಸಕರಾಗಿದ್ದಾಗ ನಾನು ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ಅಂಬರೀಶ್ ಸ್ಪರ್ಧೆ ಮಾಡಲ್ಲ ಎಂದರೆ ಅವರ ಬದಲು ನನಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಟಿಕೆಟ್ ಸಿಕ್ಕರೆ ಗೆದ್ದು ಬರುವೆ' ಎಂದು ಅಮರಾವತಿ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ನನಗೆ ಆರೋಗ್ಯ ಸರಿ ಇಲ್ಲ ನೀನು ಚುನಾವಣೆಗೆ ಸ್ಪರ್ಧಿಸು ಎಂದು ಅಂಬರೀಶ್ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಅಂಬರೀಶ್ ಅವರು ಸ್ಪಷ್ಟನೆ ನೀಡಲಿದ್ದಾರೆ' ಎಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ. ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಲು ಏ.24ರ ಮಂಗಳವಾರ ಕೊನೆಯ ದಿನವಾಗಿದೆ. ಆದರೆ, ಮಂಡ್ಯ ಕ್ಷೇತ್ರ ಅಭ್ಯರ್ಥಿ ಯಾರು? ಎಂಬುದು ಇಲ್ಲಿಯ ತನಕ ಅಂತಿಮಗೊಂಡಿಲ್ಲ. mandya karnataka karnataka assembly elections 2018 district news ಮಂಡ್ಯ ಅಂಬರೀಶ್ ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆ 2018 ಜಿಲ್ಲಾಸುದ್ದಿ sumalatha ambareesh ambareesh
OSCAR-2019
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ರಾಶಿಗೆ ಅನುಗುಣವಾಗಿಯೇ ನಮ್ಮ ವ್ಯಕ್ತಿತ್ವವು ಇರುವುದು. ಇದರಿಂದಾಗಿಯೇ ಒಬ್ಬರ ಗುಣನಡತೆಗಳು ಮತ್ತೊಬ್ಬರಿಗಿಂತ ತುಂಬಾ ಭಿನ್ನವಾಗಿರುವುದು. ಕೆಲವು ವ್ಯಕ್ತಿಗಳು ತಮ್ಮ ರಾಶಿಗೆ ಅನುಗುಣವಾಗಿ ತುಂಬಾ ಶಾಂತರಾಗಿ ಇರುವರು. ಇನ್ನು ಕೆಲವರು ತುಂಬಾ ಕೋಪಿಷ್ಠರಾಗಿರುವರು. ಇಂತಹ ಹಲವಾರು ಗುಣಗಳು ನಮಗೆ ಕಂಡುಬರುವುದು. ಇದಕ್ಕೆಲ್ಲಾ ಕಾರಣ ಅವರ ರಾಶಿಚಕ್ರಗಳು. ಆದರೆ ರಾಶಿಗಳಲ್ಲಿ ಕೆಲವು ರಾಶಿಗಳು ತುಂಬಾ ಬಲಿಷ್ಠವಾಗಿರುವುದು ಮತ್ತು ಇವುಗಳಲ್ಲಿ ಕೆಲವು ಶಕ್ತಿಗಳು ಅಡಗಿರುವುದು. ಇಂತಹ ನಾಲ್ಕು ರಾಶಿಗಳ ಬಗ್ಗೆ ನೀವು ತಿಳಿಯಲು ತಯಾರಾಗಿ... ರಾಶಿಗಳ ಗುಂಪಿಯನಲ್ಲಿ ಮೇಷ ರಾಶಿಯು ತುಂಬಾ ಬಲಿಷ್ಠವಾಗಿರುಂತದ್ದಾಗಿದೆ. ಈ ರಾಶಿಯಲ್ಲಿ ಹುಟ್ಟಿದ ಜನರಲ್ಲಿ ಹೆಚ್ಚಿನ ಶಕ್ತಿ, ತೀವ್ರ ಹಾಗು ಸಾಹಸಮಯ ಪ್ರವೃತ್ತಿಯೊಂದಿಗೆ ಹುರುಪು ಇರುವುದು. ಇವರು ಯಾವುದಕ್ಕೂ ಹೆದರಲ್ಲ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಎದುರುನೋಡುತ್ತಲಿರುವರು. ಇವರಲ್ಲಿ ಇರುವಂತಹ ನಾಯಕತ್ವದ ಗುಣಗಳು ಇವರಿಗೆ ಶ್ರೇಷ್ಠ ಮಟ್ಟದ ಸ್ವರಕ್ಷಣೆ ನೀಡುವುದು ಇವರು ಬಂಡಾಯ ಹಾಗೂ ಪ್ರಚೋದಕರಾಗಿರುವ ಕಾರಣದಿಂದಾಗಿ ಕೆಲವೊಮದು ಸಲ ಒಬ್ಬರಿಗಿಂತ ಹೆಚ್ಚು ಶತ್ರುಗಳನ್ನು ಮಾಡಿಕೊಳ್ಳುವರು. ಇವರು ತುಂಬಾ ಹಠವಾದಿಗಳು ಮತ್ತು ಇವರಿಗೆ ಮನವರಿಕೆ ಮಾಡುವುದು ಕಷ್ಟವಾಗಿರುವ ಕಾರಣದಿಂದಾಗಿ ಯಾವುದೇ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಹಿಂಜರಿಯಲ್ಲ. ಇವರಲ್ಲಿರುವ ನಾಯಕತ್ವದ ಗುಣಗಳು, ಶಕ್ತಿ ಮತ್ತು ಧೈರ್ಯವು ಇವರನ್ನು ಬಲಿಷ್ಠವಾಗಿಸುವುದು. ವೃಶ್ಚಿಕ ರಾಶಿಯವರಲ್ಲಿ ಬಲಿಷ್ಠವಾದ ವ್ಯಕ್ತಿತ್ವವಿದೆ. ಆದರೆ ಇವರು ತಮ್ಮ ತೀವ್ರತೆಯಿಂದಾಗಿ ಬೇರೆ ರಾಶಿಗಳಿಂತ ತುಂಬಾ ಭಿನ್ನ. ಇದು ಭಾವನಾತ್ಮಕ ಮಟ್ಟದಲ್ಲಿ ಎದ್ದು ಕಾಣುವುದು. ಇವರು ಯಾವತ್ತೂ ನಿಲ್ಲುವವರಲ್ಲ ಮತ್ತು ಈ ಗುಣದಿಂದಾಗಿ ಇವರು ಬಯಸಿದ ಗುರಿಯನ್ನು ಮುಟ್ಟುವರು. ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರು ತುಂಬಾ ಟೀಕೆ ಮಾಡುವವರು, ಸ್ವಲ್ಪ ಕೋಪಿಷ್ಠರು ಮತ್ತು ದೈನಂದಿನ ಜಂಜಾಟಗಳಿಗೆ ಹೊಂದಿಕೊಳ್ಳಲು ಕಷ್ಟಪಡುವವರು. ಪ್ರೀತಿಯಲ್ಲಿ ಇವರದ್ದು ತುಂಬಾ ಬಲಿಷ್ಠ ನಡೆ. ಇವರು ತಮ್ಮ ಸಂಗಾತಿಯೊಂದಿಗೆ ಯಾವಾಗಲೂ ಹೊಂದಿಕೊಂಡಿರುವರು. ಕರ್ಕಾಟಕ ರಾಶಿಯವರು ಯಾವಾಗಲೂ ಹಠಾತ್ ಮತ್ತು ಬೇಗನೆ ಬದಲಾಗುವವರು ಎಂದು ನಮಗೆ ತಿಳಿದಿದೆ. ಆದರೆ ಈ ರಾಶಿಯವರು ತುಂಬಾ ಬಲಿಷ್ಠ ಹಾಗೂ ಹಠ ಸ್ವಭಾವದವರು. ಇವರು ತುಂಬಾ ಸುರಕ್ಷಿತ ಜನರು ಮತ್ತು ತಮ್ಮ ಮೇಲೆ ನಂಬಿಕೆಯಿರುವವರು. ಇದರಿಂದಾಗಿ ಅವರು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿತ್ವ ರೂಪಿಸಿಕೊಂಡು ವೃತ್ತಿ ಹಾಗೂ ಭಾವನಾತ್ಮಕ ಜೀವನವನ್ನು ಬೆಳೆಸಿಕೊಳ್ಳುವರು. ಸ್ನೇಹಿತರು ಮತ್ತು ಜತೆಗಾರರಲ್ಲಿ ಇವರು ತುಂಬೇ ಬೇಡಿಕೆಯವರು. ಇವರು ಬೇರೆಯವರ ಭಾವನೆಗಳಿಗೆ ನೋವುಂಟು ಮಾಡಿದರೂ ತುಂಬಾ ಪ್ರಾಮಾಣಿಕವಾಗಿರುವರು. ಇವರ ಆತ್ಮವಿಶ್ವಾಸವು ಇವರು ಬಯಸಿದ್ದನ್ನು ಸಾಧಿಸಲು ನೆರವಾಗುವುದು ಮತ್ತು ಇವರಲ್ಲಿರುವ ಪರಿಪೂರ್ಣತೆಯು ಅದ್ಭುತವಾಗಿರುವಂತಹ ವಿಚಾರಗಳನ್ನು ಸಾಧಿಸಲು ನೆರವಾಗುವುದು. ರಾಶಿಚಕ್ರಗಳಲ್ಲಿ ತುಂಬಾ ಬಲಿಷ್ಠವಾಗಿರುವಂತಹ ಸಿಂಹ ರಾಶಿಯೊಂದಿಗೆ ನಾವು ಈ ಲೇಖನವನ್ನು ಮುಗಿಸಲಿದ್ದೇವೆ. ಇವರ ವಿಶಿಷ್ಠ ಲಕ್ಷಣಗಳಲ್ಲಿ ತುಂಬಾ ಬಲಿಷ್ಠವಾಗಿರುವುದು ಎಂದರೆ ಇವರ ಅಧಿಕಾರತ್ವದ ಗುಣ. ಇವರು ಯಾವಾಗಲೂ ನಿರ್ದೇಶನ ನೀಡಲು ತಯಾರಾಗಿರುವರು ಮತ್ತು ಇವರು ಹುಟ್ಟು ನಾಯಕರು. ಇವರು ಸಮಸ್ಯೆಗಳಿಗೆ ಯಾವತ್ತೂ ಹೆದರಿ ಕೂರಲ್ಲ. ಇವರು ತಮ್ಮ ಗುರಿ ಸಾಧಿಸಲು ಯೋಜನೆ ಹಾಗೂ ತಂತ್ರಗಳನ್ನು ರೂಪಿಸಲು ಶ್ರೇಷ್ಠ ಗುಣ ಹೊಂದಿರುವರು. ಬಲವು ಇವರನ್ನು ಕೆಲವೊಂದು ಸಲ ತುಂಬಾ ಹೆಮ್ಮೆ, ಕ್ರೋಧಿತ ಮತ್ತು ಹಠಮಾರಿಯನ್ನಾಗಿಸುವುದು. ಸಿಂಹ ರಾಶಿಯವರನ್ನು ಬಲಿಷ್ಠ ರಾಶಿಯನ್ನಾಗಿಸುವಂತಹ ಲಕ್ಷಣವೆಂದರೆ ಇರಲ್ಲಿರುವಂತಹ ಚರಿಷ್ಮಾ. ಇದರಿಂದಾಗಿ ಇವರು ಜನಸಮೂಹದ ಮುಂದೆ ಸಾಗುವ ಹಾಗೂ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದು.
OSCAR-2019
ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕುಲ್ಫೀ‘ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಹಾರಾರ್ ಚಿತ್ರವನ್ನು ಮಂಜು ಹಾಸನ್ ನಿರ್ದೇಶಿಸಿದ್ದಾರೆ. ‘ಕುಲ್ಫೀ‘ ಅವರ ನಿರ್ದೆಶನದ ಚೊಚ್ಚಲ ಚಿತ್ರ. ನರಸಿಂಹ ಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಭಿಷೇಕ್ ಸಂಗೀತ ನೀಡಿದ್ದಾರೆ. ಶಿವಪ್ರಸಾದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ಚಂದ್ರಪ್ಪ ನಿರ್ಮಾಣ ನಿರ್ವಹಣೆ ಹಾಗೂ ಸೀನು ಅವರ ಕಲಾ ನಿರ್ದೆಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಿನೋಲ್, ಲಾರೆರ್ಸ್, ಗಿರೀಶ್, ದಿಲೀಪ್, ರಮೇಶ್ ಭಟ್, ಹರ್ಷಿತ ಗೌಡ(ತರ‍್ಲೆ ವಿಲೇಜ್) ಮುಂತಾದವರಿದ್ದಾರೆ.
OSCAR-2019
ದಾವಣಗೆರೆ: ಇಲ್ಲಿನ ವಾರ್ಡ್ ನಂ. 20ರ ವಿನೋಬ ನಗರದಲ್ಲಿ ನೂತನವಾಗಿ ತೆರೆದಿರುವ ನೆಮ್ಮದಿ ಕೇಂದ್ರ ಶನಿವಾರ ಕಾರ್ಯಾರಂಭ ಮಾಡಿದೆ. ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು, ವಿಧವಾ ವೇತನ, ಸಂಧ್ಯಾ ಸುರಕ್ಷಾ ಮೊದಲಾದ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಪಾಲಿಕೆ ಆವರಣದಲ್ಲಿರುವ ನೆಮ್ಮದಿ ಕೇಂದ್ರಕ್ಕೆ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು. ಇದರಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು, ವಿನೋಬ ನಗರದಲ್ಲಿ ನೆಮ್ಮದಿ ಕೇಂದ್ರ ತೆರೆಯುವಂತೆ ಪಾಲಿಕೆ ಸದಸ್ಯೆ ರೇಖಾ ನಾಗರಾಜ್, ಪಾಲಿಕೆ ವಿರೋಧಪಕ್ಷದ ನಾಯಕ ಡಿ.ಎನ್. ಜಗದೀಶ್, ಪಾಲಿಕೆ ಸದಸ್ಯರಾದ ಶಿವನಹಳ್ಳಿ ರಮೇಶ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್ ಹಾಗೂ ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ, ನೆಮ್ಮದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಇದು ಸ್ಥಳೀಯರ ಅಭಿನಂದನೆಗೆ ಪಾತ್ರವಾಗಿದೆ. ಕೇಂದ್ರವನ್ನು ಪಾಲಿಕೆ ಸದಸ್ಯೆ ರೇಖಾ ನಾಗರಾಜ್ ಉದ್ಘಾಟಿಸಿದರು. ದಿನೇಶ್ ಕೆ. ಶೆಟ್ಟಿ, ಲಯನ್ಸ್‌ನ ಲತಿಕಾ ದಿನೇಶ್ ಶೆಟ್ಟಿ, ನಗರಸಭೆ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಅಡಾಣಿ ಕರಿಬಸಪ್ಪ, ಮುಖಂಡರಾದ ಕೊಂಡಜ್ಜಿ ಹನುಮಂತಪ್ಪ, ಎಚ್. ಸುರೇಶ್, ಕಾಳಿಂಗರಾಜು, ರಾಮಚಂದ್ರ ರಾಯ್ಕರ್, ರುದ್ರೇಶ್, ನೆಮ್ಮದಿ ಕೇಂದ್ರದ ಉಮೇಶ್, ಲಿಂಗರಾಜ್, ಮೆಹಬೂಬ್ ಪಾಷಾ, ಅಂಗನವಾಡಿ ಕೇಂದ್ರದ ರೇಣುಕಮ್ಮ ಪಾಲ್ಗೊಂಡಿದ್ದರು. ನೂತನ ನೆಮ್ಮದಿ ಕೇಂದ್ರದಿಂದ ವಿನೋಬ ನಗರ, ವಿನಾಯಕ ನಗರ, ಯಲ್ಲಮ್ಮ ನಗರ, ಶಾಂತಿ ನಗರದ ನಿವಾಸಿಗಳಿಗೆ ಅನುಕೂಲ ಆಗಿದೆ. ಇದರಿಂದ ಪಾಲಿಕೆ ಆವರಣದ ಕೇಂದ್ರದಲ್ಲಿ ಕೊಂಚ ಮಟ್ಟಿಗೆ ಒತ್ತಡ ಕಡಿಮೆಯಾಗಿದೆ. ಕೇಂದ್ರದಲ್ಲಿ ಮೊದಲ ದಿನವೇ, ವಿವಿಧ ಪ್ರಮಾಣಪತ್ರಗಳು ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯಲು 350ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಅಲ್ಲದೇ, ಪಾಲಿಕೆ ಕೇಂದ್ರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 40 ಅರ್ಜಿಗಳನ್ನು (ಈ ಭಾಗಕ್ಕೆ ಸೇರಿದ) ವಿಲೇವಾರಿ ಮಾಡಲಾಯಿತು.
OSCAR-2019
ಪ್ರಚಂಡ ರಣ ಪರಾಕ್ರಮಿ, ಧ್ಯೇಯಜೀವಿ, ಸಾಹಸಿ, ಧೀರೋದಾತ್ತ ಕ್ರಾಂತಿಪುರುಷನಾಗಿ ಸ್ವಾತಂತ್ರ್ಯಯಜ್ಞದಲ್ಲಿ ಪೂರ್ಣಾಹುತಿಯಾದ .. ಕ್ರಾಂತಿಕಾರಿ ಮುಖಂಡ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜೀವನ ಚರಿತ್ರೆ. ಸುಬಾಷ್‌ರವರಿಗೆ ಸಂಬಂಧಪಟ್ಟ ಕೆಲವು ಆಶ್ಚರ್ಯಕಾ.. ಗಾಂಧೀಜಿ ಆತ್ಮ ಕಥೆ ಮತ್ತು ನನ್ನ ಸತ್ಯಾನ್ವೇಷಣೆ - Ganhiji Aatma Kathe Mattu Nanna Satyanveshane(Mahatma Gandhi) ಬೆಂಗಳೂರಿನಲ್ಲಿ ಸುಮಾರು 10,000 ಆಟೋರಿಕ್ಷಾಗಳು ಇರಬಹುದು. ಅವುಗಳಲ್ಲಿ ಸುಮಾರು 80% ಆಟೋಗಳ ಮೇಲೆ ಶಂಕರ್ ನಾಗ್ ಚಿತ್ರವಿ.. ಖ್ಯಾತ ನಟ ವಿಷ್ಣುವರ್ಧನ್ ಜೊತೆಗಿನ ನೆನಪುಗಳು ಲೇಖಕರು: ಎಸ್ ವಿ ರಾಜೇಂದ್ರ ಸಿಂಗ್ ಬಾಬುಪ್ರಕಾಶಕರು:ಅಂಕಿತ ಪುಸ್ತಕ, Ank.. ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗುರಿಗಳ ಬೆಳವಣಿಗೆಯ ಒಂದು ಹಂತದ ಕ್ರಿಯಾಶೀಲ ಸ್ವರೂಪ ಭಗ.. 20ನೇ ಶತಮಾನದ ಅತ್ಯುತ್ತಮ 100 ಅಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ, ಪರಮಹಂಸ ಯೋಗಾನಂದರ ಅಸಾಧಾರಣ ಜೀವನ..
OSCAR-2019
ತುಮಕೂರು ಜಿಲ್ಲೆಯ ಹುಲಿಯೂರು ದುರ್ಗ ತಾಲ್ಲೂಕಿನ ವ್ಯಾಪ್ತಿಗೆ ಬರುವ ಶ್ರಿ ಕಾಳಿಕಾಂಬ ದೇವಿಯ ನೆಲೆಯಾದ ದೀಪಾಂಬುಧಿ ಜಿಲ್ಲೆಯ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರ. ಕಾಳಿಕಾ ಮಾತೆ ಇಲ್ಲಿ ನೆಲೆ ನಿಂತಿದ್ದಾಳೆ ಎಂಬುದು ಜನರ ನಂಬಿಕೆ. ಈ ಕ್ಷೇತ್ರದ ಸುತ್ತ ಹಸಿರಿನ ಸುಂದರ ಪರಿಸರವಿದೆ. ದೇವಸ್ಥಾನ ಪ್ರಾಚೀನ ಕಾಲದ್ದು. ಈ ಕ್ಷೇತ್ರ ಉತ್ತರ ಮುಖಿ, ಮೋಕ್ಷದಾಯಿನಿ ಕ್ಷೇತ್ರವೆಂದೂ ಹೆಸರಾಗಿದೆ. ಜಾತಿ, ಮತ, ಪಂಥಗಳ ಸೋಂಕಿಲ್ಲದೆ ಎಲ್ಲ ವರ್ಗದ ಜನರೂ ಇಲ್ಲಿ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ. ಈ ದೇವಸ್ಥಾನವನ್ನು ಹನ್ನೆರಡನೇ ಶತಮಾನದಲ್ಲಿ (ಚೋಳರಾಜರ ಕಾಲದಲ್ಲಿ) ನಿರ್ಮಿಸಲಾಯಿತು ಎಂಬ ದಾಕಲೆಗಳಿವೆ. ಈ ಶಿಲಾ ದೇವಸ್ಥಾನದ ಭಿತ್ತಿಗಳಲ್ಲಿ ಕಂಡುಬರುವ ಉಬ್ಬು ಶಿಲ್ಪಗಳ ಕೆತ್ತನೆ ವಿಶೇಷ ಆಕರ್ಷಣೆ. ಪ್ರತಿ ವರ್ಷ ಶ್ರಾವಣ ನಕ್ಷತ್ರದಂದು ಇಲ್ಲಿ ಜಾತ್ರೆ ನಡೆಯುತ್ತದೆ. ಆ ಸಂದರ್ಭಕ್ಕೆ ಜಿಲ್ಲೆಯ ನಾನಾ ಊರುಗಳಿಂದ ಭಕ್ತರು ಬರುತ್ತಾರೆ. ದೇವಸ್ಥಾನದಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ಆದರೆ ಮಂಗಳವಾರ, ಶುಕ್ರವಾರ, ಉಪನಯನ, ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಹೋಮ ಹವನಾದಿ ಕೈಂಕರ್ಯಗಳು ನಡೆಯುತ್ತವೆ. ಶ್ರಿ ಕ್ಷೇತ್ರ ದೀಪಾಂಬುಧಿಯ ಪೀಠಾಧ್ಯಕ್ಷರಾದ ಕರುಣಾಕರ ಶ್ರಿಗಳ ಸಾನಿಧ್ಯದಲ್ಲಿ ನಡೆಯುವ ಗುರುಪೂರ್ಣಿಮೆ, ಅಮ್ಮನವರ ಉತ್ಸವ, ವಿಶೇಷ ಪೂಜೆ, ತುಲಾಭಾರದ ವೇಳೆ ಸಮಯದಲ್ಲಿ ಹೊರರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ರಾಮನಗರ ಜಿಲ್ಲೆಯ ತಾಲ್ಲೂಕು ಕೇಂದ್ರ ಮಾಗಡಿಯಿಂದ 23 ಕಿಲೋಮೀಟರ್ ಕ್ರಮಿಸಿದರೆ ರಸ್ತೆಯ ಬಲಬದಿಯಲ್ಲಿ ದೇವಾಲಯದ ಮಹಾದ್ವಾರ ಕಾಣುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲೆ ಕಾಳಿಕಾಮಾತೆ ದೇವಸ್ಥಾನವಿದೆ. ಸ್ಥಳೀಯರ ಮತ್ತು ದಾನಿಗಳ ನೆರವಿನಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ಷೇತ್ರದಲ್ಲಿ ಕಡಿಮೆ ವೆಚ್ಚದ ಛತ್ರ, ಗುರುಕುಲ ಮಾದರಿ ಶಾಲೆಯೂ ಇದೆ. ದೇವಸ್ಥಾನದ ಮುಂಭಾಗದಲ್ಲಿರುವ ದೀಪಾಂಬುಧಿಕೆರೆ ಇದೆ. ಸುಮಾರು 550 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿರುವ ಕೆರೆ ಈ ಪ್ರದೇಶದ ಇನ್ನೊಂದು ಆಕರ್ಷಣೆ. ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಕೈಕಾಲು ತೊಳೆದು ಮಿಶ್ರಮಿಸಿಕೊಳ್ಳಲು ಹೇಳಿ ಮಾಡಿಸಿದ ತಾಣವಿದು. ದೀಪಾಂಬುಧಿ ಕೆರೆಗೆ ಹೇಮಾವತಿ ನದಿ ನೀರು ಹರಿಸಬೇಕೆಂಬುದು ಸ್ಥಳೀಯರ ಆಗ್ರಹ. ದೀಪಾಂಬುಧಿ ಶ್ರಿ ಕ್ಷೇತ್ರದ ಸಮೀಪದಲ್ಲಿ ಮಾಗಡಿ, ಸಾವನದುರ್ಗ, ತಿರುಮಲೆಯ ಶ್ರಿ ರಂಗನಾಥಸ್ವಾಮಿ, ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಮುಂತಾದ ಪುಣ್ಯ ಕ್ಷೇತ್ರಗಳಿವೆ. ಸರ್ಕಾರ ದೀಪಾಂಬುಧಿ ಶ್ರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಇದು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗುತ್ತದೆ. ಕ್ಷೇತ್ರಕ್ಕೆ ಹೋಗಲು ಉತ್ತಮ ರಸ್ತೆ ಇದೆ. ಮಾಗಡಿ, ಕುಣಿಗಲ್, ಹುಲಿಯೂರು ದುರ್ಗಗಳಿಂದ ಬಸ್ ಸೌಕರ್ಯವಿದೆ. ದೇವಸ್ಥಾನದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಇಲ್ಲ.
OSCAR-2019
ಮಡಿಕೇರಿ, ಸೆಪ್ಟೆಂಬರ್ 07 : ಮಳೆ ಮತ್ತು ಭೂ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿಯನ್ನು ಅಂದಾಜಿಸಲು ಕೇಂದ್ರದ ತಂಡ ಜಿಲ್ಲೆಗೆ ಭೇಟಿ ನೀಡಲಿದೆ. ಮತ್ತೊಂದು ಕಡೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗುತ್ತಿದೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರದ ತಂಡಕ್ಕೆ ಅಗತ್ಯ ಮಾಹಿತಿ ನೀಡಲು ಸಿದ್ದವಾಗಿರುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಭೂ ಕುಸಿತದಿಂದ ಮನೆ ಕಳೆದುಕೊಂಡವರಿಗೆ ಶಾಶ್ವತ ನೆಲೆ ಕಲ್ಪಿಸಲು ಜಾಗ ಗುರುತಿಸುವಂತೆಯೂ ಸೂಚನೆ ನೀಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು, 'ಸುಮಾರು 850 ಕುಟುಂಬಗಳು ಗುಡ್ಡ ಕುಸಿತದಿಂದಾಗಿ ಮನೆ ಕಳೆದುಕೊಂಡಿವೆ. ತಾತ್ಕಾಲಿಕ ಶೆಡ್ ನಿರ್ಮಿಸಲು 23 ಎಕರೆ ಜಾಗ ಗುರುತಿಸಲಾಗಿದೆ. 30*40 ಅಳತೆಯ ಶೆಡ್ ನಿರ್ಮಿಸಲಾಗುತ್ತದೆ' ಎಂದು ಹೇಳಿದ್ದಾರೆ. ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಸುಮಾರು 9000 ಹೆಕ್ಟೇರ್ ಬೆಳಗಳು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 14 ಸಂತ್ರಸ್ತ ಕೇಂದ್ರದಲ್ಲಿ 1431 ಜನರು ಇನ್ನೂ ಆಶ್ರಯ ಪಡೆದಿದ್ದಾರೆ. ಕೊಡಗಿನಲ್ಲಿ ಉಂಟಾದ ಪ್ರವಾಹದಿಂದಾಗಿ ಜನರು ಮಾತ್ರ ಸಂಕಷ್ಟಕ್ಕೆ ಸಿಲುಕಿಲ್ಲ. ಜಾನುವಾರಗಳ ಮೇವಿಗೂ ಕೊರತೆ ಉಂಟಾಗಿದೆ. ಜಾನುವಾರು ಮೇವನ್ನು ಪಶು ಇಲಾಖೆಯ ಮೂಲಕ ವಿತರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಹಳ್ಳಿ-ಹಳ್ಳಿಗಳಿಗೆ ಹೋಗಿ ಮೇವು ವಿತರಣೆ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಳೆ, ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲಾಗುತ್ತದೆ. ಶೆಡ್ ಮಾದರಿ ಈಗಾಗಲೇ ಸಿದ್ಧವಾಗಿದೆ. ಆದರೆ, ಎಲ್ಲಿ ಶೆಡ್ ನಿರ್ಮಾಣವಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಗಾಳಿಬೀಡು ಗ್ರಾಮದ ಬಳಿ ಸಂತ್ರಸ್ತರ ಪುನರ್ವಸತಿಗಾಗಿ ಭೂಮಿಯ ಪರಿಶೀಲನೆ ನಡೆಸಿದರು, ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದರು. ಕೊಡಗಿನಲ್ಲಿ ಈಗ ಮಳೆ ಕಡಿಮೆಯಾಗಿದೆ. ಆದರೆ, ಮನೆಗಳನ್ನು ಕಳೆದುಕೊಂಡ 1431 ಸಂತ್ರಸ್ತರು ಇನ್ನೂ ಜಿಲ್ಲೆಯ 14 ಸಂತ್ರಸ್ತ ಕೇಂದ್ರಲ್ಲಿ ಆಶ್ರಯ ಪಡೆದಿದ್ದಾರೆ. ಮಡಿಕೇರಿ ನಗರದ ಮೈತ್ರಿ ಪೊಲೀಸ್ ಭವನದಲ್ಲಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು. ಕೊಡಗು ಪ್ರವಾಹದಿಂದ ಜನರು ಮಳೆ ಕಳೆದುಕೊಂಡರು. ಜನರಿಗೆ ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ನೀಡಲಾಯಿತು. ಮತ್ತೊಂದು ಕಡೆ ಜಾನವಾರುಗಳು ಸಹ ಅನಾಥವಾಗಿದ್ದವು. ಅವುಗಳನ್ನು ರಕ್ಷಿಸಿ ಪೋಷಣೆ ಮಾಡಲಾಗುತ್ತಿದೆ. ಜಿಲ್ಲಾಡಳಿತದಿಂದ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗಿದ್ದ 100ಕ್ಕೂ ಅಧಿಕ ಜಾನುವಾರುಗಳನ್ನು ರಕ್ಷಿಸಿ ಪೋಷಣೆ ಮಾಡಲಾಗುತ್ತಿದೆ. ಅಲ್ಲಿನ ಚಿತ್ರಣ ಹೀಗಿದೆ ನೋಡಿ. ಪ್ರವಾಹ, ಗುಡ್ಡ ಕುಸಿತದ ಬಳಿಕ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ನೀರು ಕಲುಷಿತಗೊಂಡಿದೆ. ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮತ್ತೊಂದು ಕಡೆ ಸೋಮವಾರಪೇಟೆ ತಾಲೂಕಿನ ಮದ್ಲಾಪುರದಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಮತ್ತು ಸ್ವಚ್ಚತೆ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.
OSCAR-2019
ತಿಳಿದು ತಿನ್ನೋಣ ಬನ್ನಿ... : ಸಿರಿಧಾನ್ಯಗಳ ಪ್ರಯೋಜನ ಮತ್ತು ಮಹತ್ವ ಅರಿತು - Tilidu Tinonna Banni(Gangadharamurthy B) ಪುಸ್ತಕದ ಶೀರ್ಷಿಕೆ ನೋಡಿ ಭೋಜನಪ್ರಿಯರು ಗಾಬರಿಪಡಬೇಕಾದ ಅಗತ್ಯವಿಲ್ಲ. ಪಥ್ಯ ಅವಶ್ಯಕ ಭಾಗವಾಗಿ ಇಲ್ಲಿ ಸೇರಿದೆ ಅಷ್ಟೆ. ಇ.. ಬಿ.ಕೆ.ಎಸ್. ಅಯ್ಯಂಗಾರರು ರಚಿಸಿರುವ ‘ಪ್ರಾಣಾಯಾಮ ದೀಪಿಕಾ’ ಪುಸ್ತಕವು ನಮ್ಮ ಪುರಾತನ ವಿಜ್ಞಾನವಾದ ಯೋಗಶಾಸ್ತ್ರದ, ಇಂದಿನ..
OSCAR-2019
ಮಂಗಳೂರು: ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ನಾಯಕ ರಹೀಂ ಉಚ್ಚಿಲ್‌ ಅವರ ಗನ್‌ ಮ್ಯಾನ್‌ ಮಲ್ಲಿಕಾರ್ಜುನ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್‌ ಕಮಿಷನರ್‌ ಟಿ.ಕೆ. ಕೊಯಮತ್ತೂರು: ರೈಲು ಹತ್ತಿರ ಬರುತ್ತಿದ್ದಂತೆ ಅದರ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸ್ಟೇಟಸ್‌ ಹಾಕಿಕೊಳ್ಳುವ ಯೋಚನೆ ಮಾಡುವವರೇ ಜೋಕೆ! ಇನ್ನು ಮುಂದೆ ಅಂಥ "ಸಾಹಸ'ಕ್ಕೇನಾದರೂ ಮುಂದಾದರೆ... ಎನ್‌ಆರ್‌ಪುರ: ಪಿಕ್‌ನಿಕ್‌ಗೆ ಬಂದಿದ್ದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಅಪಾಯಕ್ಕೆ ಸಿಲುಕಿದ ಘಟನೆ ಭದ್ರಾ ಹಿನ್ನೀರಿನ ತಡಸ ಸೇತುವೆ ಬಳಿ ನಡೆದಿದೆ. ಈತನನ್ನು ಸ್ಥಳೀಯ... ಫೇಸ್‌ಬುಕ್‌ ನೋಡೋ ಚಟ ಎಲ್ಲರಿಗೂ ಇದ್ದಿದ್ದೇ. ಕ್ಷಣಕ್ಕೊಮ್ಮೆ ಅದನ್ನು ನೋಡದಿದ್ದರೆ ಕಮೆಂಟ್‌, ಲೈಕ್ಸ್‌ ಹಾಕದೇ ಇದ್ರೆ ಅದೇನೋ ಅಸಮಾಧಾನ!
OSCAR-2019
ತುಮಕೂರು, ಮೇ 2 – ಬುಲೆರೋ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ಸಂಭವಿಸಿದೆ.ಹೊಳವನಹಳ್ಳಿ ಗ್ರಾಮದ ಅಂಬೇಡ್ಕರ್ ಬಡಾವಣೆ ನಿವಾಸಿ ಮಂಜುನಾಥ್(23) ಮೃತಪಟ್ಟ ಹಿಂಬದಿ ಸವಾರ.ತುಮಕೂರು ಕಡೆಯಿಂದ ಮಧುಗಿರಿ ಕಡೆಗೆ ತೆರಳುತ್ತಿದ್ದ ಬುಲೆರೋ ವಾಹನ, ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈ ಸಂಬಂಧ ಕೊರಟಗೆರೆ ಠಾಣೆ ವೃತ್ತ ನಿರೀಕ್ಷಕ ಮುನಿರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು, ಸೆ.12-ಪೊಲೀಸ್ ಕಾನ್‍ಸ್ಟೆಬಲ್‍ಗಳ ವೇತನವನ್ನು ಕಂದಾಯ ಇಲಾಖೆಯ ನಿರೀಕ್ಷಕರ ಹುದ್ದೆಗೆ ಸರಿಸಮಾನವಾಗಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಆರನೇ ವೇತನ ಆಯೋಗ ಜಾರಿ ವೇಳೆ ಇದು
OSCAR-2019
ಆಲಮಟ್ಟಿ: ಎರಡು ದಶಕಗಳ ಹಿಂದೆಯೇ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಸಂಪೂರ್ಣ ನೀರಾವರಿ ಆಗಬೇಕಿತ್ತು. ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಈಡೇರಿಲ್ಲ ಎಂದು ಮುದ್ದೇಬಿಹಾಳ... ಇಂಡಿ: ತಾಲೂಕಿನ ಮರಗೂರದ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಇಂಡಿ ಹಾಗೂ ಸಿಂದಗಿ ಭಾಗದ ಕಬ್ಬು... ವಿಜಯಪುರ: ರಾಜಕೀಯ ವರದಿಗಾರಿಕೆ ಮಾಡುವ ಪತ್ರಕರ್ತರು ರಾಜಕೀಯದ ಎಲ್ಲ ಆಯಾಮಗಳ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ನಿರಂತರ ಅಧ್ಯಯನ ಮಾಡಬೇಕು. ಜನರಿಗೆ ತಪ್ಪು ಮಾಹಿತಿ ತಲುಪದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ...
OSCAR-2019
ಕಲಬುರ್ಗಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪೊಲೀಸ್‌, ಜೆಸ್ಕಾಂ ಮತ್ತು ಮಹಾನಗರ ಪಾಲಿಕೆಯ ಪರವಾನಿಗೆ ಪಡೆಯಲು ಮಹಾನಗರ ಪಾಲಿಕೆ ಕಚೇರಿಯಲ್ಲಿ ವಿಶೇಷ ಕೌಂಟರ್‌ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು. ‘ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸೌಲಭ್ಯ ಕಲ್ಪಿಸಿರುವುದನ್ನು ಪರಿಶೀಲಿಸಲು ನಗರದಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟರನ್ನು ನೇಮಿಸುವುದಾಗಿಯೂ ಅವರು ಹೇಳಿದರು. ‘ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸ್ಥಳ ವಿವಾದಕ್ಕೆ ಒಳಪಟ್ಟಿರಬಾರದು. ಶಾಮಿಯಾನಕ್ಕೆ 24 ಗಂಟೆಗಳ ಕಾಲ ಕಾವಲು ಇರಬೇಕು. ಬೆಂಕಿ ಅವಘಡ ಸಂಭವಿಸದಂತೆ ಜಾಗೃತಿ ವಹಿಸಬೇಕು. ಎತ್ತರದ ವಿಗ್ರಹ ತರುವಾಗ ರಸ್ತೆ ಮಧ್ಯದ ವಿದ್ಯುತ್‌ ತಂತಿಗೆ ತಾಗದಂತೆ ಎಚ್ಚರ ವಹಿಸಬೇಕು. ಅನವಶ್ಯಕವಾಗಿ ಬಣ್ಣಗಳನ್ನು ತೂರಿ ಮತೀಯ ಗಲಭೆ ಸೃಷ್ಟಿಸಬಾರದು’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ ಸಲಹೆ ನೀಡಿದರು.
OSCAR-2019
ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡ ಆರೋಪಿಗಳನ್ನು ಹಿಡಿಯಲು ಪೊಲೀಸರು ಹಲವಾರು ವಿಧಾನ ಅನುಸರಿಸುತ್ತಾರೆ. ಅಮಾಯಕನೊಬ್ಬನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಸೆರೆ ಹಿಡಿಯಲು ಮುಂಬೈ ಪೊಲೀಸ್ ಪೇದೆಯೊಬ್ಬರು ಆಟೋರಿಕ್ಷಾ ಚಾಲನೆ Read more…
OSCAR-2019
ಚಿತ್ತ ಚಂಚಲ. ಮೊನ್ನೆಯಿಂದ ಅವನ ಮನಸು ಗರಾಜು ಆಗಿಬಿಟ್ಟಿದೆ. ತುಟಿಯ ಬದಿಗೆ ಗ್ರೀಸು ಮೆತ್ತಿಕೊಂಡು ಒಂದೊಂದೇ ಸ್ಪ್ಯಾನರ್ ಹಿಡಿದು ತಿರುಗಿಸುವವನಂತೆ, ಎಕ್ಸ್‌ಲೇಟರ್ ವಯರ್ ಕೊಂಚ ಬಿಗಿ-ಸಡಿಲ ಮಾಡಿ ಪರೀಕ್ಷಿಸುವವನಂತೆ, ಯಾವುದೋ ವೆಹಿಕಲ್‌ನ್ನು ಸಮಸ್ಥಿತಿಗೆ ತರಲು ಹೊರಟ ಹುಡುಗನಂತೆ. ಊಹೂಂ...ಎಷ್ಟೆಂದರೂ ಮನಸ್ಸು ಕೇಳುತ್ತಿಲ್ಲ. ಉಗುರಿನಿಂದ ಮೀಟಿದ ತಂತಿ ನಡುಗುವಂತೆ ಮನಸ್ಸು ಕಂಪಿಸುತ್ತಿದೆ. ಕಂಪಿಸಿ ಕಂಪಿಸಿ ದಿನದಿನಕ್ಕೆ ಹರಿತಗೊಳ್ಳುತ್ತಿದೆ ! ಮತ್ತೊಂದನ್ನು ಕತ್ತರಿಸೀತೋ, ತನ್ನತಾನೇ ಗಾಯಗೊಳಿಸಿಕೊಂಡೀತೋ? ಆ ಅಲಗು ಅಲುಗುತ್ತಾ ನಲುಗುತ್ತಿರುವಾಗ ಹೊರಡುವ ತರಂಗಗಳು, ಇನ್ಯಾರದ್ದೋ ಸ್ವರಗಳನ್ನೂ ಸೇರಿಸಿಕೊಂಡು ಬಂದು ಪ್ರತಿಧ್ವನಿಗೊಳ್ಳುತ್ತವೆ ! ಸಣ್ಣ ಊರಿನ ಕನ್ನಡ ಶಾಲೆ ಬಿಟ್ಟು, ದೂರದ ದೊಡ್ಡ ಊರಿನ ದೊಡ್ಡ ಕಾಲೇಜಿನ ಇಂಗ್ಲಿಷ್ ಪಾಠ ಕೇಳಿಸಿಕೊಳ್ಳುತ್ತಾ ಹಾಸ್ಟೆಲ್‌ಗೆ ಬಿದ್ದವರು ತಡಬಡಾಯಿಸುತ್ತಾರಲ್ಲ, ಹಾಗೆ ಬೆಂಗಳೂರಿಗೆ ಮೊದಲು ಬಂದವರೂ ತಬ್ಬಿಬ್ಬಾಗುತ್ತಾರೆ. ಬೆಂಗಳೂರಿಗೆ ಬಂದು ವರ್ಷವಾದರೂ ಕೆಲಸ ಸಿಗದೆ ವಾಪಸ್ ಹೋದವನು, ಸಣ್ಣದೊಂದು ಕೆಲಸ ಮಾಡುತ್ತಾ ಆಸೆಗಳಿಗೆ ಬಿದ್ದು ಮೈತುಂಬ ಸಾಲ ಮಾಡಿಕೊಂಡವನು, ಮೊನ್ನೆಮೊನ್ನೆ ಬಂದು ಈಗ ಕಾರಿನಲ್ಲಿ ಓಡಾಡುತ್ತಿರುವವನು...ಹೀಗೆಲ್ಲ ಯೋಚಿಸಿಕೊಂಡು ಅವನು ಟಿ.ವಿ ಎದುರು ಕುಳಿತಿದ್ದಾನೆ. ಇನ್ನು ಏನಾದರೊಂದು ನಿರ್ಧಾರ ಮಾಡಲೇಬೇಕು. ಆದರೆ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದೂ ಸೋಲುವುದಿಲ್ವಾ?! ಅದು ಸೋಮಾರಿಗಳ ಆಟ ಅಂತಾರೆ. ತಮ್ಮ ತಂಡದ ಇಬ್ಬರು ಆಡುತ್ತಿರುವಾಗ ಉಳಿದ ಒಂಬತ್ತೂ ಜನ ಫ್ಯಾನ್ ಕೆಳಗೆ ಪೆಪ್ಸಿ ಹೀರುತ್ತ ಇನ್ಯಾವ ಆಟದಲ್ಲಾದರೂ ಕುಳಿತಿರುತ್ತಾರಾ ಅಂತ ಕೇಳುತ್ತಾರೆ. ಕ್ರಿಕೆಟ್‌ನಿಂದ ಸಮಯ ವ್ಯರ್ಥ, ಅಹರ್ನಿಶಿ ಪಂದ್ಯದಿಂದ ವಿದ್ಯುತ್ ವ್ಯರ್ಥ, ಆಡೋದು ಬೆರಳೆಣಿಕೆಯ ದೇಶಗಳು ...ಇತ್ಯಾದಿ ಆರೋಪಗಳಿದ್ದರೂ, ಬ್ರಿಟಿಷರು ಕಲಿಸಿದ ಆಟ ನಮಗೆ ಅಷ್ಟೊಂದು ಪ್ರಿಯವಾದದ್ದು ಹೇಗೆ? ಅದರಲ್ಲಿ ಮುಟ್ಟಿಕೊಳ್ಳುವ ಅಗತ್ಯ ಇಲ್ಲದ್ದರಿಂದ ಮೈಲಿಗೆಯ ಸಮಸ್ಯೆ ಇರಲಿಲ್ಲ. ಎಲ್ಲರೂ ಒಂದೇ ಬಾಲ್‌ಗೆ ಎಂಜಲು ಉದ್ದುವುದು ಬೇರೆ ಮಾತು !ಭಾರತೀಯರಿಗೆ ಇಷ್ಟವಾದ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಅವಕಾಶ. ನಮ್ಮಲ್ಲಿನ ಸವಲತ್ತುಗಳಿಗೆ ಅನುಗುಣವಾಗಿ ಬೇಕೆಂದ ಹಾಗೆ ನಿಯಮ ಬದಲಾಯಿಸಿಕೊಂಡು ಆಡಬಹುದು...ಹೀಗೆ ನಾನಾ ಕಾರಣಗಳು. ಅಂತೂ ಸಮಾಜದ ಮೇಲ್ವರ್ಗದ ಧನಿಕರಿಂದ ಆರಂಭವಾಗಿ ಕೆಳಸ್ತರದ ನಿರಕ್ಷರಿಯವರೆಗೆ ಅದು ಭಾರತೀಯರ ಇಷ್ಟದ ಆಟ. ಅದರಲ್ಲೂ ಮತ್ತೆ ಮತ್ತೆ ಎರಡೂ ಕಾಲುಗಳನ್ನು ಕುಂಟಾಗಿಸಿ ಅಗಲಿಸಿ ಸಚಿನ್ ತೆಂಡೂಲ್ಕರ್ ಕ್ರೀಡಾಂಗಣಕ್ಕೆ ಇಳಿದು ಬರುತ್ತಿದ್ದಾನೆ ಅಂದರೆ ಸಾವಿರಸಾವಿರ ಸಂಖ್ಯೆಯ ಜನರಿಂದ ಜಯಘೋಷ ; ಜಯ್ ಹೋ, ಹೋ ಹೋ. ಹಳ್ಳಿ ತೊರೆದು ಪಟ್ಟಣಕ್ಕೆ ಬಂದ ಪೋರರಿಗೆ ಇಲ್ಲಿ ಆಯ್ಕೆ ಎಂಬುದೇ ಇದ್ದಂತಿಲ್ಲ. ಇಲ್ಲಿರುವ ಯಾವುವೂ ಅವರದಲ್ಲ. ಸ್ವಂತ ಭೂಮಿ, ಮನೆ, ತಾವು ಓದಿದ ಶಾಲೆ, ತಮ್ಮ ಗ್ರಾಮದ ದೇವಸ್ಥಾನ, ತಾವು ಕಟ್ಟಿದ ಸಂಘ, ಯಾವುವೂ ಪೇಟೆಯಲ್ಲಿಲ್ಲ. ಬಂದ ಬಳಿಕ ಏನೇನೋ ಮಾಡಿಕೊಂಡಿದ್ದರೂ, ಆರಿಸಿಕೊಂಡಿದ್ದರೂ ಅವೆಲ್ಲ ಹಕ್ಕಿನಿಂದ ಬಂದವಲ್ಲ. ಅನ್ಯ ಕಾರಣಗಳಿಗಾಗಿ ಕಟ್ಟಿಕೊಂಡವು. ಹಾಗಾಗಿ ಎಲ್ಲ ಆಯ್ಕೆಗಳೂ ಒತ್ತಡದ-ಅನಿವಾರ್ಯದ ಆಯ್ಕೆಗಳು. ಒಂದು ಕೊಂಡರೆ ಎರಡು ಫ್ರೀ ಸಿಗುತ್ತಲ್ಲಾ ಅಂತ ಕೊಂಡುಕೊಂಡ ಹಾಗೆ ! ಟಿ.ವಿ ಎದುರು ಕುಳಿತಿರುವ ಅವನ ಹೆಸರು ರಮೇಶ. ಅವನಿಗೆ ನಿಜವಾಗಿ ಏನು ಬೇಕು ಅಂತ, ಹೇಳದೆ ತಿಳಿದುಕೊಳ್ಳಬಲ್ಲವನು ಒಬ್ಬನೇ. ಅವನ ಹಾಗೂ ಅವನಂಥವರ 'ದುಃಖ ಪರಿಹಾರಕ-ಕ್ಷೇಮ ಪರಿಪಾಲಕ'ಅವನೊಬ್ಬನೇ. ಯಾರವನು? ತುಂಬಾ ಬೇಜಾರಾದಾಗ, ಒಬ್ಬೊಬ್ಬರು ಒಂದೊಂದು ಮಾತು ಆಡುತ್ತಿರುವಾಗ, ಯಾರ ಮಾತಿನಂತೆ, ಯಾವ ರೀತಿಯಂತೆ ನಡೆಯಬೇಕು ಅನ್ನುವುದೇ ರಮೇಶನಿಗೆ ಸಮಸ್ಯೆ. ಮಾತನ್ನು ನಂಬುವ ಮೊದಲು, ಅದನ್ನು ಆಡುತ್ತಿರುವನನ್ನು ನಂಬಬೇಕಲ್ಲ. ಆಡುವವರಲ್ಲಿ ಆತ ನಂಬುವುದು ಒಬ್ಬನನ್ನೇ ...ಹಾ ಹಾ ತೆಂಡೂಲ್ಕರ್ ! ರಮೇಶನಿಗೆ ಅವನ ಕಂಡರೆ ಅತಿ ಇಷ್ಟ. ತನಗೆ ಡಬಲ್ ಸೆಂಚುರಿ ಹೊಡೆಯುವ ಆಸೆ ಇದೆ ಎಂದವನು ‘ಅಭಿನವ ತೆಂಡೂಲ್ಕರ್’ ಅನ್ನಿಸಿಕೊಳ್ಳತೊಡಗಿದ, ಮೋಸ್ಟ್ ಡಿಸ್ಟ್ರಕ್ಟಿವ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್. ಆಡದೆ ಮಾಡಿ ತೋರಿಸಿದವನು ಮತ್ತು ಇನ್ನು ಹೇಳುವುದಕ್ಕೇ ಏನೂ ಉಳಿದಿಲ್ಲವೆಂಬಷ್ಟು ಮಾಡಿದವನು ಸಚಿನ್ ತೆಂಡೂಲ್ಕರ್. ‘ಸ್ಥಿತೋಸ್ಮಿ ಗತ ಸಂದೇಹಃ ಕರಿಷ್ಯೇ ವಚನಂ ತವ’. ‘ಸಂದೇಹವೆಲ್ಲ ನಿವಾರಣೆಯಾಗಿ ಸ್ಥಿತಪ್ರಜ್ಞನಾಗಿದ್ದೇನೆ. ನೀನು ಹೇಳಿದಂತೆ ಮಾಡುತ್ತೇನೆ’. ಗೀತೋಪದೇಶದ ಕೊನೆಗೆ ಅರ್ಜುನನಿಗೆ ಕೃಷ್ಣನ ಬಗ್ಗೆ ಅದೆಂಥ ನಂಬಿಕೆ ಬಂದುಬಿಟ್ಟಿದೆ ! 'ನಿನ್ನ ಮಾತಿನಂತೆ ನಡೆಯುತ್ತೇನೆ' ಎನ್ನುವುದಕ್ಕೂ ಎಂಥ ಚಿತ್ತ ದೃಢತೆ ಬೇಕು. ಸಚಿನ್ ಬಳಿ ಅಂತಹ ನಂಬಿಕೆ ಇದೆ, ನೀನು ಹಾಕುವ ಚೆಂಡಿನಂತೆ ಆಡುತ್ತೇನೆ ಅಂತ ! ಸ್ಕ್ವೇರ್‌ಕಟ್ ಮಾಡಲಿ, ಹುಕ್ ತಟ್ಟಲಿ, ಕವರ್ ಡ್ರೈವ್ ಬಾರಿಸಲಿ, ಸ್ಟ್ರೈಟ್ ಬ್ಯಾಟ್ ಆಡಲಿ ಚೆಂದವೊ ಚೆಂದ. ಯಾವ ಚೆಂಡಿಗೆ ಯಾವ ರೀತಿ ಆಡಬೇಕು ಅನ್ನುವುದರಲ್ಲಿ ಕ್ಷಣದ ಗೊಂದಲವೂ ಆತನ ಆಟದಲ್ಲಿಲ್ಲ. ಕಳೆದ ೧೦ ತಿಂಗಳುಗಳಲ್ಲಿ ೧೨ ಶತಕಗಳು ! ೨೯೬೨ನೇ ‘ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯ’ದಲ್ಲಿ ದ್ವಿಶತಕ ಹೊಡೆದು ಮೊದಲಿಗ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಮೊತ್ತ ನೋಡಿ- ೧೦೫(ಅಜೇಯ), ೧೬, ೧೪೩, ೭, ೧೦೦, ೧೦೬, ೪, ೨೦೦ ! ಕೊಂಚ ಕಚ್ಚಿಕೊಂಡನೋ ಆತನನ್ನಲ್ಲದೆ ಮತ್ತೊಬ್ಬನ ನೆಚ್ಚಿಕೊಳ್ಳಬೇಕಿಲ್ಲ . ೩೭ರಲ್ಲಿರುವ ಸಚಿನ್ ಮತ್ತೆ ಜ್ವಲಿಸುತ್ತಿರುವ ಉಜ್ವಲ ಪ್ರತಿಭೆ . ಒಂದಾನೊಂದು ಕಾಲದಲ್ಲಿ ಅಂದರೆ, ಹದಿನೈದು ನವಂಬರ್ ೧೯೮೯ರಂದು ಅಂಗಳಕ್ಕೆ ಕಾಲಿಟ್ಟ ಈ ಭಾರತರತ್ನ, ಈಗಲೂ ಅಂದಿನ ಹಾಗೇ ಬೆವರುತ್ತಿದ್ದಾನೆ ! ಇನ್ನು ಹನ್ನೆರಡು ತಿಂಗಳಲ್ಲಿ ತನ್ನ ಆರನೇ ವಿಶ್ವಕಪ್ ಕ್ರಿಕೆಟ್ ಆಡುತ್ತಾನೆ ಅಂತ ರಮೇಶ ಬಲವಾಗಿ ನಂಬಿದ್ದಾನೆ. 'ಶತಕ ದಾಟಿದ ಕೂಡಲೇ ರಿಸ್ಕ್ ತೆಗೆದುಕೊಳ್ಳದಿರಲು ನನಗೆ ಸಾಧ್ಯವೇ ಆಗುವುದಿಲ್ಲ. ಆದರೆ ಸಚಿನ್ ಹಾಗಲ್ಲ' ಅಂದಿದ್ದಾನೆ ಸೆಹ್ವಾಗ್. ಸಚಿನ್‌ನ ನಿರ್ಧಾರದಲ್ಲಿ ಅಂತಹ ದೃಢತೆ-ಖಚಿತತೆ ಇದೆ. ರಮೇಶ ಆಗಾಗ ಗುನುಗುತ್ತಾನೆ - ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವನೆಂದೂ...ಬಳಿಕೊಮ್ಮೆ ‘ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೇ...’ಅಂತಲೂ . ಆದರೆ ಆಡುತ್ತ ಆಡುತ್ತ ಸಚಿನ್, ಅವನ ಆಟ ನೋಡುತ್ತ ನೋಡುತ್ತ ಎಲ್ಲರ ಸಂಭ್ರಮ ಸಂತೋಷ ಚಿರಸ್ಥಾಯಿ. ಹಾಗಾಗಿಯೇ ಸಣ್ಣವನಿದ್ದಾಗ, ಗೆಳೆಯರ ಜತೆ ಸೇರಿ ಕ್ರಿಕೆಟ್ ಆಡುತ್ತ ಬ್ಯಾಟು ಹಿಡಿದ ಕೂಡಲೇ, ಬಾಯಲ್ಲಿ ನಗು ತುಳುಕಿಸುತ್ತಾ ರಮೇಶ ಹೇಳುತ್ತಿದ್ದ 'ನಾನು ಸಚಿನ್ ರಮೇಶ್ ತೆಂಡೂಲ್ಕರ್!'
OSCAR-2019
ವಿಶ್ವದ ಪ್ರತಿಷ್ಠಿತ ಅಂತರಜಾಲ ಶೋಧನಾ ಸಾಧನವಾಗಿರುವ ಗೂಗಲ್ ಎಲ್ಲರಿಗೂ ಚಿರಪರಿಚಿತ. ಈ ಗೂಗಲ್ ಬೆಳವಣಿಗೆ ಹಿಂದೆ ಭಾರತೀಯರ ಪರಿಶ್ರಮ ಅಗಾಧವಾದುದು. ಸದ್ಯ ನಮ್ಮೆಲ್ಲರಿಗೂ ಈ ಗೂಗಲ್ ನ ಪ್ರತಿಷ್ಠಿತ ಸ್ಥಾನ ಸಿಇಒ ಜವಾಬ್ದಾರಿಯನ್ನು ಭಾರತದವರಾದ ಸುಂದರ್ ಪಿಚೈ ಹೊತ್ತಿರುವುದು ತಿಳಿದಿದೆ. ಪಿಚೈನಂತಹ ಸಾಕಷ್ಟು ಪ್ರತಿಭಾವಂತ ಭಾರತೀಯ ಇಂಜಿನಿಯರ್ ಗಳು ಈ ಸಂಸ್ಥೆಯ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆ ಪೈಕಿ ಅಮಿತ್ ಸಿಂಘಲ್ ಸಹ ಒಬ್ಬರು. ಸುಮಾರು 15 ವರ್ಷಗಳಿಂದ ಗೂಗಲ್ ನ ಬೆಳವಣಿಗೆಯ ಭಾಗವಾಗವಾಗಿರುವ ಅಮಿತ್, ಇದೇ ತಿಂಗಳಾಂತ್ಯದಲ್ಲಿ ಗೂಗಲ್ ನಿಂದ ನಿವೃತ್ತಿ ಪಡೆಯಲಿದ್ದು, ತಮ್ಮ ಕುಟುಂಬದವರೊಡನೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಈ ಹಂತದಲ್ಲಿ ಅಮಿತ್ ಅವರ ಈ ಸಾಧನೆಯ ಹಾದಿ ನಮ್ಮೆಲ್ಲರಿಗೂ ಸ್ಫೂರ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಸಾಧಕ ನಡೆದು ಬಂದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಂತರ್ಜಾಲದಲ್ಲಿ ಇವತ್ತು ಏನೇ ಹುಡುಕೋದಿದ್ರೂ, ಗೂಗಲ್ ಮಾಡಿಬಿಡು ಎಂಬಮಟ್ಟಿಗೆ ಸಂಸ್ಥೆ ಬೆಳೆದು ನಿಂತಿದೆ. ಸಂಸ್ಥಾಪಕರಾದ ಲ್ಯಾರಿ ಪೇಜ್, ಸರ್ಜಿ ಬಿನ್ ಅವರಿಗೆ ಇದರ ಶ್ರೇಯಸ್ಸು ಸಲ್ಲೋದರಲ್ಲಿ ತಪ್ಪಿಲ್ಲ. ಆದರೆ ಗೂಗಲ್ ಸರ್ಚ್ ಇಂಜಿನ್ ಅನ್ನು ಈ ಮಟ್ಟಕ್ಕೆ ಪರಿಣಾಮಕಾರಿಯಾಗಿ ತಯಾರು ಮಾಡಿದ್ದರಲ್ಲಿ ಅಮಿತ್ ಸಿಂಘಲ್ ಕೊಡುಗೆ ಅನನ್ಯ. ಅಮಿತ್ ಹಾಗೂ ಆತನ ತಂಡದ ಸದಸ್ಯರು ಗೂಗಲ್ ನ ಸರ್ಚ್ ಆಲ್ಗರಿದಮ್ (ಸಮಸ್ಯೆ ಬಗೆಹರಿಸಲು ಬಳಸುವ ಫಾರ್ಮುಲಾ ಪ್ರಕ್ರಿಯೆ) ನ ಜವಾಬ್ದಾರಿ ಹೊತ್ತಿದ್ದರು. ಗೂಗಲ್ ನಲ್ಲಿ ಬಳಸುವ ಶ್ರೇಣಿಕೃತ ಆಲ್ಗರಿದಮ್ (ವ್ಯಕ್ತಿಯೊಬ್ಬನ ಪ್ರಶ್ನೆಗೆ ಬೇಕಾದ ಉತ್ತರ ಯಾವ ವೆಬ್ ಪೇಜ್ನಲ್ಲಿ ಸಿಗಲಿದೆ ಎಂಬ ಫಾರ್ಮುಲಾ) ನ ಪರಿಣಿತರಾಗಿದ್ದರು. ಗೂಗಲ್ ಸೇರಿದ ಒಂದು ವರ್ಷದ ಅವಧಿಯಲ್ಲಿ ಅಮಿತ್, ಗೂಗಲ್ ನ ಆರಂಭದಲ್ಲಿ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಅವರು ಬರೆದಿದ್ದ ಸರ್ಚ್ ಇಂಜಿನ್ ನ ಫಾರ್ಮುಲಾವನ್ನು ಸಂಪೂರ್ಣವಾಗಿ ಬದಲಿಸಿ, ಹೊಸ ರೂಪಕೊಟ್ಟರು. ಭಾರತದಲ್ಲಿದ್ದುಕೊಂಡು ಭವಿಷ್ಯ ಕನಸುತ್ತಿರುವ ಯುವ ಸಮುದಾಯಕ್ಕೆ ಅಮಿತ್ ಬದುಕಿಂದ ಸಿಗಬಹುದಾದ ಮುಖ್ಯ ಪ್ರೇರಣೆ ಅಂತಂದ್ರೆ- ಅಮಿತ್ ಸಿಂಘಲ್ ಚಿಕ್ಕ ಪಟ್ಟಣವೊಂದರಿಂದ ಬಂದವರು. ಉತ್ತರ ಪ್ರದೇಶದ ಜಾನ್ಸಿಯಲ್ಲಿ ಜನಿಸಿದ ಅಮಿತ್ ಸಿಂಘಲ್ ಗೂಗಲ್ ಸಂಸ್ಥೆಯ ಮೇಲುಸ್ತರ ಮುಟ್ಟಿದ್ದು ರೋಮಾಂಚನದ ಸಂಗತಿ. 1989ರಲ್ಲಿ ರೂರ್ಕಿಯಲ್ಲಿರುವ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಇದೇ ಕ್ಷೇತ್ರದಲ್ಲಿ ತಮ್ಮ ಅಧ್ಯಯನ ಮುಂದುವರಿಸಿದ ಅಮಿತ್, 1991ರಲ್ಲಿ ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಸಿ ಮಿನಸೋಟ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆದರು. 1996ರಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಪ್ರೊ.ಗೆರಾರ್ಡ್ ಸಲ್ಟನ್ ಜತೆ ಅಧ್ಯಯನ ನಡೆಸಿ ಪಿಎಚ್ ಡಿ ಪದವಿ ಪಡೆದರು. ನಂತರ ಅಂತರಜಾಲದಲ್ಲಿ ಶೋಧಕ್ಕೆ ಸಂಬಂಧಿಸಿದಂತೆ ಇದ್ದ ಕೆಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಟಿ ಅಂಟ್ ಟಿ ಲ್ಯಾಬ್ಸ್ ಗೆ ಸೇರಿಕೊಂಡರು. ಅಲ್ಲಿ ಶೋಧದ ಮೂಲಕ ಮಾಹಿತಿಯನ್ನು ಪಡೆಯುವ ಬಗ್ಗೆ ಸಂಶೋಧನೆ ನಡೆಸಿದರು. 2000ನೇ ಇಸವಿಯಲ್ಲಿ ಅಮಿತ್, ತಮ್ಮ ಸ್ನೇಹಿತ ಕೃಷ್ಣ ಭಟ್ ಅವರ ಸಲಹೆ ಮೂಲಕ ಗೂಗಲ್ ಸಂಸ್ಥೆಯನ್ನು ಸೇರಿಕೊಂಡರು. ಆಮೇಲೆ ಅಮಿತ್ ತಮ್ಮ ಹಾದಿಯಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. 2001ರಲ್ಲಿ ಹೊಸ ಸರ್ಚ್ ಇಂಜಿನ್ ಪಡೆದ ನಂತರ ಗೂಗಲ್, ಹೊಸ ಹೊಸ ಆವಿಷ್ಕಾರ, ಮಾಹಿತಿ ಶೋಧ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ ವಿಶ್ವದಲ್ಲಿನ ಯಾವುದೇ ವಿಷಯವನ್ನುಬೆರಳ ತುದಿಗೆ ತಂದು ನಿಲ್ಲಿಸುವ ಮಟ್ಟಕ್ಕೆ ಬಂದಿತು. ಇಂತಿಪ್ಪ ಗೂಗಲ್ ಗೆ ಹೊಸ ಸವಾಲು ಎದುರಾಗಿದ್ದು ಸ್ಮಾರ್ಟ್ ಫೋನ್ ಗಳು ವ್ಯಾಪಕವಾಗಿ ಮಾರುಕಟ್ಟೆ ಆಕ್ರಮಿಸಿಕೊಂಡು ಗ್ರಾಹಕ ವರ್ತನೆಯನ್ನೇ ಬದಲಾಯಿಸಿದ ಘಟ್ಟದಲ್ಲಿ. ಗೂಗಲ್ ಹುಡುಕಾಟವನ್ನು ಮೊಬೈಲ್ ಫೋನ್ ಗಳ ಯುಗಕ್ಕೆ ತಕ್ಕಂತೆ ನವೀಕರಿಸುವ ಗುರುತರ ಜವಾಬ್ದಾರಿಯನ್ನೂ ಮುಂಚೂಣಿಯಲ್ಲಿ ನಿಂತು ನಿರ್ವಹಿಸಿದ್ದು ಅಮಿತ್ ಸಿಂಘಲ್ ಅವರೇ. ಆ ಪ್ರಯತ್ನದ ಫಲವೇ ಗೂಗಲ್ ನೌ ಆಗಿದೆ. ಗೂಗಲ್ ನಿಂದ ಅಮಿತ್ ನಿವೃತ್ತಿ ಪಡೆಯುತ್ತಿರುವುದನ್ನು ಆ್ಯಪಲ್ ಕಂಪನಿಯಿಂದ ಜಾನಿ ಇವ್ ಬಿಟ್ಟು ಹೋಗಿದ್ದಕ್ಕೆ ಹೋಲಿಕೆ ಮಾಡಲಾಗುತ್ತಿದ್ದು, ಗೂಗಲ್ ನ ಯಶಸ್ಸಿನಲ್ಲಿ ಅವರ ಪಾತ್ರವನ್ನು ಬಿಂಬಿಸುತ್ತದೆ. Next articleಈ 3 ವಿಡಿಯೋ ನೋಡಿ, ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಅನ್ನಬೇಕಾದದ್ದು ಸನ್ನಿ ಲಿಯೋನಿಗೋ, ರಾಧಿಕಾ ಆಪ್ಟೆಗೋ ಹೇಳಿ…
OSCAR-2019
ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಸಂಚಾರ ದಟ್ಟಣೆ ಮಿತಿ ಮೀರುತ್ತಿದೆ. ಆದರೆ ಸಂಚಾರ ಪೊಲೀಸರ ಸಂಖ್ಯೆ ಕಡಿಮೆ ಇದೆ. ಸಂಚಾರ ಪೊಲೀಸ್ ವಿಭಾಗದಲ್ಲಿ 1,260ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ. ಸದ್ಯ ಅಂದಾಜು 4 ಸಾವಿರ ಸಿಬ್ಬಂದಿಯೇ ನಗರದ ಸಂಚಾರ ದಟ್ಟಣೆ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸೂಕ್ತ ರೀತಿಯಲ್ಲಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸಂಚಾರ ಪೊಲೀಸರ ಮಾತಾಗಿದೆ. ಸಂಚಾರ ವಿಭಾಗದಲ್ಲಿ ಒಟ್ಟು 5,267 ಹುದ್ದೆಗಳಿವೆ. ಇದರಲ್ಲಿ 1,265 ಹುದ್ದೆಗಳು ಖಾಲಿ ಇವೆ. ಬಾಕಿ ಇರುವ ಹುದ್ದೆಗಳಲ್ಲಿ ಕಾನ್ ಸ್ಟೆಬಲ್ ಹುದ್ದೆ ಅಧಿಕ ಪ್ರಮಾಣದಲ್ಲಿದೆ. ರಸ್ತೆ ಅಪಘಾತಗಳು ಸಂಭವಿಸಿದಾಗ ಸ್ಥಳಕ್ಕೆ ತೆರಳಿ ಆ ಪ್ರಕರಣವನ್ನು ನಿರ್ವಹಿಸುವುದಲ್ಲದೆ ಸುಗಮ ಸಂಚಾರಕ್ಕೆ ಎಡೆಮಾಡಿಕೊಡಬೇಕಿದೆ. ಇನ್ನೊಂದೆಡೆ ಪೊಲೀಸರ ಕೊರತೆ ಹಿನ್ನೆಲೆಯಲ್ಲಿ ಸಿಬ್ಬಂದಿ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗಿದೆ. ಸಂಚಾರ ನಿಯಮ ಪಾಲಿಸಿ: ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಿ, ಸಿಬ್ಬಂದಿ ಕೊರತೆ ನಿವಾರಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ಇನ್ನಷ್ಟು ವಾಹನಗಳು ರಸ್ತೆಗಿಳಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಂಚಾರ ವಿಭಾಗದ ಎಡಿಜಿಪಿ ಹಿತೇಂದ್ರ ಹೇಳಿದ್ದಾರೆ.
OSCAR-2019
ನವದೆಹಲಿ: ಮುಂದಿನ ತಿಂಗಳಲ್ಲಿ ಸರ್ಬಿಯಾದಲ್ಲಿ ನಡೆಯಲಿರುವ ಡೇವಿಸ್ ಕಪ್‌ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯಕ್ಕೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನ ಗಳಿಸಲು ಹಿರಿಯ ಆಟಗಾರ ಲಿಯಾಂಡರ್ ಪೇಸ್‌ ವಿಫಲರಾಗಿದ್ದಾರೆ. ಆರು ಮಂದಿ ಆಟಗಾರರ ತಂಡವನ್ನು ಮಂಗಳವಾರ ಆರಿಸಲಾಗಿದ್ದು ಪೇಸ್ ಮತ್ತು ಸುಮಿತ್ ನಗಾಲ್ ಅವರನ್ನು ಕೈಬಿಡಲಾಗಿದೆ. ಚೀನಾ ಎದುರಿನ ಪಂದ್ಯದಲ್ಲಿ ಸ್ಥಾನ ಗಳಿಸದೇ ಇದ್ದ ಯೂಕಿ ಭಾಂಬ್ರಿ ತಂಡಕ್ಕೆ ಮರಳಿದ್ದಾರೆ. ಏಷ್ಯನ್‌ ಕ್ರೀಡಾಕೂಟದ ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದಿರುವ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್‌ ಕೂಡ ತಂಡದಲ್ಲಿದ್ದಾರೆ. ನಾಯಕ ಮಹೇಶ್ ಭೂಪತಿ ಅವರೊಂದಿಗೆ ಸಾಕೇತ್ ಮೈನೇನಿ ಕೂಡ ತಂಡದಲ್ಲಿದ್ದಾರೆ. ‘ಲಿಯಾಂಡರ್ ಪೇಸ್ ಮತ್ತು ಸುಮಿತ್ ನಗಾಲ್ ಅವರ ಹೆಸರು ಚರ್ಚೆಗೆ ಬರಲೇ ಇಲ್ಲ. ಲಿಯಾಂಡರ್‌ ಪೇಸ್‌ ಫಾರ್ಮ್‌ನಲ್ಲಿ ಇಲ್ಲದ ಕಾರಣ ಬೋಪಣ್ಣ ಮತ್ತು ದಿವಿಜ್ ಶರಣ್‌ ಮೇಲೆ ಭರವಸೆ ಇದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಸ್‌.ಪಿ.ಮಿಶ್ರಾ ತಿಳಿಸಿದರು. ತಂಡ ಇಂತಿದೆ: ಮಹೇಶ್ ಭೂಪತಿ (ನಾಯಕ), ಯೂಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್, ಪ್ರಜ್ಞೇಶ್‌ ಗುಣೇಶ್ವರನ್‌, ರೋಹನ್ ಬೋಪಣ್ಣ, ದಿವಿಜ್‌ ಶರಣ್‌, ಸಾಕೇತ್ ಮೈನೇನಿ. ಜೀಶನ್ ಅಲಿ (ಕೋಚ್‌).
OSCAR-2019
ಓಜಿಕುಪ್ಪಂ ಮೂಲದ ರಾಜು ಅಲಿಯಾಸ್ ಹೈಟೆಕ್ ರಾಜ ಬಂಧಿತ ಆರೋಪಿ. ಒಂದು ತಿಂಗಳ ಹಿಂದೆ ನಗರದ ಹೊರವಲಯದ ನೆಲಮಂಗಲದಲ್ಲಿ ಅಭಿಮಾನಿಯ ಸೋಗಿನಲ್ಲಿ ಬಂದ ಹೈಟೆಕ್ ರಾಜ, ನಟ ವಿನೋದ್ ರಾಜ್ ಕಾರಿನಲ್ಲಿದ್ದ 1 ಲಕ್ಷ ರೂ. ಹಣವನ್ನು ಎಗರಿಸಿ ಪರಾರಿಯಾಗಿದ್ದ. ಈ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
OSCAR-2019
ಕಾರ್ಮಿಕ ಕಾಯ್ದೆಯನ್ವಯ ಎಲ್ಲಾ ವಯಗಳಲ್ಲೂ ಕನಿಷ್ಠ ವೇತನ ನೀಡುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಕಾನೂನು ಜಾರಿಗೊಂಡರೆ ನಾಲ್ಕು ಕೋಟಿ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಈ ಹೊಸ ಕನಿಷ್ಠ ವೇತನ ವಿಧೇಯಕದಲ್ಲಿನ ಅಧಿನಿಯಮದ ಪ್ರಕಾರ ಎಲ್ಲಾ ವಲಯಗಳಲ್ಲಿನ ಕಾರ್ಮಿಕರಿಗೆ ಪ್ರತಿ ತಿಂಗಳೂ ಕನಿಷ್ಠ ವೇತನ 18,000 ರೂ. ನೀಡಬೇಕಾಗುತ್ತದೆ. ಈ ಪ್ರಸ್ತಾವನೆಯನ್ನು ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಅಂಗೀಕರಿಸಿ ಒಪ್ಪಿಗೆ ನೀಡಿದೆ. ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್‌ ಪಾವತಿ ಕಾಯ್ದೆ 1965, ಸಮಾನ ಸಂಭಾವನೆ ಕಾಯ್ದೆ 1976ನ್ನು ಈ ವಿಧೇಯಕದಲ್ಲಿ ಸೇರಿಸಲಾಗಿದೆ. ಕಾನೂನು ತಜ್ಞರ ಪ್ರಕಾರ ಈ ನೂತನ ವಿಧೇಯಕ ಸಿಹಿ ಸುದ್ದಿಯೂ ಹೌದು, ಕಹಿ ಸುದ್ದಿಯೂ ಹೌದು! ಏಕಂದರೆ ಕೇಂದ್ರ ಸರಕಾರವು ಇದುವರೆಗೂ ತನ್ನ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ಮಾತ್ರ ಕನಿಷ್ಠ ವೇತನದ ನಿರ್ಧಾರ ತೆಗೆದುಕೊಳ್ಳುತಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಈ ಕನಿಷ್ಠ ವೇತನದ ಬಗ್ಗೆ ಆ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದು ಕೊಳ್ಳುತ್ತಿದ್ದವು. ಹೀಗಾಗಿ ಭಾರತದಲ್ಲಿ ಏಕರೂಪದ ವೇತನವಿರಲಿಲ್ಲ. ಈ ಕಾನೂನು ಬಂದ್ರೆ ಹಲವು ಸಣ್ಣ ಕಂಪನಿಗಳಿಗೆ ತೊಂದರೆಯಾಗಲಿದೆ. ಏಕೆಂದರೆ ನಮ ದೇಶದಲ್ಲಿ ಬಹುಪಾಲು ಜನ ಸಣ್ಣ ಮತ್ತು ಮಧ್ಯಮ ಕಂಪನಿಗಳನ್ನು ನಡೆಸುತ್ತಿದ್ದಾರೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತುಂಬಾ ಕಡಿಮೆಯಲ್ಲಿದ್ದಾರೆ. 500 ಅಥವಾ ಅದಕ್ಕಿಂತ ಮೇಲ್ಪಟ್ಟ ಕಾರ್ಮಿಕರನ್ನು ಹೊಂದಿರುವ ಕಂಪನಿಗಳು ತುಂಬಾ ಕಡಿಮೆ. ಹಾಗಾಗಿ ಈ ಕನಿಷ್ಠ ವೇತನ ಜಾರಿ ಬಂದ್ರೆ ಸಂತಸವೇನೋ ನಿಜ. ಆದ್ರೆ ಸಣ್ಣ ಮತ್ತು ಮಧ್ಯಮ ಕಂಪನಿಗಳು ಕನಿಷ್ಠ ವೇತನವನ್ನು ಕೊಡಲಾಗದೆ ಕೆಲಸದಿಂದ ಕಾರ್ಮಿಕರನ್ನು ತೆಗೆಯುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆಧಾರ್‌ ಕಾರ್ಡ್‌'ನಲ್ಲಿ ತಪ್ಪುಗಳಿದ್ದರೆ ನೀವೇ, ನಿಮ್ಮ ಮೊಬೈಲ್'ನಲ್ಲೇ ಸರಿಪಡಿಸಬಹುದು! ಹೇಗೆ ಗೊತ್ತಾ? July 28, 2017 By Nimma Sulochana ಇವರು ಹೇಳಿರುವ ಪ್ರಕಾರ 2019ಕ್ಕೆ ಭಾರತದ ಜನರಿಗೆ ಬಿಜೆಪಿ ಮತ್ತು ಜಿಯೋ ಮಾತ್ರ ಆಪ್ಷನ್ ಆಗುತ್ತಾ! July 29, 2017 By Editors Pick ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಅವಲಂಬಿಸಿರುವ ಸೋಸಿಯಲ್ ಮೀಡಿಯಗಳಾದ ಪೇಸ್ಬುಕ್, ವಾಟ್ಸಪ್, ಟ್ವಿಟರ್ ಮುಂತಾದವುಗಳಲ್ಲಿ ಕೆಲವರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿದೆ. ಓ ದೇವ್ರೇ ಇವರೇನಪ್ಪಾ ಭಾರತದಲ್ಲಿರೋ ಯಾವ ಡಿಗ್ರಿಯನ್ನು ಬಿಟ್ಟಿಲ್ಲಾ..!ಇವ್ರು ಮಾಡಿರೋ ಪದವಿಗಳ ಬಗ್ಗೆ ಕೇಳ್ತಾ ಹೋದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ… ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ. ಭಾರತದಲ್ಲಿ ಬಿಕಿನಿ ಏರ್ ಲೈನ್ಸ್..!ವಿಮಾನದಲ್ಲಿ ಬಿಕಿನಿ ಸುಂದರಿಯರು!?ಏನೆಲ್ಲಾ ಸೌಲಭ್ಯ ಇದೆ ಗೊತ್ತಾ.?ಮುಂದೆ ಓದಿ ಶಾಕ್ ಆಗ್ತೀರಾ.. ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಬಿಕಿನಿ ಸುಂದರಿಯರು ಭಾರತಕ್ಕೂ ಬರುತ್ತಿದ್ದಾರೆ. ಬಿಕಿನಿ ಸುಂದರಿಯರು… ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸುತ್ತಿರುವುದು ಪ್ರಯಾಣಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ… ರಕ್ಷಿತ್ ಶೆಟ್ಟಿ ನಟಿಸಿದ್ದ ಕನ್ನಡದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ನ್ನೇ ಉಟ್ಟು ಹಾಕಿತ್ತು. ಕೋಟಿ ಕೋಟಿ ಹಣವನ್ನು ಗಳಿಸಿತ್ತು. ಇದಲ್ಲದೆ ಪರಭಾಷೆಯ ಚಿತ್ರಗಳಿಗೆ ಸಹ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ್ದ ಹಲವಾರು ನಟ ನಟಿಯರ ಬದುಕಿನ ದಾರಿಯನ್ನೇ ಬದಲಾಯಿಸಿದ ಚಿತ್ರ ಇದು. ಈ ಚಿತ್ರದ ಯಶಸ್ಸಿನ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಅಭಿನಯವನ್ನು ಮೆಚ್ಚಿ ಪರಭಾಷೆ ಚಿತ್ರಗಳಿಂದ ಕಾಲ್ ಶೀಟ್ ಬಂದು ಅಲ್ಲಿಯೂ… wwe ಫೈಟ್ ನೀವೂ ಎಲ್ಲರೂ ನೋಡೇ ಇರ್ತೀರಿ…ಆದರೆ ನಮ್ಮ ಹಳ್ಳಿ ಹುಡುಗರ wwe ಫೈಟ್ ನೋಡಿದ್ದೀರಾ… ನೋಡಿಲ್ಲಾ ಅಂದ್ರೆ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ…
OSCAR-2019
ಮರವಂತೆ: ಉಡುಪಿಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಂಧತ್ವ ನಿವಾರಣಾ ವಿಭಾಗ ಮತ್ತು ಮರವಂತೆಯ ಸಾಧನಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮೇ 31ರ ಬೆಳಗ್ಗೆ 9:30ರಿಂದ ಮಧ್ಯಾಹ್ನ 1:00 ಗಂಟೆಯ ವರೆಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯುವುದು. ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ನಡೆಯುವ ಈ ಶಿಬಿರದಲ್ಲಿ ಪರಿಣತ ವೈದ್ಯರು ಕಣ್ಣಿನ ಪೂರ್ಣ ತಪಾಸಣೆ ನಡೆಸುವರು. ಅಗತ್ಯವೆಂದು ಕಂಡುಬಂದವರನ್ನು ಆಸ್ಪತ್ರೆಯ ವಾಹನದಲ್ಲಿ ಉಡುಪಿಗೆ ಕರೆದೊಯ್ದು ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಿ, ಮರುದಿನ ಅವರನ್ನು ಮನೆಗೆ ತಲಪಿಸಲಾಗುವುದು. ಕನ್ನಡಕ ಅಗತ್ಯ ಇರುವವರಿಗೆ ರಿಯಾಯಿತಿ ದರದಲ್ಲಿ ಅದನ್ನು ಒದಗಿಸಲಾಗುವುದು. ಕಣ್ಣಿನ ಸಮಸ್ಯೆ ಇರುವವರು ಶಿಬಿರದ ಸದುಪಯೋಗ ಪಡೆಯಬೇಕೆಂದು ಸಾಧನಾ ವಿನಂತಿಸಿದೆ.
OSCAR-2019
ರಾಜ್ ಕೋಟ್ : `ನಾನು ಚಹಾ ಮಾರಿದ್ದು ನಿಜ. ಚಹಾ ಮಾರುವವ ಕೂಡ ಹೌದು, ಆದರೆ ಎಂದಿಗೂ ದೇಶವನ್ನು ಮಾರಾಟ ಮಾಡಿಲ್ಲ ‘ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಾಕ್ಕೆ ಧುಮುಕಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸೋಮವಾರ ನಡೆದ ಚುನಾವಣಾ ಪ್ರಚಾರದ ರ್ಯಾಲಿತಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಮುಖಂಡರ ವಿರುದ್ಧ ತೀವ್ರ ವಾಗ್ಬಾಣ ಬಿಟ್ಟರು. ರಾಜ್‌ಕೋಟ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಚಹಾ ಮಾರುವವ ಎಂದು ಟೀಕಿಸಿದ್ದ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ಼ ಇಗ ಮಾಡುತ್ತಿರುವುದೇನು, ಉದ್ಯಮಿಗಳ ಕೈಗೆ ದೇಶ ಕೊಟ್ಟು, ಬಡವರನ್ನು ಶೋಸಿಸುತ್ತಿದ್ದಿರಿ ಎಂದು ತೀರುಗೇಟು ನೀಡಿದೆ… ಶಿರಸಿ : ಶಿರಸಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಟಿ ರವಿ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ರವಿ, ಕೆಟ್ಟ ಸರ್ಕಾರವನ್ನು ಓಡಿಸಲು ಈ ನವಶಕ್ತಿ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಕುಟುಂಬ ಮಾಲಿಕತ್ವದ ಪಕ್ಷವಿದ್ದಂತೆ. ಆರ್ ಜೆ ಡಿ ಕೂಡ ಕುಟುಂಬ ವಾರಸುದಾರಿಕೆ ಪಕ್ಷ. ಜೆಡಿಎಸ್ ಕೂಡ ಅದೇ ಪಕ್ಷ. ಕಾಂಗ್ರೆಸ್ ಸರ್ಕಾರ ಒಡೆದು ಆಳು ನೀತಿ ಅನುಸರಿಸ್ತಿದೆ. ಓಟು ಒಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಮನೆ ಮನೆಗೆ ಕಾಂಗ್ರೆಸ್ ಅಲ್ಲ. ಈ ಬಾರಿ ಮನೆಗೇ ಕಾಂಗ್ರೆಸ್ ಮಾಡ್ತಿವಿ ಎಂದಿರುವ ರವಿ, ಕಾರ್ಯಕರ್ತರೇ ಮಾಲೀಕರಾಗಿರುವ ಯಾವುದಾದರು ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಕಳ್ಳರಿಗೆಲ್ಲ ಸಾಲ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ವಿಜಯ ಮಲ್ಯ, ರಾಜಗೋಪಾಲ್, ಸತ್ಯಂ ರಾಜು ,ನೀರವ್ ಮೋದಿ ಇವರಿಗೆಲ್ಲ ಸಾಲ ಕೊಟ್ಟಿದ್ದು ಕಾಂಗ್ರೆಸ್ ನ ಕಾಣದ ಕೈಗಳೇ. ನಾನು ಕೂಡಾ ಒಕ್ಕಲಿಗ ಆದ್ರೆ ಜಾತಿವಾದಿ ಒಕ್ಕಲಿಗ ಅಲ್ಲ. ಹಿಂದುವಾದಿ ರಾಷ್ಟ್ರವಾದಿ ಒಕ್ಕಲಿಗ ಎಂದಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಸಾಲದಲ್ಲಿ ನಂಬರ್‌ 1 ಆಗಿದೆ. 66 ವರ್ಷದಲ್ಲಿ ಕ.ಸಿ ರೆಡ್ಡಿಯಿಂದ ಜಗದೀಶ್ ಶೆಟ್ಟರ್ ವರೆಗಿನ ಒಟ್ಟೂ ಸಾಲ 1ಲಕ್ಷ 12 ಸಾವಿರ ಕೋಟಿ . ಆದ್ರೆ ಸಿದ್ದರಾಮಯ್ಯನವರ ಸಾಲ 1ಲಕ್ಷ 42ಸಾವಿರ ಕೋಟಿ. ಇದ್ಯಾವದು ಜಾಹೀರಾತಿನಲ್ಲಿ ಬರಲ್ಲ ಎಂದು ಅಣಕವಾಡಿದ್ದಾರೆ.
OSCAR-2019
ಜಕಾರ್ತ, ಆ. 26(ಪಿಟಿಐ)- ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೆ ಏಷ್ಯಾನ್ ಕ್ರೀಡಾಕೂಟದ ಈಕ್ವೆನ್‍ಟ್ರೈಯನ್ ಜಂಪಿಂಗ್( ಕುದುರೆ ಜಿಗಿತ) ಭಾರತಕ್ಕೆ 2 ಬೆಳ್ಳಿ ಪದಕ ಲಭಿಸಿದೆ. ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಮಂಡ್ಯ, ಆ.30- ತಂದೆಯ ಮರಣಪತ್ರ ಕೇಳಿದ ರೈತರೊಬ್ಬರಿಗೆ ಅವರೇ ನಿಧನರಾದ ಪ್ರಮಾಣಪತ್ರ ನೀಡಿ ಯಡವಟ್ಟು ಮಾಡಿದ್ದ ಗ್ರಾಮ ಲೆಕ್ಕಿಗನೊಬ್ಬನನ್ನು ಜಿಲ್ಲಾಧಿಕಾರಿ ಕೆಲಸದಿಂದ ಅಮಾನತು ಮಾಡಿದ್ದಾರೆ. ಶ್ರೀರಂಗಪಟ್ಟಣದ ಕಸಬಾ
OSCAR-2019
Komarov ಬಟಾನಿಕಲ್ ಇನ್ಸ್ಟಿಟ್ಯೂಟ್ ಆಫ್ ಸಸ್ಯವಿಜ್ಞಾನ ಗಾರ್ಡನ್ಸ್ ಆಫ್ ಗ್ರೀನ್ ಹೌಸ್ ನಲ್ಲಿ ಸಣ್ಣ ಬಿಳಿ ಹೂಗಳು. ಸೇಂಟ್ ಪೀಟರ್ಸ್ಬರ್ಗ್, ರಷ್ಯಾ, 2009 ಜೂನ್ 27
OSCAR-2019
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರದಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ದುಂದು ವೆಚ್ಚಕ್ಕೆ ಕತ್ತರಿ ಹಾಕುವುದಾಗಿ ಹೇಳಿದ್ದರು. ಅದನ್ನು ತಮ್ಮ... ಹುಬ್ಬಳ್ಳಿ: ಬೇಷರತ್ತಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಿರ ಹಾಗೂ ಚರಾಸ್ತಿ ಕೇಳಲಿರುವ ಬಿಆರ್‌ಟಿಎಸ್‌ ಕಂಪನಿ ಇಲ್ಲಿನ ಸಿಬ್ಬಂದಿಯ ತಾತ್ಕಾಲಿಕ ನಿಯೋಜನೆಗೆ ಸಿದ್ಧತೆ ನಡೆಸಿದೆ.
OSCAR-2019
ಕ್ಷಿಪ್ರಗತಿಯಲ್ಲಿ ಗಗನಗಾಮಿಯಾಗಿ ಬೆಳೆಯುತ್ತಿರುವ ನನ್ನ ಮಂಗಳೂರಿನಲ್ಲಿ ಹಳೆಯ ಚೆಲುವಿನ ಮನೆಗಳನ್ನೂ, ಹೂತೋಟಗಳನ್ನೂ ಇನ್ನೂ ಉಳಿಸಿ ಬೆಳೆಸುತ್ತಿರುವವರಲ್ಲಿ ಕರಂಗಲ್ಪಾಡಿಯ ಲಿಲ್ಲಿ ಪಿಂಟೋ ಒಬ್ಬರು. ಹಳೆಯ ಮಂಗಳೂರು ಹೆಂಚಿನ, ಕೆಂಪು ಕಾವೆ ನೆಲದ ಪುಟ್ಟ ಮನೆಯನ್ನು ಆಧುನೀಕರಣ ಗೊಳಿಸಲು ಮನವೊಪ್ಪದೆ ಹಾಗೇ ಉಳಿಸಿಕೊಂಡಿರುವವರು, ಅವರ ಪತಿ, ಪೈಲೆಟ್ ಇನ್ಸ್ಟ್ರಕ್ಟರ್, ಕ್ಯಾಪ್ಟನ್ ಅಲೋಶಿಯಸ್ ಪಿಂಟೋ. ಮನೆಯ ಸುತ್ತಮುತ್ತ ನಂದನವನದಂತಹ ಚೆಲುವಾದ, ಒಪ್ಪವಾದ ಅಪರೂಪದ ಪುಷ್ಪಕಾಶಿ ಬೆಳೆಸಿರುವವರು, ಮನೆಯ
OSCAR-2019
ಮುಂಬಯಿ, ಜೂ.25: ಬೃಹನ್ಮುಂಬಯಿಯಲ್ಲಿನ ಯುವೋದ್ಯಮಿ, ಡೆನ್ ಸ್ಯಾಟಲೈಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಡಿ’ಸೋಜಾ ಕಲ್ಯಾಣ್ಫುರ (52.) ಅವರು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಮಹಾನಗರದ ಪೆÇವಾಯಿ ಅಲ್ಲಿನ ಹೀರಾನಂದನಿ ಆಸ್ಪತ್ರೆಯಲ್ಲಿ ನಿಧನರಾದರು. ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುಬೆಟ್ಟು ಮೂಲತಃ ಪ್ರಕಾಶ್ ಡಿ’ಸೋಜಾ ಅವರು ತೆರೆಮರೆಯಲ್ಲಿದ್ದೇ ಸಮಾಜ ಸೇವೆಗೆ ಸ್ಪಂದಿಸುತ್ತ ತುಳುಕನ್ನಡ, ಕೊಂಕಣಿ ಕಾರ್ಯಕ್ರಮಗಳಿಗೆ ತಮ್ಮ ಕೇಬಲ್ ಮೂಲಕ ಪೆÇ್ರೀತ್ಸಾಹಿಸುತ್ತಿದ್ದರು. ಮೃತರು ಮುಂಬಯಿ ಪೆÇವಾಯಿ ಅಲ್ಲಿನ ಹಿರಾನಂದನಿ ಗಾರ್ಡನ್ ಸನಿಹದ ವಲೆನ್ಸಿಯಾ ಬಿಲ್ಡಿಂಗ್‍ನಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪತ್ನಿಯನ್ನು ಅಗಲಿಗ ಅಘಾತದಲ್ಲಿದ್ದರು. ಮೃತರು ಸುಪುತ್ರಿ ಸಮಾಂತ ಡಿ’ಸೋಜಾ, ತಂದೆ,ತಾಯಿ, ಮೂವರು ಸಹೋದರರು, ಮೂರು ಸಹೋದರಿಯರನ್ನು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ಮಂಗಳವಾರ (ಜೂ.26) ಸಂಜೆ 3.30 ಗಂಟೆಗೆ ಸ್ವನಿವಾಸದಿಂದ ಹೊರಟು ಸಂಜೆ 4.00 ಗಂಟೆಗೆ ಪೆÇವಾಯಿ ಹೋಲಿ ಟ್ರಿನಿಟಿ ಇಗರ್ಜಿಯಲ್ಲಿ ನೆರವೆರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ತಮ್ಮ ಸಹದ್ಯೋಮಿಗಳೂ ಡೆನ್ ಕೇಬಲ್‍ನೆಟ್‍ನ ನಿರ್ದೇಶಕರೂ ಆದ ರಾಜೀವ್ ಗವಿ, ರವಿ ಸಿಂಗ್, ಅಶ್ವ್ವಿನಿ ಕೇಬಲ್ ನೆಟ್‍ವರ್ಕ್ಸ್‍ನ ವಾಲ್ಟರ್ ಡಿ’ಸೋಜಾ ಕಲ್ಮಾಡಿ (ಜೆರಿಮೆರಿ), ಇನ್ ಕೇಬಲ್ ಥಾಣೆ ಇದರ ವ್ಯವಸ್ಥಾಪಕ ನೊಬ್ಬಿ ಪಿಳ್ಳೆ, ಹ್ಯಾರಿ ಸಿಕ್ವೇರಾ ಫೆರಾರ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.
OSCAR-2019
ಧರ್ಮಸ್ಥಳ(ಏ.27): ವಂದೇಮಾತರಂ ಗೀತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಗೌರವ ತೋರಿದ ಘಟನೆ ಬಂಟ್ವಾಳ ಕಾಂಗ್ರೆಸ್ ಸಮಾವೇಶದಲ್ಲಿ ನಡೆದಿದೆ. ವಂದೆ ಮಾತರಾಂ ಗೀತೆ ಹಾಡುತ್ತಿರುವಾಗ ಒಂದೇ ಸಾಲಿನಲ್ಲಿ ಹೇಳಿ ಮುಗಿಸಿಬಿಡಿ ಎಂದು ರಾಹುಲ್ ಹೇಳಿದ್ದಾರೆ. ಧರ್ಮಸ್ಥಳಕ್ಕೆ ಹೋಗಬೇಕಾದ ಹಿನ್ನಲೆಯಲ್ಲಿ ತಮ್ಮ ಗಡಿಯಾರ ನೋಡಿಕೊಳ್ಳುತ್ತಿದ್ದ ಅವರು ಬೇಗ ಹಾಡು ಮುಗಿಸಿ ಎಂದಿದ್ದಾರೆ. ರಾಹುಲ್ ಆದೇಶಕ್ಕೆ ತಲೆಬಾಗಿ ತರಾತುರಿಯಲ್ಲಿ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
OSCAR-2019
ಹುಬ್ಬಳ್ಳಿ, ಏಪ್ರಿಲ್ 15 : 'ರಾಷ್ಟ್ರೀಯ ಪಕ್ಷಗಳು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಜನ ಸಾಮಾನ್ಯರಿಗೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿ ನೀತಿಸಂಹಿತಿ ಉಲ್ಲಂಘನೆ ಮಾಡುತ್ತಿದ್ದಾರೆ' ಎಂದು ಗೋಪಾಲ ಕುಲಕರ್ಣಿ ಆರೋಪಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗೋಪಾಲ ಕುಲಕರ್ಣಿ ಅವರು, 'ಜನರು ಮುಂಬರುವ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ, ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು' ಸ್ಪಷ್ಟಪಡಿಸಿದರು. 'ಚುನಾವಣೆಯಲ್ಲಿ ಸ್ಪರ್ಧಿಸಲು ಪೇಜಾವರ ಶ್ರೀಗಳು ಸಮ್ಮತಿ ಸೂಚಿಸದೆ ಇದ್ದ ಪಕ್ಷದಲ್ಲಿ ಶಿಕ್ಷಣ ಸಂಸ್ಥೆಗೆ ರಾಜೀನಾಮೆ ನೀಡಿದ್ದೇನೆ ವಿನಃ ಚುನಾವಣೆಯಿಂದ ಹಿಂದೇಟು ಹಾಕಿಲ್ಲ. ಯಾವುದೇ ಹಣದ ಆಮಿಷಕ್ಕೆ ಒಳಗಾಗಿ ಮತ್ತು ಹೇಳಿಕೆಗಳಿಗೆ ಕಿವಿಗೊಡಬೇಡಿ. ಈ ಭಾರಿ ಸ್ಪರ್ಧಿಸುವುದು ಶತಸಿದ್ಧ' ಎಂದರು. 'ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪೇಜಾವರ ಶ್ರೀಗಳ ಒತ್ತಾಯದ ಮೇರೆಗೆ ನಾಮಪತ್ರವನ್ನು ಹಿಂಪಡೆದಿದ್ದೇ ಹೊರತು ಬೇರೆ ಯಾವುದೇ ಕಾರಣದಿಂದಲ್ಲ. ನಗರದ ಜನತೆಯೂ ರಾಜೀನಾಮೆಯ ಕುರಿತಾಗಿ ತಪ್ಪಾಗಿ ಅರ್ಥೈಸಿಕೊಂಡು ದೂರವಾಣಿ ಕರೆ ಮಾಡುತ್ತಿದ್ದಾರೆ' ಎಂದರು. 'ಯಾರು ಒತ್ತಡ ಹಾಕಿದರೂ, ಯಾವುದೇ ಪರಿಸ್ಥಿತಿ ನಿರ್ಮಾಣವಾದರೂ ಕೂಡ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ. ಅಲ್ಲದೇ ನನ್ನ ರಾಜೀನಾಮೆಯನ್ನು ಸ್ವೀಕರಿಸಿ ಸಹಮತ ಸೂಚಿಸಿ ಪೇಜಾವರ ಶ್ರಿಗಳು ಆಶೀರ್ವಾದ ಮಾಡಿದ್ದಾರೆ' ಎಂದು ಹೇಳಿದರು. hubballi dharwad karnataka karnataka assembly elections 2018 ಹುಬ್ಬಳ್ಳಿ ಧಾರವಾಡ ಕರ್ನಾಟಕ ಕರ್ನಾಟಕ ವಿಧಾನಸಭೆ ಚುನಾವಣೆ 2018
OSCAR-2019
ಪಾಪ್ನಾಶ್ ದೇವಾಲಯವು ಕರ್ನಾಟಕದ ಬೀದರ್ ಜಿಲ್ಲೆಯಲ್ಲಿರುವ ಶಿವ ದೇವಾಲಯವಾಗಿದೆ. ಅಯೋಧ್ಯಾಕ್ಕೆ ಹಿಂದಿರುಗಿದ ಮೇಲೆ ದೇವಸ್ಥಾನದ ವಿಗ್ರಹವನ್ನು ರಾಮನು ಸ್ಥಾಪಿಸಿದನೆಂದು ನಂಬಲಾಗಿದೆ. ಮೂಲ ದೇವಸ್ಥಾನವು ಕಳೆದುಹೋಯಿತು ಮತ್ತು ಪ್ರಾಚೀನ… ಬೀದರ್ ಕೋಟೆ ಭಾರತದ ಕರ್ನಾಟಕದ ಉತ್ತರ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಕೋಟೆ, ನಗರ ಮತ್ತು ಜಿಲ್ಲೆಯನ್ನು ಎಲ್ಲಾ ಬೀದರ್ ಎಂಬ ಹೆಸರಿನೊಂದಿಗೆ ಜೋಡಿಸಲಾಗುತ್ತದೆ. ಬಹಮನಿದ್ ರಾಜವಂಶದ ಸುಲ್ತಾನ್… ಗುರುದ್ವಾರ ಬೀದರ ಸಿಖ್ಖರ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಈ ಸ್ಥಳವು ಪ್ರತಿ ವರ್ಷವೂ ದೇಶದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ಆಗಮಿಸುತ್ತಾರೆ….
OSCAR-2019
ಕೇನ್ ಫಿಲ್ಮ್ ಫೆಸ್ಟಿವಲ್ ಮತ್ತೆ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಐಶ್ವರ್ಯ ರೈ ಬಚ್ಚನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು, ರಂಗುರಂಗಾದ ಮತ್ತು ಎಲ್ಲರನ್ನೂ ಸೆಳೆಯುವಂತಿದ್ದ ಭವ್ಯವಾದ, ವರ್ಣರಂಜಿತವಾದ, ಧಿರಿಸು ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಇದು 17 ನೇ ಬಾರಿ ಐಶ್ವರ್ಯ ರೈ ಬಚ್ಚನ್ ಕೇನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದು, ತನ್ನ ವಯಸ್ಸಿಗೆ ಮೀರಿದ ಆಕರ್ಷಣೆಯನ್ನು ಪಡೆದಿದ್ದಾರೆ. ಈ ಕ್ಯೂಟ್ ತಾಯಿ 20 ಅಡಿಯ ಉದ್ದನೆಯ , ಮೈ ತುಂಬಾ ಎಂಬ್ರಾಯಡರಿ ಇರುವ ಕೇಪ್ ಗೌನ್ ಧರಿಸಿದ್ದಾಳೆ! ಪ್ರಪಂಚದ ಅತ್ಯಂತ ದೊಡ್ಡ ಗೌನ್ ನ್ನು ಈಕೆ ಧರಿಸಿದ್ದು, ಅದೆಷ್ಟು ಸುಲಭವಾಗಿ ಅದನ್ನು ನಿಭಾಯಿಸಿದರು ಎಂದರೆ ಪ್ರತಿದಿನವೂ ಆಕೆ ಆ ಬಟ್ಟೆಯನ್ನು ತೊಡುತ್ತಾಳೆಯೆನೋ ಎಂಬಂತಿತ್ತು. ಬ್ಯೂಟಿ ಕ್ವೀನ್ ಐಶ್ವರ್ಯಗಾಗಿ ಈ ಅಧ್ಬುತ ಬಟ್ಟೆಯನ್ನು ಡಿಸೈನ್ ಮಾಡಿದ್ದು ಬೇರೆ ಯಾರೂ ಅಲ್ಲ, ಫೇಮಸ್ ಡಿಸೈನರ್ ಆಗಿರುವ ಮೈಕೆಲ್ ಸಿಂಕೋ. ಐಶ್ವರ್ಯ ರೈಗಾಗಿ ಬಟ್ಟೆಯನ್ನು ಮೈಕಲ್ ಸಿಂಕೋ ಡಿಸೈನ್ ಮಾಡಿದ್ದು ಇದೇ ಮೊದಲೇನಲ್ಲ. ಮೈಕಲ್ ಸಿಂಕೋ ಡಿಸೈನ್ ಮಾಡಿದ ಬಟ್ಟೆಗಳನ್ನು ಧರಿಸಿದ ಐಶ್ವರ್ಯ ರೈ ಫೋಟೋಗಳು ಈಗಾಗಲೇ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಕಳೆದ ವರ್ಷ ಐಸಿ ಬ್ಲೂ ಬಾಲ್ ಗೌನ್ ನ್ನು ಮೈಕೆಲ್ ಸಿಂಕೋ ತನ್ನ 'Impalpable Dream of Versailles Collection' ಸಂಸ್ಥೆಯಿಂದ ತಯಾರಿಸಿದ್ದ ಮತ್ತು ಅದನ್ನು ಧರಿಸಿದ್ದ ಐಶ್ ಕೇನ್ ಚಿತ್ರೋತ್ಸವದಲ್ಲಿ ಅತೀ ಸುಂದರ ಬಟ್ಟೆ ಧರಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿಯೂ ಕೂಡ ಕೇನ್ 2018 ಚಿತ್ರೋತ್ಸವದ ಅತ್ಯುತ್ತಮ ಧಿರಿಸು ಧರಿಸಿದವರ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿ ಐಶ್ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ಬಾರಿ ಧರಿಸಿದ ಬಟ್ಟೆಯನ್ನು ತಯಾರಿಸಲು 3000 ಗಂಟೆಗಳ ಕಾಲ ಶ್ರಮ ಪಡಬೇಕಾಯಿತಂತೆ. ನಂಬಲು ಅಸಾಧ್ಯ. ಚಿಟ್ಟೆಯಿಂದ ಪ್ರೇರಿತಗೊಂಡು ರಚಿಸಿರುವ ಈ ಕಲಾತ್ಮಕ ಬಟ್ಟೆಯಲ್ಲಿ ಸ್ವರೋಕ್ಷಿ ಕ್ರಿಸ್ಟಲ್ ಗಳನ್ನು ಬಳಸಲಾಗಿದೆ ಮತ್ತು ಸಿಲ್ಕ್ ಥ್ರೆಡ್ ವರ್ಕ್ ಕೂಡ ಮಾಡಲಾಗಿದೆ. ಬಟ್ಟೆಗೆ ಮ್ಯಾಚಿಂಗ್ ಆಗುವಂತೆ ಒಂದು ಪರ್ಪಲ್ ಬಣ್ಣದ ಕಿವಿಯೋಲೆಯನ್ನು ಕೂಡ ಧರಿಸಿದ್ದಳು ಐಶ್. ಕೆಂಪು ಬಣ್ಣ ತುಟಿಬಣ್ಣವನ್ನು ಆಯ್ಕೆ ಮಾಡಿದ್ದ ಐಶ್ ಪರ್ಫೆಕ್ಟ್ ಮೇಕಪ್ ಮಾಡಿಕೊಂಡಿದ್ದರು. ಐಶ್ವರ್ಯಳ ಬಟ್ಟೆಯ ಆಯ್ಕೆಯ ವಿಚಾರದಲ್ಲಿ ಕೆಟ್ಟದಾಗಿರುವುದು ಬಹಳ ಕಡಿಮೆ. ಆಕೆ ಯಾವಾಗಲೂ ನೋಡುಗರ ಕಣ್ಣಿಗೆ ಚಿಟ್ಟೆಯಂತೆಯೇ. ನೋಡೋಣ ಮುಂದಿನ ದಿನಗಳಲ್ಲಿ ಐಶ್ವರ್ಯ ಇನ್ನೂ ಹೇಗೆಲ್ಲ ಮಿಂಚುತ್ತಾರೆ ಎನ್ನುವುದನ್ನು.
OSCAR-2019
ಬೆಂಗಳೂರು, ಮಾರ್ಚ್ 09: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗಿನ ಪಾಳಿಯಲ್ಲಿ (ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ) ಮಹಿಳಾ ಸಿಬ್ಬಂದಿಯೇ ನಿಲ್ದಾಣದ ಕಾರ್ಯಾಚರಣೆಯನ್ನು ನಡೆಸಿದರು.ಈ ರೀತಿಯಾಗಿ ಕೆಐಎಎಲ್ ನಲ್ಲಿ ಮಹಿಳಾ ದಿನವನ್ನು ಆಚರಿಸಲಾಯಿತು. ಏಫ್ರಾನ್, ಏರ್ ಸೈಡ್, ಏರ್ ರೆಗ್ಯುಲೇಷನ್ಸ್, ಟ್ಯಾಕ್ಸಿ ವೇ, ರನ್ ವೇ, ಆರ್ ಟಿಇ, ಟ್ಯಾಕ್ಸಿ ವೇ, ಫಾಲೋ ಮಿ ಕಾರುಗಳು, ಏವಿಯೇಷನ್ ಸೇಫ್ಟಿ, ಗೆಸ್ಟ್ ರಿಲೇಷನ್ಸ್, ಟರ್ಮಿನಲ್ ಆಪರೇಷನ್ ಹಾಗೂ ಏರ್ ಪೋರ್ಟ್ ಆಫರೇಷನ್ ಕಂಟ್ರೋಲ್ ಸೆಂಟರ್ ನ ಕೆಲಸವನ್ನು 36 ಮಹಿಳಾ ಅಧಿಕಾರಿಗಳ ತಂಡ ನಿರ್ವಹಿಸಿತು. ಜತೆಗೆ ಏರ್ ಟ್ರಾಫಿಕ್ ಕಂಟ್ರೋಲ್ ನ ನಿರ್ವಹಣೆಯನ್ನೂ ಮಹಿಳಾ ತಂಡವೇ ಮಾಡಿತು. ಮಹಿಳಾ ಅಧಿಕಾರಿಗಳಿಗೆ ತಿಂಗಳಿಂದ ತರಬೇತಿ ನೀಡಿ, ಲಿಖಿತ ಪರೀಕ್ಷೆ ಮಾಡಲಾಗಿತ್ತು. ಬಳಿಕ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದ ಬಳಿಕವೇ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಏರ್ ಪೋರ್ಟ್ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ.ಸಿ. ಸಜಿತ್ ತಿಳಿಸಿದ್ದಾರೆ. ನಿಯಂತ್ರಿತ ಕ್ಷೇತ್ರವಾಗಿರುವ ವೈಮಾನಿಕ ವಲಯದಲ್ಲಿ ಲೋಪಗಳು ಆಗದಂತೆ ನೋಡಿಕೊಳ್ಳಬೇಕು. ಅದಕ್ಕೆ ಪೂರಕವಾದ ಮಹಿಳಾ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿತ್ತು. ಎಂದು ಏರ್ ಪೋರ್ಟ್ ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾವೇದ್ ಮಲಿಕ್ ಹೇಳಿದ್ದಾರೆ.
OSCAR-2019
ಲಾಹೋರ್, ಜುಲೈ 31: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಹಿಡಿಯಲಿರುವ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ. ಮೋದಿ ಸೇರಿದಂತೆ ಸಾರ್ಕ್ ಸದಸ್ಯ ದೇಶಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಲು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಉದ್ದೇಶಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಒಳಗೊಂಡಂತೆ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ಎಲ್ಲ ಮುಖಂಡರನ್ನು ಆಹ್ವಾನಿಸಲು ಪಕ್ಷದ ಕೋರ್ ಕಮಿಟಿಯು ಪರಿಗಣಿಸುತ್ತಿದೆ. ಅದರ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಮೋದಿ ಅವರು ಕರೆ ಮಾಡಿ ಅಭಿನಂದಿಸಿರುವುದು ಉಭಯ ದೇಶಗಳ ಬಾಂಧವ್ಯದ ಹೊಸ ಅಧ್ಯಾಯ ಬರೆಯುವ ಸೂಚನೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಜುಲೈ 25ರಂದು ನಡೆದು ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತರೆ ಪಕ್ಷಗಳ ಸಹಾಯದಿಂದ ಇಮ್ರಾನ್ ಖಾನ್ ಸರ್ಕಾರ ರಚಿಸಲಿದ್ದು, ಆಗಸ್ಟ್ 11ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
OSCAR-2019
ಮಂಡ್ಯ, ಮಾರ್ಚ್ 27: ತಮಿಳುನಾಡಿನ ರಾಜ ಕ್ರಿಮಿಕಾಂತ ವೈಷ್ಣವರನ್ನ ಎಲ್ಲೆಂದರಲ್ಲಿ ಹತ್ಯೆಮಾಡಲು ಆದೇಶ ನೀಡಿದಾಗ, ಅಲ್ಲಿದ್ದ ರಾಮಾನುಜಾಚಾರ್ಯರು ಹಾಗು ಅವರೊಂದಿಗೆ ವೈಷ್ಣವರು ಮೇಲುಕೋಟೆಗೆ ಬಂದರೆಂಬುದು ಇತಿಹಾಸ. ಆದರೆ ಒಮ್ಮೆ ರಾಮಾನುಜಾಚಾರ್ಯರ ಕನಸಿನಲ್ಲಿ ಶ್ರೀಮನ್ ನಾರಾಯಣರು ಕಾಣಿಸಿಕೊಂಡು, ಅನೇಕ ವರ್ಷಗಳ ಹಿಂದೆ ಮೇಲುಕೋಟೆಯ ಮೇಲೆ ದೆಹಲಿ ಸುಲ್ತಾನರು ದಾಳಿಮಾಡಿದ ಸಂಧರ್ಭದಲ್ಲಿ ಮೇಲುಕೋಟೆಯ ಉತ್ಸವ ಮೂರ್ತಿ ಚೆಲುವನಾರಾಯಣ ಸ್ವಾಮಿಯಯನ್ನು ಕದ್ದೊಯ್ದಿದ್ದು, ಅದು ಈಗ ದೆಹಲಿಯ ಸಲ್ತಾನನ ಮಗಳ ಅಂತಃಪುರದಲ್ಲಿದೆ. ಅದನ್ನು ತೆಗೆದುಕೊಂಡು ಬಂದು ಪೂಜಿಸಲು ಭಗವಂತನು ಆದೇಶ ನೀಡುತ್ತಾನೆ. ಅದರಂತೆ ದೆಹಲಿಗೆ ತೆರಳಿದ ರಾಮಾನುಜಾಚಾರ್ಯರು ದೆಹಲಿಯ ಸುಲ್ತಾನನನ್ನು ವಿಗ್ರಹವನ್ನು ಹಿಂದಿರುಗಿಸುವಂತೆ ಕೇಳಲಾಗಿ , ಅಂತಹ ವಿಗ್ರಹ ನಮ್ಮ ಬಳಿ ಇಲ್ಲ. ಬೇಕಾದರೆ ನಿನ್ನ ಭಗವಂತನನ್ನು ಒಮ್ಮೆ ಜೋರಾಗಿ ಕೂಗು ಬಂದರೆ ಕರೆದುಕೊಂಡು ಹೋಗು ಎಂದು ಉಡಾಫೆಯ ಉತ್ತರ ನೀಡುತ್ತಾನೆ. ರಾಮಾನುಜಾಚಾರ್ಯರು ದಿವ್ಯ ದೃಷ್ಟಿಯಿಂದ ನೋಡಲಾಗಿ, ಸುಲ್ತಾನನ ಅವಿವಾಹಿತ ಮಗಳು ತುಲುಕ್ಕ ನಾಚಿಯಾರ್ ಒಂದು ತೊಟ್ಟಿಲಲ್ಲಿ ಆ ವಿಗ್ರಹವನ್ನು ಬಚ್ಚಿಟ್ಟು ತನ್ನ ಮಗುವನ್ನು ನೋಡಿಕೊಳ್ಳುವ ಹಾಗೆ ನೋಡಿಕೊಂಡಿರುತ್ತಾಳೆ ಹಾಗೂ ಪ್ರಾಣಕ್ಕಿಂತ ಹೆಚ್ಚಾಗಿ ಆ ವಿಗ್ರಹವನ್ನು ಬಹಳ ಭಕ್ತಿ ಇಂದ ಪ್ರೀತಿಸುತ್ತಿರುತ್ತಾಳೆ ಪೂಜಿಸುತ್ತಿರುತ್ತಾಳೆ. ಆದರೆ ಈ ವಿಚಾರ ದೆಹಲಿಯ ಸುಲ್ತಾನನಿಗೆ ತಿಳಿದಿರುವುದಿಲ್ಲ. ಇದನ್ನು ಮನಗಂಡ ರಾಮಾನುಜರು ಒಮ್ಮೆ ಜೋರಾಗಿ 'ವಾಡಾ.. ಏನ್ ಕಣ್ಣಾ, ಏನ್ ಸೆಲ್ವ ಪಿಳ್ಳೆ' ಎಂದು ಭಕ್ತಿಯಿಂದ ಪ್ರೀತಿಯಿಂದ ಮಕ್ಕಳನ್ನು ಕರೆಯುವ ರೀತಿಯಲ್ಲಿ ಕರೆಯಲಾಗಿ , ಆ ವಿಗ್ರಹವು ತನ್ನಷ್ಟಕ್ಕೆ ತಾನೇ ನಡೆದು ಕೊಂಡು ಬಂದು ರಾಮಾನುಜರ ತೊಡೆಯ ಮೇಲೆ ಕುಳಿತುಕೊಳ್ಳುತ್ತದೆ. ಇದನ್ನು ಕಂಡ ಆಸ್ಥಾನದ ಎಲ್ಲರೂ ಸುಲ್ತಾನನು ಸೇರಿದಂತೆ ನಿಬ್ಬೆರಗಾಗುತ್ತಾರೆ. ನಂತರ ಆ ವಿಗ್ರಹವನ್ನು ಮೇಲುಕೋಟೆಗೆ ರಾಮಾನುಜರು ತೆಗೆದುಕೊಂಡು ಬರುತ್ತಾರೆ. ನಂತರ ಉತ್ಸವ ನಡೆಯುತ್ತದೆ. ಇದಾದ ಸ್ವಲ್ಪ ದಿನಗಳ ನಂತರ ಚುಲುವ ನಾರಾಯಣನನ್ನು ಬಿಟ್ಟಿರಲಾರದ ಸುಲ್ತಾನನ ಮಗಳು ಮೇಲುಕೋಟೆಗೆ ಓಡೋಡಿ ಬರುತ್ತಾಳೆ. ಮೇಲುಕೋಟೆಯ ದೇವಾಲಯದ ಬಳಿ ಅವಳನ್ನು ತಡೆದ ದ್ವಾರ ಪಾಲಕರು ಅವಳನ್ನು ದೇವಾಲಯದ ಒಳಗಡೆ ಬಿಡಲು ನಿರಾಕರಿಸುತ್ತಾರೆ. ಬಹಳ ನೋವಿನಲ್ಲಿದ್ದ ನಾಚಿಯಾರ್ ಳನ್ನು ಕಂಡ ರಾಮಾನುಜರು ಅವಳನ್ನು ದೇವಾಲಯದ ಒಳಗಡೆ ಬಿಡಲು ಸೂಚಿಸುತ್ತಾರೆ. ಆಗ ನಾಚಿಯಾರ್ ಓಡೋಡಿ ಹೋಗಿ ದೇವರ ಗರ್ಭ ಗುಡಿಯಲ್ಲಿ ಎಲ್ಲರೂ ನೋಡುತ್ತಿದ್ದಂತೆ ಆ ಭಗವಂತನಲ್ಲಿ ಐಕ್ಯವಾಗುತ್ತಾಳೆ. ಇದನ್ನು ನೋಡಿದ ಸಾವಿರಾರು ಜನ ನಾಚಿಯಾರ್ ಭಕ್ತಿಯನ್ನು ಕೊಂಡಾಡುತ್ತಾರೆ. ಆ ಕಾರಣಕ್ಕಾಗಿಯೇ ಅಂದಿನಿಂದ ಇಂದಿಗೂ ನಾಚಿಯಾರ್ ವಿಗ್ರಹವನ್ನು ಮಾಡಿಸಿ ದೇವರ ಪಾದದ ಕೆಳಗೆ ಇಟ್ಟು ದೇವರಿಗೆ ಸಲ್ಲುವ ಎಲ್ಲಾ ಪೂಜೆಯು ನಾಚಿಯಾರ್ ಗೂ ಸಲ್ಲುವ ರೀತಿಯಲ್ಲಿ ಪೂಜಾ ಕಾರ್ಯಗಳು ನಡೆಯುತ್ತವೆ
OSCAR-2019
ನವದೆಹಲಿ, ಫೆ.28-ಭಾರತ 2018ರ ಕ್ಯಾಲೆಂಡರ್ ವರ್ಷದಲ್ಲಿ ಶೇ.7.6ರಷ್ಟು ಪ್ರಗತಿ ಸಾಧಿಸಲಿದೆ ಎಂದು ಮೂಡಿ ಹೂಡಿಕೆದಾರರ ಸೇವಾ ಸಂಸ್ಥೆ ಅಂದಾಜು ಮಾಡಿದೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿಯ ಪರಿಣಾಮಗಳಿಂದ ಆರ್ಥಿಕ ಚೇತರಿಕೆ ಲಕ್ಷಣಗಳಿದ್ದರೂ 2018ರಲ್ಲಿ ಶೇ.7.6 ಹಾಗೂ 2019ರಲ್ಲಿ ಶೇ.7.5ರಷ್ಟು ಪ್ರಗತಿಯನ್ನು ನಿರೀಕ್ಷಿಸಲಾಗಿದೆ ಎಂದು ಮೂಡಿ ವಿಶ್ಲೇಷಣೆ ಮಾಡಿದೆ. 2016ರ ನವೆಂಬರ್‍ನಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ನೋಟು ಅಮಾನ್ಯೀಕರಣದ ನಕರಾತ್ಮಕ ಪರಿಣಾಮ ಹಾಗೂ ಕಳೆದ ವರ್ಷ ಜಾರಿಗೊಳಿಸಿದ ಸರಕುಗಳು ಮತ್ತು ಸೇವೆಗಳ ತೆರಿಗೆಯಿಂದ ಉಂಟಾದ ಗೊಂದಲಗಳೂ ಇದ್ದರೂ ಭಾರತದ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬಂದಿದೆ. ಈ ಚೇತರಿಕೆಯಿಂದಾಗಿ 2018 ಮತ್ತು 2019ರಲ್ಲಿ ಆಶಾದಾಯಕ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ಮೂಡಿ ತಿಳಿಸಿದೆ. ಅಮಾನ್ಯೀಕರಣ ನೀತಿಯಿಂದ ಹೊಡೆತಕ್ಕೆ ಒಳಗಾಗಿದ್ದ ಗ್ರಾಮೀಣ ಆರ್ಥಿಕತೆಗೆ 2018-19ರ ಆಯವ್ಯಯದಲ್ಲಿನ ಕೆಲವು ಕ್ರಮಗಳು ಸ್ಥಿರತೆಯನ್ನು ನೀಡಲಿದೆ ಎಂದು ಅದು ಹೇಳಿದೆ. ಧಾರವಾಡ, ಮಾ.13- ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಧಾರವಾಡ ತಾಲ್ಲೂಕಿನ ಕರಡಿ ಗುಡ್ಡದ ನಿವಾಸಿ ಲಲಿತಾ ಮಾಟರ (40) ಪತಿಯಿಂದಲೇ ಕೊಲೆಯಾದ ಪತ್ನಿ. ರಾತ್ರಿ ಕ್ಷುಲ್ಲಕ ವಿಚಾರವಾಗಿ ಪತಿ ಬಸವರಾಜ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಮೊದಲೇ ಮದ್ಯದ ಅಮಲಿನಲ್ಲಿದ್ದ ಬಸವರಾಜ್ ತಾಳ್ಮೆ ಕಳೆದುಕೊಂಡು ಕೂಗಾಟ, ಚೀರಾಟ ನಡೆಸಿ ಕೈಗೆ ಸಿಕ್ಕ ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಲಲಿತಾ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಬಸವರಾಜನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಿಕ್ಕಮಗಳೂರು, ಆ.28- ವೋಲ್ವೋ ಬಸ್ ಕೆಟ್ಟು ನಿಂತ ಪರಿಣಾಮ ಮೂಡಿಗೆರೆ ಜಿಲ್ಲೆಯ ಚಾರ್ಮಾಡಿ ಘಾಟ್‍ನಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮಧ್ಯರಾತ್ರಿ 12ರಿಂದ ಘಾಟ್‍ನಲ್ಲಿ ಸಂಚಾರ ದಟ್ಟಣೆ ಉಂಟಾಗಿ,
OSCAR-2019
ಗುರಿ ಮತ್ತು ಉದ್ದೇಶ ಸಾಧನೆಗಾಗಿ ಸಂಸ್ಥೆಯು ಸ್ಥಾಪನೆಗೊಂಡಾಗಿನಿಂದಲೂ ಇಲ್ಲಿಯವರೆಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 2) ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ ಶಿಕ್ಷಣದ ಬೋಧನಾ ಮಟ್ಟವನ್ನು ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಲು ಬಾಲೋತ್ಸವ, ಚಿಣ್ಣರ ಮೇಳಗಳನ್ನು ಏರ್ಪಡಿಸಲಾಗಿದೆ. 3) ಸಾಮಾನ್ಯ ಜನರ ಮೌಢ್ಯ ಅಳಿಯಲು 'ಪವಾಡ ರಹಸ್ಯ ಬಯಲು' ಕಾರ್ಯಕ್ರಮಗಳನ್ನು ನೀಡಲಾಗಿದೆ. ವೈಜ್ಞಾನಿಕ ಚಿಂತನೆಗೆ ಜನರನ್ನು ಪ್ರಚೋದಿಸಿದೆ. ಈ ಕಾರ್ಯಕ್ರಮ ಈಗಲೂ ನಡೆಯುತ್ತದೆ. 4) ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳು (Teachers and students Exchange Programme) ಶಿಕ್ಷಕರಲ್ಲಿ ಬೋಧನಾ ಮಟ್ಟ ಉತ್ತಮಗೊಳ್ಳಲು ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕೆರಳಿಸುವಲ್ಲಿ ಸಹಾಯಕಾರಿಯಾಗುವುದರೊಂದಿಗೆ ಬೇರೆ ಬೇರೆ ನಾಡಿನ, ಬೇರೆ ಬೇರೆ ಭಾಷೆಗಳ ಶಿಕ್ಷಕರು ಮತ್ತು ಮಕ್ಕಳಲ್ಲಿ ಮಧುರ ಬಾಂಧವ್ಯದ ಬೆಸುಗೆ ಉಂಟಾಗಿದೆ. 5) ದುಡಿಯುವ ಮಹಿಳೆಯರಿಗೆ ಕಾನೂನು ತಿಳವಳಿಕೆ ಶಿಬಿರ, ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಗುಂಪುಗಳ ರಚನೆ ಮಹಿಳಾ ಸಮಾನತೆಗಾಗಿ ತಿಳವಳಿಕೆಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. 7) ಪೂರ್ಣ ಸೂರ್ಯಗ್ರಹಣ, ಶುಕ್ರಸಂಕ್ರಮಣ ಸಂದರ್ಭದಲ್ಲಿ ನಿಸರ್ಗದಲ್ಲಾಗುವ ಇಂಥ ವಿಸ್ಮಯ ಘಟನೆಗಳ ಕುರಿತು ಜನರಲ್ಲಿದ್ದ ಕುರುಡು ನಂಬಿಕೆಗಳನ್ನು ಹೋಗಲಾಡಿಸಲು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಗಳಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. 8) ಜನಾರೋಗ್ಯ ಆಂದೋಲನ ಕನಾಟಕದ ಸದಸ್ಯ ಸಂಘಟನೆಯಾಗಿದ್ದುಕೊಂಡು ಜನಾರೋಗ್ಯ ಸಾಧಿಸುವ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ನಿರಂತರ ಸಂಘಟಿಸುತ್ತಾ ಬರಲಾಗಿದೆ.
OSCAR-2019
ತಂತಿ ಜಾಲರಿ, ಮಂಡಳಿಗಳು ಅಥವಾ ಹಾಳೆಯನ್ನು ವಸ್ತುಗಳ: ಸಹ ಪೋಸ್ಟ್ಗಳು ಮತ್ತು ಸೂಚಕದ ವಸ್ತುಗಳ ಪ್ರಮಾಣವನ್ನು ಲೆಕ್ಕಾಚಾರ ಅಂತರ ಲೆಕ್ಕಾಚಾರ. ಬಳಸಲಾಗುತ್ತದೆ ಕಟ್ಟಡ ವಸ್ತುಗಳ ಬೆಲೆಯು ಕಂಡುಹಿಡಿಯಲು, ನಿಮ್ಮ ಪ್ರದೇಶದಲ್ಲಿ ಚಿಲ್ಲರೆ ಬೆಲೆಯಲ್ಲಿ ಅವುಗಳನ್ನು ನಮೂದಿಸಿ. ವೀಕ್ಷಿಸುವ ವೇಳೆ "ಪೋಸ್ಟ್ ಅಂತರ ಅತ್ಯುತ್ತಮವಾಗಿಸು", ಪ್ರೋಗ್ರಾಂ ಸೈಟ್ ಎರಡೂ ಬದಿಯ ಬೇಲಿಯನ್ನು ಧ್ರುವಗಳ ವಿತರಣೆ ಮತ್ತು ಅವುಗಳ ನಡುವೆ ಇರುವ ಅಂತರಕ್ಕೆ ಸರಿಪಡಿಸಿಕೊಳ್ಳುತ್ತವೆ.
OSCAR-2019
ಬೆಂಗಳೂರು, ಸೆ. 2: ಮದುವೆ ಅತ್ಯಾಚಾರಕ್ಕೆ ಸಮ ಎಂದು ನಿರೂಪಿಸಿ ಕೆಲ ಮಹಿಳಾ ಸಂಘಟನೆಗಳು ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿರುವುದಕ್ಕೆ ಭಾರತೀಯ ಕುಟುಂಬ ಉಳಿಸಿ ಫೌಂಡೇಷನ್ ಹಾಗೂ ಕ್ರಿಸ್ಪ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಟುಂಬ ಉಳಿಸಿ ಫೌಂಡೇಷನ್‌ನ ಸ್ಥಾಪಕ ಅನಿಲ್ ಕುಮಾರ್, ಈ ಮೊಕದ್ದಮೆಯಲ್ಲಿ ಮದುವೆಯ ಒಳಗೆ ಯಾವುದೇ ಲೈಂಗಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಲಂ 375 ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ತೆಗೆದು ಹಾಕುವಂತೆ ಬೇಡಿಕೆ ಸಲ್ಲಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಪತಿಯಿಂದ ಹೆಂಡತಿಗಾಗುವ ಹಿಂಸೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದು ಅಸಂಬದ್ಧವಾಗಿದೆ. ಮದುವೆಯಲ್ಲಿ ಲೈಂಗಿಕ ಹಿಂಸಾಚಾರವಿರಬಹುದು. ಆದರೆ, ಅದನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ್ಲ. ಪುರುಷರು ಮಾತ್ರ ಅತ್ಯಾಚಾರ ಮಾಡುತ್ತಿಲ್ಲ. ಹಲವು ಕಡೆಗಳಲ್ಲಿ ಮಹಿಳೆಯರು ಪುರುಷರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ನಮ್ಮ ನ್ಯಾಯ ವ್ಯವಸ್ಥೆ ಒಂದು ಕಡೆ ಮಾತ್ರ ಕೆಲಸ ಮಾಡುತ್ತಿದೆ ಎಂದು ವಿಷಾದಿಸಿದರು. ಸುದೀಪ ದೇಶಪಾಂಡೆ ಮಾತನಾಡಿ, ವೈವಾಹಿಕ ಅತ್ಯಾಚಾರ ಕಾನೂನು ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹೀಗಾಗಲೆ ಪುರುಷರ ಮೇಲೆ ಅವರ ಪತ್ನಿಯರು ವೈವಾಹಿಕ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸಿ ಪುರುಷನ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಆ ವ್ಯಕ್ತಿಗೆ ಉದ್ಯೋಗ ದೊರೆಯದೆ, ಸಮಾಜದಲ್ಲಿ ಮರ್ಯಾದೆ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಪುರುಷರ ಪರವಾಗಿ ಯಾವುದೇ ಕಾನೂನುಗಳಿಲ್ಲ. ಮಹಿಳೆಯರು ದೂರು ನೀಡಿದ ತಕ್ಷಣ ಪುರುಷರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಶೇ.75ರಷ್ಟು ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ. ಈ ಒಂದು ವೈವಾಹಿಕ ಅತ್ಯಾಚಾರ ಕಾನೂನು ಕುರಿತು ಜನ ಸಾಮಾನ್ಯರಲ್ಲಿ ಚರ್ಚೆಗಳು ಆಗಬೇಕಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅನುಪಮ್, ನೀರಜ್ ಶಾಂತಕುಮಾರ್, ಕುಮಾರ್ ಜಾರ್ಗೀದಾರ್ ಉಪಸ್ಥಿತರಿದ್ದರು.
OSCAR-2019
ಇದು ಬಣ್ಣಗಳಲ್ಲಿ ಅದ್ದಿ ತೆಗೆದ ಸಿನಿಮಾ. ಪ್ರತಿ ಫ್ರೇಮಿಗೂ ಬಣ್ಣ, ನಾಯಕನ ಮನಸ್ಸಿಗೆ ಹಲವು ಬಣ್ಣ, ಕತೆಗೆ ಬಣ್ಣ, ಡಯಲಾಗುಗಳಿಗೆ ಬಣ್ಣ. ಹಾಗಂತ ಇದು ಕರಣ್ ಜೋಹರ್‌ನ ಬಿಳಿ-ಗುಲಾಬಿ ಬಣ್ಣಗಳೂ ಅಲ್ಲ. ಒಳ್ಳೆಯವನಿಗೆ ಒಳ್ಳೆಯದಾಗುತ್ತದೆ, ಕೆಟ್ಟವನಿಗೆ ಕೆಟ್ಟದಾಗುತ್ತದೆ ಎಂಬ ಬ್ಲ್ಯಾಕ್ ಅಂಡ್ ವೈಟ್‌ಗಂತೂ ಇಲ್ಲಿ ಜಾಗವಿಲ್ಲ. ಯಾಕೆಂದರೆ ಇದು ಸೂರಿ ದುನಿಯಾ. ಇಲ್ಲಿ ಮಾತಿದೆ, ಹೊಡೆದಾಟ ಇದೆ, ಹಾಡಿದೆ, ಡ್ಯಾನ್ಸ್ ಇದೆ, ಕಣ್ತುಂಬುವ ದೃಶ್ಯಗಳಿವೆ. ಇವೆಲ್ಲ ಸೇರಿ ಕ್ಷಣಕಾಲ ನಮ್ಮನ್ನು ಅವಾಕ್ಕಾಗಿಸಿ ಮೌನಕ್ಕೆ ತಳ್ಳುವ ಶಕ್ತಿ ಇದೆ. ಸಿನಿಮಾದಲ್ಲಿ ಕತೆ ಇದೆಯಾ ಅಂತ ಹುಡುಕುವವರ ಮುಸುಡಿನ ಎದುರು ಹತ್ತು ಕತೆ ಬಿಚ್ಚಿಕೊಳ್ಳುತ್ತವೆ. ಪ್ರತಿಯೊಂದು ಫ್ರೇಮನ್ನೂ ಸೂರಿ ಸಮೃದ್ಧವಾಗಿಸೋದನ್ನು ನೋಡುವುದೇ ಚೆಂದ. ಎಲ್ಲವೂ ಕಣ್ತುಂಬಿಕೊಳ್ಳುತ್ತಾ, ನಮ್ಮ ಕಣ್ಣುಗಳಿಗೆ ಬಿಡುವೇ ಇಲ್ಲ. ಸೂರಿ ಸಿನಿಮಾಗಳ ಹೀರೋಗಳೆಲ್ಲ ಹವಾಯಿ ಚಪ್ಪಲಿಯ ವೀರರೇ. ಒಣರೊಟ್ಟಿ ತಿಂದು ಗಟ್ಟಿಯಾದವರೇ. ಕೆಲಸ ಇಲ್ಲ, ಗೋತ್ರ ಇಲ್ಲ, ಮನೆ ಇಲ್ಲ, ಸಂಬಂಧಿಗಳು ಯಾರು ಗೊತ್ತಿಲ್ಲ, ಕೈಯಲ್ಲಿ ಕಾಸಿಲ್ಲ. ಆದರೂ ಇವೆಲ್ಲ ಇದ್ದವರನ್ನು ಅಲುಗಾಡಿಸಬಲ್ಲವರು. ಇವರು ತಮ್ಮಲ್ಲಿ ಇದ್ದದ್ದನ್ನು ಇಲ್ಲದವರಿಗೆ ಕೊಡುತ್ತಾರೆ. ತಮ್ಮಲ್ಲಿ ಇಲ್ಲದ್ದನ್ನೂ ಇಲ್ಲದವರಿಗೆ ಕೊಡಿಸುತ್ತಾರೆ ! ಇಂಥವರು ಹೀರೋ ಅಲ್ಲದೆ ಮತ್ತಿನ್ನೇನು?! ಚಿನ್ನದ ಬಣ್ಣಕ್ಕೂ ಮಣ್ಣಿನ ಬಣ್ಣಕ್ಕೂ ಅಂಥಾ ವ್ಯತ್ಯಾಸ ಇದೆಯಾ? ಹೊಳೆದರೆ ಚಿನ್ನ, ಹೊಳೆಯದಿದ್ದರೆ ಮಣ್ಣು. ಹಾಗಾಗಿಯೇ ಏನೋ, ಸೂರಿಗದು ಒಲವಿನ ಬಣ್ಣ. ಕೊಂಚ ಹಳದಿ, ಕೊಂಚ ಕಂದು. ಆ ಗೋಧಿ ಬಣ್ಣ ಮನುಷ್ಯನ ಮೈಬಣ್ಣವೂ ಹೌದಲ್ಲ. ತುಂಬಿ ಬಂದ ಮನಸ್ಸನ್ನು ಅಕ್ಷರಗಳಲ್ಲಿ ತುಂಬಿ ಕಳಿಸುವುದಷ್ಟೇ ಈ ಟಿಪ್ಪಣಿಯ ಉದ್ದೇಶ. ಬಗೆದು ನೋಡಿದರೆ ಈ ಸಿನಿಮಾದಲ್ಲೂ ಸಾಕಷ್ಟು ಅರೆಕೊರೆಗಳು ಕಂಡಾವು. 'ದುನಿಯಾ’ವನ್ನು ಮೀರಿಸುವ ಸಿನಿಮಾ ಇದು ಅನ್ನುವಂತೆಯೂ ಇಲ್ಲ. ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂದು ಅರಿತಿರುವವರು, ಕನ್ನಡ ಸಿನಿಮಾದ ಗುಣಮಟ್ಟವನ್ನು ಗ್ರ್ರಹಿಸಿರುವವರು ’ಜಾಕಿ’ಯನ್ನು ಮನದುಂಬಿ ಅಭಿನಂದಿಸಬೇಕು. 'ಜೀ ಕನ್ನಡ' ವಾಹಿನಿಯ ಯಶಸ್ವಿ ಧಾರಾವಾಹಿ ಚಿ|ಸೌ| ಸಾವಿತ್ರಿ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದಿದೆ. ಇದುವರೆಗೂ ದೊಡ್ಡ ಬಜೆಟ್‌ನ ಸಿನಿಮಾಗಳ ಚಿತ್ರೀಕರಣ ಮಾತ್ರ ನಡೆಯುತ್ತಿದ್ದ ಮೈಸೂರಿನ ಲಲಿತ ಮಹಲ್ ಅರಮನೆಯಲ್ಲಿ, ಚಿ|ಸೌ|ಸಾವಿತ್ರಿ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದೆ. ಅದು ಸಾವಿತ್ರಿಯ ಮದುವೆ ಮಹೋತ್ಸವದ ಚಿತ್ರೀಕರಣ. ಚಿತ್ರೀಕರಣದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. 'ದಿಗ್ಗಜರು' 'ಪಾಂಡವರು' ಸೇರಿದಂತೆ ಅನೇಕ ಕನ್ನಡ, ತಮಿಳು ಚಿತ್ರಗಳ ಚಿತ್ರೀಕರಣ ನಡೆದಿರುವ ಐತಿಹಾಸಿಕ ಲಲಿತಮಹಲ್, ಬ್ರಿಟಿಷ್ ವೈಸರಾಯ್‌ಗಳು ಹಾಗೂ ವಿಶೇಷ ಅತಿಥಿಗಳಿಗಾಗಿ ಮೈಸೂರು ಮಹಾರಾಜರಿಂದ ೧೯೩೧ರಲ್ಲಿ ಕಟ್ಟಲ್ಪಟ್ಟಿದ್ದು. ಈಗ ಸರಕಾರಿ ತಾರಾ ಹೋಟೇಲ್ ಆಗಿ ಪರಿವರ್ತನೆಯಾಗಿದೆ. ಕಳೆದ ೨೫ ವರ್ಷಗಳಿಂದ ಚಿತ್ರೀಕರಣಕ್ಕೆ ನೀಡಲಾಗುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕರ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. 'ಮನೆ ಕೆಲಸದ ಹುಡುಗಿ ಸಾವಿತ್ರಿ, ಮನೆಯೊಡತಿಯೇ ಆಗ್ತಾಳಾ?' ಎಂಬ ಪ್ರಶ್ನೆಗೆ ಉತ್ತರ ಈ ಮದುವೆಯಲ್ಲಿ ದೊರೆಯಲಿದೆ. ಸಾಧನೆ, ಸಂಸ್ಕಾರದಿಂದ ಸಾಮಾನ್ಯರೂ ಬಹಳ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಸಾವಿತ್ರಿ ದಿಕ್ಸೂಚಿಯಾಗುತ್ತಿದ್ದಾಳೆ. ಇಲ್ಲಿ ಇಬ್ಬರು ವರ, ಒಬ್ಬಳೇ ವಧು ! ಮೊದಲನೇ ವರ ಸಾವಿತ್ರಿಯ ಬಾಲ್ಯದ ಗೆಳೆಯ ವಿಶ್ವ. ಇನ್ನೊಬ್ಬ ವರ ರಾಜ್ಯದ ಮುಂದಿನ ಮುಖ್ಯಮಂತ್ರಿ ನರಸಿಂಹರಾವ್! ಅವರು ಸಾವಿತ್ರಿಗಿಂತ ೩೦ ವರ್ಷ ದೊಡ್ಡವರು. ಸಾವಿತ್ರಿಯ ವರ ಎಂಎಲ್‌ಎ ನರಸಿಂಹರಾವ್ ಆಗ್ತಾರಾ, ಗೆಳೆಯ ವಿಶ್ವನೇ ಆಗ್ತಾನಾ ಅಥವಾ ಇನ್ನೇನೋ ಬೇರೆಯದೇ ನಡೆಯುತ್ತಾ ಎನ್ನುವುದು ಸದ್ಯದ ಕುತೂಹಲ. ಅದೇನೇ ಇದ್ದರೂ ಈ ಮದುವೆಯಲ್ಲಿ ಸತ್ಯ ಅನಾವರಣಗೊಳ್ಳಲಿದೆ! ಶ್ರುತಿನಾಯ್ಡು ನಿರ್ದೇಶನದಲ್ಲಿ ಜೈಜಗದೀಶ್, ಗೌತಮಿ, ಬಿ.ವಿ. ರಾಧಾ, ಮಂಡ್ಯ ರಮೇಶ್, ಸುಂದರ್, ನಂದಿನಿ ಪಟವರ್ಧನ್, ಶಿವಾಜಿರಾವ್ ಜಾಧವ್, ವೀಣಾ ರಾವ್, ಕಾವ್ಯ ಕಣ್ಣನ್ ಮೊದಲಾದ ಕಲಾವಿದರು ನಟಿಸುತ್ತಿದ್ದಾರೆ. ಈ ಯುಗದ ಹೊಸ ಸಾವಿತ್ರಿಯ ಕುಂಕುಮ ಸೌಭಾಗ್ಯದ ಕತೆ ಚಿ|ಸೌ|ಸಾವಿತ್ರಿ ಕಳೆದ ಜುಲೈ ೨೬ರಿಂದ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೭ ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈಗಾಗಲೇ ಯಶಸ್ವಿ ೧೦೦ ಸಂಚಿಕೆಯ ಸನಿಹದಲ್ಲಿದೆ. 'ಜೀ ಕನ್ನಡ'ದಲ್ಲಿ ಅಕ್ಟೋಬರ್ ೨೦ ರಿಂದ ಸಂಜೆ ೭ ಗಂಟೆಗೆ 'ಸಾವಿತ್ರಿ ಮಹಾ ಮದುವೆ'ಯ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ. ವೀಕೆಂಡ್ ತಾಳಮದ್ದಳೆ ! ಈ ವಾರದ ಕೊನೆಗೆ ಬೆಂಗಳೂರಿನಲ್ಲಿ ಯಕ್ಷಗಾನ ತಾಳಮದ್ದಳೆಗೆ ಪರ್ವ ಕಾಲ. ಕರಾವಳಿಯ ಪ್ರಸಿದ್ಧ ಕಲಾವಿದರ ತಂಡವೊಂದು ಬೆಂಗಳೂರಿನಲ್ಲಿ ಮೂರು ತಾಳಮದ್ದಳೆ ಕಾರ್ಯಕ್ರಮಗಳನ್ನು ನೀಡುತ್ತಿದೆ. ರಾಜಧಾನಿಯಲ್ಲಿ ಯಕ್ಷಗಾನ ಪ್ರದರ್ಶನಗಳು ಬಹಳಷ್ಟು ನಡೆದರೂ, ತಾಳಮದ್ದಳೆಗಳು ತೀರ ಕಡಿಮೆ. ವೇಷಭೂಷಣ, ನಾಟ್ಯವಿಲ್ಲದೆ, ಬರಿಯ ಹಾಡು-ಮಾತಿನ ಮೂಲಕವೇ ಕೇಳುಗರನ್ನು ಲೋಕ ಸಂಚಾರಕ್ಕೆ ಕರೆದೊಯ್ಯುವಂಥದ್ದು ತಾಳಮದ್ದಳೆ. ಪುರಾಣದ ಯಾವುದಾದರೂ ಒಂದು ಭಾಗವನ್ನು, ಅಲ್ಲಿರುವ ಪಾತ್ರಗಳ ಮೂಲಕ ಮಾತಿನಲ್ಲೇ ಮರು ಸೃಜಿಸಲಾಗುತ್ತದೆ. ಕಂಠಪಾಠವಲ್ಲದ ಆಶು ಶೈಲಿ ಇದರ ವಿಶೇಷ ಆಕರ್ಷಣೆ. ಕರಾವಳಿ ಭಾಗದಲ್ಲಿ ಇದು ಮಳೆಗಾಲದ ಮುಖ್ಯ ಮನರಂಜನೆ. ಅದೀಗ "ಮಳೆಗಾಲದಲ್ಲಿ ಬೆಚ್ಚಗೆ ತಾಳಮದ್ದಳೆ ಕೇಳಿ ಹೆಚ್ಚಿಗೆ !’ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿಗೂ ಬಂದಿದೆ. ಇತ್ತೀಚೆಗೆ ತೀರಿಹೋದ ಹಿರಿಯ ಅರ್ಥಧಾರಿ-ವೇಷಧಾರಿ ಮಲ್ಪೆ ರಾಮದಾಸ ಸಾಮಗರ ನೆನಪಿಗೆಂದು ಈ ಕೂಟಗಳನ್ನು ಅರ್ಪಿಸಲಾಗಿದೆ. ನಾನಾ ಯಕ್ಷಗಾನ ಮೇಳಗಳಲ್ಲಿ ಪ್ರಮುಖ ಭಾಗವತರಾಗಿ, ಸುಮಾರು ಮೂವತ್ತು ವರ್ಷಗಳ ಅನುಭವಿ ಪದ್ಯಾಣ ಗಣಪತಿ ಭಟ್ ತಂಡವನ್ನು ಮುನ್ನಡೆಸುತ್ತಾರೆ. ಚೆಂಡೆ- ಮದ್ದಳೆ ವಾದಕರಾಗಿ ಪದ್ಮನಾಭ ಉಪಾಧ್ಯಾಯ, ವೇಣುಗೋಪಾಲ ಮಾಂಬಾಡಿ ಭಾಗವಹಿಸುತ್ತಾರೆ. ವೇಷಧಾರಿಗಳಾಗಿಯೂ ಸುಮಾರು ಎರಡು ದಶಕಗಳ ಅನುಭವ ಇರುವ ಸುಣ್ಣಂಬಳ ವಿಶ್ವೇಶ್ವರ ಭಟ್, ಉಜಿರೆ ಅಶೋಕ ಭಟ್ ಜನಪ್ರಿಯ ಅರ್ಥಧಾರಿಗಳು ಕೂಡ. ಅವರು ಮುಖ್ಯ ಭೂಮಿಕೆಯಲ್ಲಿ ಮಾತಿನ ಮಂಟಪ ಕಟ್ಟುತ್ತಾರೆ. ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ವಾಸುದೇವರಂಗ ಭಟ್, ಹೊಸ ತಲೆಮಾರಿನ ಪ್ರತಿನಿಧಿಯಾಗಿಯೂ ಮಾತಿನ ಮಾಂತ್ರಿಕತೆ ತೋರುತ್ತಾರೆ. ತಾಳಮದ್ದಳೆಯಲ್ಲಿ ಹಾಸ್ಯಕ್ಕೆ ವಿಶಿಷ್ಟ ಸ್ಥಾನ ಕಲ್ಪಿಸಿರುವ ಮತ್ತು ಪೋಷಕ ಪಾತ್ರಗಳಲ್ಲಿ ಮನ ಸೆಳೆದಿರುವ ರಾಮಾ ಜೋಯಿಸ ಬೆಳ್ಳಾರೆ, ಕೂಟದ ರುಚಿ ಹೆಚ್ಚಿಸುತ್ತಾರೆ. ಜೂನ್ ೧೨ ಶನಿವಾರ ಸಂಜೆ ೪ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಖ್ಯಾತ ಸಾಹಿತಿ-ಪತ್ರಕರ್ತ ಜೋಗಿ, ಈ ತಾಳಮದ್ದಳೆ ಸರಣಿ ಉದ್ಘಾಟಿಸುತ್ತಾರೆ. ಲೇಖಕ ನಾರಾಯಣ ಎ. ಮುಖ್ಯ ಅತಿಥಿ. ಬಳಿಕ ತಾಳಮದ್ದಳೆ "ತ್ರಿಶಂಕು ಸ್ವರ್ಗಾರೋಹಣ’. ಜೂನ್ ೧೩ ಬೆಳಗ್ಗೆ ೧೦ಕ್ಕೆ ಕುಂದಲಹಳ್ಳಿ ಗೇಟ್ ಲಕ್ಷ್ಮೀನಾರಾಯಣಪುರದ ಗೀತಾಂಜಲಿ ಮನೆಯಲ್ಲಿ "ಕೃಷ್ಣಾರ್ಜುನ’. ಸಂಜೆ ೫ಕ್ಕೆ ಹಾವನೂರು ಬಡಾವಣೆ ಟಿ.ದಾಸರಹಳ್ಳಿಯ ಶ್ರೀ ಗಣೇಶ ದೇವಸ್ಥಾನದ ಆವರಣದಲ್ಲಿ 'ಭೀಷ್ಮ ವಿಜಯ’. 'ಶ್ರೀ ದುರ್ಗಾಂಬಾ ಕಲಾ ಸಂಗಮ, ಗಿರಿನಗರ’, 'ಭಾರ್ಗವ ಮೈಂಡ್, ಲಕ್ಷ್ಮೀನಾರಾಯಣಪುರ’ ಹಾಗೂ "ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಟಿ.ದಾಸರಹಳ್ಳಿ’ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಸಂಘಟಿಸಿವೆ. 'ತ್ರಿಶಂಕು ಸ್ವರ್ಗಾರೋಹಣ’ ಪುರಾಣದ ಒಂದು ವಿಶೇಷ ಸನ್ನಿವೇಶ. ಅದು ಕ್ಷಾತ್ರ ತೇಜಸ್ಸು- ಬ್ರಾಹ್ಮಣ ಓಜಸ್ಸಿನ ತಿಕ್ಕಾಟದ ಕತೆ. ಚಾಂಡಾಲನಾದವನ ದೊಡ್ಡ ಕನಸಿನ ಕತೆ. ಕೌಶಿಕ ಎಂಬ ಹೆಸರಿನ ಕ್ಷತ್ರಿಯ ರಾಜ, ಬ್ರಹ್ಮರ್ಷಿ ವಿಶ್ವಾಮಿತ್ರನಾಗಿದ್ದಾನೆ. ಸತ್ಯವ್ರತ ಎಂಬ ಹೆಸರಿನ ರಾಜ ಮೂರು ಮಹಾಪಾಪಗಳಿಂದ ತ್ರಿಶಂಕು ಅನಿಸಿಕೊಳ್ಳುತ್ತಾನೆ, ಕೊನೆಗೆ ವಸಿಷ್ಠರ ಶಾಪದಿಂದ ಚಾಂಡಾಲನಾಗುತ್ತಾನೆ. ತಾನು ಕೌಶಿಕ ರಾಜನಾಗಿದ್ದಾಗ ಬ್ರಹ್ಮರ್ಷಿ ವಸಿಷ್ಠರೊಂದಿಗೆ ದ್ವೇಷ ಕಟ್ಟಿಕೊಂಡಿದ್ದಾನೆ ವಿಶ್ವಾಮಿತ್ರ. ಈಗ ತ್ರಿಶಂಕುವನ್ನು ಸಶರೀರಿಯಾಗಿ ಸ್ವರ್ಗಕ್ಕೆ ಏರಿಸುವ ಮೂಲಕ ತಾನೇನು ಅಂತ ತೋರಿಸಲು ಹೊರಟಿದ್ದಾನೆ. ಅತೀವ ಮಹತ್ವಾಕಾಂಕ್ಷೆಯ ಕೌಶಿಕ-ತ್ರಿಶಂಕು ಎಂಬ ಇಬ್ಬರೂ ದುರಂತ ನಾಯಕರಂತೆ ಕಾಣುವ ವಿಚಿತ್ರ ಸಂದರ್ಭ ಅದು! ಅದನ್ನು ಮಾತುಕತೆಯಲ್ಲೇ ಮಥಿಸುವ ಶೋಧಿಸುವ ಅಪರೂಪದ ತಾಳಮದ್ದಳೆ ಪ್ರಸಂಗ "ತ್ರಿಶಂಕು ಸ್ವರ್ಗಾರೋಹಣ’.
OSCAR-2019
ಸರಕಾರಿ ಅಧಿಕಾರಿಗಳು, ನೌಕರರ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತದೆ ಎನ್ನುವ ಆರೋಪಗಳು ಇಂದು ನಿನ್ನೆವಲ್ಲ. ಈ ರಾಜಕಾರಣ ಬಂದ ದಿನದಿಂದಲೂ ಕಾರ್ಯಾಂಗದ ಮೇಲೆ ಒತ್ತಡ, ಪ್ರಭಾವಗಳು ಬೀರುತ್ತಲೇ ಬಂದಿವೆ. ಹೊಸ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ತನಗೆ ನಿಷ್ಠರಾದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ವರ್ಗಾವಣೆ ಮಾಡುವುದು ಸಂಪ್ರದಾಯವೆಂಬಂತಾಗಿದೆ. ಇದರ ಜತೆಗೆ ಶಾಸಕರು ತಮಗೆ ಬೇಕಾದ ಅಧಿಕಾರಿಗಳು, ಸಿಬ್ಬಂದಿಯನ್ನು ತಮ್ಮ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಏಕೆಂದರೆ, ಇವರ ಮಾತಿಗೆ ಗೋಣು ಹಾಕುವ ಅಧಿಕಾರಿಗಳು ಬೇಕಿರುತ್ತದೆ. ವರ್ಗಾವಣೆ ಕಾಲ ಬಂತೆಂದರೆ ರಾಜಕಾರಣಿಗಳು ಮತ್ತು ಅವರ ಪಟಾಲಂಗೆ ಸುಗ್ಗಿಯ ಕಾಲ. ಈ ಅವಧಿಯಲ್ಲಿ ಸಚಿವರು ಮತ್ತು ಮುಖ್ಯಮಂತ್ರಿಗಳ ಮನೆ ಕಚೇರಿಗಳಿಗೆ ನೂರಾರು ಮಂದಿ ಕಾರ್ಯಕರ್ತರು, ಸರಕಾರಿ ನೌಕರರು ಎಡತಾಕುತ್ತಿರುತ್ತಾರೆ. ಪ್ರಸ್ತುತ ಸಮ್ಮಿಶ್ರ ಸರಕಾರದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಎಲ್ಲರ ಕಣ್ಣು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಮೇಲಿದೆ. ಏಕೆಂದರೆ, ಸರಕಾರದಲ್ಲಿ ಅವರು ಹೇಳಿದ ಮಾತು ನಡೆಯುತ್ತದೆ ಎಂಬ ಪ್ರತೀತಿ ಇದೆ. ಬಹುತೇಕ ಹಿರಿಯ ಅಧಿಕಾರಿಗಳ ವರ್ಗಾವಣೆ ಇವರ ಅಣತಿ ಮೇಲೆಯೇ ನಡೆಯುತ್ತವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಆರೋಪಗಳನ್ನು ಮಾಡುತ್ತಿರುವವರ ಬಾಯಿ ಮುಚ್ಚಿಸಲು ಸ್ವತಃ ರೇವಣ್ಣ ಅವರೇ ತಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ನೌಕರರನ್ನು ವರ್ಗಾವಣೆ ಮಾಡುವಂತೆ ಯಾವ ಯಾವ ಶಾಸಕರು, ಮಂತ್ರಿಗಳು, ಶಿಫಾರಸು ಮಾಡಿದ್ದಾರೆ ಎಂಬ ದೊಡ್ಡ ಪುಸ್ತಕವನ್ನೇ ಮಾಡಲು ಹೊರಟಿದ್ದಾರೆ. ಹೀಗೆ ಸುಮಾರು 500 ಕ್ಕೂ ಹೆಚ್ಚು ಶಿಫಾರಸು ಪತ್ರಗಳು ತಮಗೆ ಬಂದಿವೆ ಎಂದೂ ರೇವಣ್ಣ ಹೇಳಿಕೊಂಡಿದ್ದಾರೆ. ಅಂದರೆ, ಕೇವಲ ಒಂದು ಇಲಾಖೆಗೆ ಸಂಬಂಧಿಸಿದಂತೆ 500 ಕ್ಕೂ ಹೆಚ್ಚು ಶಿಫಾರಸು ಬಂದಿದ್ದರೆ, ಉಳಿದೆಲ್ಲಾ ಇಲಾಖೆಗಳಿಗೆ ಹೋಗಿರುವ ಶಿಫಾರಸುಗಳು ಎಷ್ಟೆಂಬುದನ್ನು ನೋಡಲು ಹೋದರೆ ಅದು ಅಗಣಿತವಾಗಬಹುದೇನೋ. ಹೀಗಾಗಿ ಈ ವರ್ಗಾವಣೆ ದಂಧೆ ನಿಜಕ್ಕೂ ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ. ಅಧಿಕಾರಕ್ಕೆ ಹೊಸತರಲ್ಲಿ ಕಾರ್ಯಾಂಗದಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ಎಲ್ಲ ಪಕ್ಷಗಳು ಹೇಳಿಕೊಳ್ಳುತ್ತವೆ. ಆದರೆ, ವರ್ಗಾವಣೆ ವಿಚಾರದಲ್ಲಿ ಆಗುತ್ತಿರುವ ಹಸ್ತಕ್ಷೇಪವನ್ನು ಗಮನಿಸಿದರೆ ರಾಜಕೀಯದ ಪ್ರಭಾವ ಮತ್ತು ಒತ್ತಡ ಕಾರ್ಯಾಂಗದ ಮೇಲೆ ಎಷ್ಟರ ಮಟ್ಟಿಗೆ ಬೀರುತ್ತಿದೆ ಎಂಬುದನ್ನು ಆಲೋಚಿಸುವುದೂ ಕಷ್ಟವೆನಿಸುತ್ತದೆ. ರಾಜಕಾರಣಿಗಳು ಜನರ ಕೆಲಸಗಳತ್ತ ಗಮನಹರಿಸಿ ಅಧಿಕಾರಿಗಳು ತಮ್ಮ ಕೆಲಸ ಮಾಡಲು ಬಿಟ್ಟರೆ ರಾಜ್ಯ ಸುಭೀಕ್ಷವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ರಾಜಕಾರಣಿಗಳು ಸ್ವಯಂ ಕಡಿವಾಣ ಹಾಕಿಕೊಳ್ಳುವುದು ಸೂಕ್ತ.
OSCAR-2019
ಮದ್ಯ ಸಾಗಣೆಗೆ ಬಳಕೆಯಾಗಿದೆ ಸೇನೆಯ ನಕಲಿ ಪರ್ಮಿಟ್ | Kannada Dunia | Kannada News | Karnataka News | India News ಬಿಹಾರದಲ್ಲಿ ಮದ್ಯ ಮಾರಾಟವನ್ನೇ ನಿಷೇಧಿಸಲಾಗಿದೆ. ಆದ್ರೂ ದಂಧೆಕೋರರು ಮದ್ಯ ಸಾಗಣೆಗೆ ಹೊಸ ಮಾರ್ಗ ಹುಡುಕಿಕೊಂಡಿದ್ದಾರೆ. ಹರಿಯಾಣದಲ್ಲಿ ತಯಾರಾಗಿದ್ದ ಮದ್ಯ ಹೊತ್ತು ಬಂದಿದ್ದ ಲಾರಿಯನ್ನು ಗೋಪಾಲ್ ಗಂಜ್ ಹೆದ್ದಾರಿಯಲ್ಲಿ ಅಬಕಾರಿ ಅಧಿಕಾರಿಗಳು ತಡೆದಿದ್ರು. ಅಕ್ರಮವಾಗಿ ಮದ್ಯ ಸಾಗಿಸಲಾಗ್ತಿದೆ ಅನ್ನೋ ಅನುಮಾನದ ಮೇಲೆ ಪರಿಶೀಲನೆ ನಡೆಸಿದ್ರು. ಆದ್ರೆ ಅವರ ಬಳಿ Central Stores Depot ನೀಡಿದ್ದ ಪರವಾನಿಗೆಯಿತ್ತು. ಆದ್ರೆ CSD ಕೇವಲ ಸಶಸ್ತ್ರ ಪಡೆಗಳಿಗೆ ಮಾತ್ರ ಮದ್ಯ ಸಾಗಣೆಗೆ ಅನುಮತಿ ನೀಡುತ್ತದೆ. ಅಂಥದ್ರಲ್ಲಿ ಇವರಿಗೆ ಪರ್ಮಿಟ್ ಸಿಕ್ಕಿದ್ಹೇಗೆ ಅನ್ನೋ ಗೊಂದಲದಲ್ಲಿ ಅಬಕಾರಿ ಅಧಿಕಾರಿಗಳು ಬಿದ್ದಿದ್ರು. ಇದೇ ಸಮಯಕ್ಕೆ ಕಾಯುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ ಎಸ್ಕೇಪ್ ಆಗಿದ್ದಾರೆ. ಅದರ ಅರ್ಥ ಕಳೆದ ಕೆಲ ತಿಂಗಳುಗಳಿಂದ ಮದ್ಯ ಸಾಗಣೆಗೆ ದಂಧೆಕೋರರು ನಕಲಿ ಪರ್ಮಿಟ್ ಬಳಸುತ್ತಿದ್ದಾರೆ. ಟರ್ಕಿಯ ಇಸ್ತಾನ್ ಬುಲ್ ನಲ್ಲಿ ರೈಲು ಹಳಿ ತಪ್ಪಿದ ಪರಿಣಾಮ, 10 ಜನ ಸಾವನ್ನಪ್ಪಿ, 73 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ರೈಲಿನಲ್ಲಿ 360 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದು, ಪರಿಹಾರ ಕಾರ್ಯಕ್ಕಾಗಿ 100 ಆಂಬ್ಯುಲೆನ್ಸ್ ಬಳಸಲಾಗಿದೆ. ಇನ್ನು ಟರ್ಕಿ ಸೇನೆ, ಗಾಯಾಳುಗಳ ನೆರವಿಗೆ ಹೆಲಿಕಾಪ್ಟರ್ ನೀಡಿದೆ.
OSCAR-2019
ಹಣೆಯ ಮೇಲೆ ರತ್ನವನ್ನು ಹೊಂದಿರುವ ಮಗುವನ್ನು ನೀವು ಊಹಿಸಬಲ್ಲಿರಾ? ಆಯಾಸ, ಹಸಿವು, ಬಾಯಾರಿಕೆ ಮತ್ತು ಅಂತಹ ಎಲ್ಲ ದೌರ್ಬಲ್ಯಗಳಿಂದ ಸ್ವಾತಂತ್ರ್ಯವನ್ನು ನೀಡುವ ಒಂದು ರತ್ನವು ಬದುಕಿಗೆ ಅವಶ್ಯಕವಾಗಿದೆ. ಅಂತಹ ಮಾಯಾಜಾಲವನ್ನು ನಾವು ನಿರೀಕ್ಷಿಸಬಹುದೇ? ಇದು ನಿಜವಾಗಿದ್ದರೆ ಅದನ್ನು ಯಾರು ಹೊಂದಿರಬಹುದು ಮತ್ತು ಹೇಗೆ? ಈ ಕಥೆಯು ನಮ್ಮನ್ನು ಮಹಾಭಾರತ ಆರಂಭವಾಗಿಲ್ಲದ ಸಮಯಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.... ಗುರು ದ್ರೋಣಾಚಾರ್ಯರ ಕಥೆಯನ್ನು ನೀವು ಅರಿತಿದ್ದೀರಾ. ಪಾಂಡವ ಮತ್ತು ಕೌರವರ ಗುರುವಾಗಿ ಮಹಾಭಾರತ ಯುದ್ಧ ಕಾಲದಲ್ಲಿ ಅವರು ಕೌರವರ ಪರವಾಗಿ ಹೋರಾಟ ನಡೆಸಿದರು. ಹೆಚ್ಚು ಗೌರವಾನ್ವಿತ ವ್ಯಕ್ತಿಯಾಗಿದ್ದರೂ ಮಹೋನ್ನತ ಸ್ಥಾನದಲ್ಲಿದ್ದರೂ ಕರ್ಣನನ್ನು ಶಿಷ್ಯನಾಗಿ ಸ್ವೀಕರಿಸುವಲ್ಲಿ ನಿರಾಕರಿಸಿದ್ದರು. ಶಿವನನ್ನು ಮೆಚ್ಚಿಸುವ ಸಲುವಾಗಿ ದ್ರೋಣರು ತಪಸ್ಸನ್ನು ಆಚರಿಸುತ್ತಾರೆ. ದ್ರೋಣರು ಈ ತಪಸ್ಸನ್ನು ಆಚರಿಸುವುದು ತಾನು ಮಹಾ ಪರಾಕ್ರಮಿಯಾದ ಪುತ್ರನನ್ನು ಹೊಂದುವುದಕ್ಕಾಗಿರುತ್ತದೆ. ತನ್ನ ಪುತ್ರನನ್ನು ಯಾರೂ ಸೋಲಿಸಬಾರು ಎಂಬಂತಹ ಇಚ್ಛೆಯೊಂದಿಗೆ ಅವರು ಈ ತಪಸ್ಸನ್ನು ಕೈಗೊಳ್ಳುತ್ತಾರೆ. ಯಾವುದೇ ದೌರ್ಬಲ್ಯಗಳನ್ನು ಹೊಂದದೇ ಇರುವ ಪುತ್ರ ತನಗೆ ಬೇಕು ಎಂಬುದು ದ್ರೋಣರ ತಪಸ್ಸಿನ ಉದ್ದೇಶವಾಗಿರುತ್ತದೆ. ದ್ರೋಣರ ಪುತ್ರ ಚಿರಂಜೀವಿಯಾಗಿರುತ್ತಾರೆ ಎಂಬಂತಹ ವರವನ್ನು ಶಿವನು ನೀಡುತ್ತಾರೆ. ಚಿರಂಜೀವಿ ಎಂದರೆ ಮರಣ ಇಲ್ಲದವನು ಎಂದಾಗಿದೆ. ಹೀಗೆ ದ್ರೋಣರ ಪತ್ನಿ ಕೃಪಿಯು ಅಶ್ವತ್ಥಾಮನಿಗ ಜನ್ಮವನ್ನು ನೀಡುತ್ತಾರೆ. ಅವರನ್ನು ಅಷ್ಟ ಚಿರಂಜೀವಿಗಳಲ್ಲಿ ಒಬ್ಬರು ಎಂದು ಕರೆಯಲಾಗಿದೆ. ಅಶ್ವತ್ಥಾಮ ಹುಟ್ಟುವ ಮುಂಚೆ ದ್ರೋಣರು ಸಾಮಾನ್ಯ ಋಷಿ ಜೀವನವನ್ನು ನಡೆಸುತ್ತಿದ್ದರು. ಹೇಳಿಕೊಳ್ಳುವಂತಹ ಅನುಕೂಲವನ್ನು ಅವರು ಹೊಂದಿರಲಿಲ್ಲ. ಆದರೆ ಅಶ್ವತ್ಥಾಮನ ಜನ್ಮದ ನಂತರ ದ್ರೋಣರು ಹಸ್ತಿನಾಪುರಕ್ಕೆ ಹೋಗುತ್ತಾರೆ ಹಾಗೂ ಪಾಂಡವರಿಗೆ ಮತ್ತು ಕೌರವರಿಗೆ ಯುದ್ಧ ತರಬೇತಿಯನ್ನು ನೀಡುತ್ತಾರೆ. ದುರ್ಯೋಧನನ ಸ್ನೇಹಿತನಾಗಿದ್ದ ಅಶ್ವತ್ಥಾಮ ತನ್ನ ಗೆಳೆಯ ಮಾಡುತ್ತಿದ್ದ ತಪ್ಪುಗಳನ್ನು ಹೇಳುತ್ತಿದ್ದನು. ಪಾಂಡವರ ವಿರುದ್ಧ ಸಂಚುಗಳನ್ನು ಮಾಡುತ್ತಿದ್ದ ದುರ್ಯೋಧನನಿಗೆ ಕಿವಿ ಮಾತು ಹೇಳಲು ಸಾಧ್ಯವಾಗುವುದು ಅಶ್ವತ್ಥಾಮ ಮಾತ್ರವಾಗಿತ್ತು. ಪಾಂಡವರ ಶಕ್ತಿ ಮತ್ತು ಕೃಷ್ಣನ ಕೃಪೆ ಅವರ ಮೇಲೆ ಇದ್ದುದನ್ನು ಅರಿತಿದ್ದ ಅಶ್ವತ್ಥಾಮ ಪ್ರತೀ ಬಾರಿ ದುರ್ಯೋಧನನಿಗೆ ಕಿವಿ ಮಾತು ಹೇಳುತ್ತಿದ್ದ. ಕೋಪಿಷ್ಠನಾದ ದುರ್ಯೋಧನನು ಅಶ್ವತ್ಥಾಮನಿಗೆ ಕೊಂಚ ಬಾಗುತ್ತಿದ್ದ. ಮಹಾಭಾರತ ಯುದ್ಧ ಸಮಯದಲ್ಲಿ ಅಶ್ವತ್ಥಾಮ ಮತ್ತು ಆತನ ತಂದೆ ದ್ರೋಣರು ಕೌರವರನ್ನು ಬೆಂಬಲಿಸುವ ನಿರ್ಧಾರವನ್ನು ಮಾಡುತ್ತಾರೆ. ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ದುರ್ಯೋಧನ ಅಶ್ವತ್ಥಾಮನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಯುದ್ಧವನ್ನು ತಾವು ಗೆಲ್ಲಲು ಸಾಧ್ಯವಿಲ್ಲವೆಂದೇ ಅಶ್ವತ್ಥಾಮ ದುರ್ಯೋಧನನಿಗೆ ಕಿವಿಮಾತನ್ನು ಹೇಳುತ್ತಾನೆ. ಅವರ ಮಾತಿಗೆ ಕಿವಿಗೊಡದೆ ದುರ್ಯೋಧನನು ಅಶ್ವತ್ಥಾಮನನ್ನು ತನ್ನ ಸೇನೆಯ ಮುಖ್ಯ ಸೇನಾಧಿಪತಿಯಾಗಿ ನೇಮಿಸಿಕೊಳ್ಳುತ್ತಾನೆ. ಈಗ ವಿಧಿಯಿಲ್ಲದೆ ದುರ್ಯೋಧನನು ಯುದ್ಧದಲ್ಲಿ ಗೆಲ್ಲಬೇಕೆಂದು ಹೋರಾಡುತ್ತಾನೆ. ಆದರೆ ಕೊನೆಗೆ ಅಶ್ವತ್ಥಾಮ ಮೂರು ತಪ್ಪುಗಳನ್ನು ಮಾಡುತ್ತಾನೆ. ಆತ ಮಾಡುವ ಮೂರು ತಪ್ಪುಗಳಿಂದ ಸೋಲನ್ನು ಅನುಭವಿಸುತ್ತಾನೆ. ಮೊದಲನೆಯದು ಪಾಂಡವರ ಮಕ್ಕಳು ನಿದ್ರಿಸುತ್ತಿರುವಾಗ ಕೊಲ್ಲುತ್ತಾನೆ, ಬ್ರಹ್ಮಾಸ್ತ್ರವನ್ನು ಅರ್ಜುನನ ಮೇಲೆ ಬಿಡುವುದು, ನಂತರ ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಅರ್ಜುನನಿಂದ ಅಭಿಮನ್ಯುವಿನ ಗರ್ಭಿಣಿ ಪತ್ನಿಯ ಮೇಲೆ ತಿರುಗಿಸುತ್ತಾನೆ. ಇದೆಲ್ಲವೂ ಅಕ್ಷಮ್ಯ ಅಪರಾಧವಾಗಿದೆ ಎಂದು ಹಿಂದೂ ಧರ್ಮದಲ್ಲಿ ವ್ಯಾಖ್ಯಾನಿಸಲಾಗಿದೆ. ತಮ್ಮ ಪುತ್ರರ ಸಾವಿನ ಸೇಡು ತೀರಿಸಲು ಪಾಂಡವರು ಅಶ್ವತ್ಥಾಮನ ಕೇಶ ಮುಂಡನ ಮಾಡುತ್ತಾರೆ. ಅಶ್ವತ್ಥಾಮನ ಶಕ್ತಿಯ ಆಗರವಾದ ಪವಿತ್ರ ರತ್ನವನ್ನು ಕಸಿದುಕೊಳ್ಳುತ್ತಾರೆ. ಎಲ್ಲರ ಮುಂದೆ ಕೇಶ ಮುಂಡನ ಮಾಡುವುದು ಎಂದರೆ ಅವರನ್ನು ಕೊಲ್ಲುವುದಕ್ಕೆ ಸಮ ಎಂದಾಗಿದೆ. ಹೀಗೆ ಶಿವನ ಆಶೀರ್ವಾದದಿಂದ ಜನಿಸಿದ ಅಶ್ವತ್ಥಾಮನು ತನ್ನ ದುಷ್ಟ ಕಾರ್ಯಗಳಿಂದ ಅಸಂತುಷ್ಟಕರ ಹಣೆಬರಹವನ್ನು ಅನುಭವಿಸಬೇಕಾಗುತ್ತದೆ. ಮಾನವ ಎಷ್ಟೇ ಅದೃಷ್ಟವಂತನಾಗಿದ್ದರೂ ಆತ ಮಾಡುವ ಕರ್ಮದಿಂದ ಅವನ ಹಣೆಬರಹ ನಿರ್ಧಾರವಾಗುತ್ತದೆ ಎಂದಾಗಿದೆ ಎಂಬ ಸಂದೇಶವನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಅವರು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿಯಾಗಿರಬಹುದು ಅಥವಾ ಯುದ್ಧದ ಎಲ್ಲಾ ತಂತ್ರಗಳನ್ನು ಕಲಿತಿರುವವರಾಗಿರಬಹುದು, ಅಂತಿಮ ಉದ್ದೇಶವು ನೀತಿಯುಳ್ಳವನಾಗಿರಬೇಕು, ಅದು ಕೇವಲ ತನ್ನ ಜೀವನಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ.
OSCAR-2019
ಈ ವಿಡಿಯೋವನ್ನು ದುರ್ಬಲ ಹೃದಯದ ಜನರು ನೋಡದೇ ಇರುವುದು ಒಳ್ಳೆಯದು! , ಏಕೆಂದರೆ ಇದು ಹದಿಹರೆಯದ ಹುಡುಗಿಯೊಬ್ಬಳು ಕೊಲೆಗೀಡಾದ ತನ್ನ ಸಹೋದರನ ಆತ್ಮ ತನ್ನೊಂದಿಗೆ ಮಾತನಾಡುತ್ತಿದೆ ಎಂದು ಹೇಳಿದ ಮೈನಡುಗುವ ಸಂಗತಿಯೊಂದನ್ನು ಹೊಂದಿದೆ. 16 ವರ್ಷದ ಹದಿಹರೆಯದ ಅಬಿಗೈಲ್ ಮ್ಯಾಗ್ಲಾಸ್ಯಾಸ್ ಇದ್ದಕ್ಕಿದ್ದಂತೆ ಒಂದು ಸಂಜೆ ನಡುಗಲು ಆರಂಭಿಸುತ್ತಾಳೆ.ಇದಕ್ಕೆ ಕಾರಣ ಮೂರು ತಿಂಗಳ ಹಿಂದೆ ಫಿಲಿಪೈನ್ಸ್ನ ನುವಾ ಎಜಿಜಾದಲ್ಲಿ ನಡೆದಿದ್ದ 19 ವರ್ಷದ ತನ್ನ ಸಹೋದರ ಮಾರ್ವಿನ್ನ ಕೊಲೆ.. ವಿಡಿಯೋದಲ್ಲಿ ಆ ಹುಡುಗಿ,ಸತ್ತು ಹೋದ ತನ್ನ ಸಹೋದರ ತನ್ನ ಮೂಲಕ ಮಾತನಾಡುತ್ತಿದ್ದಾನೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ.ಅವಳು ತನ್ನ ಸಹೋದರ ಭೀಕರವಾಗಿ ಸಾಯುವ ಮುನ್ನ ಅವನನ್ನು ಹೇಗೆಲ್ಲಾ ಹಿಂಸಿಸಿದ್ದಾರೆ ಎಂಬುದನ್ನು ಕೂಡ ಹೇಳಿದ್ದಾಳೆ. ತನ್ನ ಸಹೋದರ ಆತನ ಮರಣದ ಬಗ್ಗೆ ಯಾರಿಗೂ ಗೊತ್ತಿರದ ವಿವರಗಳನ್ನು ಬಹಿರಂಗಪಡಿಸ ಬೇಕೆಂದು ತನಗೆ ಹೇಳಿದ್ದಾನೆ ಎಂದಿದ್ದಾಳೆ. ವಿಡಿಯೋದಲ್ಲಿ ಕ್ಲಿಪ್‌ನಲ್ಲಿ ಅಬಿಗೈಲ್ ಬಹಿರಂಗಗೊಳಿಸಿದ ವಿಷಯ : "ಅವರು ನನ್ನನ್ನು ಹಿಂಸಿಸಿದರು, ಅವರು ನನ್ನನ್ನು ಹೊಡೆದರು ಮತ್ತು ಏಳು ಬಾರಿ ನನಗೆ ಗುಂಡಿಕ್ಕಿ ಕೊಂದರು. ಅವರು ದರೋಡೆಕೋರರು.ನನ್ನ ಮಾತನ್ನು ಕೇಳಿ,ಅವರು ನನ್ನನ್ನು ಕೊಂದೇಬಿಟ್ಟರು" ಅಬಿಗೈಲ್ ಈ ವೀಡಿಯೊದಲ್ಲಿ ಅನಿಯಂತ್ರಿತವಾಗಿ ಅಳುತ್ತಲೇ ಇರುವುದು ಕಂಡುಬಂದಿದೆ, ಅವಳು ಹಾಸಿಗೆಯಲ್ಲಿ ಮಲಗಿಕೊಂಡು ಎಷ್ಟು ಬಾರಿ ಗುಂಡಿಕ್ಕಿ ಕೊಂಡರು ಎಂದು ಲೆಕ್ಕಹಾಕುತ್ತ ಇರುವುದನ್ನು ಕಾಣಬಹುದಾಗಿದೆ. ಅವಳ ಸಹೋದರ ತನ್ನನ್ನು ಬಂಧಿಸಿದವರಲ್ಲಿ ತಾನು ಬದುಕಬೇಕು ,ಬಿಟ್ಟುಬಿಡಿ ಎಂದು ಹೇಗೆ ಬೇಡಿಕೊಂಡಿದ್ದಾನೆ ಎಂಬುದನ್ನು ಅವಳು ವಿವರಿಸಿದ್ದಾಳೆ. ನಿಮ್ಮ ಬೆನ್ನು ಹುರಿಯನ್ನು ನಡುಗಿಸುವಂತಹ ಆತ್ಮದ ಸೇವಕಿಯಾದ ಹುಡುಗಿಯ ಈ ವಿಡಿಯೋ ನಿಮಗೆ ಖಂಡಿತವಾಗಿ ಜೀವ ಭಯವನ್ನು ಉಂಟು ಮಾಡುತ್ತದೆ. ವಿಡಿಯೋ ಕ್ಲಿಪ್‌ನಲ್ಲಿ, '' ನನ್ನನ್ನು ಕೊಲ್ಲಬೇಡಿ ಎಂದು ನಾನು ಅವರನ್ನು ಬೇಡಿಕೊಂಡಿದ್ದೆ. ನನ್ನನ್ನು ಜೈಲಿನಲ್ಲಿ ಹಾಕಿ ಎಂದು ಹೇಳಿದ್ದೆ ",ಎಂದು ಅವಳು ಹೇಳಿಕೊಂಡಿದ್ದಾಳೆ. ಆದರೆ ಅಧಿಕಾರಿಗಳು, ಮಾರ್ವಿನ್ ಇಬ್ಬರು ಆಪಾದಿತ ಮಾದಕವಸ್ತು ವಿತರಕರೊಂದಿಗೆ ಇದ್ದಾಗ ಮಾದಕವಸ್ತು ವಿರೋಧಿಗಳೊಂದಿಗೆ ನಡೆಸಿದ ಬಂದೂಕಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳುತ್ತಿದ್ದಾರೆ. ಈ ಹುಡುಗಿ ನಿಜವಾಗಿಯೂ ಆತ್ಮದ ಸ್ವಾಧೀನಕ್ಕೆ ಒಳಗಾಗಿದ್ದಳೋ ಇಲ್ಲವೋ ಎಂಬುದರ ಬಗ್ಗೆ ಸತ್ಯದ ವಿಶ್ವಾಸಾರ್ಹತೆ ಯನ್ನು ಸ್ಪಷ್ಟಪಡಿಸಲಾಗುವುದಿಲ್ಲ , ಏಕೆಂದರೆ ಆಕೆಯು ತನ್ನ ಸಹೋದರನಿಗೆ ಅತ್ಯಂತ ಹತ್ತಿರವಾಗಿದ್ದಳು ಮತ್ತು ಅವಳು ಕೆಲವು ಮಿಶ್ರ ಭಾವನೆಗಳನ್ನು ಹೊಂದಿರುವಾಗ ಭಾವನಾತ್ಮಕವಾಗಿ ಕುಸಿದುಹೋಗಿ ಹೀಗೆ ಆಡುತ್ತಿದ್ದಾಳೆ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ದರಿಂದ ಅವಳಿಗೆ ನಿಜವಾಗಿಯೂ ಏನಾಯಿತು ಎಂದು ಯೋಚಿಸುವ ನಿರ್ಧಾರವನ್ನು ನೀವೇ ಮಾಡಿ.. ಕೆಳಗಿನ ಕಾಮೆಂಟ್ಸ್ ವಿಭಾಗದಲ್ಲಿ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.
OSCAR-2019
ಬೆಂಗಳೂರು : ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಸರ್ಕಾರ ನೂರು ದಿನ ಪೂರೈಸಿದೆ ಅಷ್ಟೇ ಆದರೆ ಅದರ ಸಾಧನೆ ಶೂನ್ಯ ಎಂದು ರಾಜ್ಯ ಸರ್ಕಾರದ ನೂರು ದಿನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಟೀಕಿಸಿದ್ದಾರೆ. ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರಕ್ಕೆ ಇವತ್ತಿಗೆ ನೂರು ದಿನಗಳು ತುಂಬಿದೆ. ದೋಸ್ತಿ ಸರ್ಕಾರ 100 ದಿನ ಪೂರೈಸಿದೆ ಅಷ್ಟೇ ಏನೂ ಪ್ರಯೋಜನ ಇಲ್ಲ, ಶೂನ್ಯ ಸಾಧನೆ, ಸರ್ಕಾರ ಇನ್ನೂ ಟೇಕ್​ ಆಫ್​ ಆಗಿಲ್ಲ ಎಂದು ಬಿಎಸ್​ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಬಿಎಸ್​ ವೈ, ‘ಸ್ವಾತಂತ್ರ ಭಾರತ ಇತಿಹಾಸದಲ್ಲೇ ಈ ರೀತಿ ಬೇಜವಾಬ್ದಾರಿ ಸರ್ಕಾರವನ್ನು ನಾನು ನೋಡಿಲ್ಲ, ಬರೀ ಪಕ್ಷದ ಆಂತರಿಕ ಕಚ್ಚಾಟ, ಹೊಡೆದಾಟದಲ್ಲಿಯೇ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಮುಖಂಡರು, ಸರ್ಕಾರದ ಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ. ಕೊಡಗಿನಲ್ಲಿ ನೆರೆಹಾನಿ ಸಂಭವಿಸಿತ್ತು, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಜನರು ಬರಗಾಲದಿಂದ ತತ್ತರಿಸುತ್ತಿದ್ದಾರೆ. ಇಷ್ಟಾದರೂ ಯಾವ ಮಂತ್ರಿಯೂ ರಾಜ್ಯ ಪ್ರವಾಸ ಮಾಡುತ್ತಿಲ್ಲ. ಜನರು ಸಂಕಷ್ಟಕ್ಕೆ ಸಿಲುಕಿರುವ, ವಿಧಾನಸೌಧದಲ್ಲಿಯೂ ಸಚಿವರು ಇಲ್ಲ. ಇವರೆಲ್ಲಾ ಏನು ಮಾಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರನ್ನೂ ತರಾಟೆ ತೆಗೆದುಕೊಂಡರು.
OSCAR-2019
ಮಂಡ್ಯದ್ಲಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಿಎಂ, ನಾನು 1996ರಲ್ಲೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅದನ್ನು ತಪ್ಪಿಸಿರು. 2004ರಲ್ಲಿ ಸಿಎಂ ಆಗಬೇಕೆಂದೆ, ಜೆಡಿಎಸ್‌ನಿಂದ ಹೊರ ಹಾಕಿದರು. ಇದೇ ಕಾರಣಕ್ಕೆ ಕಾಂಗ್ರೆಸ್‌ ಸೇರಿದೆ. ಸೋನಿಯಾ ಗಾಂಧಿಯವರ ಕೃಪಾಕಟಾಕ್ಷದಿಂದ ಇಂದು ಸಿಎಂ ಆಗಿದ್ದೇನೆ ಎಂದಿದ್ದಾರೆ. ಅನೇಕ ಜೆಡಿಎಸ್‌ ಬಂಡಾಯ ಶಾಸಕರು ಸದ್ಯದಲ್ಲೇ ಕಾಂಗ್ರೆಸ್‌ ಸೇರಲಿದ್ದಾರೆ. ಅವರ ಪರವಾಗಿ ಮತ ಕೇಳಲು ನಾನು ನಿಮ್ಮಲ್ಲಿಗೆ ಬರುತ್ತೇನೆ ಎಂದಿದ್ದಾರೆ. ನಮ್ಮ ಸರ್ಕಾರ ಎಲ್ಲರಿಗೂ ಉಪಯೋಗವಾಗುವಂತಹ ಯೋಜನೆಗಳನ್ನು ನೀಡಿದೆ. ಬಿಜೆಪಿ ನಾಯಕರು ತಿಪ್ಪರಲಾಗ ಹಾಕಿದ್ರೂ, ಯಾವ ರ್ಯಾಲಿ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜೈಲಿಗೆ ಹೋಗಿ ಬಂದ ಗಿರಾಕಿಗಳೆಲ್ಲ ನನ್ನನ್ನು ಕಮಿಷನ್ ಏಜೆಂಟ್‌ ಎನ್ನುತ್ತಾರೆ. ಆದರೆ ದಾಖಲೆ ಸಮೇತ ಭ್ರಷ್ಟಾಚಾರ ನಡೆದಿರುವುದನ್ನು ತೋರಿಸಿದರೆ ರಾಜಕೀಯ ತೊರೆಯುತ್ತೇನೆ ಎಂದಿದ್ದಾರೆ.
OSCAR-2019
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕೊಡುವ ಬಹುಮಾನದ ಮೊತ್ತ ಬರೋಬ್ಬರಿ ಹತ್ತು ಲಕ್ಷ ರುಪಾಯಿ! ಒಂದೈದು ಸಾವಿರ ರುಪಾಯಿಯ ಬೆಳ್ಳಿ ಕಪ್ಪೋ, ಇಲ್ಲ ಹತ್ತು ಸಾವಿರ ರುಪಾಯಿಯ ಚಿನ್ನದ ಪದಕ ಕೊಡೊದೇ ದುಬಾರಿ ಆಗಿರೋ ಈ ಕಾಲದಲ್ಲಿ ಅದೂ ಹೋಗಿ, ಹೋಗಿ ಜಾನಪದ ಗೀತೆ ಗಾಯನ ಸ್ಪರ್ಧೆಗೆ ಯಾರು ತಾನೇ ಹತ್ತು ಲಕ್ಷ ರುಪಾಯಿ ಬಹುಮಾನ ಕೊಡ್ತಾರೆ, ಸರಕಾರವೇ ಇಂಥ ಸಾಹಸಕ್ಕೆ ಮುಂದಾಗದೇ ಇರೋವಾಗ ಅನ್ನೋ ಪ್ರಶ್ನೆ ಕಾಡುತ್ತೆ ಅಲ್ಲವೇ..? ಆದರೆ ನೀವು ನಂಬಲೇಬೇಕು. ಇಂಥದೊಂದು ಶ್ಲಾಘನೀಯ ಕೆಲಸಕ್ಕೆ ಕೈ ಹಾಕಿರುವುದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ). ಬರುವ ಜೂನ್ ತಿಂಗಳಲ್ಲಿ ರಾಜ್ಯ ಮಟ್ಟದ ಅಂತರಕಾಲೇಜು ಜಾನಪದ ಗೀತಗಾಯನ ಸ್ಪರ್ಧೆಯನ್ನು ಅದು ಹಮ್ಮಿಕೊಂಡಿದೆ. ಕನ್ನಡ ನಾಡು, ನುಡಿ ರಕ್ಷಣೆಗೆ ನಾನಾ ಹೋರಾಟಗಳನ್ನು ದಾಖಲಿಸಿರುವ ವೇದಿಕೆ ಇದೀಗ ಭಾಷಾ ಸಾಹಿತ್ಯದ ತಾಯಿ ಬೇರು ಜಾನಪದ ಕಲೆ ಉಳಿವು, ಬೆಳವಣಿಗೆಗೆ ಇಂಥದೊಂದು ಮಾದರಿ ಯೋಜನೆ ಹಾಕಿಕೊಂಡಿದೆ. ಸಿನಿಮಾ ಗೀತೆ ಗಾಯನವೊಂದೇ ಸ್ಪರ್ಧಾ ಪ್ರಪಂಚದ ಸೊತ್ತು ಎಂಬ ಭ್ರಮೆ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ನಶಿಸುತ್ತಿರುವ ಜಾನಪದ ಹಾಡುಗಾರಿಕೆ ಕಾಪಿಟ್ಟುಕೊಳ್ಳಲು ರಕ್ಷಣಾ ವೇದಿಕೆ ತೋರಿರುವ ಕಾಳಜಿ ಮಾದರಿಯದ್ದಾಗಿದೆ. ವೇದಿಕೆ ಕಾರ್ಯದರ್ಶಿ ಸತೀಶ್ ಗೌಡ ವಿರಚಿತ ‘ರಂಗಕುಣಿತ’ ಮತ್ತು ‘ಬೀರುಗಾನ’ ಎಂಬ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ನಾರಾಯಣಗೌಡರು ಇದನ್ನು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್, ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ, ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ, ಜಾನಪದ ವಿದ್ವಾಂಸ ಪ್ರೊ. ಮಳಲಿಗೌಡ ಸಮ್ಮುಖದಲ್ಲಿ. Next articleಸಿಎಂ ಸಾಲದ ಬಜೆಟ್ ನಲ್ಲಿ ಕೊಟ್ಟಿದ್ದೇನೂ ಕಡಿಮೆ ಅಲ್ಲ, ಆದ್ರೆ ಸದನದಲ್ಲಿ ಕೈಕೊಟ್ಟ ಕರೆಂಟ್ ಹಂಗೆ ಆಗ್ಬಾರ್ದಲ್ಲ?
OSCAR-2019
ಉಡುಪಿ :- ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಸಮರ್ಪಕವಾಗಿಲ್ಲ, ಪೂರ್ಣವೂ ಆಗಿಲ್ಲ, ದುರಸ್ತಿಯೂ ಮಾಡುತ್ತಿಲ್ಲ. ಆದ್ದರಿಂದ ಹೆದ್ದಾರಿ ದುರಸ್ತಿ ಮಾಡುವವರೆಗೆ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಯಿತು. ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಅವರು ಉಡುಪಿ ಸಂತೆಕಟ್ಟೆ ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿ ಮೇಲ್ಸೇತುವೆ, ಬಸ್ಸು ನಿಲ್ದಾಣ ನಿರ್ಮಾಣ ಏನಾಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಪೂರಕವಾಗಿ ಸದಸ್ಯೆ ಗೀತಾಂಜಲಿ ಸುವರ್ಣ ಅವರು ಕೂಡ ರಸ್ತೆ ದುರಸ್ತಿ ಮಾಡುತ್ತಿಲ್ಲ. ರಸ್ತೆಗಳಲ್ಲಿ ಗುಂಡಿ ಬಿದ್ದು ಅಪಘಾತಗಳಾಗುತ್ತಿದ್ದು, ಪಾಟ್ ಹೋಲ್ ಗಳನ್ನೂ ದುರಸ್ತಿ ಸಹ ಮಾಡುತ್ತಿಲ್ಲ, ಇದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಹೇಳಿದರು. ಕಳೆದ ಅನೇಕ ಸಮಯದಿಂದ ಈ ಸಮಸ್ಯೆ ಪ್ರಸ್ತಾವಿಸುತ್ತಿದ್ದರೂ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಹೇಳಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗುರುರಾಜ್ ಮಾತನಾಡಿ, ಸಂತೆಕಟ್ಟೆ ಪಾದಾಚಾರಿ ಮೇಲ್ಸೇತುವೆಯ ಪ್ರಸ್ತಾವನೆಯನ್ನು ಕಳೆದ ನವೆಂಬರ್‍ನಲ್ಲಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದು, ಇನ್ನೂ ಅನುಮೋದನೆ ಸಿಕ್ಕಿಲ್ಲ. ನಾವು ಕೇಂದ್ರ ಸಚಿವಾಲಯ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ, ರಸ್ತೆ ಹದಗೆಟ್ಟರೆ ಅದನ್ನೂ ಹೇಳುತ್ತೇವೆ. ಆದರೆ ಅದನ್ನು ದುರಸ್ತಿಪಡಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು. ಈ ಉತ್ತರದಿಂದ ಸದಸ್ಯರು ಮತ್ತಷ್ಟು ಅಸಮಾಧಾನಗೊಂಡರು. ಸದಸ್ಯ ಜನಾರ್ದನ ತೋನ್ಸೆ ಅವರು ಹೆದ್ದಾರಿಗೆ ಸಂಬಂಧಿಸಿ ಪ್ರತ್ಯೇಕ ಸಭೆಯನ್ನು ಕರೆಯುವಂತೆ ಮನವಿ ಮಾಡಿದರು. ಶಾಸಕ ರಘುಪತಿ ಭಟ್ ಮಾತನಾಡಿ, ಹೆದ್ದಾರಿ ದುರಸ್ತಿಯನ್ನೂ ಮಾಡದೆ ಟೋಲ್ ಸಂಗ್ರಹಿಸುವುದು ಬೇಡ, ಜಿ.ಪಂ.ನಲ್ಲಿ ಜಿಲ್ಲೆಯ ಎರಡು ಟೋಲ್ ಕೇಂದ್ರಗಳನ್ನು ಮುಚ್ಚುವ ನಿರ್ಣಯ ಕೈಗೊಂಡು, ಯಾವುದೇ ಭದ್ರತೆ ಒದಗಿಸದಂತೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರಿಗೆ ಸಲ್ಲಿಸುವಂತೆ ಸಲಹೆ ನೀಡಿದರು. ಅದರಂತೆ ಟೋಲ್ ಸ್ಥಗಿತಕ್ಕೆ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು ಅಂತಹ ಆಸ್ಪತ್ರೆಗಳನ್ನು, ಖಾಸಗಿ ವೈದ್ಯಕೀಯ ವಿದ್ಯಾಲಯಗಳಿಗೆ ಮತ್ತು ದೊಡ್ಡ ಖಾಸಗಿ ಆಸ್ಪತ್ರೆಗಳಿಗೆ ನಿರ್ವಹಣೆ ಮಾಡಲು ನೀಡಿದರೆ, ಆ ಸಂಸ್ಥೆಗಳಲ್ಲಿನ ವೈದ್ಯರ ಸೇವೆ ಜನರಿಗೆ ದೊರೆಯುತ್ತದೆ ಈ ಕುರಿತಂತೆ ಜಿಲ್ಲಾ ಪಂಚಾಯತ್ ಮೂಲಕ ನಿರ್ಣಯ ಕೈಗೊಳ್ಳುವಂತೆ ಶಾಸಕ ರಘುಪತಿ ಭಟ್ ತಿಳಿಸಿದರು. ಉಡುಪಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಉಸ್ತುವಾರಿ ಜಿಲ್ಲಾ ಸರ್ಜನ್ ಅಡಿಯಲ್ಲಿ ಬರಬೇಕು, ಪ್ರಸ್ತುತ ಈ ಆಸ್ಪತ್ರೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಅಲ್ಲಿಯೇ ಉಳಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ಸಂಪೂರ್ಣವಾಗಿ ಆಸ್ಪತ್ರೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿದರೆ ಮುಂದೆ ಸಮಸ್ಯೆಯಾಗಲಿದೆ, ಈ ಕುರಿತಂತೆ ನಿರ್ಣಯ ಮಾಡಿ ಕಳುಹಿಸಿದರೆ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಜಿಲ್ಲೆಯಲ್ಲಿ ಮರಳು ಸಮಸ್ಯೆ ಕುರಿತಂತೆ , ಮರಳುಗಾರಿಕೆಗೆ ಆಗಸ್ಟ್ ಮೊದಲ ವಾರದಲ್ಲಿ ಅನುಮತಿ ನೀಡುವಂತೆ ಹಾಗೂ ಜಿಲ್ಲೆಯಲ್ಲಿ ಮರಳು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಪೂಣ್ ಪ್ರಮಾಣದಲ್ಲಿ ಪಠ್ಯ ಪುಸ್ತಕ ಪೊರೈಕೆಯಗದೇ ತೊಂದರೆಯಾಗಿದೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸದಸ್ಯೆ ಶಿಲ್ಪಾ ಸುವರ್ಣ ಕೋರಿದರು, ಇದಕ್ಕೆ ಉತ್ತರಿಸಿದ ಡಿಡಿಪಿಐ ಅವರು ಜಿಲ್ಲೆಯಲ್ಲಿ 86% ಪುಸ್ತಕ ವಿತರಣೆ ಈಗಾಗಲೆ ನಡೆದಿದೆ, ನಿನ್ನೆ 3 ಲೋಡ್ ಪುಸ್ತಕ ಬಂದಿದ್ದು ಅವುಗಳನ್ನು ವಿತರಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಶಾಲಾ ಮಕ್ಕಳಿಗೆ ಉತಮ ಗುಣಮಟ್ಟದ ಸೈಕಲ್ ಹಾಗೂ ಶೂ ಗಳನ್ನು ವಿತರಿಸುವಂತೆ ಹಾಗೂ ಅನುಪಯುಕ್ತ ಶಾಲಾ ಕಟ್ಟಡಗಳನ್ನು ವಿಲೇವಾರಿ ಮಾಡುವಲ್ಲಿ ಸೂಕ್ತ ನಿಯಮಗಳನ್ನು ಪಾಲಿಸುವಂತೆ ಅಧ್ಯಕ್ಷ ದಿನಕರ ಬಾಬು ಹೇಳಿದರು. ಕಿರಿ ಮಂಜೇಶ್ವರ ಆಸ್ಪತ್ರೆ ಬಳಿ ನೀರು ನಿಂತಿದ್ದು, ರೋಗಿಗಳಿಗೆ ತೊಂದರೆಯಾಗಿದೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಸದಸ್ಯೆ ಗೌರಿ ದೇವಾಡಿಗ ತಿಳಿಸಿದರು. ಕಾರ್ಕಳದ ವರಂಗ ಗ್ರಾಮ ಪಂಚಯತ್ ನಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದ ಅತಿಕ್ರಮಣ ಆಗಿದ್ದು, ಕ್ರಮ ಕೈಗೊಳ್ಳುವಂತೆ ಸದಸ್ಯೆ ಜ್ಯೋತಿ ಹರೀಶ್ ಕೋರಿದರು. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸೂಕ್ತ ಪರಿಹಾರ ವಿತರಿಸುವಂತೆ ಸದಸ್ಯೆ ಗೀತಾಂಜಲಿ ಸುವರ್ಣ ಕೋರಿದರು. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ತಂಡಗಳ ರಚನೆ ಆಗಿಲ್ಲ, ತಂಡ ರಚಿಸುವಾಗ ಸ್ಥಳಿಯ ಜನಪ್ರತಿನಿಧಿಗಳನ್ನು ಸೇರಿಸಿಕೊಳ್ಳುವಂತೆ ಜನಾರ್ಧನ ತೋನ್ಸೆ ಹೇಳಿದರು. ಹಾವಂಜೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳು ರಸ್ತೆಗೆ ಅಡ್ಡ ಬಂದು ಅಪಘಾತಗಳಾಗುತ್ತಿದ್ದು, ಅರಣ್ಯ ಇಲಾಖೆವತಿಯಿಂದ ಸೂಕ್ತ ಬೇಲಿ ಅಳವಡಿಸುವಂತೆ ಸದಸ್ಯ ಜನಾರ್ಧನ ತೋನ್ಸೆ ಹಾಗೂ ಉಡುಪಿ ತಾ.ಪಂ, ಅದ್ಯಕ್ಷೆ ನಳನಿ ಪ್ರದೀಪ್ ರಾವ್ ಕೋರಿದರು. ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್ , ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.
OSCAR-2019
ಟೆಕ್ಸಾಸ್ ಎ ಮತ್ತು M ಯೂನಿವರ್ಸಿಟಿ TAMU ತೋಟಗಾರಿಕಾ ಗಾರ್ಡನ್ಸ್ನಲ್ಲಿ Manfreda maculosa (ಮಸಾಲೆ ನೈದಿಲೆ). ಕಾಲೇಜು ಕೇಂದ್ರ, ಟೆಕ್ಸಾಸ್, 2009 ಡಿಸೆಂಬರ್ 2
OSCAR-2019
ನಿಮ್ಮ ಈ ವಾರವನ್ನು ಹೀಗೆ ಆರಂಭಿಸಿ. ಯಾಕೆಂದರೆ ನಿಮ್ಮ ದಿನಚರಿ ಈ ವಾರದಲ್ಲಿ ಹೇಗಿರುತ್ತೆ ಅನ್ನುವ ಲೆಕ್ಕಾಚಾರವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ಮಾಹಿತಿಗಳು ನಿಮ್ಮ ಕರಿಯರ್, ಮದುವೆ, ಸಂಬಂಧ, ಗೆಲುವು,ಆರೋಗ್ಯ ಹಾಗೂ ಇತರೆ ಹಲವಾರು ಅಂಶಗಳನ್ನು ಒಳಗೊಂಡಿರುತ್ತೆ. ಉದಾಹರಣೆಗೆ ನಕ್ಷತ್ರಗಳು ಹೇಳುವ ಪ್ರಕಾರ ಪ್ರತಿ ರಾಶಿಯವರ ಜೀವನದಲ್ಲಿ ಈ ವಾರ ಬರುವ ಬರುವ ಘಟನೆಗಳನ್ನು ವಿವರಿಸುತ್ತೆ. ಈ ಲೇಖನದಲ್ಲಿ ನಾವು ಪ್ರತಿಯೊಂದು ರಾಶಿಯವರ ಜೀವನದಲ್ಲಿ ಈ ವಾರ ಏನನ್ನು ನಿರೀಕ್ಷಿಸಬಹುದು ಅನ್ನುವ ಮಾಹಿತಿಯನ್ನು ನೀಡಲಾಗಿದೆ. ಮುಂದೆ ಓದಿ ಈ ವಾರವನ್ನು ನೀವು ಆಶಿರ್ವಾದದ ಭಾವನೆಯಿಂದ, ಬಹಳ ಆತ್ಮವಿಶ್ವಾಸ ಮತ್ತು ಶಕ್ತಿಯೊಂದಿಗೆ ಆರಂಭಿಸುತ್ತೀರಿ. ದೊಡ್ಡ ಕೆಲಸಗಳನ್ನು ಮಾಡಲು ಈ ವಾರ ಪ್ರಶಸ್ತವಾಗಿದೆ. ಕುಳಿತಲ್ಲೇ ಕೂತು ನಿಮ್ಮ ಸುತ್ತಲಿನ ವಾತಾವರಣವನ್ನು ಗ್ರಹಿಸುತ್ತಿದ್ದರೆ ಸಾಕು, ಯಶಸ್ಸು ನಿಮಗೆ ಸುಲಭದಲ್ಲಿ ಸಿಗಲಿದೆ ಅನ್ನುವುದು ಅರ್ಥವಾಗುತ್ತೆ. ಆದರೆ ಈ ವಾರ ನೀವು ಬದಲಾವಣೆಗೊಂದು ಅವಕಾಶ ನೀಡಬೇಕಾಗಿದೆ ಯಾಕೆಂದರೆ, ಕೆಲವು ವಿಚಾರಗಳು ನಿಮ್ಮ ಹಾದಿಯಲ್ಲೇ ಬರಲಿವೆ. ಈ ವಾರ ನಿಮ್ಮನ್ನು ಯಾರೋ ನೋಡುತ್ತಿರುತ್ತಾರೆ ಮತ್ತು ನೀವು ಮಾಡಿದ ಪ್ರತಿ ಕೆಲಸದಲ್ಲೂ ತಪ್ಪು ಹುಡುಕಿ ನಿಮ್ಮನ್ನು ತಿದ್ದುತಿರುತ್ತಾರೆ. ಆದರೆ ನೀವು ತುಂಬಾ ತಾಳ್ಮೆಯಿಂದ ಇರಬೇಕಾಗುತ್ತೆ. ಮತ್ತು ಈ ವಾರದ ಪ್ರತಿ ದಿನವನ್ನು ಹೊಸದಾಗಿ ಸ್ವೀಕರಿಸಿ ನಿಮ್ಮನ್ನು ನೀವು ಹೊಸ ಬದಲಾವಣೆ ಮುಂದಿನ ದಿನಗಳಲ್ಲಿ ಬರಲಿವೆ ಅನ್ನೋ ನಿರೀಕ್ಷೆಯೊಂದಿಗೆ ಬದುಕಬೇಕಾಗುತ್ತದೆ. ನೀವು ನಿಮ್ಮ ಸಂಗಾತಿಗೆ ಇಲ್ಲವೇ ಗೆಳೆಯರಿಗೆ ಈ ವಾರ ಅಯಸ್ಕಾಂತವಾಗುವ ಸಾಧ್ಯತೆಯಿದೆ. ಯಾರಾದರೂ ನಿಮ್ಮ ಬಳಿ ಬಂದು ಅವರು ನಿಮ್ಮ ಅಭಿಮಾನಿ ಎಂದು ನಿಮ್ಮನ್ನು ಹೊಗಳಿದರೆ, ಆಶ್ಚರ್ಯಗೊಳ್ಳಬೇಡಿ. ಯಾರೊಂದಿಗಾದರೂ ನೀವು ಬೆರೆತು ಮಾತನಾಡಲು ಬಯಸಿದರೆ ಅವರೊಂದಿಗೂ ನೀವು ಉತ್ತಮ ವಾತಾವರಣವನ್ನು ಕಲ್ಪಿಸಿಕೊಳ್ಳುತ್ತೀರಿ ಮತ್ತು ಈ ವಾರವಿಡೀ ಆರಾಮಾಗಿರುತ್ತೀರಿ. ಬಹಳ ಗೆಲವುಗಳು ನಿಮ್ಮ ಹಾದಿಯಲ್ಲಿ ಈ ವಾರ ಬರಲಿವೆ. ಆದರೆ ಶಾಶ್ವತ ಗೆಲವಿಗಾಗಿ ನೀವು ನಿಮ್ಮ ಉಪಾಯಗಳನ್ನು ಮತ್ತು ಆಲೋಚನೆಗಳನ್ನು ಹೇಗೆ ನಿಮ್ಮ ಕೆಲಸದಲ್ಲಿ ನಿರ್ವಹಿಸುತ್ತೀರಿ ಅನ್ನೋದು ಈ ವಾರ ಬಹಳ ಮುಖ್ಯವಾಗುತ್ತೆ. ಒಂದು ವೇಳೆ ಗುಂಪಾಗಿ ಕೆಲಸ ನಿರ್ವಹಿಸುವ ಅವಕಾಶ ಬಂದರೆ , ನೀವೇ ನಾಯಕನಾಗುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಇದು ನಿಮಲ್ಲಿ ಈಗಾಗಲೇ ಅಡಗಿರುವ ನಾಯಕತ್ವದ ಗುಣವನ್ನು ಹೊರಗೆ ಹಾಕಲು ಸಿಗುವ ಅವಕಾಶವಾಗಿರುತ್ತೆ.ಇನ್ನೊಂದೆಡೆ, ಈ ವಾರ ಅಚಾನಕ್ ಆಗಿ ಬದಲಾಗುವ ರೊಮ್ಯಾಂಟಿಕ್ ಭಾವನೆಗಳಿಗೆ ಸಿದ್ಧವಾಗಿರಬೇಕಾಗುತ್ತದೆ. ಈ ವಾರ ನಿಮ್ಮನ್ನು ನೀವು ಯಾವುದೇ ವಿಚಾರಗಳಿಗೂ ಅತಿಯಾದ ಬದ್ಧತೆ ತೋರಿಸುವ ಅಗತ್ಯವಿಲ್ಲ. ಈ ವಾರ ನೀವು ಕೆಲವೊಂದು ಮಿತಿಗಳನ್ನು ಮೀರಿ ವರ್ತಿಸಿದರೆ, ಮುಂದೆ ಬರುವ ಉತ್ತಮ ಲಾಭದಿಂದ ಸಂತೋಷಗೊಳ್ಳುವಿರಿ. ಇವುಗಳ ಜೊತೆಗೆ ಅದೃಷ್ಟ ಈ ವಾರ ನಿಮ್ಮ ಜೊತೆಗಿರುತ್ತೆ. ಆದರೆ ಪ್ರಯತ್ನವಿಲ್ಲದೆ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಒಳ್ಳೆಯ ಅವಕಾಶಗಳ ಬಾಗಿಲು ನಿಮ್ಮನ್ನು ತಟ್ಟಿದಾಗ ಅದನ್ನು ಬಳಸಿಕೊಳ್ಳದೆ ಸುಮ್ಮನಾಗಬೇಡಿ. ಈ ವಾರ ನೀವು ಕೆಲವು ವಿಚಾರಗಳನ್ನು ಸುಲಭವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಣ್ಣಪುಟ್ಟ ವಿಚಾರಗಳಿಗೆ ನೀವು ಈ ವಾರ ಸಿಟ್ಟು ಮಾಡುವ ಸಾಧ್ಯತೆಗಳಿವೆ. ಈಗ ನಿಮ್ಮ ಬಳಿ ಬಹಳಷ್ಟು ಶಕ್ತಿ ಇದೆ. ಅದು ಧನಾತ್ಮಕ ಕೆಲಸಗಳಿಗೆ ಹಾತೊರೆಯುತ್ತಿದ್ದು, ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳದಂತೆ ಮಾಡುತ್ತಿದೆ. ಜೊತೆಗೆ ಈ ವಾರ ನೀವು ಕೆಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಲೇಸು. ಹೆಚ್ಚು ಸಮಯ ಆರಾಮಿಸಿದರೆ ನೀವು ಜಡಗೊಂಡವರಂತೆ ಆಗುತ್ತೀರಿ. ಪ್ರಯಾಣಕ್ಕೆ ಹೊರಟರೆ, ನಿಮ್ಮ ವೇಗಕ್ಕೆ ಮಿತಿ ಇರಲಿ ಈ ವಾರ ನೀವು ಬಹಳ ವಿಚಿತ್ರ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಸುತ್ತ ನಡೆಯುವ ಸಣ್ಣ ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಕೆಲವು ವಿಚಾರಗಳು ನಿಮ್ಮಿಂದ ಏನನ್ನೋ ಬಯಸುತ್ತವೆ ಮತ್ತು ಅದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತೆ. ಆಗುವುದನ್ನು ಆಗಲು ಬಿಡಿ. ಆಗ ನೀವು ರಚನಾತ್ಮಕವಾಗಿ ಇರಲು ಸಾಧ್ಯವಾಗುತ್ತೆ. ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಬೇಕು ಎಂದು ನೀವು ಬಯಸಿದರೂ ಅದು ಈ ವಾರ ಕೈಗೂಡುವುದಿಲ್ಲ. ಅದು ಬಾಗಶಃ ನೆರವೇರುವುದು ಮುಂದಿನ ವಾರಗಳಲ್ಲಿ. ಹಾಗಾಗಿ ಎಲ್ಲರೊಡನೆ ಇರಲು ಬಯಸಿ ಬೆಂದುಹೋಗುವ ಬದಲು, ಸ್ವಲ್ಪ ಆರಾಮಾಗಿ ಇದ್ದುಬಿಡಿ. ಈ ವಾರ ಒಮ್ಮೊಮ್ಮೆ ನೀವು ಏಕಾಂಗಿಯಾಗಿ ಇರಲು ಇಚ್ಛಿಸುತ್ತೀರಿ. ಆದಷ್ಟು ದೊಡ್ಡ ಹೆಜ್ಜೆ ಹಾಕುವ ಪ್ರಯತ್ನ ಮಾಡಿ, ನಿಮ್ಮಿಂದ ಸಾಧ್ಯವಾಗುವಷ್ಟು ಉತ್ತಮವಾಗಿರಲು ಪ್ರಯತ್ನಿಸಿ. ನಿಮ್ಮ ಉತ್ಸಾಹದಿಂದಾಗಿ, ಬೇರೆಯವರನ್ನು ಗೆಲ್ಲಿಸಲು ನೀವು ಪ್ರಯತ್ನಿಸಿದರೆ, ಅವರು ನಿಮ್ಮಿಂದ ಪ್ರಭಾವಿತರಾಗುತ್ತಾರೆ ಮತ್ತು ನಿಮಗೆ ನೀವೇ ನ್ಯಾಯ ದೊರಕಿಸಿಕೊಳ್ಳಲು ಪ್ರಯತ್ಮ ಮಾಡಿದರೆ ಅವರು ನಿಮ್ಮ ವಿರುದ್ಧ ನಿಲ್ಲುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ನೀವು ನೇರ ನುಡಿಯಿಂದ ಇರಬೇಕು ಮತ್ತು ಹರ್ಷಚಿತ್ತದಿಂದ ಇರಬೇಕು. ಆಗ ಅವರು ನಿಮ್ಮನ್ನು ಪೂಜಿಸುತ್ತಾರೆ. ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ಸಮಯ ಮತ್ತು ವಿವರ ನಿಮ್ಮ ಬಳಿ ಇದೆ ಅನ್ನುವುದನ್ನು ಮರೆಯಬೇಡಿ. ನಿಮ್ಮ ಭಾವನೆಗಳನ್ನು ಸುಲಭವಾಗಿ ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ಇದು ಯಾವಾಗವೆಂದರೆ ಯಾರಾದರೂ ನಿಮ್ಮ ಭಾವನೆಗಳ ಜೊತೆ ಚೆಲ್ಲಾಟವಾಡಲು ಪ್ರಯತ್ನಿಸಿದರೆ ಅಥವಾ ಯಾವುದೋ ಕಾರಣಕ್ಕೆ ನಿಮಗೆ ನೀವೇ ತಪ್ಪಿತಸ್ಥರಂತೆ ಭಾವಿಸುತ್ತಿದರೆ, ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡಿಕೊಳ್ಳಬೇಕಾದ ವಾರವಿದು. ಈ ವಾರವಿಡೀ ನೀವು ಗೊಂದಲಮಯವಾಗಿ ಮತ್ತು ಬೇಸರದಲ್ಲಿ ಇರುವ ಸಾಧ್ಯತೆಗಳಿದ್ದು, ಕೆಲಸ ಮಾಡಲು ಕಷ್ಟಪಡಬೇಕಾದೀತು. ಈ ವಾರ ನೀವು ಬಹಳ ವ್ಯಾವಹಾರಿಕವಾಗಿರುತ್ತೀರಿ. ಹಣಕಾಸಿನ ವಿಚಾರಗಳು ತಹಬದಿಗೆ ಬರುವ ಬಗ್ಗೆ ನಿಮ್ಮದು ಈ ವಾರ ಒಳ್ಳೆಯ ಆಲೋಚನೆಗಳಾಗಿರುತ್ತೆ. ಆದರೆ ಅದಕ್ಕಾಗಿ ನೀವು ವೆಚ್ಚ ಮಾಡಿದ ಹಣದ ಬಗ್ಗೆ ನೀವು ಲೆಕ್ಕಹಾಕಬೇಕಾಗುತ್ತದೆ. ಈ ವಾರ ನೀವು ನಿಮ್ಮ ಹಣಕಾಸಿನ ವ್ಯವಹಾರವನ್ನು ಸ್ವಲ್ಪ ಆಚೆ - ಈಚೆ ಮಾಡಿಕೊಂಡು ಹೊಸ ಕೆಲಸಕ್ಕಾಗಿ ಬಳಸಿದರೆ ಮುಂದಿನ ದಿನಗಳಲ್ಲಿ ಒಳಿತನ್ನು ಕಾಣಬಹುದಾಗಿದೆ.
OSCAR-2019
ಬೆಂಗಳೂರು,ಮಾ.13-ಮಹಿಳೆಯರು ಮತ್ತು ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಮಾತೃಪೂರ್ಣ ಯೋಜನೆಯನ್ನು ಜಾರಿ ಮಾಡಲಾಗಿದೆ. ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2017-18ನೇ ಸಾಲಿನ ಬಜೆಟ್‍ನಲ್ಲಿ ಈ ಯೋಜನೆಯನ್ನು ಘೋಷಿಸಲಿದ್ದು , ಏ.1ರಿಂದ ರಾಜ್ಯದಲ್ಲಿ 4 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಮೊದಲ ಹಂತದಲ್ಲಿ ಮೈಸೂರಿನ ಹೆಗ್ಗಡದೇವನಕೋಟೆ, ತುಮಕೂರಿನ ಮಧುಗಿರಿ, ರಾಯಚೂರು ಜಿಲ್ಲೆಯ ಮಾನ್ವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಇದು ಅನುಷ್ಠಾನಗೊಳಲ್ಲಿದ್ದು ನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಸರ್ಕಾರ ಮುಂದಾಗಿದೆ. ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೌಷ್ಠಿಕ ಆಹಾರವನ್ನು ನೀಡುವುದರ ಮೂಲಕ ರಕ್ತಹೀನತೆಯನ್ನು ತಡಗಟ್ಟುವುದೇ ಈ ಯೋಜನೆಯ ಮೂಲ ಉದ್ದೇಶ. ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿ, ಬೇಳೆ ಹಾಗೂ ಬಿಸಿಯೂಟವನ್ನು ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದರ ಉಸ್ತುವಾರಿ ನೋಡಿಕೊಳ್ಳುತ್ತದೆ. ಪೌಷ್ಠಿಕಾಂಶ ಆಹಾರ ಸೇವಿಸಲು ಇಚ್ಛಿಸುವವರು ಪ್ರತಿ ಊಟಕ್ಕೆ 10 ರೂ. ನೀಡಬೇಕು. ಇದನ್ನು ಆಯಾ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರೇ ನೋಡಿಕೊಳ್ಳಬೇಕು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಉಸ್ತುವಾರಿಯಾಗಿರುತ್ತಾರೆ. ರಾಜ್ಯದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿದ್ದು , ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ವರದಿಯೊಂದನ್ನು ನೀಡಲಾಗಿತ್ತು. ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆ. ಮಹಿಳೆಯರು ಅಪೌಷ್ಠಿಕತೆ ಹೆಚ್ಚುತ್ತಿರುವುದರಿಂದ ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ರಾಜ್ಯ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಮಾತೃಪೂರ್ಣ ಯೋಜನೆಯನ್ನು ಆರಂಭಿಸುತ್ತಿದ್ದು , ಬಜೆಟ್‍ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನವನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೀಮಿಸಲಿಡಲಿದ್ದಾರೆ. ಈ ಯೋಜನೆಗೆ ಹೆಚ್ಚಿನ ಹಣ ನೀಡಬೇಕೆಂದು ಸಚಿವೆ ಉಮಾಶ್ರೀ ಕೂಡ ಮನವಿ ಮಾಡಿದ್ದಾರೆ. ಕೋಲಾರ, ಜ.28- ಬಂಧು, ಬಳಗ , ಸ್ನೇಹಿತರು ಎಲ್ಲರೂ ಸಂಭ್ರಮದಿಂದ ಮದುವೆ ಮನೆಗೆ ಬಂದಿದ್ದರು. ಅಂದುಕೊಂಡಂತೆ ಎಲ್ಲಾ ಆಗಿದ್ದರೆ ಮದುವೆ ಚೆನ್ನಾಗಿಯೇ ಆಗ್ತಿತ್ತು. ಆದರೆ ವಧು-ವರ ಇಬ್ಬರು ನಾಪತ್ತೆಯಾಗಿರುವುದು ಇದೀಗ ಬಂದವರಿಗೆಲ್ಲಾ ಅಚ್ಚರಿ ಉಂಟು ಮಾಡಿದೆ. ಆರತಕ್ಷತೆ ವೇಳೆ ವಧು ನಾಪತ್ತೆಯಾದರೆ , ಬೆಳಗ್ಗೆ ಫೇಸ್ ವಾಶ್‍ಗೆ ಎಂದು ಸಲೂನ್‍ಗೆ ಹೋದ ವರ ಕೂಡ ಕಾಣೆಯಾಗಿದ್ದಾನೆ. ಇದರಿಂದಾಗಿ ಬಂಧು-ಬಳಗದಲ್ಲಿ ತಳಮಳಗೊಂಡು ಏನಾಯಿತು ಎಂದು ತಿಳಿದುಕೊಳ್ಳುವುದರಲ್ಲೇ ಎಲ್ಲರೂ ತಲ್ಲೀನರಾಗಿದ್ದರು. ಅತ್ತ ಕೆಲವರು ಮದುವೆ ಊಟ ಮಾಡಿಕೊಂಡು ತಮ್ಮ ಪಾಡಿಗೆ ತಾವು ಹೊರಟಿದ್ದರು. ಇದೆಲ್ಲಾ ಪ್ರಸಂಗ ನಡೆದಿದ್ದು ಮಾಲೂರಿನಲ್ಲಿ. ಮಾಲೂರು ತಾಲ್ಲೂಕಿನ ಚಿನ್ನಕಲ್ಲು ಗ್ರಾಮದ ಸಿ.ಎನ್.ಗುರೇಶ್ ಹಾಗೂ ಬಂಗಾರಪೇಟೆ ತಾಲ್ಲೂಕಿನ ನೆರ್ಲಹಳ್ಳಿ ಗ್ರಾಮದ ಎನ್.ಸೌಮ್ಯ ಎಂಬ ವಧುವಿಗೂ ನಿನ್ನೆ ಮದುವೆ ನಿಶ್ಚಯವಾಗಿದ್ದು, ನಿನ್ನೆ ಮತ್ತು ಇಂದು ಮದುವೆ ನಡೆಯಬೇಕಿತ್ತು. ಕಲ್ಯಾಣ ಮಂಟಪಕ್ಕೆ ನಿನ್ನೆ ಮಧ್ಯಾಹ್ನವೇ ವಧುವಿನ ಕಡೆಯವರೆಲ್ಲಾ ಬಂದಿದ್ದರು. ನಂತರ ವರನನ್ನು ಕೂಡ ಬರಮಾಡಿಕೊಂಡು ಎಲ್ಲೆಡೆ ಸಂತಸ ಮನೆ ಮಾಡಿತ್ತು.ಆರತಕ್ಷತೆ ಸಮಯ ಆಗುತ್ತಿದ್ದಂತೆಯೇ ವಧು ಸೌಮ್ಯ ಎಲ್ಲೂ ಕಾಣಲೇ ಇಲ್ಲ. ಆಗ ಆತಂಕಗೊಂಡ ಪೋಷಕರು ಆಕೆಯ ಮೊಬೈಲ್‍ಗೆ ಕರೆ ಮಾಡಿದರೂ ಅದು ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಮತ್ತಷ್ಟು ಚಿಂತಿತರಾಗಿದ್ದರು. ರಾತ್ರಿ 9 ಗಂಟೆಯಾದರೂ ವಧು ಬಾರದಿದ್ದಾಗ ಅನುಮಾನ ಹೆಚ್ಚಾಗಿ ವರನ ಕಡೆಯವರು ವಿಚಾರಿಸಲು ಬಂದಾಗ ಸೌಮ್ಯ ಇಲ್ಲದಿರುವುದು ಗೊತ್ತಾಯಿತು. ರಾತ್ರಿ ತಕ್ಷಣ ರಾಜಿ ಪಂಚಾಯ್ತಿಗಳೆಲ್ಲಾ ನಡೆದು ನಿಗದಿತ ಮುಹೂರ್ತದಲ್ಲೇ ಮದುವೆ ಕಾರ್ಯ ನಡೆಸಲು ನಿಶ್ಚಯಿಸಿದರು. ಹುಡುಗನನ್ನು ಕರೆದು ಸೌಮ್ಯಳ ತಂಗಿಯನ್ನು ವಿವಾಹವಾಗುವಂತೆ ಮನವೊಲಿಸಿದರು. ಇದರಿಂದಾಗಿ ಎಲ್ಲರೂ ನಿಟ್ಟುಸಿರು ಬಿಟ್ಟು ಬೆಳಗಿನ ಮದುವೆ ಕಾರ್ಯದಲ್ಲಿ ತೊಡಗಿಕೊಂಡರು. ಮುಂಜಾನೆ ಶಾಸ್ತ್ರ ಕಾರ್ಯಗಳೆಲ್ಲಾ ನಡೆದು ವರ ಗುರೇಶ್ ಸ್ನೇಹಿತರು ಬಂದಿದ್ದಾರೆ. ಫೇಶಿಯಲ್ ಮಾಡಿಕೊಂಡು ಬರುತ್ತೇನೆ ಎಂದು ಹೋದವನು ಎಷ್ಟು ಹೊತ್ತಾದರೂ ಆತ ಬರದಿದ್ದಾಗ ಬಂದಿದ್ದ ಬಂಧು ಬಳಗದವರಲ್ಲಿ ಗುಸು ಗುಸು ಶುರವಾಗಿ ಅದರಂತೆ ವರ ಕೂಡ ನಾಪತ್ತೆಯಾಗಿದ್ದ…!
OSCAR-2019
ರೂಪಾಯಿ ಸದೃಢವಾಗಿಯೇ ಇದೆ: ಸಮಸ್ಯೆ ಇರುವುದು ಡಾಲರ್ ನಲ್ಲಿ: ತೈಲ ಬೆಲೆ ಏರಿಕೆ ಕುರಿತು ಧರ್ಮೇಂದ್ರ ಪ್ರಧಾನ್ | Rupee strong as ever, dollar creating problem: Oil minister Pradhan on rising fuel prices | Kannadaprabha.com ರೂಪಾಯಿ ಹಿಂದೆಂದಿಗಿಂತಲೂ ಸದೃಢವಾಗಿದೆ. ಆದರೆ ಸಮಸ್ಯೆ ಉಂಟಾಗುತ್ತಿರುವುದು ಡಾಲರ್ ನಿಂದ ಎಂದು ಹೇಳುವ ಮೂಲಕ ಪೇಟ್ರೋಲಿಯಂ ಸಚಿವರು ಅಚ್ಚರಿ ಮೂಡಿಸಿದ್ದಾರೆ. ಆ.15 ರಿಂದ ಈ ವರೆಗೆ 3 ರೂಪಾಯಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರೆ ಡೀಸೆಲ್ ಬೆಲೆ 3.50 ರೂಪಾಯಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವರು, ಸರ್ಕಾರ ಈ ವಿಷಯದಲ್ಲಿ ಯಾಕೆ ಹೆಚ್ಚಿನದ್ದನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. ಮಾರುಕಟ್ಟೆಯಲ್ಲಿ ಅನಿವಾರ್ಯವಾಗಿ ಈ ಸ್ಥಿತಿ ನಿರ್ಮಾಣವಾಗಲಿ ಎರಡು ಪ್ರಮುಖ ಬಾಹ್ಯ ಕಾರಣಗಳಿವೆ. ಅಮೆರಿಕದ ಡಾಲರ್ ವಿಲಕ್ಷಣ, ತಡೆಯಲು ಸಾಧ್ಯವೇ ಇಲ್ಲದಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಇಂದು ಭಾರತದ ಕರೆನ್ಸಿ ಬೇರೆಲ್ಲಾ ಕರೆನ್ಸಿಗಳಿಗಿಂತಲೂ ಹಿಂದೆಂದಿಗಿಂತಲೂ ಸದೃಢವಾಗಿದೆ. ಆದರೆ ತೈಲವನ್ನು ಡಾಲರ್ ಮೂಲಕವೇ ಖರೀದಿಸುವ ಕಾರಣದಿಂದ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಧರ್ಮೇಂದ್ರ ಪ್ರಧಾನ್ ವಿವರಿಸಿದ್ದಾರೆ. Topics : Fuel prices, Oil Minister, Dharmendra Pradhan, Dollar, Rupee, ತೈಲ ಬೆಲೆ ಏರಿಕೆ, ಪೆಟ್ರೋಲಿಯಮ್ ಸಚಿವ ಧರ್ಮೇಂದ್ರ ಪ್ರಧಾನ್, ಡಾಲರ್, ರೂಪಾಯಿ ಮೌಲ್ಯ
OSCAR-2019